ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಜಿಲ್ಲೆಯಲ್ಲಿ ಬಡತನ ನಿರ್ಮೂಲನೆವಾಗುವವರೆಗೆ ವೇತನ ಬೇಡವೆಂದ ಜಿಲ್ಲಾಧಿಕಾರಿ; ಡಿಸಿ ನಡೆಗೆ ದೇಶಾದ್ಯಂತ ಮೆಚ್ಚುಗೆ

ಜಿಲ್ಲೆಯಲ್ಲಿ ಬಡತನ ನಿರ್ಮೂಲನೆವಾಗುವವರೆಗೆ ತಾವು ಸಂಬಳ ಪಡೆಯುವುದಿಲ್ಲ ಎಂದು ರಾಜಸ್ಥಾನ ಜಿಲ್ಲಾಧಿಕಾರಿಯೊಬ್ಬರು ಪಣ ತೊಟ್ಟಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ರಾಜಸ್ಥಾನದ ರಾಜ್ಸಮಂದ್‌ನ ಜಿಲ್ಲಾಧಿಕಾರಿ ಅರುಣ್ ಕುಮಾರ್ ಹಸಿಜಾ ಅವರು ತಮ್ಮ ಜಿಲ್ಲೆಯ 30,000 ಬಡವರನ್ನು ಮೂರು ಪ್ರಮುಖ ಬಡತನ ನಿರ್ಮೂಲನಾ ಸರ್ಕಾರಿ ಯೋಜನೆಗಳ ಅಡಿಯಲ್ಲಿ ಸೇರಿಸುವವರೆಗೆ ತಮ್ಮ ಸಂಬಳ ತ್ಯಜಿಸುವುದಾಗಿ ಹೇಳಿದ್ದಾರೆ.

ಜಿಲ್ಲಾಧಿಕಾರಿ ಅರುಣ್ ಕುಮಾರ್ ಹಸಿಜಾ (ಸಂಗ್ರಹ ಚಿತ್ರ)

ರಾಜಸ್ಥಾನ: ಜಿಲ್ಲೆಯಲ್ಲಿ ಬಡತನ ನಿರ್ಮೂಲನೆವಾಗುವವರೆಗೆ ತಾವು ವೇತನ ಪಡೆಯುವುದಿಲ್ಲ ಎಂದು ಜಿಲ್ಲಾಧಿಕಾರಿಯೊಬ್ಬರು ( Rajasthan District Collector) ಪ್ರತಿಜ್ಞೆ ಮಾಡಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ರಾಜಸ್ಥಾನದ ರಾಜ್ಸಮಂದ್‌ನ ಜಿಲ್ಲಾಧಿಕಾರಿ (Rajsamand district) ಅರುಣ್ ಕುಮಾರ್ ಹಸಿಜಾ (Arun Kumar Hasija) ಅವರು ತಮ್ಮ ಜಿಲ್ಲೆಯ 30,000 ಬಡವರನ್ನು ಮೂರು ಪ್ರಮುಖ ಬಡತನ ನಿರ್ಮೂಲನಾ ಸರ್ಕಾರಿ ಯೋಜನೆಗಳ (poverty alleviation government schemes ) ಅಡಿಯಲ್ಲಿ ವಿವಿಧ ಸೌಲಭ್ಯ ಸಿಗುವಂತೆ ಮಾಡಲು ತಮ್ಮ ವೇತನವನ್ನು ತ್ಯಜಿಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ನಾನು ಒತ್ತಡ ಹೇರಿ ಈ ಕಾರ್ಯವನ್ನು ಮಾಡಬಹುದಿತ್ತು. ಆದರೆ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮುಗಿಸಲು ಅವರಿಗೆ ಪ್ರೇರಣೆ ನೀಡಲು ಈ ನಿರ್ಧಾರ ಮಾಡಿರುವುದಾಗಿ ಅವರು ಹೇಳಿದರು.

