ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಆಮ್‌ ಆದ್ಮಿ ಪಕ್ಷಕ್ಕೆ ರಾಘವ್‌ ಚಡ್ಡಾ ರಾಜೀನಾಮೆ: ಬಿಜೆಪಿ ಸೇರುವುದಾಗಿ ಅಧಿಕೃತ ಘೋಷಣೆ

Raghav Chadha Left AAP: ರಾಜ್ಯಸಭೆಯಲ್ಲಿ ಉಪ ನಾಯಕ ಸ್ಥಾನದಿಂದ ವಜಾಗೊಳಿಸಿ ಒಂದು ವಾರದ ಬಳಿಕ ಸಂಸದ ರಾಘವ್‌ ಚಡ್ಡಾ ಆಮ್ ಆದ್ಮಿ ಪಕ್ಷವನ್ನು ತೊರೆದಿದ್ದಾರೆ. (ಎಎಪಿ) ಜೊತೆ ಸಾರ್ವಜನಿಕವಾಗಿ ಭಿನ್ನಾಭಿಪ್ರಾಯ ಉಂಟಾಗಿದ್ದರಿಂದ, ರಾಘವ್ ಚಡ್ಡಾ ಶುಕ್ರವಾರ ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಗೊಳ್ಳುವುದಾಗಿ ಘೋಷಿಸಿದರು.

ಆಮ್‌ ಆದ್ಮಿ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ರಾಘವ್‌ ಚಡ್ಡಾ

ಸಂಸದ ರಾಘವ್ ಚಡ್ಡಾ (ಸಂಗ್ರಹ ಚಿತ್ರ) -

Vishakha Bhat Heggar
Vishakha Bhat Heggar Apr 24, 2026 4:03 PM

ನವದೆಹಲಿ: ರಾಜ್ಯಸಭೆಯಲ್ಲಿ ಉಪ ನಾಯಕ ಸ್ಥಾನದಿಂದ ವಜಾಗೊಳಿಸಿ ಒಂದು ವಾರದ ಬಳಿಕ ಸಂಸದ ರಾಘವ್‌ ಚಡ್ಡಾ (Raghav Chadha) ಆಮ್ ಆದ್ಮಿ ಪಕ್ಷವನ್ನು ( Aam Admi Party) ತೊರೆದಿದ್ದಾರೆ. ಜೊತೆ ಸಾರ್ವಜನಿಕವಾಗಿ ಭಿನ್ನಾಭಿಪ್ರಾಯ ಉಂಟಾಗಿದ್ದರಿಂದ, ರಾಘವ್ ಚಡ್ಡಾ ಶುಕ್ರವಾರ ಪಕ್ಷವನ್ನು ತೊರೆದು ಬಿಜೆಪಿಗೆ (BJP) ಸೇರ್ಪಡೆಗೊಳ್ಳುವುದಾಗಿ ಘೋಷಿಸಿದರು. ಹಿರಿಯ ಸಂಸದರಾದ ಸಂದೀಪ್ ಪಾಠಕ್ ಮತ್ತು ಅಶೋಕ್ ಮಿತ್ತಲ್ ಅವರೊಂದಿಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಘವ್ ಚಡ್ಡಾ, "ರಾಜ್ಯಸಭೆಯಲ್ಲಿ ಎಎಪಿಗೆ ಸೇರಿದ 2/3 ನೇ ಸದಸ್ಯರಾದ ನಾವು ಭಾರತದ ಸಂವಿಧಾನದ ನಿಬಂಧನೆಗಳನ್ನು ಚಲಾಯಿಸಲು ಮತ್ತು ಬಿಜೆಪಿಯೊಂದಿಗೆ ವಿಲೀನಗೊಳ್ಳಲು ನಿರ್ಧರಿಸಿದ್ದೇವೆ" ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚಡ್ಡಾ, ಭ್ರಷ್ಟಾಚಾರದ ವಿರುದ್ಧ ಹೋರಾಡುವ ಭರವಸೆ ನೀಡಿ ದೆಹಲಿಯಲ್ಲಿ ಅಧಿಕಾರಕ್ಕೆ ಬಂದ ಪಕ್ಷವು ಪ್ರಾಮಾಣಿಕ ರಾಜಕೀಯದಿಂದ ದೂರ ಸರಿಯುತ್ತಿದೆ ಎಂದು ಆಮ್‌ ಆದ್ಮಿ ವಿರುದ್ಧ ಆರೋಪಿಸಿದರು. ಮೇಲ್ಮನೆಯಲ್ಲಿರುವ ಆಮ್‌ ಆದ್ಮಿ ಪಕ್ಷದ 10 ಸಂಸದರಲ್ಲಿ ಸುಮಾರು ಮೂರನೇ ಎರಡರಷ್ಟು ಜನರು ಬಿಜೆಪಿಯೊಂದಿಗೆ ವಿಲೀನಗೊಳ್ಳಲಿದ್ದಾರೆ ಅವರು ಎಂದು ಹೇಳಿದ್ದಾರೆ. ಬಿಜೆಪಿ ಸೇರ್ಪಡೆಗೊಳ್ಳುತ್ತಿರುವ ಸಂಸದರದಲ್ಲಿ ಹರ್ಭಜನ್‌ ಸಿಂಗ್‌, ಸ್ವಾತಿ ಮಲಿವಾಲ್, ರಾಜಿಂದರ್ ಗುಪ್ತಾ, ವಿಕ್ರಮ್ ಸಹ್ನಿ, ಅಶೋಕ್ ಮಿತ್ತಲ್ ಮತ್ತು ಸಂದೀಪ್ ಪಾಠಕ್ ಸೇರಿದ್ದಾರೆ ಎಂದು ಹೇಳಲಾಗಿದೆ.

