ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RPSC Paper Leak case: ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಕುಮಾರ್ ವಿಶ್ವಾಸ್ ಪತ್ನಿ, ಆರ್‌ಪಿಎಸ್‌ಸಿ ಸದಸ್ಯೆ ಮಂಜು ಶರ್ಮಾ ರಾಜೀನಾಮೆ

ಸಬ್ ಇನ್ಸ್‌ಪೆಕ್ಟರ್ ನೇಮಕಾತಿ 2021ರ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿ ಹೈಕೋರ್ಟ್ ರಾಜಸ್ಥಾನ ಸಾರ್ವಜನಿಕ ಸೇವಾ ಆಯೋಗದ ಸದಸ್ಯರನ್ನು ತರಾಟೆಗೆ ತೆಗೆದುಕೊಂಡ ಎರಡು ವಾರಗಳ ಬಳಿಕ ಕವಿ ಕುಮಾರ್ ವಿಶ್ವಾಸ್ ಅವರ ಪತ್ನಿ ಮತ್ತು ರಾಜಸ್ಥಾನ ಸಾರ್ವಜನಿಕ ಸೇವಾ ಆಯೋಗದ (Rajasthan Public Service Commission) ಸದಸ್ಯೆ ಮಂಜು ಶರ್ಮಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆಯನ್ನು ರಾಜಸ್ಥಾನ ರಾಜ್ಯಪಾಲರು ಅಂಗೀಕರಿಸಿದ್ದಾರೆ.

ರಾಜಸ್ಥಾನ: ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ಕವಿ ಕುಮಾರ್ ವಿಶ್ವಾಸ್ (Poet Kumar Vishwas) ಅವರ ಪತ್ನಿ ಮತ್ತು ರಾಜಸ್ಥಾನ ಸಾರ್ವಜನಿಕ ಸೇವಾ ಆಯೋಗದ (Rajasthan Public Service Commission) ಸದಸ್ಯೆ ಮಂಜು ಶರ್ಮಾ (RPSC member Manju Sharma) ಅವರ ನೀಡಿರುವ ರಾಜೀನಾಮೆಯನ್ನು ರಾಜಸ್ಥಾನ ರಾಜ್ಯಪಾಲರು ಅಂಗೀಕರಿಸಿದ್ದಾರೆ. 2021ರ ಪರೀಕ್ಷಾ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ರಾಜಸ್ಥಾನ ಹೈಕೋರ್ಟ್‌ (Rajasthan High Court) ಹೇಳಿಕಗಳನ್ನು ನೀಡಿದ ಎರಡು ವಾರಗಳ ಬಳಿಕ ಮಂಜು ಶರ್ಮಾ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಸಬ್ ಇನ್ಸ್‌ಪೆಕ್ಟರ್ ನೇಮಕಾತಿ 2021ರ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿ ಹೈಕೋರ್ಟ್ ರಾಜಸ್ಥಾನ ಸಾರ್ವಜನಿಕ ಸೇವಾ ಆಯೋಗದ ಸದಸ್ಯರನ್ನು ತರಾಟೆಗೆ ತೆಗೆದುಕೊಂಡಿತ್ತು. ಅಲ್ಲದೆ ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ವಿವಾದಾತ್ಮಕ 2021ರ ಪರೀಕ್ಷೆಯನ್ನು ಹೈಕೋರ್ಟ್ ರದ್ದುಗೊಳಿಸಿತ್ತು. ಇದಾದ ಕೆಲವು ಬಳಿಕ ಶರ್ಮಾ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಕವಿ ಕುಮಾರ್ ವಿಶ್ವಾಸ್ ಅವರ ಪತ್ನಿ ಮಂಜು ಶರ್ಮಾ ಅವರು ತಮ್ಮ ರಾಜೀನಾಮೆಯನ್ನು ರಾಜಸ್ಥಾನ ರಾಜ್ಯಪಾಲ ಹರಿಭಾಯಿ ಬಗಾಡೆ ಅವರಿಗೆ ಸೋಮವಾರ ಸಲ್ಲಿಸಿದ್ದು, ಅದನ್ನು ಅವರು ಅಂಗೀಕರಿಸಿದ್ದಾರೆ. ರಾಜಸ್ಥಾನ ಸಾರ್ವಜನಿಕ ಸೇವಾ ಆಯೋಗ ಪರೀಕ್ಷೆಯಲ್ಲಿ ಭ್ರಷ್ಟಾಚಾರ, ರಾಜಸ್ಥಾನ ಸಾರ್ವಜನಿಕ ಸೇವಾ ಆಯೋಗದ ಸದಸ್ಯರ ಪಾಲ್ಗೊಳ್ಳುವಿಕೆ ಮತ್ತು ಲಿಖಿತ, ಸಂದರ್ಶನ ಹಂತಗಳಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಲಾಗಿದೆ.

