ನವದೆಹಲಿ, ಡಿ. 25: ಗುರುವಾರ ವಿಶ್ವಾದ್ಯಂತ ಕ್ರಿಸ್‌ಮಸ್ ಹಬ್ಬವನ್ನು (Christmas) ಬಹಳ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ವಿಶೇಷ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Modi) ದೆಹಲಿಯ ಕ್ಯಾಥೆಡ್ರಲ್ ಚರ್ಚ್ ಆಫ್ ದ ರಿಡಂಪ್ಶನ್ ಭೇಟಿ ನೀಡಿ, ಕ್ರೈಸ್ತ ಸಮುದಾಯದವರ ಜತೆಗೂಡಿ (Christian community) ಕ್ರಿಸ್‌ಮಸ್ ಆಚರಣೆಯಲ್ಲಿ ಭಾಗವಹಿಸಿದರು. ಈ ಮೊದಲು, ಕ್ರಿಸ್‌ಮಸ್ ಹಬ್ಬದ ಅಂಗವಾಗಿ ಪ್ರಧಾನಿ ಮೋದಿ ದೇಶದ ಜನತೆಗೆ ಶುಭಾಶಯಗಳನ್ನು ತಿಳಿಸಿದರು. ಶಾಂತಿ, ಕರುಣೆ ಮತ್ತು ಭರವಸೆಯ ಸಂದೇಶವನ್ನು ಅವರು ಹಂಚಿಕೊಂಡರು.
ಶುಭ ಹಾರೈಸಿದ ಮೋದಿ
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮುನ್ನ ಕ್ರಿಸ್‌ಮಸ್ ಅಂಗವಾಗಿ ತಮ್ಮ ಎಕ್ಸ್ ಖಾತೆಯ ಮೂಲಕ ಶುಭ ಹಾರೈಸಿದರು. "ಎಲ್ಲರಿಗೂ ಕ್ರಿಸ್‌ಮಸ್ ಶುಭಾಶಯಗಳು. ಈ ಹಬ್ಬ ಎಲ್ಲರಿಗೂ ಸಂತೋಷ, ಶಾಂತಿ ಹಾಗೂ ಸಮೃದ್ಧಿಯನ್ನು ತರಲಿ ಎಂದು ಹಾರೈಸುತ್ತೇನೆ. ಕ್ರಿಸ್‌ಮಸ್ ಸೌಹಾರ್ದತೆ ಹಾಗೂ ಸಹಾನುಭೂತಿಯ ಸಂಕೇತ. ವಿಶ್ವದ ಪ್ರತಿಯೊಬ್ಬರು ಸಂತೋಷ ಮತ್ತು ಆರೋಗ್ಯದಿಂದರಲು ಹಾಗೂ ಉತ್ತಮ ಸಮಾಜ ನಿರ್ಮಿಸಲು ಹಾಗೂ ಅಭಿವೃದ್ಧಿ ಸಾಧಿಸಿಲು ಒಟ್ಟಿಗೆ ಕೆಲಸ ಮಾಡೋಣ. ಇದೇ ಸಂದರ್ಭದಲ್ಲಿ ಕ್ರಿಸ್ತನ ಬೋಧನೆಗಳನ್ನು ನೆನಪಿಸಿಕೊಳ್ಳೋಣ" ಎಂದು ಪೋಸ್ಟ್ ಮಾಡಿದ್ದಾರೆ.
ಕಿಸ್‌ಮಸ್ ಆಚರಿಸಿದ ಮೋದಿ:
ಕ್ರಿಶ್ಚಿಯನ್ ಧರ್ಮದ ಜನರು ಈ ದಿನವನ್ನು ಏಸುಕ್ರಿಸ್ತನ ಜನ್ಮದಿನವೆಂದು ಆಚರಿಸುತ್ತಾರೆ. ಭಾರತದಲ್ಲಿಯೂ ಕ್ರಿಶ್ಚಿಯನ್ ಧರ್ಮದ ಜತೆಗೆ ಎಲ್ಲ ಧರ್ಮದ ಜನರು ಕ್ರಿಸ್‌ಮಸ್ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಾರೆ.