ರಾಜಸಮಂದ್ ಜಿಲ್ಲೆಯಲ್ಲಿ ಸುಮಾರು 30,000 ಬಡ ವರ್ಗದ ಜನರಿದ್ದಾರೆ. ಇವರು ಮುಖ್ಯವಾಗಿ ಪ್ರಮುಖ ಮೂರು ಯೋಜನೆಗಳಾದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿಯಲ್ಲಿ ಉಚಿತ ಪಡಿತರ, ಪೋಷಕರನ್ನು ಕಳೆದುಕೊಂಡ ಪಾಲನ್‌ಹಾರ್ ಯೋಜನೆಗೆ ಅರ್ಹವಾದ ಮಕ್ಕಳು, ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗೆ ಅರ್ಹರಾದ ಒಂಟಿ ಮಹಿಳೆಯರು, ವಿಧವೆಯರು ಮತ್ತು ವೃದ್ಧರು ಸೇರಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ದೇಶಾದ್ಯಂತ ಗಣರಾಜ್ಯೋತ್ಸವ ಸಂಭ್ರಮ; ದೆಹಲಿಯಲ್ಲಿ ಹೈ ಅಲರ್ಟ್ , ಶಂಕಿತ ಭಯೋತ್ಪಾದಕರ ಪೋಸ್ಟರ್ ಹಂಚಿಕೆ

ಸಂಬಳ ಬರುವುದು ಹತ್ತು ದಿನಗಳು ತಡವಾದರೂ ನಾವು ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತೇವೆ. ಪ್ರತಿಯೊಬ್ಬರಿಗೂ ಆದಾಯ ಸಮಯಕ್ಕೆ ಸರಿಯಾಗಿ ಬರುವುದು ಮುಖ್ಯವಾಗಿರುತ್ತದೆ. ಇದರಿಂದಲೇ ಮಕ್ಕಳ ಶಾಲಾ ಶುಲ್ಕಗಳು, ಇಎಂಐಗಳು, ಕ್ರೆಡಿಟ್ ಕಾರ್ಡ್ ಬಿಲ್‌ಗಳು ಮತ್ತು ಇತರ ವೆಚ್ಚಗಳನ್ನು ನಾವು ನಿರ್ವಹಿಸುತ್ತೇವೆ. ಸಂಬಳ ಹತ್ತು ದಿನಗಳು ತಡವಾದರೂ ಅದು ಜೀವನದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ನನ್ನ ಸಿಬ್ಬಂದಿಯೂ ಅರ್ಥ ಮಾಡಿಕೊಳ್ಳಬೇಕು. ಹೀಗಿರುವ ಸರ್ಕಾರದಿಂದ ತಿಂಗಳಿಗೆ ಕೇವಲ 1,500 ರೂ. ಪಡೆಯುವ ಬಡ ಜನರ ಬಗ್ಗೆ ನಾವು ಯೋಚಿಸಬೇಕಿದೆ. ಅದು ಮೂರು ತಿಂಗಳ ಕಾಲ ವಿಳಂಬ ಮಾಡುವುದು ಬಹುದೊಡ್ಡ ಅನ್ಯಾಯ ಎಂದು ಅವರು ತಿಳಿಸಿದರು.

ನಾನು ಪ್ರತಿಜ್ಞೆ ಮಾಡಿದ ಬಳಿಕ ಅದರ ಪರಿಣಾಮ ಕಾಣಿಸಿಕೊಳ್ಳುತ್ತಿದೆ. ಕೇವಲ 48 ಗಂಟೆಗಳಲ್ಲಿ ಸಾಮಾಜಿಕ ಭದ್ರತಾ ಪಿಂಚಣಿಗೆ 1,90,440 ಫಲಾನುಭವಿಗಳಲ್ಲಿ, ಶೇಕಡಾ 88 ರಷ್ಟು ಜನರು ದಾಖಲಾಗಿದ್ದಾರೆ. ಇನ್ನು 22,752 ಜನರು ಬಾಕಿ ಇದ್ದಾರೆ. ಇವರ ಪರಿಶೀಲನೆ ನಡೆಸಬೇಕಿದೆ. ಇದೇ ರೀತಿ ಉಚಿತ ಪಡಿತರ ಮತ್ತು ಪಾಲನ್‌ಹಾರ್ ಯೋಜನೆಯ ಕಾರ್ಯಗಳನ್ನು ಕೂಡ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು. .

