ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಶೀಘ್ರದಲ್ಲೇ ವಿಶ್ವದ ಹಿರಿಯ ಜೀವಂತ ಪ್ರಾಣಿಯನ್ನು ಭೇಟಿಯಾಗಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ: ಅದು ಯಾವುದು, ಎಲ್ಲಿದೆ?

ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ವಾರ ಸೀಶೆಲ್ಸ್ ಪ್ರವಾಸ ಮಾಡಲಿದ್ದಾರೆ. ಅವರ ಈ ಪ್ರವಾಸವು ಕಡಲ ಭದ್ರತೆ, ನೀಲಿ ಆರ್ಥಿಕತೆ, ಹವಾಮಾನ ಬದಲಾವಣೆ ಪರಿಣಾಮಗಳು, ವಿವಿಧ ಕ್ಷೇತ್ರಗಳಲ್ಲಿ ಸಾಮರ್ಥ್ಯ ವೃದ್ಧಿಗೆ ಸಹಕಾರವನ್ನು ಬಲಪಡಿಸುವ ಉದ್ದೇಶವನ್ನು ಹೊಂದಿದೆ. ಈ ಸಂದರ್ಭದಲ್ಲಿ ಅವರು ವಿಶ್ವದ ಅತ್ಯಂತ ಹಿರಿಯ ಜೀವಂತ ಪ್ರಾಣಿಯನ್ನು ಭೇಟಿಯಾಗಲಿದ್ದಾರೆ. ಆ ಪ್ರಾಣಿ ಯಾವುದು, ಎಲ್ಲಿದೆ? ಇಲ್ಲಿದೆ ಅದರ ಕಂಪ್ಲೀಟ್ ಡಿಟೇಲ್ಸ್ .

ಸಂಗ್ರಹ ಚಿತ್ರ

ನವದೆಹಲಿ: ಹಿಂದೂ ಮಹಾಸಾಗರದಲ್ಲಿರುವ (Indian Ocean) ಸುಮಾರು 115 ದ್ವೀಪಗಳ ಸುಂದರ ರಾಷ್ಟ್ರವಾಗಿರುವ ಸೀಶೆಲ್ಸ್ (Seychelles) ಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಮುಂದಿನ ವಾರ ಪ್ರವಾಸ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಅವರು ವಿಶ್ವದ ಅತ್ಯಂತ ಹಿರಿಯ ಜೀವಂತ ಪ್ರಾಣಿ ಜೋನಾಥನ್ (Jonathan tortoise) ಅನ್ನು ಭೇಟಿಯಾಗಲಿದ್ದಾರೆ. ಪ್ರಧಾನಿ ಮೋದಿ ಅವರ ಸೀಶೆಲ್ಸ್ ಪ್ರವಾಸವು ಭಾರತ ಮತ್ತು ಸೀಶೆಲ್ಸ್ ನಡುವಿನ ಕಡಲ ಭದ್ರತೆ, ನೀಲಿ ಆರ್ಥಿಕತೆ, ಹವಾಮಾನ ಬದಲಾವಣೆ ಪರಿಣಾಮಗಳು, ವಿವಿಧ ಕ್ಷೇತ್ರಗಳಲ್ಲಿ ಸಾಮರ್ಥ್ಯ ವೃದ್ಧಿಗೆ ಸಹಕಾರವನ್ನು ಬಲಪಡಿಸುವ ಉದ್ದೇಶವನ್ನು ಹೊಂದಿದೆ.

ಸೀಶೆಲ್ಸ್‌ನ ರಾಷ್ಟ್ರೀಯ ದಿನಾಚರಣೆಗೆ ಗೌರವ ಅತಿಥಿಯಾಗಿ ಪ್ರಧಾನಿ ಮೋದಿಯನ್ನು ಆಹ್ವಾನಿಸಲಾಗಿದ್ದು, ಈ ಸಂದರ್ಭದಲ್ಲಿ ಅವರು ಅಲ್ಲಿನ ನಾಯಕರೊಂದಿಗೆ ಕಾರ್ಯತಂತ್ರ, ಆರ್ಥಿಕ ಮತ್ತು ಅಭಿವೃದ್ಧಿ ಕ್ಷೇತ್ರಗಳಲ್ಲಿ ಸಹಕಾರದ ಕುರಿತು ಮಾತುಕತೆ ನಡೆಸುವ ನಿರೀಕ್ಷೆ ಇದೆ.

ವಿದೇಶದಲ್ಲಿಯೂ ಭಾರತದ ಮಾವುಗಳ ದರ್ಬಾರ್‌; ಐಸ್‌ಲ್ಯಾಂಡ್‌ನಲ್ಲಿ ಭಾರತೀಯ ಮಾವಿನ ಹಣ್ಣುಗಳ ಪ್ರಚಾರ ಕಾರ್ಯಕ್ರಮ ಆಯೋಜನೆ

ಭಾರತ ಮತ್ತು ಸೀಶೆಲ್ಸ್ ನಡುವಿನ ರಾಜತಾಂತ್ರಿಕ ಸಂಬಂಧ ಸ್ಥಾಪನೆಯ 50ನೇ ವರ್ಷಾಚರಣೆ ಪ್ರಯುಕ್ತ ನಡೆಯುವ ಕಾರ್ಯಕ್ರಮಗಳ ಭಾಗವಾಗಿ ಪ್ರಧಾನಿ ಮೋದಿ ಸೀಶೆಲ್ಸ್‌ ಪ್ರವಾಸದ ವೇಳೆ ಅಲ್ಲಿನ ರಾಷ್ಟ್ರೀಯ ಸಸ್ಯೋದ್ಯಾನಕ್ಕೆ ಭೇಟಿ ನೀಡಿ ಅಲ್ಲಿ ಒಂದು ಮರವನ್ನು ನೆಡಲಿದ್ದಾರೆ. ಬಳಿಕ ಅವರು ಜೋನಾಥನ್ ಆಮೆಯನ್ನು ಭೇಟಿ ಮಾಡಲಿದ್ದಾರೆ.

