ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಾಜಿ ಸಿಎಂ ನಿತೀಶ್ ಕುಮಾರ್ ಹೆಸರಿನ ಬೃಹತ್ ಸೇತುವೆ ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ

ಬಿಹಾರದ ಮೂಲಸೌಕರ್ಯ ಅಭಿವೃದ್ಧಿಗೆ ಹೊಸ ವೇಗ ನೀಡುವ ನಿಟ್ಟಿನಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ವೈಶಾಲಿ ಜಿಲ್ಲೆಯಲ್ಲಿ ಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಆರು ಪಥದ ಬೃಹತ್ 'ನಿತೀಶ್ ಸೇತು' ಸೇತುವೆಯನ್ನು ಲೋಕಾರ್ಪಣೆಗೊಳಿಸಿದರು.

ಸಂಗ್ರಹ ಚಿತ್ರ

ಪಾಟ್ನಾ: ಬಿಹಾರದ ಮೂಲಸೌಕರ್ಯ ಅಭಿವೃದ್ಧಿಗೆ ಹೊಸ ವೇಗ ನೀಡುವ ನಿಟ್ಟಿನಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಶನಿವಾರ ವೈಶಾಲಿ ಜಿಲ್ಲೆಯಲ್ಲಿ ಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಆರು ಪಥದ ಬೃಹತ್ 'ನಿತೀಶ್ ಸೇತು' (Nitish Setu) ಸೇತುವೆಯನ್ನು ಲೋಕಾರ್ಪಣೆಗೊಳಿಸಿದರು. ಬಿಹಾರದ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಗೌರವಾರ್ಥವಾಗಿ ಈ ಸೇತುವೆಗೆ ಅವರ ಹೆಸರನ್ನು ಇಡಲಾಗಿದೆ.

ಸುಮಾರು 4,280 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಮಹತ್ವಾಕಾಂಕ್ಷಿ ಯೋಜನೆಯು ಒಟ್ಟು 19.76 ಕಿ.ಮೀ. ಉದ್ದವಿದ್ದು, ಇದರಲ್ಲಿ ಸುಮಾರು 9.76 ಕಿ.ಮೀ. ಉದ್ದದ ಮುಖ್ಯ ಸೇತುವೆ ಮತ್ತು ಸಂಪರ್ಕ ರಸ್ತೆಗಳು ಸೇರಿವೆ. ಈ ಸೇತುವೆಯು ಪಾಟ್ನಾ ಜಿಲ್ಲೆಯ ಕಚ್ಚಿ ದರ್ಗಾ (NH-22) ಮತ್ತು ವೈಶಾಲಿ ಜಿಲ್ಲೆಯ ಬಿದುಪುರವನ್ನು (NH-322) ನೇರವಾಗಿ ಬೆಸೆಯುತ್ತದೆ. ಇದರಿಂದಾಗಿ ಮಹಾತ್ಮ ಗಾಂಧಿ ಸೇತುವೆಯ ಮೇಲಿನ ಸಂಚಾರ ದಟ್ಟಣೆ ಗಣನೀಯವಾಗಿ ಕಡಿಮೆಯಾಗಲಿದ್ದು, ಉತ್ತರ ಮತ್ತು ದಕ್ಷಿಣ ಬಿಹಾರ ನಡುವಿನ ಪ್ರಯಾಣದ ಸಮಯ ಉಳಿತಾಯವಾಗಲಿದೆ.

ವಿಡಿಯೋ ನೋಡಿ



ಸೇತುವೆ ಉದ್ಘಾಟನೆಯ ಜೊತೆಗೆ, ರಾಜ್ಯದ ವಿವಿಧೆಡೆ 34,470 ಕೋಟಿ ರೂ. ಹೆಚ್ಚಿನ ಮೌಲ್ಯದ ರಸ್ತೆ, ರೈಲ್ವೆ ಹಾಗೂ ಇತರ ಮೂಲಸೌಕರ್ಯ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಪ್ರಧಾನಿ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಬಿಹಾರ ರಾಜ್ಯಪಾಲ ಸೈಯದ್ ಆತ ಹಸ್ನೈನ್, ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ, ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಆದರೆ, ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸಮಾರಂಭದಲ್ಲಿ ಭಾಗವಹಿಸಿರಲಿಲ್ಲ.

