ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರಾಹುಲ್‌ ಗಾಂಧಿ ನೀಡಿದ ಕೂಲ್‌ ಡಿಂಕ್ಸ್‌ ನಿರಾಕರಿಸಿದ ಪ್ರಿಯಾಂಕಾ ಗಾಂಧಿ: ಕುಟುಂಬ ಸದಸ್ಯರಿಗೇ ನಂಬಿಕೆ ಇಲ್ಲ, ಇನ್ನು ದೇಶ ಹೇಗೆ ನಂಬುತ್ತೆ ಎಂದು ಕುಟುಕಿದ ಬಿಜೆಪಿ

Viral Video: ದೆಹಲಿಯಲ್ಲಿ ಕಾಂಗ್ರೆಸ್‌ ನಡೆಸಿದ ಪ್ರತಿಭಟನೆ ವೇಳೆ ರಾಹುಲ್ ಗಾಂಧಿ ಮತ್ತು ಸಹೋದರಿ ಪ್ರಿಯಾಂಕಾ ಗಾಂಧಿ ನಡುವಿನ ವಿಡಿಯೊ ವೈರಲ್‌ ಆಗಿದೆ. ರಾಹುಲ್‌ ಗಾಂಧಿ ನೀಡಿದ ಕೂಲ್‌ ಡ್ರಿಂಕ್ಸ್‌ನ ಬಾಟಲಿಯನ್ನು ಪರಿಶೀಲಿಸಿಸ ಪ್ರಿಯಾಂಕಾ ಅದನ್ನು ಕುಡಿಯಲು ನಿರಾಕರಿಸಿದ್ದಾರೆ. ಈ ವಿಡಿಯೊವನ್ನು ಹಂಚಿಕೊಂಡ ಬಿಜೆಪಿ ವ್ಯಂಗ್ಯವಾಡಿದೆ.

ಪ್ರತಿಭಟನೆಯ ನಡುವೆ ‘ಸ್ಟಿಂಗ್’ ಸೀನ್; ರಾಹುಲ್–ಪ್ರಿಯಾಂಕಾ ವಿಡಿಯೊ ವೈರಲ್

ದೆಹಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ರಾಹುಲ್ ಗಾಂಧಿ–ಪ್ರಿಯಾಂಕಾ ಗಾಂಧಿ -

Profile
Sushmitha Jain Oct 7, 2026 7:24 PM

ನವದೆಹಲಿ, ಅ. 7: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ತಮ್ಮ ಸಹೋದರಿ ಹಾಗೂ ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಅವರಿಗೆ ‘ಸ್ಟಿಂಗ್’ ಎನರ್ಜಿ ಡ್ರಿಂಕ್ ಬಾಟಲಿ ನೀಡಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆಗೆ ಬಿಜೆಪಿ (BJP) ವ್ಯಂಗ್ಯವಾಗಿ ಪ್ರತಿಕ್ರಿಯಿಸಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಹಾಗೂ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿಚಾರವಾಗಿ 'ಇಂಡಿಯಾ' ಮೈತ್ರಿಕೂಟದ ನಾಯಕರು ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಚುನಾವಣಾ ಆಯೋಗದತ್ತ ಮೆರವಣಿಗೆ ತೆರಳದಂತೆ ಪೊಲೀಸರು ತಡೆದ ಬಳಿಕ, ಆಕಾಶವಾಣಿ ಭವನದ ಆವರಣದಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಕಾಂಗ್ರೆಸ್ ನಾಯಕರು ಕುಳಿತಿದ್ದರು. ಈ ವೇಳೆ ನಾಟಕೀಯ ಬೆಳವಣಿಗೆ ಕಂಡುಬಂತು.

