ಋಷಿಕೇಶ: ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಸರಳತೆಗೆ ಹೆಸರುವಾಸಿಯಾಗಿದ್ದಾರೆ. ಅವರು ಮಾತ್ರವಲ್ಲ ಅವರ ಕುಟುಂಬವೂ ಕೂಡ ಸರಳತೆಯಿಂದ ಜೀವನ ನಡೆಸುತ್ತಿದೆ. ಇತ್ತೀಚೆಗೆ ಪ್ರಧಾನಿ ಅವರ ಸಹೋದರಿ ವಸಂತಿಬೆನ್ ಮೋದಿ (Vasantiben Modi) ಪವಿತ್ರ ಗಂಗಾ ಘಾಟ್‌ಗೆ ಭೇಟಿ ನೀಡಿದರು. ವಸಂತಿಬೆನ್ ಹಸ್ಮುಖ್‌ಲಾಲ್ ಮೋದಿ ಅವರು ಗಂಗಾ ಘಾಟ್‌ನಲ್ಲಿ (Ganga Ghat) ಸದ್ದಿಲ್ಲದೆ ಕುಳಿತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಅವರ ಸರಳತೆ ಮತ್ತು ವಿನಯತೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಅಪೂರ್ವ ಸಿಂಗ್ ಎಂಬ ಎಕ್ಸ್ ಬಳಕೆದಾರರು ಹಂಚಿಕೊಂಡಿರುವ ಈ ವಿಡಿಯೊದಲ್ಲಿ, ಈಕೆ ಸಾಮಾನ್ಯ ಮಹಿಳೆಯಲ್ಲ, ಭಾರತದ ಅತ್ಯಂತ ಜನಪ್ರಿಯ ನಾಯಕ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರಿ ವಸಂತಿಬೆನ್ ಮೋದಿ. ಸಾಮಾನ್ಯ ವ್ಯಕ್ತಿಯಂತೆ, ಅವರು ಗಂಗಾ ಘಾಟ್‌ನಲ್ಲಿ ಸ್ನಾನ ಮಾಡಲು ಬಂದಿದ್ದರು. ಭಾರತದ ಕೆಲವು ಸಂಸದ, ಶಾಸಕರ ಸಹೋದರಿಯರು ಇದೇ ರೀತಿ ಇರಲು ಸಾಧ್ಯವಾ ಅಥವಾ ಇರುತ್ತಾರಾ ನೋಡಿ ಎಂದು ಅವರು ಪ್ರಶ್ನಿಸಿದರು.
ಇದನ್ನೂ ಓದಿ: LK Advani: ಎಲ್.ಕೆ. ಅಡ್ವಾಣಿ ದೇಶಕ್ಕೆ ಸಲ್ಲಿಸಿದ ಸೇವೆ ಸ್ಮರಣೀಯ; 98ನೇ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ ಪ್ರಧಾನಿ ಮೋದಿ
ವರದಿಗಳ ಪ್ರಕಾರ, ವಸಂತಿಬೆನ್ ಮತ್ತು ಅವರ ಪತಿ ಹಸ್ಮುಖ್‌ಲಾಲ್ ಮೋದಿ ಆರು ದಿನಗಳ ಧಾರ್ಮಿಕ ಪ್ರವಾಸಕ್ಕಾಗಿ ಋಷಿಕೇಶ ತಲುಪಿದ್ದಾರೆ. ಅವರು ಆಗಮಿಸಿದಾಗ, ದಂಪತಿಗಳನ್ನು ಹೋಟೆಲ್ ಉದ್ಯಮಿ ಅಕ್ಷತ್ ಗೋಯಲ್ ಮತ್ತು ನಮಾಮಿ ನರ್ಮದಾ ಸಂಘದ ರಾಷ್ಟ್ರೀಯ ಅಧ್ಯಕ್ಷ ಪಂಡಿತ್ ಹರೀಶ್ ಉನಿಯಾಲ್ ಅವರು ಪ್ರೀತಿಯಿಂದ ಬರಮಾಡಿಕೊಂಡರು. ಹೂವಿನ ಬೊಕೆ ನೀಡುತ್ತಾ ದಂಪತಿಯನ್ನು ಆದರದಿಂದ ಸ್ವಾಗತಿಸಿದ್ದಾರೆ. ಅವರು ಋಷಿಕೇಶದ ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದಾರೆ.
