ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rohnat village: 2018ರವರೆಗೆ ಈ ಗ್ರಾಮದಲ್ಲಿ ತಿರಂಗಾ ಹಾರಲೇ ಇಲ್ವಂತೆ!

ದೇಶದಲ್ಲೇ ಇರುವ ಈ ಒಂದು ಗ್ರಾಮದಲ್ಲಿ 2018ರವರೆಗೆ ತ್ರಿವರ್ಣ ಧ್ವಜವನ್ನು ಅಧಿಕೃತವಾಗಿ ಹಾರಿಸಿರಲಿಲ್ಲ. ದೇಶದ ಸ್ವಾತಂತ್ರ್ಯೋತ್ಸವವನ್ನು ಆಚರಿಸಲು ಹಲವಾರು ದಶಕಗಳಿಂದ ಇಲ್ಲಿನ ಜನರು ಸಂಯಮದಿಂದ ಕಾಯುತ್ತಲೇ ಇದ್ದಾರೆ. ಇದು ಕಳೆದು ಹೋಗಿದ್ದ ಅವರ ಗ್ರಾಮದ ಗುರುತನ್ನು ಮರಳಿ ಪಡೆಯುವ ಪ್ರಯತ್ನದ ಸುದೀರ್ಘ ಕಾಲದ ಹೋರಾಟದ ಪ್ರತಿಬಿಂಬವಾಗಿದೆ. ಇದರ ಹಿಂದೆ ಅನೇಕ ಸಾವು ನೋವಿನ ಕಥೆಗಳಿವೆ.

ಇಲ್ಲಿ 2018ರವರೆಗೆ ತ್ರಿವರ್ಣ ಧ್ವಜವನ್ನು ಹರಿಸಲಿಲ್ಲ

ಹರಿಯಾಣ: ದೇಶದಲ್ಲೇ ಇರುವ ಈ ಗ್ರಾಮದಲ್ಲಿ (Rohnat village) ಅಧಿಕೃತವಾಗಿ ಸ್ವಾತಂತ್ರ್ಯೋತ್ಸವವನ್ನು (Independence Day) ಆಚರಿಸಲಾಗಿಲ್ಲ. ಸ್ವಾತಂತ್ರ್ಯೋತ್ಸವಕ್ಕೂ ಮುನ್ನ ತನ್ನ ಗುರುತನ್ನೇ ಕಳೆದುಕೊಂಡಿದ್ದ ಈ ಗ್ರಾಮ ಸಾಕಷ್ಟು ಹೋರಾಟವನ್ನು ಮಾಡಿ, ಬಲಿದಾನವನ್ನು ನೀಡಿತ್ತು. ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೂ ಇಲ್ಲಿನ ಜನತೆಗೆ ಇದು ಸಿಕ್ಕಿಲ್ಲ. ಇಲ್ಲಿ ಮೊದಲ ಬಾರಿಗೆ 2018ರಲ್ಲಿ ತ್ರಿವರ್ಣ ಧ್ವಜವನ್ನು (Tricolour flag) ಹರಿಸಲಾಯಿತು. ಅದೂ ಸ್ವಾತ್ರ್ಯೋತ್ಸವದ ದಿನದಂದು ಅಲ್ಲ. ಈ ಗ್ರಾಮವು ಹಲವಾರು ದಶಕಗಳಿಂದ ರಾಷ್ಟ್ರೀಯ ಹಬ್ಬಗಳನ್ನು ಮೌನವಾಗಿಯೇ ಆಚರಿಸಿಕೊಂಡು ಬರುತ್ತಿದೆ. ಇದು ಕಳೆದುಹೋದ ತನ್ನ ಗುರುತನ್ನು ಮರಳಿ ಪಡೆಯುವ ಪ್ರಯತ್ನದಲ್ಲಿ ಅದರ ಸುದೀರ್ಘ ಹೋರಾಟದ ಪ್ರತಿಬಿಂಬವಾಗಿದೆ.

1858ರ ಜುಲೈ 20ರಂದು ಹರಿಯಾಣದ ರೋಹ್ನಾತ್ ಗ್ರಾಮದ ಖಾಸಗಿ ಮತ್ತು ಪಂಚಾಯತ್ ಭೂಮಿಯಾಗಿದ್ದ 20,656 ಬಿಘಾ ಮತ್ತು 19 ಮಾರ್ಲಾಗಳನ್ನು 8,100 ರೂ.ಗಳಿಗೆ ಹರಾಜಿನಲ್ಲಿ ಮಾರಾಟ ಮಾಡಲಾಯಿತು. ಇದರಿಂದಾಗಿ ಗ್ರಾಮಸ್ಥರಿಗೆ ಬಹುತೇಕ ಭೂಮಿಯೇ ಇಲ್ಲದಂತಾಯಿತು.

