ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sunil Ambekar: ಮಣಿಪುರದಲ್ಲಿ‌ ಶಾಂತಿ ಸ್ಥಾಪಿಸಲು ಆರ್‌ಎಸ್‌ಎಸ್‌ ಶ್ರಮಿಸುತ್ತಿದೆ ಎಂದ ಸುನೀಲ್‌ ಅಂಬೇಕರ್

ʼʼಸಂಘರ್ಷ ಪೀಡಿತ ಮಣಿಪುರಲ್ಲಿ ಶಾಂತಿ ಪುನಃಸ್ಥಾಪಿಸಲು ಆರ್‌ಎಸ್‌ಎಸ್‌ ಶ್ರಮಿಸುತ್ತಿದೆ. ಮೈತೇಯಿ, ಕುಕಿ ಸೇರಿದಂತೆ ಇತರ ಸಮುದಾಯಗಳ ನಡುವೆ ಮಾತುಕತೆ ನಡೆಸುತ್ತಿದೆʼʼ ಎಂದು ಆರ್‌ಎಸ್‌ಎಸ್‌ನ ಅಖಿಲ ಭಾರತೀಯ ಪ್ರಚಾರ್‌ ಪ್ರಮುಖ್ ಸುನೀಲ್‌ ಅಂಬೇಕರ್ ತಿಳಿಸಿದರು. ಆರ್‌ಎಸ್‌ಎಸ್‌ ಮುಖಂಡ ಅನಿಲ್‌ ಅಗರ್ವಾಲ್‌ ಅವರೊಂದಿಗೆ ನಡೆಸಿದ ಜಂಟಿ ಸುದ್ದಿಗೋಷ್ಠಿ ವೇಳೆ ಅವರು ವಿವಿಧ ವಿಚಾರಗಳ ಬಗ್ಗೆ ಮಾತನಾಡಿದರು.

ಮಣಿಪುರದಲ್ಲಿ‌ ಶಾಂತಿ ಸ್ಥಾಪಿಸಲು ಆರ್‌ಎಸ್‌ಎಸ್‌ ಶ್ರಮ

Profile Ramesh B Jul 7, 2025 7:07 PM

ಹೊಸದಿಲ್ಲಿ: ʼʼಸಂಘರ್ಷ ಪೀಡಿತ ಮಣಿಪುರಲ್ಲಿ ಶಾಂತಿ ಪುನಃಸ್ಥಾಪಿಸಲು ಆರ್‌ಎಸ್‌ಎಸ್‌ (RSS) ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ. ಮೈತೇಯಿ, ಕುಕಿ ಸೇರಿದಂತೆ ಇತರ ಸಮುದಾಯಗಳ ನಡುವೆ ಮಾತುಕತೆ ನಡೆಸುತ್ತಿದ್ದಾರೆ. ಇದಕ್ಕೆ ಸಕಾರಾತ್ಮಕ ಪ್ರಕ್ರಿಯೆ ಲಭಿಸುತ್ತಿದ್ದರೂ ಪರಿಸ್ಥಿತಿ ಸಂಪೂರ್ಣ ಸಾಮಾನ್ಯ ಸ್ಥಿತಿಗೆ ಬರಲು ಇನ್ನೂ ಹೆಚ್ಚಿನ ಸಮಯ ಬೇಕಾಬಹುದುʼʼ ಎಂದು ಆರ್‌ಎಸ್‌ಎಸ್‌ನ ಅಖಿಲ ಭಾರತೀಯ ಪ್ರಚಾರ್‌ ಪ್ರಮುಖ್ ಸುನೀಲ್‌ ಅಂಬೇಕರ್ (Sunil Ambekar) ಹೇಳಿದರು. ಆರ್‌ಎಸ್‌ಎಸ್‌ ಮುಖಂಡ ಅನಿಲ್‌ ಅಗರ್ವಾಲ್‌ ಅವರೊಂದಿಗೆ ನಡೆಸಿದ ಜಂಟಿ ಸುದ್ದಿಗೋಷ್ಠಿ ವೇಳೆ ಅವರು ವಿವಿಧ ವಿಚಾರಗಳ ಬಗ್ಗೆ ಮಾತನಾಡಿದರು.