ವಿಡಿಯೊ ವೀಕ್ಷಿಸಿ:
ಈ ವಿಡಿಯೊವನ್ನು ಎಕ್ಸ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು, ಕೆಲವು ಬಳಕೆದಾರರು ಆರಂಭದಲ್ಲಿ ಇದನ್ನು ಕಾಶಿ ಘಾಟ್‌ನಲ್ಲಿ ಚಿತ್ರೀಕರಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಆದರೆ, ಈ ವಿಡಿಯೊವನ್ನು ಉತ್ತರಾಖಂಡದ ಋಷಿಕೇಶದಲ್ಲಿ ಚಿತ್ರೀಕರಿಸಲಾಗಿದೆ ಎಂದು ವರದಿಗಳು ಸ್ಪಷ್ಟಪಡಿಸಿವೆ.
ಮತ್ತೊಬ್ಬ ಎಕ್ಸ್ ಬಳಕೆದಾರ ಪೂರ್ಣಿಮಾ, ವಸಂತಿಬೆನ್ ಅವರ ಸರಳತೆಯ ನಡವಳಿಕೆಯನ್ನು ಎತ್ತಿ ತೋರಿಸುವ ಶೀರ್ಷಿಕೆಯೊಂದಿಗೆ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಅವರು ಯಾವುದೇ ವಿಐಪಿ ಉಪಚಾರವಿಲ್ಲದೆ, ಸಾಮಾನ್ಯರಂತೆ ನೆಲದ ಮೇಲೆ ಕುಳಿತಿದ್ದಾರೆ ಎಂದು ಬರೆದಿದ್ದಾರೆ. ಅನೇಕ ಬಳಕೆದಾರರು ಪ್ರಧಾನಿ ಕುಟುಂಬದ ಸರಳತೆಯನ್ನು ಶ್ಲಾಘಿಸಿದರು ಮತ್ತು ಇತರ ರಾಜಕೀಯ ಕುಟುಂಬಗಳ ಜೀವನಶೈಲಿಯೊಂದಿಗೆ ಅದನ್ನು ಹೋಲಿಸಿದರು.
ವ್ಹೀಲ್‌ಚೇರ್‌ನಲ್ಲಿ ಕುಳಿತಿದ್ದ ಪ್ರತೀಕಾ ರಾವಲ್‌ಗೆ ಆಹಾರ ಬಡಿಸಿದ್ದ ಪ್ರಧಾನಿ ಮೋದಿ
ಏಕದಿನ ವಿಶ್ವಕಪ್ ಭಾರತ ತಂಡದ ಆಟಗಾರ್ತಿಯರು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಲೋಕಕಲ್ಯಾಣ ಮಾರ್ಗದ ಅಧಿಕೃತ ನಿವಾಸದಲ್ಲಿ ಭೇಟಿ ಮಾಡಿದ್ದರು. ಈ ವೇಳೆ ಪ್ರಧಾನಿ ಮೋದಿ, ಗಾಲಿಕುರ್ಚಿಯಲ್ಲಿ ಕುಳಿತಿದ್ದ ಪ್ರತಿಕಾ ರಾವಲ್‌ಗೆ ಆಹಾರ ಬಡಿಸಿದ್ದರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆಟಗಾರ್ತಿಯರು ಪ್ರಧಾನಿ ಸುತ್ತ ಕುರ್ಚಿಯಲ್ಲಿ ಕುಳಿತು ಸಂವಾದವನ್ನೂ ನಡೆಸಿದರು. ಆ ಬಳಿಕ ಔತಣ ಕೂಟದಲ್ಲಿ ಪಾಲ್ಗೊಂಡರು. ಈ ವೇಳೆ ಗಾಲಿಕುರ್ಚಿಯಲ್ಲಿ ಕುಳಿತಿದ್ದ ಪ್ರತಿಕಾ ರಾವಲ್ ಬಳಿ ಬಂದ ಮೋದಿ, ಯಾರೂ ನಿಮಗೆ ಏನನ್ನೂ ನೀಡುತ್ತಿಲ್ಲ. ನಿಮಗೆ ಏನು ಇಷ್ಟ? ಎಂದು ಕೇಳಿದರು. ಬಳಿಕ ಅಲ್ಲಿದ್ದ ಆಹಾರವೊಂದನ್ನು ತಂದು ಕೊಟ್ಟರು. ಆಶ್ಚರ್ಯ ಮತ್ತು ಕೃತಜ್ಞತೆಯಿಂದ, ಪ್ರತಿಕಾ ತುಂಬಾ ಧನ್ಯವಾದಗಳು ಸರ್ ಎಂದು ಪ್ರತಿಕ್ರಿಯಿಸಿದ್ದರು.