ಬಿಜೆಪಿ- ಜೆಡಿಯು ನಡುವೆ ಅಂತರ?

ಬಿಜೆಪಿ ಹಾಗೂ ಜೆಡಿಯು ನಡುವೆ ಅಂತರ ಏರ್ಪಟ್ಟಿದೆ ಎಂದು ಕೆಲ ವರದಿಗಳು ಈ ಮೊದಲು ತಿಳಿಸಿದ್ದವು. ಇದಕ್ಕೆ ಪುಷ್ಠಿ ನೀಡುವಂತೆ ನವೆಂಬರ್ 9, 2026 ರಂದು ಆರ್‌ಜೆಡಿ (RJD) ನಾಯಕ ತೇಜಸ್ವಿ ಯಾದವ್ ಅವರ 37ನೇ ಜನ್ಮದಿನದ ಪ್ರಯುಕ್ತ ಜೆಡಿಯು ಪಕ್ಷದ ಪ್ರಮುಖ ನಾಯಕರು ಅವರಿಗೆ ಶುಭ ಕೋರಿದ್ದರು. ಮೇಲ್ನೋಟಕ್ಕೆ ಇದು ಸಾಮಾನ್ಯ ಜನ್ಮದಿನದ ಶುಭಾಶಯದಂತೆ ಕಂಡರೂ, ಬಿಹಾರದ ರಾಜಕೀಯ ವಲಯದಲ್ಲಿ ಇದಕ್ಕೆ ವಿಶೇಷ ಮಹತ್ವ ನೀಡಲಾಗುತ್ತಿದೆ.

ಬಿಹಾರದ ʼಬಾಹುಬಲಿʼ ಮಗಳ ಮದುವೆಗೆ 4 ಲಕ್ಷ ಜನರಿಗೆ ಆಹ್ವಾನ; ಪ್ರಧಾನಿ ಮೋದಿಗೂ ಆಮಂತ್ರಿಸುವೆ ಎಂದ ಶಾಸಕ!

ಜೆಡಿಯು ಕಾರ್ಯಾಧ್ಯಕ್ಷ ಸಂಜಯ್ ಝಾ, ಮಾಜಿ ಸಿಎಂ ನಿತೀಶ್ ಕುಮಾರ್ ಅವರ ಪುತ್ರ ಹಾಗೂ ಸಚಿವ ನಿಶಾಂತ್ ಕುಮಾರ್, ಹಿರಿಯ ನಾಯಕ ವಿಜಯ್ ಕುಮಾರ್ ಚೌಧರಿ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ಯಾಮ್ ರಜಕ್ ಅವರು ಸಾರ್ವಜನಿಕವಾಗಿ ತೇಜಸ್ವಿ ಯಾದವ್ ಅವರಿಗೆ ಶುಭ ಹಾರೈಸಿದ್ದರು. ಮತ್ತೊಂದೆಡೆ ಎನ್‌ಡಿಎ ಮೈತ್ರಿಕೂಟದ ಭಾಗವಾಗಿರುವ ಬಿಜೆಪಿಯ ಯಾವುದೇ ಪ್ರಮುಖ ನಾಯಕರು (ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಸೇರಿದಂತೆ) ತೇಜಸ್ವಿ ಯಾದವ್ ಅವರಿಗೆ ಶುಭಾಶಯ ತಿಳಿಸಿರಲಿಲ್ಲ.

ಎಂಎಲ್‌ಸಿ ಚುನಾವಣೆಯ ಅಸಮಾಧಾನ: ಈ ಶುಭಾಶಯಗಳಿಗೂ ಮುನ್ನ ನಡೆದ ಬಿಹಾರ ವಿಧಾನ ಪರಿಷತ್ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದೊಳಗೆ ಸಮನ್ವಯದ ಕೊರತೆ ಕಂಡುಬಂದಿತ್ತು ಮತ್ತು ಜೆಡಿಯು ನಿರೀಕ್ಷಿತ ಫಲಿತಾಂಶ ಪಡೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಜೆಡಿಯು ನಡುವೆ ಅಸಮಾಧಾನವಿದೆ ಎಂಬ ಚರ್ಚೆಗಳು ಶುರುವಾಗಿದ್ದವು

Vishakha Bhat Heggar

View all posts by this author