ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Narendra Modi: ಫ್ರಾನ್ಸ್-ಅಮೆರಿಕ ಪ್ರವಾಸ ಮುಗಿಸಿ ದೆಹಲಿಗೆ ಹಿಂತಿರುಗಿದ ಪ್ರಧಾನಿ ಮೋದಿ!

ಫ್ರಾನ್ಸ್ ಮತ್ತು ಅಮೆರಿಕ ರಾಷ್ಟ್ರಗಳ ಪ್ರವಾಸ ಮುಗಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ(ಫೆ.14) ದೆಹಲಿಯ ಪಾಲಂ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಮೋದಿ ಫ್ರಾನ್ಸ್‌ನಲ್ಲಿ ನಡೆದ AI ಶೃಂಗಸಭೆಯ ಸಹ-ಅಧ್ಯಕ್ಷತೆ ವಹಿಸಿದ್ದರು. ಅಲ್ಲಿಂದ ಅಮೆರಿಕ ದೇಶಕ್ಕೆ ಹೊರಟ ಅವರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಿ ಜಂಟಿ ಸುದ್ದಿಗೋಷ್ಠಿ ಕೂಡ ನಡೆಸಿದರು.

ಫ್ರಾನ್ಸ್-ಅಮೆರಿಕ ಪ್ರವಾಸ ಮುಗಿಸಿ ದೆಹಲಿಗೆ ಹಿಂತಿರುಗಿದ ಮೋದಿ

ಫ್ರಾನ್ಸ್-ಅಮೆರಿಕ ಪ್ರವಾಸ ಮುಗಿಸಿ ನೇರವಾಗಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಮೋದಿ

Profile Deekshith Nair Feb 15, 2025 10:36 AM

ನವದೆಹಲಿ: ಫ್ರಾನ್ಸ್(France) ಮತ್ತು ಅಮೆರಿಕ(America) ರಾಷ್ಟ್ರಗಳ ಪ್ರವಾಸ ಮುಗಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ(Narendra Modi) ಶುಕ್ರವಾರ(ಫೆ.14) ದೆಹಲಿಯ(Delhi) ಪಾಲಂ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಮೋದಿ ಫ್ರಾನ್ಸ್‌ನಲ್ಲಿ ನಡೆದ AI ಶೃಂಗಸಭೆಯ ಸಹ-ಅಧ್ಯಕ್ಷತೆ ವಹಿಸಿದ್ದರು. ಅಲ್ಲಿಂದ ಮಾರ್ಸೆಲ್ಸ್‌ಗೆ ಹೊರಟ ಅವರು ಮಹಾ ಯುದ್ಧಗಳಲ್ಲಿ ಮಡಿದ ಭಾರತೀಯ ಯೋಧರ ಸ್ಮಾರಕಗಳಿಗೆ ಗೌರವ ನಮನ ಸಲ್ಲಿಸಿದರು. ನಂತರ ಅಮೆರಿಕ ದೇಶಕ್ಕೆ ಹೊರಟ ಅವರು ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅವರನ್ನು ಭೇಟಿಯಾಗಿ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಟ್ರಂಪ್‌ ಜೊತೆಗೆ ಮಹತ್ವದ ಚರ್ಚೆ ನಡೆಸಿ ಔತಣಕೂಟದಲ್ಲಿ ಪಾಲ್ಗೊಂಡರು.



ಉತ್ತಮ ಜಗತ್ತನ್ನು ರೂಪಿಸಲು ಭಾರತ-ಅಮೆರಿಕ ಸಹಕಾರ:

ಅಮೆರಿಕದಲ್ಲಿ ಟ್ರಂಪ್‌ ಅವರನ್ನು ಭೇಟಿಯಾದ ಮೋದಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಟ್ರಂಪ್ ಎರಡನೇ ಅವಧಿಯಲ್ಲಿ ಮತ್ತಷ್ಟು ಆವೇಗದಿಂದ ಕೆಲಸ ಮಾಡುವ ವಿಶ್ವಾಸವನ್ನು ಪ್ರಧಾನಿ ಮೋದಿ ವ್ಯಕ್ತಪಡಿಸಿದ್ದಾರೆ. ಭಾರತ ಹಾಗೂ ಅಮೆರಿಕ ನಡುವಿನ ಸಹಕಾರವು ಉಭಯ ರಾಷ್ಟ್ರಗಳ ಪ್ರಗತಿಯ ಜೊತೆಗೆ ಉತ್ತಮ ಜಗತ್ತನ್ನು ರೂಪಿಸಲಿದ್ದು, ಸಮೃದ್ಧಿಯತ್ತ ಸಾಗಲಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ:Modi Trump Meeting: 'ನಾವು ನಿಮ್ಮನ್ನು ಮಿಸ್ ಮಾಡಿಕೊಂಡೆವು....ʼ ಮೋದಿಯನ್ನು ಕಂಡೊಡನೆ ಅಪ್ಪಿಕೊಂಡ ಟ್ರಂಪ್‌