ಜೋನಾಥನ್

ಸೀಶೆಲ್ಸ್ ದೈತ್ಯ ಆಮೆಯಾಗಿರುವ ಜೋನಾಥನ್ 1832ರಲ್ಲಿ ಜನಿಸಿದೆ ಎಂದು ಅಂದಾಜಿಸಲಾಗಿದೆ. ಈಗ ಆತನಿಗೆ ಸುಮಾರು 194 ವರ್ಷ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಜೋನಾಥನ್ ಅನ್ನು ವಿಶ್ವದ ಅತ್ಯಂತ ಹಿರಿಯ ಜೀವಂತ ಭೂ ಪ್ರಾಣಿ ಎಂದು ಗುರುತಿಸಿದೆ.

ಸುಮಾರು ಎರಡು ಶತಮಾನಗಳಿಂದ ಜೋನಾಥನ್ ಹಲವಾರು ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದ್ದಾನೆ. ವಯಸ್ಸಾಗಿದೆ ಎಂಬುದನ್ನು ಹೊರತು ಪಡಿಸಿದರೆ ಜೋನಾಥನ್ ಅನ್ನು ನೋಡಿಕೊಳ್ಳಲು ಅನೇಕ ಪಶು ವೈದ್ಯರು ತೊಡಗಿಕೊಂಡಿದ್ದಾರೆ. ಸದ್ಯ ಆತ ಕಣ್ಣಿನ ಪೊರೆ ಮತ್ತು ವಾಸನೆ ಗ್ರಹಿಕೆ ತೊಂದರೆಯಿಂದ ಬಳಲುತ್ತಿದ್ದರೂ ಉಳಿದಂತೆ ಆರೋಗ್ಯವಾಗಿದ್ದಾನೆ. ಇನ್ನೂ ಉತ್ತಮ ಶ್ರವಣ ಕೌಶಲ್ಯವನ್ನು ಹೊಂದಿದೆ ಎನ್ನುತ್ತಾರೆ ವೈದ್ಯರು.

ಇದು ಸೀಶೆಲ್ಸ್‌ನ ಅತಿದೊಡ್ಡ ಆಕರ್ಷಣೆಗಳಲ್ಲಿ ಒಂದು. ಜೋನಾಥನ್ ರಾಣಿ ವಿಕ್ಟೋರಿಯಾ ಆಳ್ವಿಕೆ ಮುಗಿಯುವ ಮುಂಚೆಯೇ ಮತ್ತು ಐಫೆಲ್ ಟವರ್ ನಿರ್ಮಾಣಕ್ಕೂ ದಶಕಗಳ ಹಿಂದೆಯೇ ಜನಿಸಿದ ಎನ್ನುವ ಖ್ಯಾತಿ ಹೊಂದಿದ್ದಾನೆ. ಎಲೆಕೋಸು, ಕ್ಯಾರೆಟ್, ಸೌತೆಕಾಯಿ, ಸೇಬು ಮತ್ತು ಬಾಳೆಹಣ್ಣು ಇದರ ನೆಚ್ಚಿನ ಆಹಾರಗಳಾಗಿವೆ.

ಅಲ್ಡಾಬ್ರಾ ದೈತ್ಯ ಆಮೆಯ ಉಪಜಾತಿಯಾದ ಜೋನಾಥನ್‌ನ ಜಾತಿಯ ಆಮೆಗಳು ಒಮ್ಮೆ ಅಳಿವಿನಂಚಿನಲ್ಲಿವೆ ಎಂದು ಭಾವಿಸಲಾಗಿತ್ತು ಆದರೆ ಜಾಗತಿಕವಾಗಿ ಸುಮಾರು 80 ಈ ಆಮೆಗಳಿವೆ ಎಂದು ಗುರುತಿಸಲಾಗಿದೆ.

ಇರಾನ್‌ ಮೇಲಿನ ತೈಲ ನಿರ್ಬಂಧ ಸಡಿಲಿಸಿದ ಅಮೆರಿಕ; ಭಾರತಕ್ಕೆ ದೊರೆಯುವುದೇ ಪ್ರಯೋಜನ?

ಈ ಜಾತಿಯ ಆಮೆಗಳ ಸಾಮಾನ್ಯ ಸರಾಸರಿ ಜೀವಿತಾವಧಿ 150 ವರ್ಷವಾದರೂ ಜೋನಾಥನ್ ಇನ್ನು ಬದುಕಿರುವ ಬಗ್ಗೆ ಅಧ್ಯಯನಗಳನ್ನು ನಡೆಸಲಾಗಿದೆ. ಈ ಜಾತಿಯ ಆಮೆಗಳು ಹಾನಿಗೊಳಗಾದ ಜೀವಕೋಶಗಳನ್ನು ತ್ವರಿತವಾಗಿ ಕೊಲ್ಲುವ ಮೂಲಕ ಜೀವಕೋಶ ಹಾನಿಯಾಗುವುದರಿಂದ ಉನ್ನತಾಗುವ ದೀರ್ಘಕಾಲೀನ ಪರಿಣಾಮಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತವೆ ಎಂಬುದು ಅಧ್ಯಯನಗಳಿಂದ ತಿಳಿದು ಬಂದಿವೆ.

ವಿದ್ಯಾ ಇರ್ವತ್ತೂರು

View all posts by this author