ಅತಿ ಇಷ್ಟದ ಟ್ವೀಟ್‌ನಲ್ಲೂ ಪ್ರಧಾನಿ ಮೋದಿ ಮುಂದು; ಟಾಪ್ 10 ನಲ್ಲಿ ಮತ್ತಾವುದೇ ರಾಜಕಾರಣಿಗೂ ಇಲ್ಲ ಸ್ಥಾನ
PM Modi leads most-liked tweets: ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪ್ರಾಬಲ್ಯ ಮತ್ತೊಮ್ಮೆ ಸ್ಪಷ್ಟವಾಗಿದೆ. ಅತಿ ಹೆಚ್ಚು ಲೈಕ್ ಪಡೆದ ಟ್ವೀಟ್‌ಗಳ ಪಟ್ಟಿಯಲ್ಲೂ ಪ್ರಧಾನಿ ಮೋದಿ ಮೊದಲ ಸ್ಥಾನದಲ್ಲಿದ್ದು, ಟಾಪ್ 10ರಲ್ಲಿ ಮತ್ತಾವುದೇ ರಾಜಕಾರಣಿಗೂ ಸ್ಥಾನ ಸಿಕ್ಕಿಲ್ಲ.
ಪ್ರಧಾನಿ ಮೋದಿ -
ನವದೆಹಲಿ: ಪ್ರಸಿದ್ಧ ಸಾಮಾಜಿಕ ಮಾಧ್ಯಮ ಎಕ್ಸ್ (ಹಿಂದೆ ಟ್ವಿಟರ್) ಕಳೆದ ಒಂದು ತಿಂಗಳಿನಲ್ಲಿ, ದೇಶಗಳಲ್ಲಿ ಅತಿ ಹೆಚ್ಚು ಇಷ್ಟವಾದ ಟ್ವೀಟ್‌ಗಳನ್ನು ಹೈಲೈಟ್ ಮಾಡುವ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ಭಾರತದಲ್ಲಿ ಎಕ್ಸ್‌ನ ಅತಿ ಹೆಚ್ಚು ಇಷ್ಟವಾದ ಟ್ವೀಟ್‌ಗಳಲ್ಲಿ ಪ್ರಧಾನಿ ಮೋದಿ (PM Narendra Modi) ಮುಂದಿದ್ದು, ಟಾಪ್ 10ರಲ್ಲಿ ಬೇರೆ ಯಾವುದೇ ರಾಜಕೀಯ (politician) ನಾಯಕರಿಲ್ಲ.
ಹೌದು, ಎಕ್ಸ್ ಪರಿಚಯಿಸಿದ ಈ ವೈಶಿಷ್ಟ್ಯದಲ್ಲಿ ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೇ ಪಟ್ಟಿಯಲ್ಲಿ ಪ್ರಾಬಲ್ಯ ಹೊಂದಿದ್ದಾರೆ. ಕಳೆದ 30 ದಿನಗಳಲ್ಲಿ ಅತಿ ಹೆಚ್ಚು ಇಷ್ಟವಾದ ಟಾಪ್ 10 ಟ್ವೀಟ್‌ಗಳಲ್ಲಿ 8 ಟ್ವೀಟ್‌ಗಳು ಅವರದ್ದೇ ಆಗಿವೆ ಎಂದು ಬಹಿರಂಗಪಡಿಸಿದೆ. ಆದರೆ, ಟಾಪ್ 10 ರಲ್ಲಿ ಬೇರೆ ಯಾವುದೇ ರಾಜಕಾರಣಿ ಕಾಣಿಸಿಕೊಂಡಿಲ್ಲ. ಇದು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಪ್ರಧಾನ ಮಂತ್ರಿಯವರ ಬಲಿಷ್ಠ ಹಾಜರಿ ಮತ್ತು ತೊಡಗಿಸಿಕೊಳ್ಳುವಿಕೆಯನ್ನು ಒತ್ತಿಹೇಳುತ್ತದೆ.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಪ್ರಧಾನಿ ಮೋದಿ ಭಗವದ್ಗೀತೆಯ ರಷ್ಯನ್ ಆವೃತ್ತಿಯನ್ನು ಉಡುಗೊರೆಯಾಗಿ ನೀಡುತ್ತಿರುವ ಪೋಸ್ಟ್ ಭಾರತದಲ್ಲಿ ಅತಿ ಹೆಚ್ಚು ಇಷ್ಟವಾದ ಟ್ವೀಟ್ ಆಗಿ ಹೊರಹೊಮ್ಮಿತು. ಪ್ರಧಾನಿ ಮೋದಿ ಅವರು ಆ ಕ್ಷಣದ ಛಾಯಾಚಿತ್ರವನ್ನು ಹಂಚಿಕೊಂಡಿದ್ದು, ಈ ಗ್ರಂಥವು ಪ್ರಪಂಚದಾದ್ಯಂತ ಲಕ್ಷಾಂತರ ಜನರಿಗೆ ಸ್ಫೂರ್ತಿಯ ಮೂಲವಾಗಿದೆ ಎಂದು ಬಣ್ಣಿಸಿದ್ದರು.