ಸಮಾಜದ ವಿವಿಧ ವರ್ಗಗಳನ್ನು ಒಳಗೊಂಡಂತೆ ಎಲ್ಲರನ್ನೂ ಸೇರಿಸಿಕೊಳ್ಳುವ ಯೋಜನೆಯನ್ನು ಆರ್‌ಎಸ್‌ಎಸ್ ಜಾರಿಗೆ ತರುತ್ತಿದೆ. ವಿವಿಧ ರಾಜ್ಯಗಳ ಜನರು ಈ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇದು ಬೆಳೆಯುತ್ತಿರುವ ನಂಬಿಕೆ ಮತ್ತು ವಿಶಾಲ ಸಾಮಾಜಿಕ ಸಂಪರ್ಕವನ್ನು ಪ್ರತಿಬಿಂಬಿಸುತ್ತದೆ ಎಂದು ಆರ್‌ಎಸ್‌ಎಸ್ ಪ್ರಚಾರಕರು ಆಶಾಭಾವ ವ್ಯಕ್ತಪಡಿಸಿದರು.



ಸಂವಿಧಾನದಲ್ಲಿ ʼಸಮಾಜವಾದಿʼ ಮತ್ತು ʼಜಾತ್ಯತೀತʼ ಪದಗಳ ಸೇರ್ಪಡೆ ಕುರಿತು ಮಾತನಾಡಿನಾಡಿದ ಸುನೀಲ್‌ ಅಂಬೇಕರ್, "ತುರ್ತು ಪರಿಸ್ಥಿತಿ ವೇಳೆ ಪ್ರಜಾಪ್ರಭುತ್ವ ಮೌಲ್ಯಗಳನ್ನು ಹತ್ತಿಕ್ಕಲಾಯಿತಲ್ಲದೆ ಸಂವಿಧಾನದಲ್ಲಿ ಅನಗತ್ಯ ತಿದ್ದುಪಡಿಗಳನ್ನು ಮಾಡಲಾಯಿತು" ಎಂದು ಹೇಳಿದರು. ತುರ್ತು ಪರಿಸ್ಥಿತಿ ಎಂಬ ಪ್ರಜಾಪ್ರಭುತತ್ವದ ಕರಾಳ ಅಧ್ಯಾಯವನ್ನು ಯುವ ಜನತೆ ಅರ್ಥ ಮಾಡಿಕೊಳ್ಳಬೇಕು ಎಂದು ಆರ್‌ಎಸ್‌ಎಸ್‌ ಮುಖಂಡರು ಕರೆ ನೀಡಿದರು.

ಈ ಸುದ್ದಿಯನ್ನೂ ಓದಿ: Boycott Turkey: ನಿಷೇಧ ಪ್ರಶ್ನಿಸಿ ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ್ದ ಟರ್ಕಿಗೆ ಭಾರೀ ಮುಖಭಂಗ; ಅರ್ಜಿ ವಜಾ ಆದೇಶ

ಭಾಷಾ ನೀತಿಯ ಬಗ್ಗೆ ಆರ್‌ಎಸ್‌ಎಸ್‌ ನಿಲುವು

ಸದ್ಯ ದೇಶದಲ್ಲಿ ಭುಗಿಲೆದ್ದಿರುವ ಭಾಷಾ ವಿವಾದದ ಬಗ್ಗೆಯೂ ಸುನೀಲ್‌ ಮಾತನಾಡಿದರು. ʼʼಆರ್‌ಎಸ್‌ಎಸ್‌ ದೇಶದ ಎಲ್ಲ ಭಾಷೆಗಳನ್ನು ರಾಷ್ಟ್ರೀಯ ಭಾಷೆ ಎಂದು ಪರಿಗಣಿಸಿದೆ. ಸಾರ್ವಜನಿಕರು ತಮ್ಮ ಪ್ರದೇಶದಲ್ಲಿ ಪ್ರಚಲಿತದಲ್ಲಿರುವ ಭಾಷೆಯನ್ನು ಮಾತನಾಡಬೇಕು. ಪ್ರಾಥಮಿಕ ಶಿಕ್ಷಣವನ್ನು ಮಾತೃ ಭಾಷೆಯಲ್ಲಿಯೇ ನೀಡಬೇಕುʼʼ ಎಂದು ಅವರು ಪ್ರತಿಪಾದಿಸಿದರು.