ಅಲಿಘರ್ ಮುಸ್ಲಿಂ ಯುನಿವರ್ಸಿಟಿಯಲ್ಲಿ ವಾಕಿಂಗ್ ಮಾಡುತ್ತಿದ್ದ ಶಿಕ್ಷಕನ ಮೇಲೆ ಗುಂಡಿನ ದಾಳಿ!
ಮಾಹಿತಿಯ ಪ್ರಕಾರ, ಶತಮಾನಗಳ ಹಿಂದಿನ ಕಾಲದಲ್ಲಿ ಕ್ರಿಸ್‌ಮಸ್ ಹಬ್ಬವನ್ನು ಪಾಶ್ಚಿಮಾತ್ಯ ದೇಶಗಳಲ್ಲಿ ಮತ್ತು ಕ್ರೈಸ್ತರ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಮಾತ್ರ ಆಚರಿಸಲಾಗುತ್ತಿತ್ತು. ಆದರೆ ಇಂದು ಪ್ರಪಂಚದಾದ್ಯಂತ ಆಚರಿಸುವ ಹಬ್ಬವಾಗಿ ಗುರುತಿಸಿಕೊಂಡಿದೆ. ಅಲ್ಲದೇ ದೇವರು ತನ್ನ ಮಗನಾದ ಏಸುಕ್ರಿಸ್ತನನ್ನು ಜನರನ್ನು ಪಾಪದಿಂದ ಮುಕ್ತಗೊಳಿಸಲು ಮತ್ತು ಜನರಿಗೆ ಒಳಿತನ್ನು ಮಾಡಲು ಈ ಭೂಮಿಗೆ ಕಳುಹಿಸಿದನು. ಅಲ್ಲದೆ ಜನರನ್ನು ಪಾಪದಿಂದ ಮುಕ್ತಗೊಳಿಸುವ ಹೋರಾಟದಲ್ಲಿ ಏಸು ತನ್ನ ಪ್ರಾಣವನ್ನು ತ್ಯಾಗ ಮಾಡಿದನು ಎಂಬ ನಂಬಿಕೆ ಇದೆ.
ಇನ್ನು ಕ್ರಿಸ್‌ಮಸ್ ಮೊದಲು ರೋಮ್‌ನಲ್ಲಿ ಪ್ರಾರಂಭಗೊಂಡಿತು ಎಂದು ಹೇಳಲಾಗುತ್ತದೆ. ಹಾಗೇ ಕ್ರಿಸ್‌ಮಸ್‌ಗೆ ಮುನ್ನ ರೋಮ್‌ನಲ್ಲಿ ಡಿಸೆಂಬರ್ 25ರ ದಿನವನ್ನು ಸೂರ್ಯ ದೇವರ ಜನ್ಮದಿನವಾಗಿ ಆಚರಿಸಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ. ಆ ಸಮಯದಲ್ಲಿ ರೋಮ್‌ನ ಚಕ್ರವರ್ತಿಗಳು ಸೂರ್ಯ ದೇವನನ್ನು ತಮ್ಮ ಮುಖ್ಯ ದೇವತೆಯಾಗಿ ಪರಿಗಣಿಸುತ್ತಿದ್ದರು ಮತ್ತು ಸೂರ್ಯದೇವನನ್ನು ಪೂಜಿಸುತ್ತಿದ್ದರು. ಇದಾದ ಬಳಿಕ ಕ್ರಿ.ಶ. 336ರಲ್ಲಿ ಕ್ರೈಸ್ತ ಧರ್ಮದ ಅನುಯಾಯಿಗಳು ಯೇಸುಕ್ರಿಸ್ತನನ್ನು ಸೂರ್ಯದೇವನ ಅವತಾರವೆಂದು ಒಪ್ಪಿಕೊಂಡರು ಮತ್ತು ಅಂದಿನಿಂದ ಕ್ರಿಸ್‌ಮಸ್ ಹಬ್ಬವನ್ನು ಏಸುಕ್ರಿಸ್ತನ ಜನ್ಮದಿನವಾಗಿ ಆಚರಿಸುವ ಸಂಪ್ರದಾಯವು ಪ್ರಾರಂಭವಾಯಿತು.