Supreme Court: ಎಲ್ಲಾ ದಾಖಲೆಗಳಿಗೂ ಆಧಾರ್ ಮಾನ್ಯವೇ? ಸುಪ್ರೀಂ ಕೋರ್ಟ್ ಹೇಳಿದ್ದೇನು?
ಆಧಾರ್ ಕಾರ್ಡ್ ಪೌರತ್ವದ ಕುರಿತು ಚರ್ಚೆ ನಡೆಯುತ್ತಿರುವಾಗಲೇ ಸುಪ್ರೀಂ ಕೋರ್ಟ್ ಆಧಾರ್ ಕುರಿತು ಪ್ರಶ್ನೆಯೊಂದನ್ನು ಎತ್ತಿದೆ. ಭಾರತಕ್ಕೆ ಒಳನುಗ್ಗುವವರ ಬಳಿ ಆಧಾರ್ ಇದ್ದರೆ ಅವರು ಮತ ಚಲಾವಣೆ ಮಾಡಲು ಅರ್ಹರೇ ಎಂದು ಪ್ರಶ್ನೆ ಮಾಡಲಾಗಿದೆ.
ಸಂಗ್ರಹ ಚಿತ್ರ -
ನವದೆಹಲಿ: ಆಧಾರ್ ಕಾರ್ಡ್ (Aadhaar Card) ಪೌರತ್ವದ ಕುರಿತು ಚರ್ಚೆ ನಡೆಯುತ್ತಿರುವಾಗಲೇ ಸುಪ್ರೀಂ ಕೋರ್ಟ್ (Supreme Court) ಆಧಾರ್ ಕುರಿತು ಪ್ರಶ್ನೆಯೊಂದನ್ನು ಎತ್ತಿದೆ. ಭಾರತಕ್ಕೆ ಒಳನುಗ್ಗುವವರ ಬಳಿ ಆಧಾರ್ ಇದ್ದರೆ ಅವರು ಮತ ಚಲಾವಣೆ ಮಾಡಲು ಅರ್ಹರೇ ಎಂದು ಪ್ರಶ್ನೆ ಮಾಡಲಾಗಿದೆ. ಆಧಾರ್, ಸಾಮಾಜಿಕ ಕಲ್ಯಾಣ ಪ್ರಯೋಜನಗಳು ಎಲ್ಲರಿಗೂ ತಲುಪುವುದನ್ನು ಖಚಿತಪಡಿಸಿಕೊಳ್ಳುವುದು ಮತ್ತು ಈ ದಾಖಲೆಯು ಸ್ವಯಂಚಾಲಿತವಾಗಿ ಮತದಾನದ ಹಕ್ಕನ್ನು ನೀಡಬಾರದು ಎಂದು ನ್ಯಾಯಾಲಯ ಹೇಳಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ಪೀಠವು ಹಲವಾರು ರಾಜ್ಯಗಳಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ನಡೆಸುವ ಚುನಾವಣಾ ಆಯೋಗದ ಕ್ರಮದ ಸಿಂಧುತ್ವವನ್ನು ಪ್ರಶ್ನಿಸುವ ಅರ್ಜಿಗಳ ವಿಚಾರಣೆ ನಡೆಸುವ ಸಂದರ್ಭದಲ್ಲಿ ಪೀಠ ಈ ಹೇಳಿಕೆಯನ್ನು ನೀಡಿದೆ. ಆಧಾರ್ ಕಾರ್ಡ್ "ಪೌರತ್ವದ ಸಂಪೂರ್ಣ ಪುರಾವೆಯನ್ನು ನೀಡುವುದಿಲ್ಲ" ಎಂದು ಪೀಠ ಪುನರುಚ್ಚರಿಸಿತು.
Supreme Court: ಮತಗಳವು ಪ್ರಕರಣ; ರಾಹುಲ್ ಗಾಂಧಿ ಆರೋಪಗಳ ಕುರಿತು SIT ತನಿಖೆಗೆ ಸುಪ್ರೀಂ ನಕಾರ
ಆಧಾರ್ ಎಂಬುದು ಪ್ರಯೋಜನಗಳನ್ನು ಪಡೆಯಲು ರಚಿಸಲಾದ ಶಾಸನವಾಗಿದೆ. ಒಬ್ಬ ವ್ಯಕ್ತಿಗೆ ಪಡಿತರಕ್ಕಾಗಿ ಆಧಾರ್ ನೀಡಲಾಗಿದೆ ಎಂಬ ಕಾರಣಕ್ಕಾಗಿ, ಅವರನ್ನು ಮತದಾರರನ್ನಾಗಿ ಮಾಡಬೇಕೇ? ಎಂದು ಕೋರ್ಟ್ ಪ್ರಶ್ನಿಸಿತು. ಈ ಹಿಂದೆ ಬಿಹಾರ ಚುನಾವಣೆಯ ವೇಳೆ ಆಧಾರ್ ಕಾರ್ಡ್‌ನ್ನು ನಿವಾಸದ ಪುರಾವೆಯಾಗಿ ಪ್ರಸ್ತುತಪಡಿಸಬಹುದು ಎಂದು ಸುಪ್ರೀಂ ತೀರ್ಪು ನೀಡಿತ್ತು. ಇದೀಗ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗಾಗಿ ಫಾರ್ಮ್ 6 ಅರ್ಜಿಯೊಂದಿಗೆ ಸಲ್ಲಿಸಲಾದ ದಾಖಲೆಗಳ ನಿಖರತೆಯನ್ನು ನಿರ್ಧರಿಸುವ ಅಧಿಕಾರ ಚುನಾವಣಾ ಆಯೋಗಕ್ಕೆ ಇದೆ ಎಂದು ನ್ಯಾಯಾಲಯ ಹೇಳಿದೆ.
ಅರ್ಜಿದಾರರ ಪರವಾಗಿ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್, ಎಸ್‌ಐಆರ್ ಪ್ರಜಾಸತ್ತಾತ್ಮಕ ಭಾಗವಹಿಸುವಿಕೆಯ ಬಗ್ಗೆ ಮೂಲಭೂತ ಕಳವಳಗಳನ್ನು ಎತ್ತಿದೆ ಎಂದು ಹೇಳಿದರು. ಎಸ್‌ಐಆರ್ ಸಾಮಾನ್ಯ ಮತದಾರರ ಮೇಲೆ ಅಸಂವಿಧಾನಿಕ ಹೊರೆ ಹೇರುತ್ತದೆ, ಅವರಲ್ಲಿ ಅನೇಕರು ಅನಕ್ಷರಸ್ಥರು ಎಂದು ಅವರು ವಾದಿಸಿದ್ದರು. ಆದಾಗ್ಯೂ, ಸತ್ತ ಮತದಾರರನ್ನು ತೆಗೆದುಹಾಕುವ ಅಗತ್ಯವನ್ನು ನ್ಯಾಯಮೂರ್ತಿ ಬಾಗ್ಚಿ ಒತ್ತಿ ಹೇಳಿದರು, ಪಟ್ಟಿಗಳನ್ನು ಪಂಚಾಯತ್‌ಗಳಲ್ಲಿ ಮತ್ತು ಅಧಿಕೃತ ವೆಬ್‌ಸೈಟ್‌ಗಳಲ್ಲಿ ಸಾರ್ವಜನಿಕವಾಗಿ ಪ್ರದರ್ಶಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಸದ್ಯ ಸುಪ್ರೀ ಕೋರ್ಟ್ ವಿಚಾರಣೆಯನ್ನು ಮುಂದೂಡಿದೆ.