ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬಿಹಾರದ ʼಬಾಹುಬಲಿʼ ಮಗಳ ಮದುವೆಗೆ 4 ಲಕ್ಷ ಜನರಿಗೆ ಆಹ್ವಾನ; ಪ್ರಧಾನಿ ಮೋದಿಗೂ ಆಮಂತ್ರಿಸುವೆ ಎಂದ ಶಾಸಕ!

ಬಿಹಾರದ ಬಾಹುಬಲಿ ಎಂದೇ ಕರೆಯಲಾಗುವ ಶಾಸಕ ಅನಂತ್ ಸಿಂಗ್ ಅವರ ಪುತ್ರಿ ಶಿವಂಗಿ ಸಿಂಗ್ ಅವರ ವಿವಾಹ ಇದೀಗ ಇಡೀ ದೇಶಾದ್ಯಂತ ಸುದ್ದಿಯಲ್ಲಿದೆ. ಇತ್ತೀಚೆಗೆ ತಾನು ಒಂಬತ್ತು ಜನರನ್ನು ಕೊಲೆ ಮಾಡಿರುವುದಾಗಿ ಹೇಳಿಕೆ ನೀಡಿ ನಂತರ ಹಿಂಪಡೆದು ಸುದ್ದಿಯಲ್ಲಿದ್ದ ಅನಂತ್ ಸಿಂಗ್, ತಮ್ಮ ಮಗಳ ಮದುವೆಗೆ ಬರೋಬ್ಬರಿ 4 ಲಕ್ಷ ಜನರನ್ನು ಆಹ್ವಾನಿಸಿದ್ದಾರೆ ಎನ್ನಲಾಗಿದೆ.

ಬಿಹಾರದ ಬಾಹುಬಲಿ ಮಗಳ ಮದುವೆಗೆ 4 ಲಕ್ಷ ಜನರಿಗೆ ಆಹ್ವಾನ;

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Nov 10, 2026 10:57 AM

ಪಟನಾ: ಬಿಹಾರದ ಬಾಹುಬಲಿ (Bihar Bahubali) ಎಂದೇ ಕರೆಯಲಾಗುವ ಶಾಸಕ ಅನಂತ್ ಸಿಂಗ್ ಅವರ ಪುತ್ರಿ ಶಿವಂಗಿ ಸಿಂಗ್ ಅವರ ವಿವಾಹ ಇದೀಗ ಇಡೀ ದೇಶಾದ್ಯಂತ ಸುದ್ದಿಯಲ್ಲಿದೆ. ಇತ್ತೀಚೆಗೆ ತಾನು ಒಂಬತ್ತು ಜನರನ್ನು ಕೊಲೆ ಮಾಡಿರುವುದಾಗಿ ಹೇಳಿಕೆ ನೀಡಿ ನಂತರ ಹಿಂಪಡೆದು ಸುದ್ದಿಯಲ್ಲಿದ್ದ ಅನಂತ್ ಸಿಂಗ್, (Viral News) ತಮ್ಮ ಮಗಳ ಮದುವೆಗೆ ಬರೋಬ್ಬರಿ 4 ಲಕ್ಷ ಜನರನ್ನು ಆಹ್ವಾನಿಸಿದ್ದಾರೆ ಎನ್ನಲಾಗಿದೆ. ನವೆಂಬರ್ 25 ರಂದು ಅನಂತ್ ಸಿಂಗ್ ಅವರ ಪೂರ್ವಜರ ಗ್ರಾಮವಾದ ಲಡ್ಮಾದಲ್ಲಿ ಶಿವಂಗಿ ಸಿಂಗ್ ಮತ್ತು ಋಷಿಕೇಶ್ ಕುಮಾರ್ ಅವರ ವಿವಾಹ ನೆರವೇರಲಿದೆ.

