ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ದರೋಡೆಕೋರರನ್ನು ಕತ್ತಿ ಹಿಡಿದು ಓಡಿಸಿದ ಎನ್‌ಆರ್‌ಐ ಮಹಿಳೆ

ದೋಚಲು ಬಂದ ಕಳ್ಳರನ್ನು ಮಹಿಳೆಯೊಬ್ಬರು ಕತ್ತಿ ಹಿಡಿದು ಓಡಿಸಿದ ಘಟನೆ ಪಂಜಾಬ್ ನ ಲುಧಿಯಾನದಲ್ಲಿ ನಡೆದಿದೆ. ಆಸ್ಟ್ರೇಲಿಯಾದಿಂದ ಇತ್ತೀಚೆಗೆ ಬಂದಿದ್ದ ಮಹಿಳೆ ಹರ್ಜಿಂದ್ ಕೌರ್ ಅವರ ವಾಹನವನ್ನು ದರೋಡೆಕೋರರು ಮುತ್ತಿಗೆ ಹಾಕಿದ್ದು, ಈ ವೇಳೆ ಧೈರ್ಯ ತೋರಿದ ಮಹಿಳೆ ಕತ್ತಿ ಹಿಡಿದು ಅವರನ್ನು ಓಡಿಸಿದ್ದಾಳೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಕಳ್ಳರನ್ನು ಓಡಿಸಲು ಎನ್‌ಆರ್‌ಐ ಮಹಿಳೆ ಮಾಡಿದ್ದೇನು ಗೊತ್ತೇ?

ಸಂಗ್ರಹ ಚಿತ್ರ -

ಲುಧಿಯಾನ: ಆಸ್ಟ್ರೇಲಿಯಾದಿಂದ (Australia) ಇತ್ತೀಚೆಗೆ ಹಿಂದಿರುಗಿದ ಎನ್‌ಆರ್‌ಐ ಪಂಜಾಬಿ (Punjab) ಮಹಿಳೆಯನ್ನು (NRI woman) ದರೋಡೆಕೋರರ ಗುಂಪೊಂದು ದೋಚಲು ಪ್ರಯತ್ನಿಸಿದೆ. ಈ ವೇಳೆ ಮಹಿಳೆ ಕತ್ತಿ ಹಿಡಿದು ಸಿನಿಮೀಯ ಶೈಲಿಯಲ್ಲಿ ಅವರನ್ನು ಓಡಿಸಿದ್ದಾರೆ. ಎನ್‌ಆರ್‌ಐ ಮಹಿಳೆ ಹರ್ಜಿಂದ್ ಕೌರ್ ಅವರ ವಾಹನವನ್ನು ನಿಲ್ಲಿಸಿ ದರೋಡೆಕೋರರ ಗುಂಪೊಂದು ದೋಚಲು ಪ್ರಯತ್ನಿಸಿತ್ತು. ಈ ವೇಳೆ ಅವರು ತಮ್ಮ ಬ್ಯಾಗ್ ನಿಂದ ಕತ್ತಿ ತೆಗೆದು ಧೈರ್ಯ ತೋರಿದ್ದಾರೆ. ಇದರಿಂದ ದರೋಡೆಕೋರರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಎನ್‌ಆರ್‌ಐ ಮಹಿಳೆ ಹರ್ಜಿಂದ್ ಕೌರ್ ಅವರ ವೈರಲ್ ಆಗಿರುವ ವಿಡಿಯೊದಲ್ಲಿ ಕೌರ್ ಅವರು ಕತ್ತಲೆಯಲ್ಲಿ ರಸ್ತೆಯ ಮಧ್ಯದಲ್ಲಿ ನಿಂತು ಕತ್ತಿಯನ್ನು ಝಳಪಿಸುತ್ತಿರುವುದನ್ನು ನೋಡಬಹುದಾಗಿದೆ. ಅಲ್ಲದೇ ಆರೋಪಿಗಳು ಸ್ಥಳದಿಂದ ಪರಾರಿಯಾಗಿರುವುದನ್ನು ಕಾಣಬಹುದು.