ರಾಘವ್‌ ಚಡ್ಡಾ ಆಮ್‌ ಆದ್ಮಿ ಪರ ಮಾತನಾಡುವುದಿಲ್ಲ ಎಂದು ಆಪ್‌ ನಾಯಕರು ಆರೋಪ ಮಾಡಿದ್ದರು. ಅರವಿಂದ್ ಕೇಜ್ರಿವಾಲ್ ಜೈಲು ವಾಸ, ಮನೀಶ್ ಸಿಸೋಡಿಯಾ ಜೈಲು ವಾಸ, ಜಾಮೀನಿನ ಮೇಲೆ ಬಿಡುಗಡೆ ಸಂದರ್ಭಗಳಲ್ಲಿ ಆಪ್ ನಾಯಕರ ಪರ ರಾಘವ್ ಚಡ್ಡಾ ಬಹಿರಂಗವಾಗಿ ಎಲ್ಲೂ ಹೇಳಿಕೆ ನೀಡಿಲ್ಲ ಎನ್ನುವ ಅಸಮಾಧಾನವಿತ್ತು. ಇದಾದ ಬಳಿಕ ಇತ್ತೀಗೆಷ್ಟೆ ರಾಜ್ಯಸಭಾ ಡೆಪ್ಯೂಟಿ ಸ್ಥಾನದಿಂದ ವಜಾ ಮಾಡಿತ್ತು.

ಹಾಡಹಗಲೇ ಆಮ್‌ ಆದ್ಮಿ ನಾಯಕನ ಮೇಲೆ ಗುಂಡಿನ ದಾಳಿ; ಗುರುದ್ವಾರದ ಎದುರೇ ಕೊಲೆ ಮಾಡಿದ ದುಷ್ಕರ್ಮಿಗಳು

2025 ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷದ ಸೋಲಿನ ಬಳಿಕ ರಾಘವ್‌ ಚಡ್ಡಾ ಪಕ್ಷದ ಕಾರ್ಯಕ್ರಮಗಳಲ್ಲಿ ಅಷ್ಟಾಗಿ ಕಾಣಿಸಿಕೊಂಡಿರಲಿಲ್ಲ. ವೇತನ ಸಹಿತ ಪಿತೃತ್ವ ರಜೆಗಾಗಿ ಪ್ರತಿಪಾದಿಸುವುದು ಮತ್ತು ವಿಮಾನ ನಿಲ್ದಾಣಗಳಲ್ಲಿ ಹೆಚ್ಚಿನ ಆಹಾರ ಬೆಲೆಗಳನ್ನು ಎತ್ತಿ ತೋರಿಸುವುದು ಸೇರಿದಂತೆ ಹಲವು ವಿಷಯಗಳನ್ನು ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ್ದರು. ಇದು ಚಡ್ಡಾ ಜನಪ್ರಿಯತೆಯನ್ನು ಇನ್ನಷ್ಟು ಹೆಚ್ಚಿಸಿತ್ತು.