ಉತ್ತರ ಪ್ರದೇಶದ ಮೌ ಜಿಲ್ಲೆಯ ವಿಶೇಷ ಕುಶಲಕರ್ಮಿಗಳು ಮದುವೆಯ ಪೆಂಡಾಲ್ ಮತ್ತು ಬೃಹತ್ ವೇದಿಕೆಯನ್ನು ನಿರ್ಮಿಸುತ್ತಿದ್ದಾರೆ. ವಧು-ವರರಿಗಾಗಿ 100 ಅಡಿ ಉದ್ದದ ಸಿಮೆಂಟ್ ವೇದಿಕೆಯನ್ನು ಸಿದ್ಧಪಡಿಸಲಾಗುತ್ತಿದ್ದು, ಇದನ್ನು ಅಲಂಕರಿಸಲು 150 ಕ್ವಿಂಟಲ್ ಆಭರಣ ಹಾಗೂ ಸಾಮಗ್ರಿಗಳನ್ನು ಬಳಸಲಾಗುತ್ತಿದೆ. ಈ ವಿವಾಹ ಮಹೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಮಂತ್ರಣ ಪತ್ರಿಕೆ ನೀಡಲಾಗುವುದು ಎಂದು ಅನಂತ್ ಸಿಂಗ್ ತಿಳಿಸಿದ್ದಾರೆ. ಇದರೊಂದಿಗೆ ದೇಶದ ಪ್ರಮುಖ ರಾಜಕಾರಣಿಗಳು, ಸೋನು ಸೂದ್, ಮನೋಜ್ ತಿವಾರಿ, ಪವನ್ ಸಿಂಗ್, ಅಕ್ಷರಾ ಸಿಂಗ್ ಮತ್ತು ಮೈಥಿಲಿ ಠಾಕೂರ್ ಸೇರಿದಂತೆ ಹಲವು ಸೆಲೆಬ್ರಿಟಿಗಳನ್ನು ಆಹ್ವಾನಿಸಲಾಗಿದೆ.

ʼʼಮತದಾನದ ಮೊದಲು ಹಂಚಿದ ಹಣ ವಾಪಸ್‌ ಕೊಡಿʼʼ: ಸೋತ ಬಳಿಕ ವರಸೆ ಬದಲಾಯಿಸಿದ ಅಭ್ಯರ್ಥಿಯ ವಿಡಿಯೊ ವೈರಲ್‌

ಮದುವೆಯ ನಂತರ ವರನ ಕುಟುಂಬವು ಬಿಹ್ತಾದ ರಾಮಕೃಷ್ಣ ನಗರಕ್ಕೆ ಸ್ಥಳಾಂತರಗೊಳ್ಳಲಿದ್ದು, ಇದು ವಧುವಿನ ಹೊಸ ಮನೆಯಾಗಲಿದೆ. ಪ್ರಸ್ತುತ ಬಿಹ್ತಾದಲ್ಲಿ ಹೊಸ ಮನೆಯ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಮದುವೆಗೆ ಸಂಬಂಧಿಸಿದ ಎಲ್ಲಾ ಪ್ರಮುಖ ಆಚರಣೆಗಳು ಇಲ್ಲಿಯೇ ಜರುಗಲಿವೆ. ವರನ ಮೆರವಣಿಗೆಯು ಬಿಹ್ತಾದಿಂದ ಹೊರಟು ಲದ್ಮಾ ಗ್ರಾಮ ತಲುಪಲಿದೆ.

ಮದುವೆಯ ಬೆನ್ನಲ್ಲೇ ಶರಣಾಗತಿ

ಸ್ಥಳೀಯವಾಗಿ 'ಛೋಟೆ ಸರ್ಕಾರ್' ಎಂದೇ ಕರೆಯಲ್ಪಡುವ ಮೊಕಾಮಾ ಕ್ಷೇತ್ರದ ಮಾಜಿ ಶಾಸಕ ಅನಂತ್ ಸಿಂಗ್ ಅವರಿಗೆ ಈ ಮದುವೆ ಅತ್ಯಂತ ಭಾವುಕ ಕ್ಷಣವಾಗಿದೆ. ಏಕೆಂದರೆ, ಮದುವೆ ಮುಗಿದ ಕೇವಲ ಆರೇ ದಿನಗಳಲ್ಲಿ, ಅಂದರೆ ಡಿಸೆಂಬರ್ 1 ರೊಳಗೆ ಅವರು ದುಲಾರ್ ಚಂದ್ ಯಾದವ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಅಧಿಕಾರಿಗಳ ಮುಂದೆ ಶರಣಾಗಬೇಕಿದೆ ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಇತ್ತೀಚೆಗಷ್ಟೇ ಶಿಸ್ತು ಉಲ್ಲಂಘನೆಯ ಹಿನ್ನೆಲೆಯಲ್ಲಿ ಜೆಡಿಯು (JDU) ಪಕ್ಷವು ಅವರನ್ನು 6 ವರ್ಷಗಳ ಕಾಲ ಉಚ್ಚಾಟಿಸಿತ್ತು.