ಉತ್ತರಪ್ರದೇಶ: ಮಣ್ಣಿನ ಮಡಿಕೆ ಮಾಡಿ ಮಾರಾಟ ಮಾಡುತ್ತಿದ್ದ ಕುಂಬಾರನಿಗೆ (Potter) ಆದಾಯ ತೆರಿಗೆ ಇಲಾಖೆಯು (Income Tax Department) ಬಹುದೊಡ್ಡ ಶಾಕ್ ನೀಡಿದೆ. ಉತ್ತರ ಪ್ರದೇಶದ (Uttar Pradesh) ರಾಯ್ಬರೇಲಿಯ ಹರ್ಚಂದ್ಪುರ ಬಳಿಯ ನಿವಾಸಿ ಮೊಹಮ್ಮದ್ ಸಯೀದ್ ಅವರು ಕಡಿಮೆ ಬೆಲೆಯ ಮಡಕೆಗಳು ಮತ್ತು ಇತರ ವಸ್ತುಗಳನ್ನು ಮಾರಾಟ ಮಾಡಿ ಅತ್ಯಂತ ಕನಿಷ್ಠ ಆದಾಯಗಳಿಸುತ್ತಿದ್ದಾರೆ. ಇವರಿಗೆ ಆದಾಯ ತೆರಿಗೆ ಇಲಾಖೆಯು 1.25 ಕೋಟಿ ರೂ. ಸರಕು ಮತ್ತು ಸೇವಾ ತೆರಿಗೆ (Goods and Services Tax) ನೋಟಿಸ್ ನೀಡಿದೆ. ಈ ನೊಟೀಸ್ ನಲ್ಲಿ ಆತನ ಹೆಸರಿನಲ್ಲಿ ಕಂಪೆನಿ ಇದೆ ಎಂದು ಹೇಳಲಾಗಿದ್ದು, ಆದರೆ ನನ್ನ ಹೆಸರಿನಲ್ಲಿ ಯಾವುದೇ ಕಂಪೆನಿ ಇಲ್ಲ. ಯಾರೋ ನನ್ನ ಪಾನ್ ಮತ್ತು ಆಧಾರ್ ವಿವರಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಮಣ್ಣಿನ ಮಡಕೆಗಳನ್ನು ತಯಾರಿಸಿ ಮಾರಾಟ ಮಾಡುವ ಸಯೀದ್ ಇದರಿಂದಲೇ ಐದು ಜನರ ಕುಟುಂಬವನ್ನು ಪೋಷಿಸುತ್ತಿದ್ದಾರೆ. ಅವರು ಪಾಟ್ನಾದಲ್ಲಿ ಕಾರ್ಯನಿರ್ವಹಿಸುತ್ತಿರುವ ನಾಲ್ಕು ಕಂಪೆನಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ.
ಲಂಚ ಪ್ರಕರಣ; ಶಾಸಕ ಚಂದ್ರು ಲಮಾಣಿಗೆ ಮಾ.2ರವರೆಗೆ ನ್ಯಾಯಾಂಗ ಬಂಧನ
ನೋಟಿಸ್ ಕುರಿತು ಪ್ರತಿಕ್ರಿಯಿಸಿರುವ ಸಯೀದ್, ನಾವು ಕೆಲವು ಪೈಸೆಗಳಲ್ಲಿ ಬದುಕುಳಿಯುವ ಬಡವರು. ಮಣ್ಣಿನ ಮಡಕೆಗಳನ್ನು ತಯಾರಿ ಮಾರಾಟ ಮಾಡುತ್ತೇವೆ. 10 ರೂ., 20 ರೂ. ಗಳಿಸುತ್ತೇವೆ. ಇದರಿಂದಲೇ ನಮ್ಮ ಕುಟುಂಬ ನಡೆಯುತ್ತಿದೆ. ಹಲವು ವರ್ಷಗಳ ಹಿಂದೆ ಸಾಲಕ್ಕೆ ಅರ್ಜಿ ಸಲ್ಲಿಸಲು ಪಾನ್ ಮತ್ತು ಆಧಾರ್ ಕಾರ್ಡ್ ಪಡೆದುಕೊಂಡೆ. ಆದರೆ ಸಾಲವನ್ನು ಪಡೆಯಲಿಲ್ಲ. ಬಳಿಕ ದಾಖಲೆಗಳನ್ನು ಕಳೆದುಕೊಂಡಿದ್ದೆ. ಅನಂತರ ಯಾವುದೇ ಹಣಕಾಸಿನ ನೆರವು ಪಡೆಯಲು ಅಥವಾ ಯಾವುದೇ ವ್ಯವಹಾರವನ್ನು ಮಾಡಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.
ನನ್ನ ಹೆಸರಿನಲ್ಲಿ ಪಾಟ್ನಾದಲ್ಲಿ ನಾಲ್ಕು ಕಂಪೆನಿಗಳಿವೆ ಎನ್ನಲಾಗಿದೆ. ಇದು ದೊಡ್ಡ ವಂಚನೆಯಾಗಿದೆ. ಅಂತಹ ಯಾವುದೇ ಘಟಕಗಳ ಬಗ್ಗೆ ನನಗೆ ಗೊತ್ತಿಲ್ಲ. ಕಳೆದ ನವರಾತ್ರಿಯ ಸಮಯದಲ್ಲಿ ಮೊದಲ ಜಿಎಸ್ಟಿ ನೋಟಿಸ್ ಬಂದಿತ್ತು. ಆದರೆ ಓದಲು ಬಾರದೇ ಇರುವುದರಿಂದ ನಾನು ಅದನ್ನು ಓದಲಿಲ್ಲ. ಆದರೆ ಇದೀಗ ಮತ್ತೊಂದು ನೋಟಿಸ್ ಬಂದಿದ್ದು, ಅದನ್ನು ಓದಿಸಿದಾಗ ತೆರಿಗೆ ಬಗ್ಗೆ ತಿಳಿಯಿತು. ಇದರಿಂದ ಕುಟುಂಬವೇ ಆಘಾತಕ್ಕೆ ಒಳಗಾಗಿದೆ. ನಾವು ಯಾವುದೇ ವಂಚನೆ ಮಾಡಿಲ್ಲ ಎಂದು ತಿಳಿಸಿದರು.
ದರೋಡೆಕೋರರನ್ನು ಕತ್ತಿ ಹಿಡಿದು ಓಡಿಸಿದ ಎನ್‌ಆರ್‌ಐ ಮಹಿಳೆ
ಈ ಕುರಿತು ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿಗೆ ದೂರು ನೀಡಿರುವ ಅವರು ಸಮಗ್ರ ತನಿಖೆಗೆ ಮನವಿ ಮಾಡಿದ್ದಾರೆ. ಆದರೆ ಈ ಬಗ್ಗೆ ಸ್ಥಳೀಯ ಅಧಿಕಾರಿಗಳು ಇನ್ನೂ ಏನೂ ಹೇಳಿಲ್ಲ ಎಂದು ಅವರು ಹೇಳಿದರು.