ಹರಿಯಾಣದಲ್ಲಿ ಬ್ರಿಟಿಷ್ ಆಡಳಿತದ ವಿರುದ್ಧ 1857 ರ ದಂಗೆಯಲ್ಲಿ ರೋಹ್ನಾತ್ ಗ್ರಾಮವು ಪ್ರಮುಖ ಪಾತ್ರ ವಹಿಸಿದೆ. ಈ ಗ್ರಾಮದಿಂದಾಗಿಯೇ ಗುರ್ಗಾಂವ್, ರೋಹ್ಟಕ್, ಸಿರ್ಸಾ, ಹಿಸಾರ್, ರೇವಾರಿ, ಪಾಣಿಪತ್ ಮತ್ತು ಥಾನೇಸರ್‌ಗಳಲ್ಲಿ ದಂಗೆ ಉಂಟಾಗಿತ್ತು. 1857ರ ಮೇ 29ರಂದು, ರೋಹ್ನಾತ್‌ನ ಕ್ರಾಂತಿಕಾರಿಗಳು ಗ್ರಾಮದಿಂದ 19 ಕಿ.ಮೀ ದೂರದಲ್ಲಿರುವ ತೋಷಮ್‌ನಲ್ಲಿರುವ ಸರ್ಕಾರಿ ಖಜಾನೆ ಮೇಲೆ ದಾಳಿ ಮಾಡಿ ಲೂಟಿ ಮಾಡಿದರು. ಅನಂತರ ಅವರು ಹಿಸಾರ್‌ನ ಗುಜ್ರಿ ಮಹಲ್‌ನಲ್ಲಿರುವ ಜೈಲಿಗೆ ನುಗ್ಗಿ ಹಲವಾರು ಜೈಲಿನಲ್ಲಿದ್ದ ಬಂಡುಕೋರರನ್ನು ಮುಕ್ತಗೊಳಿಸಿದರು. ರೋಹ್ನಾತ್ ಗ್ರಾಮಸ್ಥರ ನೇತೃತ್ವದ ಗುಂಪೊಂದು ಹಂಸಿಯಲ್ಲಿ ಹನ್ನೊಂದು ಬ್ರಿಟಿಷ್ ಅಧಿಕಾರಿಗಳನ್ನು ಮತ್ತು ಹಿಸಾರ್‌ನಲ್ಲಿ ಹನ್ನೆರಡು ಅಧಿಕಾರಿಗಳನ್ನು ಕೊಂದು ಹಾಕಿತ್ತು.

ಈ ಘಟನೆಯ ಬಳಿಕ ಬ್ರಿಟಿಷರು ರೋಹ್ನಾತ್ ಗ್ರಾಮಸ್ಥರ ಮೇಲೆ ಅತ್ಯಂತ ಕ್ರೂರವಾದ ಕ್ರಮ ಕೈಗೊಂಡರು. ದಂಗೆಯ ಮೂವರು ನಾಯಕರಾದ ಬಿರ್ಹಾದ್ ಬೈರಾಗಿ, ನೌಂಡಾ ಜಾಟ್ ಮತ್ತು ರೂಪಾ ಖಾತಿ ಅವರನ್ನು ಫಿರಂಗಿ ಬ್ಯಾರೆಲ್‌ಗಳಿಗೆ ಕಟ್ಟಿ ಗ್ರಾಮಸ್ಥರ ಮುಂದೆ ಸ್ಫೋಟಿಸಿದರು. ಪುರುಷರನ್ನು ಮನೆಗಳಿಂದ ಎಳೆದುಕೊಂಡು ಹೋಗಿ ಗ್ರಾಮದ ಕೊಳದ ಬಳಿಯ ಹಳೆಯ ಆಲದ ಮರಕ್ಕೆ ನೇತುಹಾಕಿದರು. ನೂರಕ್ಕೂ ಹೆಚ್ಚು ಕ್ರಾಂತಿಕಾರಿಗಳನ್ನು ರೋಡ್ ರೋಲರ್ ಅಡಿಯಲ್ಲಿ ಪುಡಿ ಮಾಡಲಾಯಿತು.

ಬ್ರಿಟಿಷರಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮಹಿಳೆಯರು ಮತ್ತು ಮಕ್ಕಳು ಬಾವಿಗೆ ಹಾರಿದರು. ಆಗ ಇಲ್ಲಿ ನಡೆದಿರುವ ಸಾವುನೋವುಗಳಿಗೆ ನಿಖರ ಸಂಖ್ಯೆಯೇ ಸಿಕ್ಕಿಲ್ಲ. ಇಲ್ಲಿನ ಬಾವಿಯು ಶವಗಳಿಂದ ತುಂಬಿತ್ತು. ಉಳಿದ ಗ್ರಾಮಸ್ಥರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಯಲು ಬ್ರಿಟಿಷರು ಬಾವಿಯನ್ನು ಮಣ್ಣಿನಿಂದ ಮುಚ್ಚಿದ್ದರು ಎನ್ನುತ್ತಾರೆ ಗ್ರಾಮದ ಹಿರಿಯರು.