ಈ ವೇಳೆ ರಾಹುಲ್ ಗಾಂಧಿಗೆ ₹ 20 ಬೆಲೆಯ ಕೆಂಪು ಬಣ್ಣದ ‘ಸ್ಟಿಂಗ್’ ಎನರ್ಜಿ ಡ್ರಿಂಕ್ ಬಾಟಲಿ ನೀಡಲಾಯಿತು. ಅದರಿಂದ ಸ್ವಲ್ಪ ಕುಡಿದ ರಾಹುಲ್ ಗಾಂಧಿ ಬಳಿಕ ಬಾಟಲಿಯನ್ನು ಪ್ರಿಯಾಂಕಾ ಗಾಂಧಿ ಅವರಿಗೆ ನೀಡಿದರು. ಪ್ರಿಯಾಂಕಾ ಬಾಟಲಿಯನ್ನು ಪರಿಶೀಲಿಸಿ, ಅದರ ವಾಸನೆ ನೋಡಿದರೂ ಕೊನೆಗೆ ಪಾನೀಯವನ್ನು ಕುಡಿಯಲಿಲ್ಲ.

ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವು ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ವೈರಲ್‌ ವಿಡಿಯೊ ಇಲ್ಲಿದೆ:



ಬಿಜೆಪಿಯಿಂದ ವ್ಯಂಗ್ಯ

ವಿಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಂಡ ಬಿಜೆಪಿ, “ಖ್ಯಾತಿಗೆ ಇಷ್ಟು ಧಕ್ಕೆ ಉಂಟಾಗಿರುವಾಗ, ಜನರನ್ನು ಬಿಟ್ಟುಬಿಡಿ, ಕುಟುಂಬದವರೇ ಇನ್ನು ನಂಬುವುದಿಲ್ಲ” ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದೆ. ಇನ್ನೊಂದೆಡೆ, ಕೆಲ ಸಾಮಾಜಿಕ ಜಾಲತಾಣ ಬಳಕೆದಾರರು ರಾಹುಲ್ ಗಾಂಧಿ ಕುಡಿದ ಪಾನೀಯದ ಆಯ್ಕೆಯ ಬಗ್ಗೆಯೂ ಚರ್ಚಿಸಿದ್ದಾರೆ. ಕೆಲವರು ಟೀಕೆ ಮಾಡಿದ್ದರೆ, ಇನ್ನೂ ಕೆಲವರು ಸಾಮಾನ್ಯ ಜನರು ಹೆಚ್ಚು ಬಳಸುವ ಕಡಿಮೆ ಬೆಲೆಯ ಪಾನೀಯವನ್ನು ಆಯ್ಕೆ ಮಾಡಿರುವುದನ್ನು ಶ್ಲಾಘಿಸಿದ್ದಾರೆ.

ಅನುಮತಿಯಿಲ್ಲದೆ ಆಕಾಶವಾಣಿ ಭವನ ಪ್ರವೇಶಿಸಿದ ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ ವಿರುದ್ಧ ಎಫ್‌ಐಆರ್

‘ಸ್ಟಿಂಗ್’ ಪೆಪ್ಸಿಕೋ ಕಂಪನಿಯ ಕಾರ್ಬೊನೇಟೆಡ್ ಎನರ್ಜಿ ಡ್ರಿಂಕ್ ಆಗಿದ್ದು, ಇದರಲ್ಲಿ ಕ್ಯಾಫೀನ್ ಮತ್ತು ಟೌರಿನ್ ಅಂಶಗಳಿವೆ. ಸಾಮಾನ್ಯವಾಗಿ ₹ 20ರ ಆಸುಪಾಸಿನಲ್ಲಿ ಲಭ್ಯವಿರುವ ಈ ಪಾನೀಯವು ರೆಡ್ ಬುಲ್‌ನಂತಹ ಪ್ರೀಮಿಯಂ ಎನರ್ಜಿ ಡ್ರಿಂಕ್‌ಗಳಿಗೆ ಹೋಲಿಸಿದರೆ ಕಡಿಮೆ ಬೆಲೆಯದ್ದು.

ವಿಡಿಯೊ ವೈರಲ್ ಆದ ಬೆನ್ನಲ್ಲೇ “ಪ್ರಿಯಾಂಕಾ ಸ್ಟಿಂಗ್ ಕುಡಿಯಲು ಏಕೆ ನಿರಾಕರಿಸಿದರು?” ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆಗುತ್ತಿದೆ.