ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಗೋವುಗಳಿಗೆ ಆಹಾರ ನೀಡಿ ಸಂಕ್ರಾತಿ ಆಚರಿಸಿದ ಪ್ರಧಾನಿ; ಕೇಂದ್ರ ಸಚಿವರ ಮನೆಯಲ್ಲಿ ಮೋದಿಯೊಟ್ಟಿಗೆ ನಡೀತು ಅದ್ಧೂರಿ ಹಬ್ಬ

ಇಂದು ದೇಶಾದ್ಯಂತ ಸಂಕ್ರಾತಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ದೇಶದ ಹಲವೆಡೆ ಬೇರೆ ಬೇರೆ ಹೆಸರಿನಿಂದ ಈ ಹಬ್ಬವನ್ನು ಆಚರಿಸಲಾಗುತ್ತಿದೆ. ಪೊಂಗಲ್​ ಹಬ್ಬವನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಬುಧವಾರ ತಮಿಳು ನಾಡಿನಲ್ಲಿ ಆಚರಣೆ ಮಾಡಿದ್ದಾರೆ.

ಸಂಗ್ರಹ ಚಿತ್ರ

ಇಂದು ದೇಶಾದ್ಯಂತ ಸಂಕ್ರಾತಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ದೇಶದ ಹಲವೆಡೆ ಬೇರೆ ಬೇರೆ ಹೆಸರಿನಿಂದ ಈ ಹಬ್ಬವನ್ನು ಆಚರಿಸಲಾಗುತ್ತಿದೆ. ಪೊಂಗಲ್​ ಹಬ್ಬವನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಬುಧವಾರ ತಮಿಳು ನಾಡಿನಲ್ಲಿ ಆಚರಣೆ ಮಾಡಿದ್ದಾರೆ. ಪ್ರಕೃತಿಯೊಂದಿಗೆ ಸಾಮರಸ್ಯದ ಸಮತೋಲನವನ್ನು ಕಾಪಾಡಿಕೊಳ್ಳುವ ಮಹತ್ವವನ್ನು ಈ ಹಬ್ಬ ತಿಳಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕೇಂದ್ರ ಸಚಿವ ಎಲ್. ಮುರುಗನ್ ಅವರ ನಿವಾಸದಲ್ಲಿ ನಡೆದ ಪೊಂಗಲ್ ಆಚರಣೆಯಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ, ಈ ಹಬ್ಬ ರೈತರ ಕಠಿಣ ಪರಿಶ್ರಮವನ್ನು ಆಚರಿಸುವುದರ ಜೊತೆಗೆ ಭೂಮಿ ಮತ್ತು ಸೂರ್ಯನಿಗೆ ಕೃತಜ್ಞತೆ ಸಲ್ಲಿಸುವ ಹಬ್ಬ ಎಂದು ವಿವರಿಸಿದರು.

ಭಾರತದಾದ್ಯಂತ ಪ್ರಾದೇಶಿಕ ಸಂಪ್ರದಾಯಗಳಿಗೆ ಅನುಗುಣವಾಗಿ ಆಚರಿಸಲಾಗುವ ಸುಗ್ಗಿಯ ಹಬ್ಬವಾದ ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಬುಧವಾರ ರಾಷ್ಟ್ರಕ್ಕೆ ಶುಭಾಶಯಗಳನ್ನು ಕೋರಿದರು. ಈ ಹಬ್ಬವು ಸೂರ್ಯನು ಮಕರ ರಾಶಿಗೆ (ಮಕರ) ಪರಿವರ್ತನೆಯಾಗುವುದನ್ನು ಸೂಚಿಸುತ್ತದೆ ಮತ್ತು ಇದನ್ನು ಚಳಿಗಾಲದ ಮಧ್ಯದ ಸುಗ್ಗಿಯ ಹಬ್ಬವಾಗಿ ಆಚರಿಸಲಾಗುತ್ತದೆ.

ವಿಡಿಯೊ ನೋಡಿ:



ಕೇಂದ್ರ ಸಚಿವ ಎಲ್. ಮುರುಗನ್ ಅವರ ನಿವಾಸದಲ್ಲಿ ಪ್ರಧಾನಿ ಮೋದಿ ಪೊಂಗಲ್​ ಹಬ್ಬ ಆಚರಣೆ ಮಾಡಿದ್ದಾರೆ. ಗೋವುಗಳಿಗೆ ಆಹಾರ ನೀಡಿ ಅರ್ಥಪೂರ್ಣವಾಗಿ ಈ ಸಂಕ್ರಾಂತಿ ಹಬ್ಬವನ್ನು ಆಚರಣೆ ಮಾಡಿದ್ದಾರೆ. ಮೋದಿ ಈ ಹಬ್ಬದ ಸಂದರ್ಭದಲ್ಲಿ ಮಾತನಾಡಿದ್ದು, ‘ಪೊಂಗಲ್ ನಮಗೆ ಕೇವಲ ಕೃತಜ್ಞತೆ ಪದಗಳಲ್ಲ, ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಬೇಕು ಎಂಬುದನ್ನು ನೆನಪಿಸುತ್ತದೆ. ಭೂಮಿಯು ನಮಗೆ ಇಷ್ಟೊಂದು ನೀಡಿದಾಗ, ಅದನ್ನು ಪಾಲಿಸುವುದು ಮತ್ತು ರಕ್ಷಿಸುವುದು ನಮ್ಮ ಜವಾಬ್ದಾರಿ’ ಎಂದು ಹೇಳಿದರು.

ಕೇಂದ್ರ ಸಚಿವರು, ಅಧಿಕಾರಿಗಳು ಮತ್ತು ಹಲವರು ಈ ಸಂದರ್ಭದಲ್ಲಿ ಉಪಸ್ಥಿತಿತರಿದ್ದರು. ‘ಈ ಪರಂಪರೆಯಿಂದ ಪ್ರೇರಿತರಾಗಿ ಇಂದಿನ ಭಾರತ ತನ್ನ ಸಾಂಸ್ಕೃತಿಕ ಬೇರುಗಳಿಂದ ಬಲ ಪಡೆಯುತ್ತಿದೆ. ಪೊಂಗಲ್‌ನ ಶುಭ ಸಂದರ್ಭದಲ್ಲಿ ಭಾರತವನ್ನು ಮುನ್ನಡೆಸುತ್ತಿರುವ ನಂಬಿಕೆ ಮತ್ತು ಏಕತೆಯ ಮನೋಭಾವ ಅದರ ಸಂಸ್ಕೃತಿಯೊಂದಿಗೆ ಆಳವಾಗಿ ಸಂಪರ್ಕ ಹೊಂದಿದೆ’ ಎಂದು ಪ್ರಧಾನಿ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.