ರಷ್ಯಾ ಅಧ್ಯಕ್ಷ ಪುಟಿನ್ ಅವರಿಗೆ ರಷ್ಯನ್ ಭಾಷೆಯಲ್ಲಿ ಗೀತೆಯ ಪ್ರತಿಯನ್ನು ನೀಡಲಾಯಿತು. ಗೀತೆಯ ಬೋಧನೆಗಳು ಪ್ರಪಂಚದಾದ್ಯಂತ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡುತ್ತವೆ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ.
ದೆಹಲಿಯ ಪಾಲಂ ವಿಮಾನ ನಿಲ್ದಾಣದಲ್ಲಿ ರಷ್ಯಾ ಅಧ್ಯಕ್ಷರನ್ನು ಸ್ವಾಗತಿಸಿದ ನಂತರ ಪ್ರಧಾನಿ ಮೋದಿ ಮಾಡಿದ ಮತ್ತೊಂದು ಪೋಸ್ಟ್ ಕಳೆದ ಒಂದು ತಿಂಗಳಿನಿಂದ ಭಾರತದಲ್ಲಿ ಹೆಚ್ಚು ಇಷ್ಟವಾದ ಟ್ವೀಟ್‌ಗಳಲ್ಲಿ ಮೂರನೇ ಸ್ಥಾನದಲ್ಲಿದೆ.
ನನ್ನ ಸ್ನೇಹಿತ, ರಷ್ಯಾ ಅಧ್ಯಕ್ಷ ಪುಟಿನ್ ಅವರನ್ನು ಭಾರತಕ್ಕೆ ಸ್ವಾಗತಿಸಲು ಸಂತೋಷವಾಗುತ್ತಿದೆ. ಇಂದು ಸಂಜೆ ಮತ್ತು ನಾಳೆ ನಮ್ಮ ಮಾತುಕತೆಗಳನ್ನು ಎದುರು ನೋಡುತ್ತಿದ್ದೇನೆ. ಭಾರತ-ರಷ್ಯಾ ಸ್ನೇಹವು ಕಾಲಾತೀತವಾಗಿದ್ದು, ಇದು ನಮ್ಮ ಜನರಿಗೆ ಹೆಚ್ಚಿನ ಪ್ರಯೋಜನವನ್ನು ನೀಡಿದೆ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ.
ಡಿಸೆಂಬರ್ 4 ರಂದು ರಷ್ಯಾದ ಅಧ್ಯಕ್ಷ ಪುಟಿನ್ ಅವರು 27 ಗಂಟೆಗಳ ಅಧಿಕೃತ ಭೇಟಿಗಾಗಿ ಭಾರತಕ್ಕೆ ಆಗಮಿಸಿದ್ದರು. ನಾಲ್ಕು ವರ್ಷಗಳಲ್ಲಿ ಇದು ಅವರ ಮೊದಲ ಭಾರತ ಭೇಟಿಯಾಗಿತ್ತು. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಎರಡು ದಿನಗಳ ಭಾರತ ಪ್ರವಾಸ ಅಂತ್ಯವಾಗಿ ಅವರು ಹೊರಡುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಅತ್ಯಮೂಲ್ಯ ಉಡುಗೊರೆಗಳನ್ನು ನೀಡಿ ಕಳುಹಿಸಿದ್ದರು. ಭಗವದ್ಗೀತೆ ಮಾತ್ರವಲ್ಲದೆ, ಅಸ್ಸಾಂ ಚಹಾ, ಕಾಶ್ಮೀರಿ ಕೇಸರಿ, ಕೈಯಿಂದ ತಯಾರಿಸಿದ ಬೆಳ್ಳಿ ಕುದುರೆ, ಅಲಂಕೃತ ಚಹಾ ಸೆಟ್ ಅನ್ನು ನೀಡಿದ್ದರು.