ಬಳಿಕ ಹಿಸಾರ್‌ನ ಆಗಿನ ಉಪ ಆಯುಕ್ತ ವಿಲಿಯಂ ಖ್ವಾಜಾ ಅವರು ರೋಹ್ನಾತ್ ಅನ್ನು ‘ದಂಗೆಕೋರರ ಗ್ರಾಮ’ ಎಂದು ಕರೆದು ಅದರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಹರಾಜಿಗೆ ಆದೇಶಿಸಿದರು.

1858ರ ಜುಲೈ 20ರಂದು ಗ್ರಾಮದ ಒಟ್ಟು 20,656 ಬಿಘಾ ಮತ್ತು 19 ಮಾರ್ಲಾ ಖಾಸಗಿ ಮತ್ತು ಪಂಚಾಯತ್ ಭೂಮಿಯನ್ನು 8,100 ರೂ.ಗೆ ಹರಾಜು ಮಾಡಲಾಯಿತು. ಇದರಿಂದಾಗಿ ಗ್ರಾಮಸ್ಥರಿಗೆ ಬಹುತೇಕ ಸ್ವಂತ ಭೂಮಿಯೇ ಇಲ್ಲದಂತಾಯಿತು. ಗ್ರಾಮದ ಕೊಳ ಮತ್ತು ಬಾವಿಯನ್ನು ಹೊಂದಿರುವ 13 ಬಿಘಾ ಮತ್ತು 10 ಬಿಸ್ವಾಗಳನ್ನು ಮಾತ್ರ ಹರಾಜಿನಿಂದ ರಕ್ಷಿಸಿಕೊಳ್ಳುವುದು ಗ್ರಾಮಸ್ಥರಿಗೆ ಸಾಧ್ಯವಾಯಿತು.

ದಂಗೆಯ ಬಳಿಕ ರೋಹ್ನಾತ್‌ ಗ್ರಾಮದಲ್ಲಿ ಬದುಕಿ ಉಳಿದವರು ಕೆಲವು ಭೂಮಿಯನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾದರು. ಹೆಚ್ಚಿನ ಕುಟುಂಬಗಳು ಎರಡು ಎಕರೆಗಿಂತಲೂ ಕಡಿಮೆ ಭೂಮಿಯನ್ನು ಪಡೆದರು. ಹೀಗಾಗಿ ಈ ಗ್ರಾಮದಲ್ಲಿ ಸ್ವಾತಂತ್ರ್ಯ ದಿನ ಅಥವಾ ಗಣರಾಜ್ಯೋತ್ಸವದಂದು ತ್ರಿವರ್ಣ ಧ್ವಜವನ್ನು ಹಾರಿಸಲಿಲ್ಲ.

ಈ ಸುದ್ದಿಯನ್ನೂ ಓದಿ: Pralhad Joshi: ಧರ್ಮಸ್ಥಳದಲ್ಲಿ ಸೃಷ್ಟಿಸಿರುವಂತಹ ಅವ್ಯವಸ್ಥೆಗೆ ರಾಜ್ಯ ಸರ್ಕಾರವೇ ನೇರ ಹೊಣೆ ಹೊರಬೇಕು: ಜೋಶಿ

ಗ್ರಾಮದ ಕ್ರಾಂತಿಕಾರರಾದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರ ತ್ಯಾಗಗಳನ್ನು ಸ್ಮರಿಸುತ್ತ 2018ರ ಮಾರ್ಚ್ 23ರಂದು 'ಶಹೀದ್ ದಿವಸ್' ಸಂದರ್ಭದಲ್ಲಿ ಇಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲಾಯಿತು. ನಾವು ಇನ್ನೂ ಬ್ರಿಟಿಷರು ನೀಡಿದ್ದ ಶಿಕ್ಷೆಯನ್ನು ಅನುಭವಿಸುತ್ತಿದ್ದೇವೆ. ಯಾಕೆಂದರೆ ನಮ್ಮ ಭೂಮಿಯನ್ನು ನಮಗೆ ಹಿಂತಿರುಗಿಸಲಾಗಿಲ್ಲ ಎನ್ನುತ್ತಾರೆ ಗ್ರಾಮಸ್ಥರು.