ʼʼಆರ್‌ಎಸ್‌ಎಸ್ ಮೇಲೆ ನಿಷೇಧ ಹೇರುವ ಪ್ರಯತ್ನಗಳು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಯ್ತು. ಬಳಿಕ ಆರ್‌ಎಸ್‌ಎಸ್‌ ನಿಷೇಧಿಸುವ ನಿರ್ಧಾರ ಹಿಂಪಡೆಯಲಾಯಿತು. ಯಾಕೆಂದರೆ ನಿಷೇಧವು ಕಾನೂನು ಸಮ್ಮತವಾಗಿರಲಿಲ್ಲʼʼ ಎಂದು ಸುನೀಲ್‌ ಹೇಳಿದರು.

ಪಂಚ ಪರಿವರ್ತನ

ʼʼಪಂಚ ಪರಿವರ್ತನ ಯೋಜನೆಯಡಿ ಆರ್‌ಎಸ್‌ಎಸ್ 5 ಪ್ರಮುಖ ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸುವ ಗುರಿಯನ್ನು ಹೊಂದಿದೆ: ಆರ್ಥಿಕ ಸ್ವಾವಲಂಬನೆಯನ್ನು ಮುನ್ನಡೆಸುವುದು, ವೈಯಕ್ತಿಕ ಯೋಗಕ್ಷೇಮವನ್ನು ಉತ್ತೇಜಿಸುವುದು, ಮೌಲ್ಯಾಧಾರಿತ ಜೀವನವನ್ನು ಪೋಷಿಸುವುದು, ಸಾಮಾಜಿಕ ಕಲ್ಯಾಣವನ್ನು ಬಲಪಡಿಸುವುದು ಮತ್ತು ಸಮಗ್ರ ಆರ್ಥಿಕ ಬೆಳವಣಿಗೆಯನ್ನು ಖಚಿತಪಡಿಸುವುದು-ಇವೇ ಆ 5 ಅಂಶಗಳು. ಆರ್‌ಎಸ್‌ಎಸ್ ಶತಮಾನೋತ್ಸವದ ಪ್ರಮುಖ ಧ್ಯೇಯ ಬೃಹತ್ ಪ್ರಮಾಣದಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುವುದು, ಸಮಾಜದ ಪ್ರತಿಯೊಂದು ಹಂತದಲ್ಲಿಯೂ ಸಂಪರ್ಕವನ್ನು ಖಚಿತಪಡಿಸುವುದು ಮತ್ತು ರಾಷ್ಟ್ರೀಯ ಏಕೀಕರಣವನ್ನು ಬೆಳೆಸುವುದುʼʼ ಎಂದು ಅವರು ವಿವರಿಸಿದರು.

ʼʼಆರ್‌ಎಸ್‌ಎಸ್ ದೇಶಾದ್ಯಂತ 1 ಲಕ್ಷಕ್ಕೂ ಹೆಚ್ಚು ಹಿಂದೂ ಸಮ್ಮೇಳನಗಳನ್ನು ಆಯೋಜಿಸಲಿದೆ. ಕಳೆದ ವರ್ಷ ಮೇ ಮತ್ತು ಜೂನ್‌ನಲ್ಲಿ ಆರ್‌ಎಸ್‌ಎಸ್ 100ಕ್ಕೂ ಹೆಚ್ಚು ಸಂಘ ಪ್ರಶಿಕ್ಷಣ ವರ್ಗ(ತರಬೇತಿ ಶಿಬಿರಗಳು) ನಡೆಸಿದೆ. ಅವುಗಳಲ್ಲಿ 75ರಷ್ಟನ್ನು 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗಾಗಿ ನಡೆಸಲಾಗಿದೆ. ಒಟ್ಟು 17,609 ಸ್ವಯಂಸೇವಕರು ಈ ಶಿಬಿರಗಳಲ್ಲಿ ಭಾಗವಹಿಸಿದ್ದಾರೆ. 40–60 ವಯಸ್ಸಿನ 4,270 ಸ್ವಯಂಸೇವಕರಿಗೆ ತರಬೇತಿ ನೀಡಲಾಯಿತುʼʼ ಎಂದು ಆರ್‌ಎಸ್‌ಎಸ್‌ ಮುಖಂಡರು ವಿವರಿಸಿದರು.