ಪ್ರತಿಜ್ಞೆ ಕೇವಲ ನನ್ನದು. ಅದನ್ನು ನಾನು ಬೇರೆಯವರ ಮೇಲೆ ಹೇರಲು ಬಯಸುವುದಿಲ್ಲ. ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಪೂರ್ಣಗೊಳಿಸುವವರೆಗೆ ನಾನು ನನ್ನ ವೇತನ ಪಡೆಯುವುದಿಲ್ಲ. ಜನವರಿ 31 ರೊಳಗೆ ಕೆಲಸ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಅವರು ಹೇಳಿದರು.

ಹಸಿಜಾ ಅವರು ಈ ರೀತಿ ಕೆಲಸ ಪೂರ್ಣಗೊಳಿಸಲು ವಿಶಿಷ್ಟ ಮಾರ್ಗ ಅನುಸರಿಸುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆ ಅವರು ಹಳ್ಳಿಗಳಲ್ಲಿ ರಾತ್ರಿ ಉಳಿದು ಸಭೆಗಳನ್ನು ನಡೆಸಿದ್ದರು. ಈ ವೇಳೆ ಅವರು ರಾಜಸಮಂಡ್ ಜಿಲ್ಲೆ 'ಅಗ್ರಿ ಸ್ಟ್ಯಾಕ್' ಎಂಬ ಕೇಂದ್ರ ಸರ್ಕಾರದ ಯೋಜನೆಯಡಿಯಲ್ಲಿ ರೈತರ ನೋಂದಣಿಯಲ್ಲಿ ಹಿಂದುಳಿದಿದೆ ಎಂದು ಅರಿತುಕೊಂಡಿದ್ದರು.

ಅಮೃತ್ ಭಾರತ್ ಎಕ್ಸ್‌ಪ್ರೆಸ್‌ ರೈಲು; ಆರ್‌ಎಸಿ ಇಲ್ಲ, ಕೈಗೆಟಕುವ ದರದಲ್ಲಿ ಟಿಕೆಟ್ ಲಭ್ಯ

ಬಳಿಕ ರೈತರ ನೋಂದಣಿಗಾಗಿ ಜಿಲ್ಲಾಡಳಿತವು ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಿತು. ಇದರಲ್ಲಿ ಅಧಿಕಾರಿಗಳು ರೈತರು ತಮ್ಮ ಹೊಲಗಳಿಂದ ಹಿಂದಿರುಗಿದ ಬಳಿಕ ಸಂಜೆ 4 ರಿಂದ ರಾತ್ರಿ 8 ರವರೆಗೆ ಹಳ್ಳಿಗಳಿಗೆ ಹೋಗಿ ಗ್ರಾಮದ ಪ್ರಮುಖ ಸ್ಥಳಗಳು, ಪ್ರತಿ ಮನೆಗಳು ಅಥವಾ ಗ್ರಾಮಸ್ಥರು ಸೇರುವ ದೇವಾಲಯಗಳಲ್ಲಿ ರೈತರನ್ನು ಭೇಟಿ ಮಾಡಿ ನೋಂದಾಯಿಸಲು ಪ್ರಾರಂಭಿಸಿದರು. ಕರ್ತವ್ಯ ಸಮಯ ಮೀರಿದ ಕೆಲಸ ನೀಡಿದ್ದಕ್ಕಾಗಿ ಹಸಿಜಾ ಅವರು ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಯಿತು. ಆದರೆ ಹಸಿಜಾ ಅವರ ಮನವೊಲಿಸಿದರು.

ವಿದ್ಯಾ ಇರ್ವತ್ತೂರು

View all posts by this author