ನವದೆಹಲಿ: ಹಿಂದೆ ನಡೆದಿರುವುದೆಲ್ಲವನ್ನೂ ಮರೆತು ಬಿಡಿ. ಮುಂದೆ ನಡೆಯಬೇಕಾದುದರ ಕಡೆಗೆ ಗಮನ ಹರಿಸಿ ಎಂದು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ತಮ್ಮ ಸಂಪುಟದ ಸಚಿವರಿಗೆ (Ministers Council) ತಿಳಿಸಿದರು. ಕೇಂದ್ರ ಸರ್ಕಾರವು ಒಟ್ಟು 12 ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ತಮ್ಮ ಸಂಪುಟದ ಸಚಿವರೊಂದಿಗೆ ಸುಮಾರು 5 ಗಂಟೆಗಳ ಕಾಲ ಸಭೆ (Meeting) ನಡೆಸಿ, ಭವಿಷ್ಯದತ್ತ ಗಮನಹರಿಸಲು, ಸುಧಾರಣೆಗಳನ್ನು ವೇಗಗೊಳಿಸಲು ಮತ್ತು ಸಾರ್ವಜನಿಕ ಕಲ್ಯಾಣ ಮತ್ತು ಜೀವನ ಸುಗಮತೆಯ ಮೇಲೆ ಆಡಳಿತ ಕೇಂದ್ರೀಕರಿಸುವುದನ್ನು ಖಚಿತಪಡಿಸಿಕೊಳ್ಳುವಂತೆ ತಿಳಿಸಿದರು.
ಸಚಿವರ ಮಂಡಳಿಯೊಂದಿಗೆ ಗುರುವಾರ ಸುಮಾರು ನಾಲ್ಕೂವರೆ ಗಂಟೆಗಳ ಕಾಲ ನಡೆದ ಮ್ಯಾರಥಾನ್ ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರಧಾನಿ ಮೋದಿ ಅವರು ತಮ್ಮ ಸರ್ಕಾರ ಮುಂದಿನ ತಿಂಗಳು ಕೇಂದ್ರದಲ್ಲಿ 12 ವರ್ಷಗಳನ್ನು ಪೂರೈಸುವ ಮುನ್ನ ಉತ್ತಮ ಆಡಳಿತದ ದೃಢ ಸಂಕಲ್ಪಕ್ಕೆ ಕರೆ ನೀಡಿದರು.
ಅಮೆರಿಕ-ಇರಾನ್ ಯುದ್ಧದ ಬಿಕ್ಕಟ್ಟಿನ ನಡುವೆ ಸಚಿವರಿಗೆ ಪ್ರಧಾನಿ ಮೋದಿಯಿಂದ 3 ಪ್ರಮುಖ ಸಂದೇಶ
ಪ್ರಧಾನಿ ಮೋದಿ ಅವರ ಸರ್ಕಾರವು ಮೂರನೇ ಅವಧಿಯ ಎರಡು ವರ್ಷಗಳು ಸೇರಿದಂತೆ ಕೇಂದ್ರದಲ್ಲಿ ಒಟ್ಟು 12 ವರ್ಷಗಳನ್ನು ಜೂನ್ 9ರಂದು ಪೂರ್ಣಗೊಳಿಸಲಿದ್ದು, ಇದಕ್ಕೂ ಮೊದಲು ಸಚಿವ ಸಂಪುಟ ಪುನರ್ ರಚನೆಯ ಸಾಧ್ಯತೆ ಇದೆ. ಇದಕ್ಕೂ ಮೊದಲೇ ಉನ್ನತ ಮಟ್ಟದ ಸಭೆಯನ್ನು ಕರೆದಿರುವ ಪ್ರಧಾನಿ ಮೋದಿ ಅವರು ಹಿಂದೆ ನಡೆದದ್ದನ್ನು ಮರೆತುಬಿಡಿ, ಭವಿಷ್ಯದ ಮೇಲೆ ಗಮನಹರಿಸಿ ಎಂದ ತಮ್ಮ ಸಚಿವರಿಗೆ ಹೇಳಿದರು.
