ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪ್ರಿಯಾಂಕಾ ಪುತ್ರನ ಫೋಟೋ ಪ್ರದರ್ಶನ ವಿವಾದ: ಗಾಂಧಿ ಸಹೋದರ-ಸಹೋದರಿ ಮಧ್ಯೆ ಮೂಡಿದ್ಯಾ ಬಿರುಕು?

Raihan Vadra Photo Exhibition: ಪ್ರಿಯಾಂಕಾ ಅವರಿಗೆ ತಮ್ಮ ಸಹೋದರನ ಮೇಲಿನ ನಂಬಿಕೆ ಕಳೆದುಹೋಗಿದೆಯೇ ಎಂದು ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಪ್ರಶ್ನಿಸಿದ್ದಾರೆ. ವಿವಾದವನ್ನು ಸೃಷ್ಟಿಸುವ ಮೂಲಕ ತಮ್ಮ ಪುತ್ರನನ್ನು ರಾಜಕೀಯವಾಗಿ ಅಥವಾ ಸಾರ್ವಜನಿಕವಾಗಿ ನಿಧಾನವಾಗಿ ಮುನ್ನೆಲೆಗೆ ತರಲು ಪ್ರಿಯಾಂಕಾ ಪ್ರಯತ್ನಿಸುತ್ತಿದ್ದಾರೆಯೇ ಎಂಬ ಆರೋಪವನ್ನೂ ಅವರು ಮಾಡಿದ್ದಾರೆ.

(ಸಂಗ್ರಹ ಚಿತ್ರ)

ನವದೆಹಲಿ, ಅ.23: ರಾಹುಲ್ ಗಾಂಧಿ ಮತ್ತು ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ನಡುವೆ ಆಂತರಿಕ ಸಂಘರ್ಷ ನಡೆಯುತ್ತಿದೆ ಎಂದು ಬಿಜೆಪಿ ಹೇಳಿದೆ. ದೆಹಲಿಯ ಬಿಕಾನೇರ್ ಹೌಸ್‌ನಲ್ಲಿ ಛಾಯಾಚಿತ್ರ ಪ್ರದರ್ಶನದಿಂದ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪುತ್ರ ರೆಹಾನ್ ವಾದ್ರಾ ಅವರ ಕೆಲವು ಫೋಟೋಗಳನ್ನು ತೆಗೆದುಹಾಕಿದ ವಿವಾದದ ಕುರಿತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಮೌನವಾಗಿರುವುದನ್ನು ಬಿಜೆಪಿ ಉಲ್ಲೇಖಿಸಿದೆ.

ಪ್ರಿಯಾಂಕಾ ಅವರಿಗೆ ತಮ್ಮ ಸಹೋದರನ ಮೇಲಿನ ನಂಬಿಕೆ ಕಳೆದುಹೋಗಿದೆಯೇ ಎಂದು ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಪ್ರಶ್ನಿಸಿದ್ದಾರೆ. ವಿವಾದವನ್ನು ಸೃಷ್ಟಿಸುವ ಮೂಲಕ ತಮ್ಮ ಪುತ್ರನನ್ನು ರಾಜಕೀಯವಾಗಿ ಅಥವಾ ಸಾರ್ವಜನಿಕವಾಗಿ ನಿಧಾನವಾಗಿ ಮುನ್ನೆಲೆಗೆ ತರಲು ಪ್ರಿಯಾಂಕಾ ಪ್ರಯತ್ನಿಸುತ್ತಿದ್ದಾರೆಯೇ ಎಂಬ ಆರೋಪವನ್ನೂ ಅವರು ಮಾಡಿದ್ದಾರೆ.

ಭಾನುವಾರ (ಅ.18) ವಿಯೆಟ್ನಾಂಗೆ ತೆರಳಿರುವ ರಾಹುಲ್ ಗಾಂಧಿ, ಈ ವಿವಾದದ ಕುರಿತು ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದನ್ನೇ ಆಧಾರವಾಗಿಟ್ಟುಕೊಂಡು ಬಿಜೆಪಿ, ಗಾಂಧಿ ಸಹೋದರ-ಸಹೋದರಿಯರಾದ ರಾಹುಲ್ ಮತ್ತು ಪ್ರಿಯಾಂಕಾ ನಡುವೆ ಭಿನ್ನಾಭಿಪ್ರಾಯವಿದೆ ಎಂದು ಹೇಳಿದೆ. ಆದರೆ, ಕೆಲವೇ ದಿನಗಳ ಹಿಂದೆ ರಾಹುಲ್ ಮತ್ತು ಪ್ರಿಯಾಂಕಾ ಜಂಟಿಯಾಗಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಮತದಾರರ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಪ್ರತಿಭಟನೆ ನಡೆಸಲಾಗಿತ್ತು.