ಸೆಪ್ಟೆಂಬರ್ 1ರಂದು ರಾಜ್ಯಪಾಲ ಬಗಾಡೆ ಅವರಿಗೆ ಸಲ್ಲಿಸಿದ ರಾಜೀನಾಮೆ ಪತ್ರದಲ್ಲಿ ಶರ್ಮಾ ಅವರು, ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದ ವಿವಾದಗಳು ತಮ್ಮ ರಾಜೀನಾಮೆಗೆ ಕಾರಣವೆಂದು ಉಲ್ಲೇಖಿಸಿದ್ದಾರೆ. ಯಾವುದೇ ತನಿಖಾ ಸಂಸ್ಥೆಯಲ್ಲಿ ಅವರ ವಿರುದ್ಧ ಯಾವುದೇ ತನಿಖೆ ಬಾಕಿ ಇಲ್ಲ ಅಥವಾ ಯಾವುದೇ ಪ್ರಕರಣಗಳಲ್ಲಿ ಅವರನ್ನು ಆರೋಪಿ ಎಂದು ಪರಿಗಣಿಸಲಾಗಿಲ್ಲ ಎಂದು ಹೇಳಿದ್ದಾರೆ.

ಆಯೋಗದ ಘನತೆ, ನಿಷ್ಪಕ್ಷಪಾತ ಮತ್ತು ಪಾರದರ್ಶಕತೆಯನ್ನು ತಾವು ಅತ್ಯುನ್ನತವೆಂದು ಪರಿಗಣಿಸಿರುವುದರಿಂದ ಈ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಹೇಳಿದ್ದಾರೆ. ಅಲ್ಲದೇ ಅವರು ತಮ್ಮ ಪತ್ರದಲ್ಲಿ, ನಾನು ನನ್ನ ಕೆಲಸ ಮತ್ತು ವೈಯಕ್ತಿಕ ಜೀವನವನ್ನು ಅತ್ಯಂತ ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯಿಂದ ಮಾಡಿದ್ದೇನೆ. ಆದರೆನೇಮಕಾತಿ ಪ್ರಕ್ರಿಯೆಯಲ್ಲಿ ಉದ್ಭವಿಸಿದ ವಿವಾದದಿಂದಾಗಿ ನನ್ನ ವೈಯಕ್ತಿಕ ಖ್ಯಾತಿಗೆ ಧಕ್ಕೆಯಾಗಿದೆ ಎಂದು ತಿಳಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಅಧಿಕಾರಾವಧಿಯಲ್ಲಿ ನೇಮಕಗೊಂಡಿದ್ದ ಮಂಜು ಶರ್ಮಾ ಅವರು ಭೂಗೋಳಶಾಸ್ತ್ರದಲ್ಲಿ ಪಿಎಚ್‌ಡಿ ಮತ್ತು ಎಂಎ ಪದವಿ ಪಡೆದಿದ್ದಾರೆ. ಈ ಮೊದಲು ಅವರು ಭರತ್‌ಪುರದ ಸರ್ಕಾರಿ ಎಂಎಸ್‌ಜೆ ಪಿಜಿ ಕಾಲೇಜಿನಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿದ್ದರು.

ಈ ಸುದ್ದಿಯನ್ನೂ ಓದಿ: International Yoga Day:‌ ಸಿಕ್ಕಾಪಟ್ಟೆ ವೈರಲ್‌ ಆಯ್ತು ಶ್ವಾನದ ಈ ಯೋಗಾಸನ; ವಿಡಿಯೊ ವೈರಲ್!

ಈ ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ 50ಕ್ಕೂ ಹೆಚ್ಚು ತರಬೇತಿ ಎಸ್‌ಐಗಳು ಸೇರಿದಂತೆ 120 ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಲ್ಲಿ ಮಾಜಿ ಆರ್‌ಪಿಎಸ್‌ಸಿ ಸದಸ್ಯ ರಾಮು ರಾಮ್ ರೈಕಾ ಕೂಡ ಸೇರಿದ್ದಾರೆ. ಅವರು ಆಗಿನ ಆರ್‌ಪಿಎಸ್‌ಸಿ ಸದಸ್ಯ ಬಾಬುಲಾಲ್ ಕಟಾರಾ ಅವರಿಂದ ಸೋರಿಕೆಯಾದ ಪ್ರಶ್ನೆಪತ್ರಿಕೆಯನ್ನು ಪಡೆದರು ಎನ್ನಲಾಗಿದೆ. ಕಟಾರಾ ಅವರನ್ನು ಅಮಾನತುಗೊಳಿಸಲಾಗಿದೆ. ಆದರೆ ಅವರ ವಜಾ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಪರಿಶೀಲನೆ ಹಂತದಲ್ಲಿದೆ.

ವಿದ್ಯಾ ಇರ್ವತ್ತೂರು

View all posts by this author