ವಿಕಸಿತ ಭಾರತ 2047 ರ ದೃಷ್ಟಿಕೋನವನ್ನು ಇಟ್ಟುಕೊಂಡು ಕೆಲಸ ಮಾಡಬೇಕು. ಸುಧಾರಣೆಗಳು ಕೇವಲ ಕಡತಗಳಿಗೆ ಸೀಮಿತವಾಗಬಾರದು, ನಾಗರಿಕರಿಗೆ ವೇಗವಾದ ಮತ್ತು ಸರಳವಾದ ಆಡಳಿತ ನೀಡಲು ಶ್ರಮಿಸಬೇಕು.ಅನಗತ್ಯ ವಿಳಂಬಗಳಿಲ್ಲದೆ ಕಡತಗಳು ತ್ವರಿತವಾಗಿ ಸಾಗಬೇಕು ಎಂದ ಅವರು ಸಚಿವರು ಲಭ್ಯವಿರುವಾಗ ಹೆಚ್ಚಿನ ಕಾರ್ಯಗಳು ಪೂರ್ಣಗೊಳ್ಳಬೇಕು. ಸರ್ಕಾರದ 12 ವರ್ಷಗಳ ಪ್ರಯಾಣ, ಕಲ್ಯಾಣ ಉಪಕ್ರಮಗಳು ಮತ್ತು ಸುಧಾರಣಾ ಕಾರ್ಯಸೂಚಿಯನ್ನು ನೇರವಾಗಿ ಜನರಿಗೆ ತಲುಪಿಸುವಂತೆ ಸಚಿವರಲ್ಲಿ ಕೇಳಿಕೊಂಡರು.
ಕಳೆದ ಎರಡು ವರ್ಷಗಳಲ್ಲಿ ಕೈಗೊಂಡ ಸುಧಾರಣೆಗಳು ಮತ್ತು ಭವಿಷ್ಯದ ನೀತಿ ಯೋಜನೆಗಳ ವಿವರವಾದ ವರದಿಗಳನ್ನು ಸಚಿವಾಲಯಗಳು ಈ ಹಿಂದೆಯೇ ಸಂಪುಟ ಸಚಿವಾಲಯಕ್ಕೆ ಸಲ್ಲಿಸಿದ್ದವು ಎಂಬುದಾಗಿ ಈ ಸಂದರ್ಭದಲ್ಲಿ ಅವರು ಉಲ್ಲೇಖಿಸಿದರು.
ಜಾವಾ, ಯೆಜ್ಡಿ, ಬಿಎಸ್‌ಎ ಬೈಕ್ ಮಾಲೀಕರಿಗೆ ಗುಡ್ ನ್ಯೂಸ್: 9 ದಿನಗಳ 'ಲೆಜೆಂಡ್ಸ್ ಕೇರ್ ಕ್ಯಾಂಪ್' ಮೇ 23ರಿಂದ ಆರಂಭ
ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಸರ್ಕಾರದ ಇತ್ತೀಚಿನ ಐದು ರಾಷ್ಟ್ರಗಳ ರಾಜತಾಂತ್ರಿಕ ಸಂಪರ್ಕದ ಬಗ್ಗೆ ಸಚಿವ ಮಂಡಳಿಗೆ ವಿವರಿಸಿದರು. ಹನ್ನೊಂದು ತಿಂಗಳ ಬಳಿಕ ಇದು ಪೂರ್ಣ ಮಂತ್ರಿ ಮಂಡಳಿಯ ಮೊದಲ ಸಭೆಯಾಗಿತ್ತು. ಕೊನೆಯ ಸಭೆ ಕಳೆದ ವರ್ಷ ಜೂನ್ 4 ರಂದು ನಡೆದಿತ್ತು.