ರಾಹುಲ್‌ ಗಾಂಧಿ ನೀಡಿದ ಕೂಲ್‌ ಡಿಂಕ್ಸ್‌ ನಿರಾಕರಿಸಿದ ಪ್ರಿಯಾಂಕಾ ಗಾಂಧಿ: ಕುಟುಂಬ ಸದಸ್ಯರಿಗೇ ನಂಬಿಕೆ ಇಲ್ಲ, ಇನ್ನು ದೇಶ ಹೇಗೆ ನಂಬುತ್ತೆ ಎಂದು ಕುಟುಕಿದ ಬಿಜೆಪಿ

“ವಿವಾದವೊಂದನ್ನು ಸೃಷ್ಟಿಸುವ ಮೂಲಕ ತನ್ನ ಪುತ್ರನನ್ನು ನಿಧಾನವಾಗಿ ಸಾರ್ವಜನಿಕವಾಗಿ ಮುನ್ನೆಲೆಗೆ ತರುವುದೇ ಪ್ರಿಯಾಂಕಾ ವಾದ್ರಾ ಅವರ ಸಂಪೂರ್ಣ ಪ್ರಯತ್ನವಾಗಿತ್ತು. ಅವರಿಗೆ ರಾಹುಲ್ ಗಾಂಧಿ ಮೇಲಿನ ರಾಜಕೀಯ ನಂಬಿಕೆ ಕಳೆದುಹೋಗಿದೆ” ಎಂದು ಪ್ರದೀಪ್ ಭಂಡಾರಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

“ವಿಯೆಟ್ನಾಂನಿಂದಲೇ ಎಲ್ಲ ವಿಷಯಗಳ ಬಗ್ಗೆಯೂ ಪೋಸ್ಟ್ ಮಾಡುತ್ತಿರುವ ರಾಹುಲ್ ಗಾಂಧಿ, ಇದುವರೆಗೆ ರೆಹಾನ್ ವಾದ್ರಾ ಪರವಾಗಿ ಬಹಿರಂಗವಾಗಿ ಒಂದೇ ಒಂದು ಪೋಸ್ಟ್ ಕೂಡ ಮಾಡಿಲ್ಲ. ಕಾಂಗ್ರೆಸ್‌ನಲ್ಲಿ ಈಗ ಪ್ರಿಯಾಂಕಾ ವಿರುದ್ಧ ರಾಹುಲ್ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಅವರು ಮತ್ತೊಂದು ಪೋಸ್ಟ್‌ನಲ್ಲಿ ಆರೋಪಿಸಿದ್ದಾರೆ.

ಕಲಾವಿದ ಮತ್ತು ಛಾಯಾಗ್ರಾಹಕರಾದ ರೆಹಾನ್ ವಾದ್ರಾ ಅವರು, ‘ನೋ ಐಡಿಯಾ ಈಸ್ ಫೈನಲ್’ ಎಂಬ ಶೀರ್ಷಿಕೆಯ ತಮ್ಮ ಛಾಯಾಚಿತ್ರ ಪ್ರದರ್ಶನಕ್ಕೂ ಮುನ್ನ ದೆಹಲಿಯಲ್ಲಿ ಇತ್ತೀಚೆಗೆ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಗಳನ್ನು ಚಿತ್ರಿಸುವ ತಮ್ಮ ಹಲವು ಛಾಯಾಚಿತ್ರಗಳನ್ನು ಬಿಕಾನೇರ್ ಹೌಸ್ ಆಡಳಿತ ತೆಗೆದುಹಾಕಿದೆ ಎಂದು ತಿಳಿಸಿದ್ದಾರೆ. ಈ ಘಟನೆ ಕಾಂಗ್ರೆಸ್ ಪಕ್ಷದ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ಯುವಜನರ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ಇದಾಗಿದೆ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಟೀಕಿಸಿದ್ದಾರೆ.