ಕೇರಳ: ಗರ್ಭಿಣಿಯೊಬ್ಬಳು ಶವವಾಗಿ (Pregnant Woman death) ಪತ್ತೆಯಾಗಿರುವ ಘಟನೆ ಕೇರಳದಲ್ಲಿ (Kerala) ನಡೆದಿದೆ. ಗಂಡನ ದೌರ್ಜನ್ಯದಿಂದಲೇ (physical abuse) ಆಕೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ. ಕೇರಳದ ತ್ರಿಶೂರ್ ಜಿಲ್ಲೆಯ ಶರೂನ್ ಮತ್ತು ಅರ್ಚನಾ ಪ್ರೀತಿಸಿ ಸುಮಾರು ಆರು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದರು. ಬಳಿಕ ಆತ ಆಕೆಯ ಮೇಲೆ ನಿರಂತರವಾಗಿ ಹಲ್ಲೆ ನಡೆಸುತ್ತಿದ್ದನು. ಮಾತ್ರವಲ್ಲದೆ ಆಕೆ ತನ್ನ ಕುಟುಂಬದವರೊಂದಿಗೆ ಮಾತನಾಡದಂತೆ ಶರೂನ್ ತಡೆಯುತ್ತಿದ್ದ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಕೇರಳದ ತ್ರಿಶೂರ್ ಜಿಲ್ಲೆಯ ಶರೂನ್ ನನ್ನು ಪ್ರೀತಿಸಿ ಮದುವೆಯಾಗಿದ್ದ ಅರ್ಚನಾ ಬುಧವಾರ ಮಧ್ಯಾಹ್ನ ಮನೆಯ ಹಿಂದಿನ ಶೆಡ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಆಕೆಯ ಪೋಷಕರು ನೀಡಿರುವ ದೂರಿನ ಪ್ರಕಾರ ಶರೂನ್ ನಿರಂತರವಾಗಿ ಅರ್ಚನಾಳ ಮೇಲೆ ಹಲ್ಲೆ ನಡೆಸುತ್ತಿದ್ದನು. ಆಕೆ ತನ್ನ ಕುಟುಂಬದೊಂದಿಗೆ ಮಾತನಾಡದಂತೆ ತಡೆಯುತ್ತಿದ್ದನು ಎನ್ನಲಾಗಿದೆ.
20 ವರ್ಷದವಳಾದ ಅರ್ಚನಾ ಗರ್ಭಿಣಿಯಾಗಿದ್ದಳು. ಬುಧವಾರ ಮಧ್ಯಾಹ್ನ ಆಕೆಯ ಶವ ಗಂಡನ ಮನೆಯ ಹಿಂದಿನ ಶೆಡ್ ನಲ್ಲಿ ಪತ್ತೆಯಾಗಿದೆ. ಆಕೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಅರ್ಚನಾ ಅವರ ಕುಟುಂಬ ನೀಡಿರುವ ದೂರಿನ ಹಿನ್ನಲೆಯಲ್ಲಿ ಆಕೆಯ ಪತಿ ವಿರುದ್ಧ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.
ಇದನ್ನೂ ಓದಿ: Supreme Court: ಎಲ್ಲಾ ದಾಖಲೆಗಳಿಗೂ ಆಧಾರ್ ಮಾನ್ಯವೇ? ಸುಪ್ರೀಂ ಕೋರ್ಟ್ ಹೇಳಿದ್ದೇನು?
ಘಟನೆ ಕುರಿತು ಪ್ರತಿಕ್ರಿಯಿಸಿರುವ ಅರ್ಚನಾಳ ತಂದೆ ಹರಿದಾಸ್, ಶರೂನ್ ಕ್ರೂರ ಮನಸ್ಸನ್ನು ಹೊಂದಿದ್ದಾನೆ. ಒಂದು ದಿನ ಅವನು ಅವಳಿಗೆ ಕಾಲೇಜಿನ ಹೊರಗೆ ಹೊಡೆದಿದ್ದಾನೆ. ಆಗ ನಾನು ದೂರು ದಾಖಲಿಸಿದ್ದೆ. ಅನಂತರ ಅವನು ಅರ್ಚನಾ ನಮ್ಮನ್ನು ಸಂಪರ್ಕಿಸದಂತೆ ನಿರ್ಬಂಧಿಸಿದನು ಎಂದು ಹೇಳಿದ್ದಾರೆ.
ಅರ್ಚನಾಳ ಸಹೋದರಿ ಅನು ಕೂಡ ತನ್ನ ಸಹೋದರಿ ಬಿ.ಟೆಕ್ ಓದುವುದನ್ನು ತಡೆದು ವಿದೇಶಕ್ಕೆ ಹೋಗದಂತೆ ಆತ ತಡೆದಿರುವುದಾಗಿ ಹೇಳಿದ್ದಾನೆ ಎಂದು ಆರೋಪಿಸಿದ್ದಾಳೆ.
ಬಿ.ಟೆಕ್ ಮುಗಿಸಿ ಕೆನಡಾದಲ್ಲಿ ನೆಲೆಸುವ ಕನಸನ್ನು ಹೊಂದಿದ್ದದ್ದ ಅರ್ಚನಾಳನ್ನು ಶರೂನ್ ನಿರಂತರವಾಗಿ ಹಿಂಸಿಸುತ್ತಿದ್ದನು. ಅವಳು ಯಾವಾಗಲೂ ಇದರಿಂದ ಭಯದಲ್ಲೇ ಇರುತ್ತಿದ್ದಳು. ಅರ್ಚನಾಳನ್ನು ತನ್ನ ಕುಟುಂಬದಿಂದ ಆತ ದೂರವಿಟ್ಟಿದ್ದಾನೆ. ಅವಳನ್ನು ಕೊನೆಯದಾಗಿ ನಾವು ರೈಲ್ವೆ ನಿಲ್ದಾಣದಲ್ಲಿ ನೋಡಿದ್ದೆವು. ಆಗ ಕೂಡ ಆತ ಆಕೆಗೆ ನನ್ನೊಂದಿಗೆ ಮಾತನಾಡಲು ಬಿಡಲಿಲ್ಲ ಎಂದು ಅನು ತಿಳಿಸಿದ್ದಾಳೆ.
ಇದನ್ನೂ ಓದಿ: RSS ಕಾರ್ಯಕರ್ತನ ಕೊಲೆ ಪ್ರಕರಣ... ಹಂತಕನಿಗೆ ಪೊಲೀಸರಿಂದ ಗುಂಡೇಟು
ಅರ್ಚನಾಳ ಪೋಷಕರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿರುವ ಪೊಲೀಸರು ಶರೂನ್ ನನ್ನು ವಶಕ್ಕೆ ಪಡೆದಿದ್ದಾರೆ. ಆತ ಮದ್ಯ ಮತ್ತು ಮಾದಕ ವಸ್ತುಗಳ ವ್ಯಸನಿಯಾಗಿರುವುದಾಗಿ ಪೊಲೀಸರು ದೃಢಪಡಿಸಿದ್ದಾರೆ.
ಶರೂನ್ ಮತ್ತು ಆತನ ತಾಯಿಯ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಆರೋಪದ ಜೊತೆಗೆ ವರದಕ್ಷಿಣೆ ನಿಷೇಧ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅರ್ಚನಾಳ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕವೇ ಇದು ಆತ್ಮಹತ್ಯೆ ಹೌದೋ ಅಲ್ಲವೋ ಎಂಬುದು ಸ್ಪಷ್ಟವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.