ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Poonam Gupta: ರಾಷ್ಟ್ರಪತಿ ಭವನದಲ್ಲಿ ನಡೆಯಲಿದೆ ವಿವಾಹ ಸಮಾರಂಭ! ? ಯಾರದ್ದು ಈ ಮದುವೆ...?

ಇದೇ ಮೊದಲ ಬಾರಿಗೆ ಮಹಿಳಾ ಸಿಆರ್‌ಪಿಎಫ್‍ ಅಧಿಕಾರಿ ಪೂನಂ ಗುಪ್ತಾ ಅವರ ವಿವಾಹವು ರಾಷ್ಟ್ರಪತಿ ಭವನದಲ್ಲಿ ನಡೆಯಲಿದೆ. ಫೆಬ್ರವರಿ 12 ರಂದು ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಈ ಮದುವೆಗೆ ಗಣ್ಯ ವ್ಯಕ್ತಿಗಳು ಮಾತ್ರ ಉಪಸ್ಥಿತಿರಾಗಲಿದ್ದಾರೆ. ಪೂನಂ ಅವರ ಸೇವೆಯಿಂದ ಪ್ರಭಾವಿತರಾದ ಅಧ್ಯಕ್ಷರು ಈ ವಿವಾಹಕ್ಕೆ ಸಮ್ಮತಿ ನೀಡಿದ್ದಾರೆ ಎನ್ನಲಾಗಿದೆ.

ರಾಷ್ಟ್ರಪತಿ ಭವನದಲ್ಲಿ ಮದುವೆ ಸಂಭ್ರಮ; ಯಾರದ್ದು ಈ ಮದುವೆ...?

poonam gupta

Profile pavithra Feb 1, 2025 11:23 AM

ನವದೆಹಲಿ: ಸಾಮಾನ್ಯವಾಗಿ ನಮಗೆ ತಿಳಿದಿರುವಂತೆ ಯಾವುದೇ ಜನಸಾಮಾನ್ಯರೇ ಆಗಿರಲಿ, ವಿಐಪಿಗಳೇ ಆಗಿರಲಿ ಅವರ ವಿವಾಹ ಸಮಾರಂಭಗಳು ಅದಕ್ಕಾಗಿಯೇ ಇರುವಂತಹ ದೊಡ್ಡ ದೊಡ್ಡ ಹಾಲ್‍ಗಳಲ್ಲಿ ಮಾಡಲಾಗುತ್ತದೆ. ಆದರೆ ಇದೇ ಮೊದಲ ಬಾರಿಗೆ ದೇಶದ ಅತ್ಯಂತ ಪ್ರತಿಷ್ಠಿತ ಸ್ಥಳವಾದ ರಾಷ್ಟ್ರಪತಿ ಭವನದಲ್ಲಿ ಮಹಿಳಾ ಸಿಆರ್‌ಪಿಎಫ್‍ ಅಧಿಕಾರಿ ಪೂನಂ ಗುಪ್ತಾ (Poonam Gupta) ಅವರ ವಿವಾಹ ನಡೆಯಲಿದೆ. ಫೆಬ್ರವರಿ 12 ರಂದು ರಾಷ್ಟ್ರಪತಿ ಭವನದಲ್ಲಿ ಪಿಎಸ್ಒ ಆಗಿ ನೇಮಕಗೊಂಡಿರುವ ಮಹಿಳಾ ಸಿಆರ್‌ಪಿಎಫ್‍ ಸಹಾಯಕ ಕಮಾಂಡೆಂಟ್ ಪೂನಂ ಗುಪ್ತಾ , ಜಮ್ಮು ಮತ್ತು ಕಾಶ್ಮೀರದಲ್ಲಿ ನೇಮಕಗೊಂಡ ಸಹಾಯಕ ಕಮಾಂಡೆಂಟ್ ಅವನೀಶ್‌ ಕುಮಾರ್ ಅವರನ್ನು ಅವರನ್ನು ವಿವಾಹವಾಗಲಿದ್ದಾರೆ.

ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಈ ಮದುವೆಗೆ ಗಣ್ಯ ವ್ಯಕ್ತಿಗಳು ಸಾಕ್ಷಿಯಾಗಲಿದ್ದಾರೆ. ಆದರೆ ಇಲ್ಲಿ ಅಧಿಕಾರಿಯ ಮದುವೆಯನ್ನು ಆಯೋಜಿಸುತ್ತಿರುವುದು ಇದೇ ಮೊದಲು. ಮೇಲ್ನೋಟಕ್ಕೆ, ಮದುವೆಯು ನಿಗದಿತ ಸಂಖ್ಯೆಯ ಸಂಬಂಧಿಕರು ಮತ್ತು ಸ್ನೇಹಿತರನ್ನು ಮಾತ್ರ ಒಳಗೊಂಡಿರುತ್ತದೆ ಎಂದು ಸೂಚಿಸಲಾಗಿದೆ. ಅವರಿಗೆ ಪ್ರವೇಶ ನೀಡುವ ಮೊದಲು ಸರಿಯಾದ ದಾಖಲೆಗಳನ್ನು ಒದಗಿಸಲಾಗುತ್ತದೆ. ಹಾಗೂ ಈ ಬಗ್ಗೆ ರಾಷ್ಟ್ರಪತಿ ಭವನದಿಂದ ಅಧಿಕೃತ ಸೂಚನೆ ಇನ್ನಷ್ಟೇ ಬರಬೇಕಿದೆ.

ಮಾಹಿತಿಯ ಪ್ರಕಾರ, ರಾಷ್ಟ್ರಪತಿ ಭವನದ ಪಿಎಸ್ಒ ಪೂನಂ ಗುಪ್ತಾ ಎಂದು ಗುರುತಿಸಲ್ಪಟ್ಟ ಮಹಿಳಾ ಅಧಿಕಾರಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಿಯೋಜಿಸಲಾದ ಸಹಾಯಕ ಕಮಾಂಡೆಂಟ್ ಅವನೀಶ್‌ ಕುಮಾರ್ ಅವರನ್ನು ಮದುವೆಯಾಗಲಿದ್ದಾರೆ ಎನ್ನಲಾಗಿದೆ. ಫೆಬ್ರವರಿ 12 ರಂದು ಸೀಮಿತ ಸಂಖ್ಯೆಯ ಅತಿಥಿಗಳೊಂದಿಗೆ ಇವರ ಮದುವೆ ಸಮಾರಂಭವು ನಡೆಯಲಿದೆ.

ಪೂನಂ ಅವರ ನಡವಳಿಕೆ ಮತ್ತು ಸೇವೆಯಿಂದ ರಾಷ್ಟ್ರಪತಿ ದ್ರೌಪದಿ ಮುರ್ಮು ಹೆಚ್ಚು ಪ್ರಭಾವಿತರಾಗಿದ್ದರು ಎಂದು ಮೂಲಗಳು ಬಹಿರಂಗಪಡಿಸಿವೆ. ಅವರು ಈ ಮದುವೆಯ ಬಗ್ಗೆ ತಿಳಿದ ನಂತರ, ರಾಷ್ಟ್ರಪತಿ ಭವನದೊಳಗಿನ ಮದರ್ ತೆರೇಸಾ ಕ್ರೌನ್ ಕಾಂಪ್ಲೆಕ್ಸ್‌ನಲ್ಲಿ ಸಮಾರಂಭವನ್ನು ಏರ್ಪಡಿಸಿದ್ದಾರೆ.

ಯಾರು ಈ ಪೂನಂ ಗುಪ್ತಾ?

ಪೂನಂ ಗಣಿತ ಪದವಿ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರು ಗ್ವಾಲಿಯರ್‌ನ ಜಿವಾಜಿ ವಿಶ್ವವಿದ್ಯಾಲಯದಿಂದ ಬಿ.ಎಡ್ ಪೂರ್ಣಗೊಳಿಸಿದ್ದಾರೆ ಮತ್ತು ಶಿಯೋಪುರದ ಜವಾಹರ್ ನವೋದಯ ವಿದ್ಯಾಲಯದಲ್ಲಿ ಅಧ್ಯಯನ ಮಾಡಿದ್ದಾರೆ. 2018 ರಲ್ಲಿ ಯುಪಿಎಸ್‍ಸಿ ಸಿಎಪಿಎಫ್ ಪರೀಕ್ಷೆಯಲ್ಲಿ 81ನೇ ರ‍್ಯಾಂಕ್‌ ಪಡೆದುಕೊಂಡು ಸಿಆರ್‌ಪಿಎಫ್‍ ಸಹಾಯಕ ಕಮಾಂಡೆಂಟ್ ಆಗಿ ಸೇರಿದ್ದಾರೆ. ಇವರು 2024ರಲ್ಲಿ ನಡೆದ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಸಿಆರ್‌ಪಿಎಫ್‍ ಮಹಿಳಾ ತುಕಡಿಯನ್ನು ಮುನ್ನಡೆಸಿದ್ದರು.