ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ದೇಶಾದ್ಯಂತ ಗಣರಾಜ್ಯೋತ್ಸವ ಸಂಭ್ರಮ; ದೆಹಲಿಯಲ್ಲಿ ಹೈ ಅಲರ್ಟ್ , ಶಂಕಿತ ಭಯೋತ್ಪಾದಕರ ಪೋಸ್ಟರ್ ಹಂಚಿಕೆ

ದೇಶಾದ್ಯಂತ ಗಣರಾಜ್ಯೋತ್ಸವದ ಸಿದ್ದತೆಗಳು ಪ್ರಾರಂಭವಾಗಿದೆ. ಈ ನಡುವೆ ದೆಹಲಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ರಾಜ್ಯ ರಾಜಧಾನಿಯ ಬಸ್, ರೈಲು, ವಿಮಾನ ನಿಲ್ದಾಣಗಳ ಸುತ್ತಮುತ್ತ, ಮಾರುಕಟ್ಟೆಗಳಲ್ಲಿ ಮೋಸ್ಟ ವಾಂಟೆಡ್ ಭಯೋತ್ಪಾದಕರ ಪೋಸ್ಟರ್ ಗಳನ್ನು ಹಾಕಲಾಗಿದೆ. ಹೆಚ್ಚಿನ ಪೋಸ್ಟರ್‌ಗಳಲ್ಲಿ ಬಬ್ಬರ್ ಖಾಲ್ಸಾ, ಜೈಶ್-ಎ-ಮೊಹಮ್ಮದ್ ಮತ್ತು ಅಲ್-ಖೈದಾದಂತಹ ಸಂಘಟನೆಗಳಿಗೆ ಸಂಬಂಧಿಸಿದ ಶಂಕಿತರ ಚಿತ್ರಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಗ್ರಹ ಚಿತ್ರ

ನವದೆಹಲಿ: ಕಳೆದ ವರ್ಷಾಂತ್ಯದಲ್ಲಿ ದೆಹಲಿಯ (delhi) ಕೆಂಪು ಕೋಟೆಯ (red fort) ಬಳಿ ನಡೆದ ಕಾರು ಬಾಂಬ್ ಸ್ಫೋಟ ಪ್ರಕರಣದ (bomb blast) ಬಳಿಕ ಮೊದಲ ಬಾರಿಗೆ ರಾಷ್ಟ್ರ ರಾಜ್ಯಧಾನಿ ಗಣರಾಜ್ಯೋತ್ಸವ ಆಚರಣೆಗೆ (77th Republic Day) ಸಿದ್ಧತೆ ಮಾಡಿಕೊಂಡಿದೆ. ಭಯೋತ್ಪಾದನೆಯ ಆತಂಕವಿರುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಹೈ ಅಲರ್ಟ್ (high alert in Delhi) ಘೋಷಿಸಲಾಗಿದೆ. ರಾಜ್ಯ ರಾಜಧಾನಿಯ ಬಸ್, ರೈಲು, ವಿಮಾನ ನಿಲ್ದಾಣಗಳ ಸುತ್ತಮುತ್ತ ಹಾಗೂ ಮಾರುಕಟ್ಟೆ ಪ್ರದೇಶಗಳಲ್ಲಿ ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಪೋಸ್ಟರ್ ಗಳನ್ನು ಹಾಕಲಾಗಿದೆ. ಹೆಚ್ಚಿನ ಪೋಸ್ಟರ್‌ಗಳಲ್ಲಿ ಬಬ್ಬರ್ ಖಾಲ್ಸಾ, ಜೈಶ್-ಎ-ಮೊಹಮ್ಮದ್ ಮತ್ತು ಅಲ್-ಖೈದಾದಂತಹ ಸಂಘಟನೆಗಳಿಗೆ ಸಂಬಂಧಿಸಿದ ಶಂಕಿತರ ಚಿತ್ರಗಳಿವೆ.

ಈಗ ಎಲ್ಲರ ಕಣ್ಣು ಸಂಪೂರ್ಣವಾಗಿ ದೆಹಲಿಯತ್ತ ನೆಟ್ಟಿದೆ. 77 ನೇ ಗಣರಾಜ್ಯೋತ್ಸವದ ಸಂಭ್ರಮದಲ್ಲಿ ಮುಳುಗಿರುವ ರಾಷ್ಟ್ರ ರಾಜಧಾನಿಯಲ್ಲಿ ಭದ್ರತಾ ಸಂಸ್ಥೆಗಳು ಕಣ್ಗಾವಲು ಕೂಡ ಹೆಚ್ಚಿಸಿದೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ತಡೆಯಲು ದೆಹಲಿ ಪೊಲೀಸರು ನಗರವನ್ನು ಹೈ ಅಲರ್ಟ್‌ನಲ್ಲಿ ಇರಿಸಿದ್ದಾರೆ. ಇದರೊಂದಿಗೆ ದೆಹಲಿಯಾದ್ಯಂತ ರೈಲ್ವೆ ನಿಲ್ದಾಣಗಳು, ಬಸ್ ಟರ್ಮಿನಲ್‌ಗಳು ಮತ್ತು ಜನದಟ್ಟಣೆಯ ಮಾರುಕಟ್ಟೆಗಳಲ್ಲಿ ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಪೋಸ್ಟರ್‌ಗಳನ್ನು ಹಾಕಲಾಗಿದೆ.