'ಟ್ರಂಪ್‌ ಯಾವಾಗಲೂ ಅಮೆರಿಕದ ಹಿತಾಸಕ್ತಿಯನ್ನು ಕಾಪಾಡಲು ಹೆಚ್ಚಿನ ಆದ್ಯತೆ ನೀಡುತ್ತಾರೆ. ನಾನು ಸಹ ಎಲ್ಲದಕ್ಕೂ ಹೆಚ್ಚಿನದಾಗಿ ಭಾರತದ ಹಿತಾಸಕ್ತಿ ಕಾಪಾಡಲು ಬಯಸುತ್ತೇನೆ' ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಟ್ರಂಪ್‌ ಅವರ 'ಮೇಕ್ ಅಮೆರಿಕ ಗ್ರೇಟ್ ಎಗೈನ್' ಹೇಳಿಕೆಯು ನಮಗೂ ಸ್ಫೂರ್ತಿ ನೀಡುತ್ತದೆ. 2047ರಲ್ಲಿ ಭಾರತವು 100 ವರ್ಷಗಳ ಸ್ವಾತಂತ್ರ್ಯವನ್ನು ಪೂರ್ಣಗೊಳಿಸುವಾಗ 'ವಿಕಸಿತ ಭಾರತ'ದ ಸಂಕಲ್ಪದತ್ತ ಬದ್ಧರಾಗಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಭಾರತ-ಅಮೆರಿಕ ಸಂಬಂಧಕ್ಕೆ ಮೋದಿ ಸಮೀಕರಣ; MAGA+MIGA=MEGA ಏನಿದರ ಅರ್ಥ?

ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಅಮೆರಿಕ ಭೇಟಿಯಲ್ಲಿದ್ದರು. ಅಧ್ಯಕ್ಷ ಟ್ರಂಪ್‌ ಅವರ ಜೊತೆ ಮಹತ್ವದ ಮಾತಕತೆ ನಡೆಸಿದರು. ಗುರುವಾರ(ಫೆ.13) ಅಮೆರಿಕದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಟ್ರಂಪ್ ಅವರ ಪ್ರಸಿದ್ಧ ಘೋಷಣೆಯಾದ 'ಮೇಕ್ ಅಮೆರಿಕ ಗ್ರೇಟ್ ಎಗೇನ್' (MAGA) ನಿಂದ ಪ್ರೇರಿತರಾಗಿ ಮೇಕ್ ಇಂಡಿಯಾ ಗ್ರೇಟ್ ಎಗೇನ್' (MIGA) ಬಗ್ಗೆ ಮಾತನಾಡಿದ್ದರು. MAGA' ಮತ್ತು 'MIGA' ಜಂಟಿ ದೃಷ್ಟಿಕೋನವು ಒಂದು ಮೆಗಾ (MEGA) ಪಾಲುದಾರಿಕೆಯಾಗುತ್ತದೆ ಎಂದು ಅವರು ಹೇಳಿದ್ದರು.

ಈ ಬಗ್ಗೆ ಮಾತನಾಡಿದ ಮೋದಿ ಅಧ್ಯಕ್ಷ ಟ್ರಂಪ್ ಅವರ 'ಮಗಾ - ಅಮೆರಿಕವನ್ನು ಮತ್ತೆ ಶ್ರೇಷ್ಠರನ್ನಾಗಿ ಮಾಡಿ' ಎಂಬ ಧ್ಯೇಯವಾಕ್ಯದ ಬಗ್ಗೆ ಅಮೆರಿಕದ ಜನರಿಗೆ ಚೆನ್ನಾಗಿ ತಿಳಿದಿದೆ. ಭಾರತದ ಜನರು ಕೂಡ ಪರಂಪರೆ ಮತ್ತು ಅಭಿವೃದ್ಧಿಯತ್ತ ಗಮನ ಹರಿಸುತ್ತಿದ್ದಾರೆ. 2047 ರ ಹೊತ್ತಿಗೆ ವಿಕ್ಷಿತ್ ಭಾರತ್ ದೃಢ ಸಂಕಲ್ಪದೊಂದಿಗೆ ಮುಂದುವರಿಯುತ್ತಿದ್ದಾರೆ. ಅಮೆರಿಕದ ಭಾಷೆಯಲ್ಲಿ, ಇದು ಮೇಕ್ ಇಂಡಿಯಾ ಗ್ರೇಟ್ ಅಗೈನ್ - ಮಿಗಾ. ಅಮೆರಿಕ ಮತ್ತು ಭಾರತ ಒಟ್ಟಾಗಿ ಕೆಲಸ ಮಾಡಿದಾಗ, ಈ ಮಾಗಾ ಪ್ಲಸ್ ಮಿಗಾ 'ಸಮೃದ್ಧಿಗಾಗಿ ಮೆಗಾ ಪಾಲುದಾರಿಕೆ'ಯಾಗುತ್ತದೆ" ಎಂದು ಪ್ರಧಾನಿ ಮೋದಿ ಹೇಳಿದ್ದರು.