ನವದೆಹಲಿ: ಯುಎಸ್ (US) ಮತ್ತು ಇಸ್ರೇಲ್ (Israel) ಸೇನಾ ಪಡೆಯು ಇರಾನ್ (Iran war) ಮೇಲೆ ನಡೆಸಿದ ದಾಳಿಗೆ ಪ್ರತೀಕಾರ ತೀರಿಸಲು ಇರಾನ್ ಮಧ್ಯಪ್ರಾಚ್ಯ ರಾಷ್ಟಗಳಲ್ಲಿರುವ ಯುಎಸ್ ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸುತ್ತಿದೆ. ಇದರ ಪರಿಣಾಮ ಪಶ್ಚಿಮ ಏಷ್ಯಾ ಭಾಗದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಇದು ಜಾಗತಿಕ ಮಾರುಕಟ್ಟೆ ಮೇಲೆ ಪರಿಣಾಮ ಬೀರುತ್ತಿದ್ದು, ಈ ಸಂದರ್ಭದಲ್ಲಿ ಭಾರತದ ಆರ್ಥಿಕ ಸ್ಥಿರತೆಯನ್ನು (economic stability) ಕಾಪಾಡಲು 1 ಲಕ್ಷ ಕೋಟಿ ರೂಪಾಯಿಗಳ ಆರ್ಥಿಕ ಸ್ಥಿರೀಕರಣ ನಿಧಿಯನ್ನು (Economic Stabilisation Fund) ಇಡಲಾಗಿದೆ. ಇದು ಭಾರತಕ್ಕೆ ಜಾಗತಿಕ ಹಿನ್ನಡೆಗಳನ್ನು ಎದುರಿಸಲು ಸಹಾಯ ಮಾಡಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) ಹೇಳಿದರು.
ಸಂಸತ್ತಿನಲ್ಲಿ ಶುಕ್ರವಾರ ಲೋಕಸಭೆಯಲ್ಲಿ ಅನುದಾನಕ್ಕಾಗಿ ಪೂರಕ ಬೇಡಿಕೆಗಳ ಕುರಿತು ಎರಡನೇ ಹಂತದ ಚರ್ಚೆ ವೇಳೆ ಮಾಹಿತಿ ನೀಡಿದ ಅವರು, ದೇಶದಲ್ಲಿ ಈಗ ರಸಗೊಬ್ಬರಗಳ ಕೊರತೆಯಿಲ್ಲ. ಸಾಕಷ್ಟು ಲಭ್ಯತೆ ಇದೆ. ಇನ್ನು ಪಶ್ಚಿಮ ಏಷ್ಯಾದಲ್ಲಿ ಪ್ರಸ್ತುತ ಇರುವ ಅನಿರೀಕ್ಷಿತ ಸವಾಲುಗಳಿಂದ ಉಂಟಾಗುವ ಅಪಾಯಗಳನ್ನು ತಡೆಯಲು ನಿಧಿಯು ಬಫರ್ ಆಗಿ ಕಾರ್ಯನಿರ್ವಹಿಸಲಿದೆ ಎಂದರು.
ಪೂರಕ ಬೇಡಿಕೆಗಳ ಎರಡನೇ ಹಂತದ ಮೂಲಕ ಸರ್ಕಾರವು ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟು 2.81 ಲಕ್ಷ ಕೋಟಿ ರೂಪಾಯಿಗಳನ್ನು ಹೆಚ್ಚುವರಿಯಾಗಿ ಖರ್ಚು ಮಾಡಲು ಲೋಕಸಭೆಯ ಅನುಮೋದನೆಯನ್ನು ಕೋರಿತು. ಪ್ರಸಕ್ತ ಹಣಕಾಸು ವರ್ಷದಲ್ಲಿ ಬಜೆಟ್‌ನಲ್ಲಿ ರೂ. 80,000 ಕೋಟಿ ಹೆಚ್ಚುವರಿ ಆದಾಯದೊಂದಿಗೆ, ನಿವ್ವಳ ಹೆಚ್ಚುವರಿ ನಗದು ಖರ್ಚು ರೂ. 2.01 ಲಕ್ಷ ಕೋಟಿಗಳಾಗಿರುತ್ತದೆ. ಪ್ರಸಕ್ತ ಹಣಕಾಸು ವರ್ಷದ ಹಣಕಾಸಿನ ಕೊರತೆಯು ಪರಿಷ್ಕೃತ ಅಂದಾಜುಗಳ ಒಳಗೆ ಇರುತ್ತದೆ ಎಂದು ಸೀತಾರಾಮನ್ ತಿಳಿಸಿದರು.
2025-26ರಲ್ಲಿ ಹಣಕಾಸಿನ ಕೊರತೆಯನ್ನು ಬಜೆಟ್ ಅಂದಾಜಿಗೆ ಸಮನಾಗಿ ಜಿಡಿಪಿಯ ಶೇಕಡಾ 4.4 ರಷ್ಟು ಎಂದು ಅಂದಾಜಿಸಲಾಗಿದೆ. ಬಜೆಟ್ ಅಂದಾಜುಗಳನ್ನು ಮೀರಿದ ವೆಚ್ಚದಲ್ಲಿ ಯಾವುದೇ ಹೆಚ್ಚಳವಿಲ್ಲ. ಎಂದರು.
ಪರಿಷ್ಕೃತ ಅಂದಾಜುಗಳಲ್ಲಿ ಸರ್ಕಾರವು ಒಟ್ಟು ವೆಚ್ಚವನ್ನು 49.65 ಲಕ್ಷ ಕೋಟಿ ರೂ. ಗಳಿಗೆ ಕಡಿತಗೊಳಿಸಿದೆ. ಇದು 50.65 ಲಕ್ಷ ಕೋಟಿ ರೂ. ಗಳಷ್ಟಿತ್ತು. ಜನವರಿಯವರೆಗೆ ಸರ್ಕಾರವು 36.90 ಲಕ್ಷ ಕೋಟಿ ರೂ. ಗಳನ್ನು ಖರ್ಚು ಮಾಡಿದೆ ಎಂದು ಅಂಕಿಅಂಶಗಳು ಹೇಳಿವೆ ಎಂದರು.
Chikkaballapur News: ಮಾ.15ರ ಬಂದ್‌ಗೆ ಶಾಶ್ವತ ನೀರಾವರಿ ಹೋರಾಟ ಸಮಿತಿ ಬೆಂಬಲ ಆರ್.ಆಂಜನೇಯರೆಡ್ಡಿ ಘೋಷಣೆ
ರಸಗೊಬ್ಬರ ಸಬ್ಸಿಡಿಗಾಗಿ 19,230 ಕೋಟಿ ರೂಪಾಯಿಗಳ ಹೆಚ್ಚುವರಿ ವೆಚ್ಚ ಮತ್ತು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಅಡಿಯಲ್ಲಿ ಸಬ್ಸಿಡಿಗಳಿಗಾಗಿ 23,641 ಕೋಟಿ ರೂಪಾಯಿಗಳ ಹೆಚ್ಚುವರಿ ವೆಚ್ಚಕ್ಕೆ ಸಂಸತ್ತಿನ ಅನುಮೋದನೆ ಕೋರಲಾಗಿದೆ. ಇತರ ಪ್ರಮುಖ ವೆಚ್ಚಗಳಲ್ಲಿ ರಕ್ಷಣಾ ಸಚಿವಾಲಯಕ್ಕೆ 41,822 ಕೋಟಿ ರೂಪಾಯಿಗಳು ಸೇರಿವೆ ಎಂದು ಸೀತಾರಾಮನ್ ತಿಳಿಸಿದರು.