ಪ್ರಧಾನಿ ಮೋದಿ- ಮೆಲೋನಿ ; ಗಾಜಾ ಶಾಂತಿ ಮಂಡಳಿಗೆ ಟ್ರಂಪ್‌ ಯಾರನ್ನೆಲ್ಲಾ ಆಹ್ವಾನಿಸಿದ್ದಾರೆ?

ಬಬ್ಬರ್ ಖಾಲ್ಸಾ, ಜೈಶ್-ಎ-ಮೊಹಮ್ಮದ್ ಮತ್ತು ಅಲ್-ಖೈದಾದಂತಹ ಭಯೋತ್ಪಾದಕ ಸಂಘಟನೆಗಳಿಗೆ ಸಂಬಂಧಿಸಿದ ಶಂಕಿತರ ಚಿತ್ರಗಳನ್ನು ಪೋಸ್ಟರ್ ಗಳಲ್ಲಿ ಹಾಕಲಾಗಿದ್ದು, ಇದರಿಂದ ಸಂಭಾವ್ಯ ಬೆದರಿಕೆಗಳನ್ನು ಗುರುತಿಸಲು ಸಾರ್ವಜನಿಕರು ಕೂಡ ಅಲರ್ಟ್ ಆಗಿರುವಂತೆ ಸೂಚಿಸಲಾಗಿದೆ.

ನವದೆಹಲಿ ರೈಲು ನಿಲ್ದಾಣ, ಹಳೆ ದೆಹಲಿ ರೈಲು ನಿಲ್ದಾಣ, ನಿಜಾಮುದ್ದೀನ್, ಆನಂದ್ ವಿಹಾರ್ ಮತ್ತು ಸರೈ ರೋಹಿಲ್ಲಾ ಸೇರಿದಂತೆ ಪ್ರಮುಖ ರೈಲು ನಿಲ್ದಾಣಗಳಲ್ಲಿ ವಿಶೇಷ ಕಣ್ಗಾವಲು ವ್ಯವಸ್ಥೆ ಮಾಡಲಾಗಿದೆ. ಐಎಸ್‌ಬಿಟಿ ಕಾಶ್ಮೀರಿ ಗೇಟ್, ಆನಂದ್ ವಿಹಾರ್ ಬಸ್ ನಿಲ್ದಾಣದಂತಹ ಜನನಿಬಿಡ ಬಸ್ ಟರ್ಮಿನಲ್‌ಗಳಲ್ಲಿ ಕೂಡ ಬಿಗಿ ಭದ್ರತೆಯನ್ನು ಹಾಕಲಾಗಿದೆ.

ಸರೋಜಿನಿ ನಗರ, ಕರೋಲ್ ಬಾಗ್, ಲಜಪತ್ ನಗರ, ಸದರ್ ಬಜಾರ್ ಮತ್ತು ಪಹರ್‌ಗಂಜ್ ಸೇರಿದಂತೆ ಹಲವಾರು ಜನದಟ್ಟಣೆಯ ಮಾರುಕಟ್ಟೆಗಳಲ್ಲಿ ಪೋಸ್ಟರ್‌ಗಳನ್ನು ಅಳವಡಿಸಲಾಗಿದ್ದು, ಶಂಕಿತರನ್ನು ಸಾರ್ವಜನಿಕರು ಗುರುತಿಸಿದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸಾಹಿತ್ಯ ಅಕಾಡೆಮಿ ಪ್ರಶಸ್ತಿ ರದ್ದಾದ ಬಳಿಕ ಸೆಮ್ಮೊಳಿ ಸಾಹಿತ್ಯ ಪ್ರಶಸ್ತಿ ಘೋಷಿಸಿದ ತಮಿಳುನಾಡು ಸರ್ಕಾರ

ಜಾಗರೂಕರಾಗಿರಿ ಮತ್ತು ಭದ್ರತಾ ಸಿಬ್ಬಂದಿಯೊಂದಿಗೆ ಸಹಕರಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿರುವ ಪೊಲೀಸರು, ಯಾವುದೇ ಅನುಮಾನಾಸ್ಪದ ಚಟುವಟಿಕೆ, ವಸ್ತುಗಳು ಅಥವಾ ವ್ಯಕ್ತಿಗಳು ಕಂಡು ಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ, ಭದ್ರತಾ ತಪಾಸಣೆಯ ಸಮಯದಲ್ಲಿ ಸಂಪೂರ್ಣ ಸಹಕರಿಸುವಂತೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ವದಂತಿಯನ್ನು ಹರಡುವುದನ್ನು ತಪ್ಪಿಸುವಂತೆ ಸೂಚಿಸಲಾಗಿದೆ.

ಸದ್ಯ ರಾಷ್ಟ್ರ ರಾಜಧಾನಿಯಲ್ಲಿ ಕಾನೂನು ಸುವ್ಯವಸ್ಥೆ ನಿಯಂತ್ರಣದಲ್ಲಿದೆ. ಸುರಕ್ಷಿತ ಮತ್ತು ಸುಭದ್ರ ಗಣರಾಜ್ಯೋತ್ಸವ ಆಚರಣೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author