ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವಿದೇಶ ಪ್ರವಾಸಗಳಿಗೆ ಈ ವರ್ಷ ಪ್ರಧಾನಿ ಮೋದಿ ಖರ್ಚು ಮಾಡಿದ್ದೆಷ್ಟು? ವಿದೇಶಾಂಗ ಸಚಿವಾಲಯದ ಮಾಹಿತಿ ಇಲ್ಲಿದೆ

PM Modi's Foreign Visits Cost: ಈ ವರ್ಷ ಪ್ರಧಾನಿ ನರೇಂದ್ರ ಮೋದಿಯವರ ವಿದೇಶ ಪ್ರವಾಸಗಳಿಗಾಗಿ ಕೇಂದ್ರ ಸರ್ಕಾರ ಸುಮಾರು 74.5 ಕೋಟಿ ರೂ. ಗಳನ್ನು ಖರ್ಚು ಮಾಡಿದೆ ಎಂದು ವಿದೇಶಾಂಗ ಸಚಿವಾಲಯ ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದೆ. ಸಂಸದರಾದ ಸಂಜಯ್ ಸಿಂಗ್ ಮತ್ತು ಡಾ. ವಿ. ಶಿವದಾಸನ್ ಅವರು ಕೇಳಿದ ಪ್ರಶ್ನೆಗೆ ಉತ್ತರವಾಗಿ ಸರ್ಕಾರವು ಈ ಅಂಕಿಅಂಶಗಳನ್ನು ಹಂಚಿಕೊಂಡಿದೆ.

ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)

ನವದೆಹಲಿ, ಆ.6: ಈ ವರ್ಷ ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) ವಿದೇಶ ಪ್ರವಾಸಗಳಿಗಾಗಿ ಸರ್ಕಾರ ಸುಮಾರು 74.5 ಕೋಟಿ ರೂ.ಗಳನ್ನು ಖರ್ಚು ಮಾಡಿದೆ ಎಂದು ವಿದೇಶಾಂಗ ಸಚಿವಾಲಯ (Ministry of External Affairs) ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದೆ. ಏಪ್ರಿಲ್ 2021 ರಿಂದ ಭಾರತವು 381.8 ಬಿಲಿಯನ್ ಅಮೆರಿಕನ್ ಡಾಲರ್ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಪಡೆದಿದೆ ಎಂದು ಅದು ಬಹಿರಂಗಪಡಿಸಿದೆ.

ಸಂಸದರಾದ ಸಂಜಯ್ ಸಿಂಗ್ ಮತ್ತು ಡಾ. ವಿ. ಶಿವದಾಸನ್ ಅವರು ಕೇಳಿದ ಪ್ರಶ್ನೆಗೆ ಉತ್ತರವಾಗಿ ಸರ್ಕಾರವು ಈ ಅಂಕಿಅಂಶಗಳನ್ನು ಹಂಚಿಕೊಂಡಿದೆ. 2021ರಿಂದ ಪ್ರಧಾನಿಯವರ ವಿದೇಶ ಪ್ರವಾಸಗಳ ದೇಶವಾರು ವಿವರ, ಪ್ರತಿ ವರ್ಷದ ಹಾಗೂ ಪ್ರತಿ ಪ್ರವಾಸದ ವೆಚ್ಚ, ಆ ಪ್ರವಾಸದಿಂದಾಗಿ ನಡೆದ ದ್ವಿಪಕ್ಷೀಯ ಒಪ್ಪಂದಗಳು, ಹೂಡಿಕೆ ಭರವಸೆಗಳು ಹಾಗೂ ನೇರ ವಿದೇಶಿ ಹೂಡಿಕೆ (FDI) ಕುರಿತು ಮಾಹಿತಿ ನೀಡುವಂತೆ ಸಂಸದರು ಪ್ರಶ್ನಿಸಿದ್ದರು.

ವರ್ಷವಾರು ಮತ್ತು ಭೇಟಿವಾರು ವೆಚ್ಚದ ಅಂಕಿ ಅಂಶಗಳು, ಭೇಟಿಗಳ ಸಮಯದಲ್ಲಿ ಸಹಿ ಹಾಕಲಾದ ತಿಳುವಳಿಕೆ ಒಪ್ಪಂದಗಳ ದೇಶವಾರು ಪಟ್ಟಿಯನ್ನು ಉತ್ತರಕ್ಕೆ ಲಗತ್ತಿಸಲಾದ ಎರಡು ಅನುಬಂಧಗಳಲ್ಲಿ ಇರಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವೆ ಪಬಿತ್ರ ಮಾರ್ಗರಿಟಾ ಅವರು ಹೇಳಿದರು.