ನಕಲಿ ಇನ್ಸ್ಟಾಗ್ರಾಮ್ ತೆರೆದು ಮಹಿಳೆಯರಿಗೆ ಕಿರುಕುಳ ; PSI ವಿರುದ್ಧ ದೂರು ದಾಖಲು

ಹರ್ಜಿಂದ್ ಕೌರ್ ಅವರು ಶುಕ್ರವಾರ ಸಂಜೆ ತಮ್ಮ ಅತ್ತೆ, ಚಿಕ್ಕಮ್ಮನೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ನಡೆದ ಘಟನೆಯನ್ನು ಅವರ ಚಿಕ್ಕಮ್ಮ ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

ಅತ್ತೆ, ಚಿಕ್ಕಮ್ಮನೊಂದಿಗೆ ಕೌರ್ ಅವರು ತಮ್ಮ ಕಾರಿನಲ್ಲಿ ಲುಧಿಯಾನದಲ್ಲಿರುವ ಸಂಬಂಧಿಕರ ಮನೆಗೆ ತೆರಳುತ್ತಿದ್ದರು. ಈ ವೇಳೆ ಮೋಟಾರ್‌ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತರು ಅವರನ್ನು ಹಿಂಬಾಲಿಸತೊಡಗಿದರು. ಬಹಳ ದೂರದವರೆಗೆ ಹಿಂಬಾಲಿಸಿಕೊಂಡು ಬಂದಿದ್ದರಿಂದ ಅನುಮಾನಗೊಂಡ ಕೌರ್ ಇದನ್ನು ಚಿಕ್ಕಮ್ಮನಲ್ಲಿ ಹೇಳಿದಾಗ ಅವರು ಘಟನೆಯನ್ನು ರೆಕಾರ್ಡ್ ಮಾಡಲು ಪ್ರಾರಂಭಿಸಿದರು.



ಇದಾದ ಕೆಲವು ನಿಮಿಷಗಳ ಬಳಿಕ ಕೌರ್ ಕಾರನ್ನು ನಿಧಾನಗೊಳಿಸಿದ್ದು, ಈ ವೇಳೆ ದುಷ್ಕರ್ಮಿಗಳಲ್ಲಿ ಒಬ್ಬ ವಿಂಡ್‌ಸ್ಕ್ರೀನ್‌ಗೆ ಮೊಟ್ಟೆಗಳನ್ನು ಎಸೆದಿದ್ದಾನೆ. ಕೌರ್ ಅವರ ಚಿಕ್ಕಮ್ಮ ಮತ್ತು ಅತ್ತೆ ಗಾಬರಿಯಿಂದ ಕಾರಿನೊಳಗೆ ಕೂಗಲು ಪ್ರಾರಂಭಿಸಿದರು. ಆದರೆ ತಕ್ಷಣ ಪರಿಸ್ಥಿತಿಯನ್ನು ಅರಿತ ಕೌರ್, ವಾಹನದಿಂದ ಇಳಿದು ಅವರನ್ನು ಎದುರಿಸಲು ಮುಂದಾದರು. ಆಗ ಚಿಕ್ಕಮ್ಮ ಆಕೆಯನ್ನು ತಡೆದಿದ್ದು, ಅವರು ನಿನಗೆ ಹೊಡೆಯುತ್ತಾರೆ, ಹೋಗಬೇಡ ಎಂದು ಹೇಳಿದ್ದಾರೆ. ಆದರೆ ಕೌರ್ ವಾಹನದಿಂದ ಧೈರ್ಯದಿಂದ ಇಳಿದು, ತಮ್ಮ ಬ್ಯಾಗ್ ನಿಂದ ಕತ್ತಿ ಹೊರತೆಗೆದು ಆರೋಪಿಗಳು ಮುಂದೆ ಧೈರ್ಯದಿಂದ ಹೆಜ್ಜೆ ಹಾಕಿದರೂ. ಸ್ವಲ್ಪ ದೂರದವರೆಗೆ ಆರೋಪಿಗಳನ್ನು ಬೆನ್ನಟ್ಟಿ ಕತ್ತಿಯನ್ನು ಗಾಳಿಯಲ್ಲಿ ಝಳಪಿಸಿದ್ದಾರೆ. ಇದರನ್ನು ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಮಾಜಿ ಶಾಸಕ ಸುರೇಶ್ ಗೌಡ ಕಾರು ಅಪಘಾತ; ಮಣಿಪಾಲ ಆಸ್ಪತ್ರೆಗೆ ದಾಖಲು

ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಕೌರ್ ಅವರ ಧೈರ್ಯವನ್ನು ಸಾಕಷ್ಟು ಮಂದಿ ನೆಟ್ಟಿಗರು ಶ್ಲಾಘಿಸಿದ್ದಾರೆ. ವೈರಲ್ ವಿಡಿಯೊಗೆ ಪ್ರತಿಕ್ರಿಯಿಸಿರುವ ಲುಧಿಯಾನ ಪೊಲೀಸರು, ಕ್ರಮ ಕೈಗೊಳ್ಳಲಾಗಿದ್ದು, ಈಗಾಗಲೇ ಇಬ್ಬರು ಶಂಕಿತರನ್ನು ಬಂಧಿಸಲಾಗಿದೆ. ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಹೇಳಿದ್ದಾರೆ.