ತಿಂಗಳಾಂತ್ಯದಲ್ಲಿ ಕಿರ್ಗಿಸ್ತಾನ್‌, ಉಜ್ಬೇಕಿಸ್ತಾನ್‌ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ; ಮಧ್ಯ ಏಷ್ಯಾದೊಂದಿಗೆ ಭಾರತದ ಬಾಂಧವ್ಯ ಮತ್ತಷ್ಟು ವೃದ್ಧಿಸಲು ಕ್ರಮ

ಇದೇ ವೇಳೆ ಕೇಂದ್ರ ಸಚಿವಾಲಯವು, ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ದಿವಂಗತ ಡಾ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ನಡೆದ ಕೆಲವು ವಿದೇಶ ಪ್ರವಾಸಗಳ ವೆಚ್ಚವನ್ನು ಉಲ್ಲೇಖಿಸಿದೆ. 2011ರಲ್ಲಿ ಅಮೆರಿಕ ಪ್ರವಾಸಕ್ಕೆ ರೂ. 10.74 ಕೋಟಿ, 2013ರಲ್ಲಿ ರಷ್ಯಾ ಪ್ರವಾಸಕ್ಕೆ ರೂ. 9.96 ಕೋಟಿ, 2011ರಲ್ಲಿ ಫ್ರಾನ್ಸ್ ಪ್ರವಾಸಕ್ಕೆ ರೂ. 8.33 ಕೋಟಿ, ಹಾಗೂ 2013ರಲ್ಲಿ ಜರ್ಮನಿ ಪ್ರವಾಸಕ್ಕೆ ರೂ. 6.02 ಕೋಟಿ ವೆಚ್ಚವಾಗಿತ್ತು. ಈ ಪ್ರತಿಯೊಂದು ವಿದೇಶ ಪ್ರವಾಸದ ವೆಚ್ಚವೂ ಈ ವರ್ಷದ ಪ್ರಧಾನಿ ಮೋದಿ ಅವರ ಒಟ್ಟು ವಿದೇಶ ಪ್ರವಾಸ ವೆಚ್ಚಕ್ಕಿಂತ ಹೆಚ್ಚಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಎಫ್‌ಡಿಐಗೆ ಸಂಬಂಧಪಟ್ಟಂತೆ, 2021ರ ಏಪ್ರಿಲ್ ಮತ್ತು 2025ರ ಡಿಸೆಂಬರ್ ನಡುವೆ ಭಾರತವು 381.8 ಶತಕೋಟಿ ಅಮೆರಿಕನ್ ಡಾಲರ್ ಎಫ್‌ಡಿಐ ಪಡೆದಿದೆ ಎಂದು ಸರ್ಕಾರ ಹೇಳಿದೆ. ಪ್ರಧಾನಿಯವರ ಉನ್ನತ ಮಟ್ಟದ ವಿದೇಶ ಪ್ರವಾಸಗಳು ದ್ವಿಪಕ್ಷೀಯ, ಪ್ರಾದೇಶಿಕ ಹಾಗೂ ಜಾಗತಿಕ ಸಂಬಂಧಗಳನ್ನು ಬಲಪಡಿಸುವ ಪರಿಣಾಮಕಾರಿ ಮಾರ್ಗವಾಗಿವೆ ಎಂದು ಸರ್ಕಾರ ಹೇಳಿದೆ. ಇಂತಹ ಪ್ರವಾಸಗಳ ವೇಳೆ ಸಹಿ ಮಾಡಲಾದ ಒಪ್ಪಂದಗಳು ತಂತ್ರಜ್ಞಾನ, ನಾವೀನ್ಯತೆ, ವ್ಯಾಪಾರ ಮತ್ತು ಹೂಡಿಕೆ, ರಕ್ಷಣಾ ಸಹಕಾರ, ಇಂಧನ ಸಹಭಾಗಿತ್ವ ಹಾಗೂ ಪೂರೈಕೆ ಸರಪಳಿ ಸ್ಥಿರತೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪಾಲುದಾರಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ನೆರವಾಗಿವೆ ಎಂದು ಸರ್ಕಾರ ತಿಳಿಸಿದೆ.