ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

PM Modi: ಶೀಘ್ರದಲ್ಲೇ ಚೀನಾಕ್ಕೆ ನೇರ ವಿಮಾನಯಾನ, ಕೈಲಾಸ ಮಾನಸ ಸರೋವರ ಯಾತ್ರೆ ಪುನರಾರಂಭ: ಪ್ರಧಾನಿ ಮೋದಿ

ಸುಮಾರು ಒಂದು ಗಂಟೆ ಕಾಲ ನಡೆದ ಈ ಸಭೆಯ ಸಂದರ್ಭದಲ್ಲಿ ಭಾರತದ ಕಡೆಯಿಂದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಕೂಡ ಹಾಜರಿದ್ದರು. ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಸಭೆಯಲ್ಲಿ ಭಾಗವಹಿಸಿದ್ದರು.

ಕೈಲಾಸ ಮಾನಸ ಸರೋವರ ಯಾತ್ರೆ ಪುನರಾರಂಭ: ಪ್ರಧಾನಿ ಮೋದಿ

-

Abhilash BC Abhilash BC Aug 31, 2025 10:59 AM

ಟಿಯಾನ್‌ಜಿನ್‌ (ಚೀನಾ): ಭಾನುವಾರ ಶಾಂಘೈ ಸಹಕಾರ ಸಂಘಟನೆಯ (SCO) ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ(PM Modi) ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್(Xi Jinping) ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು. ಬಳಿಕ ಮಾತನಾಡಿದ ಮೋದಿ, "ಕೈಲಾಸ ಮಾನಸ ಸರೋವರ ಯಾತ್ರೆ"(Kailash Mansarovar Yatra) ಪುನರಾರಂಭಗೊಂಡಿದೆ ಎಂದರು. ಜತೆಗೆ ಎರಡೂ ದೇಶಗಳ ನಡುವೆ ನೇರ ವಿಮಾನಯಾನವೂ ಆರಂಭವಾಗುತ್ತಿದೆ. ನಮ್ಮ ರಾಷ್ಟ್ರಗಳ ನಡುವಿನ ಸಹಕಾರದೊಂದಿಗೆ, 2.8 ಶತಕೋಟಿ ಜನರ ಹಿತಾಸಕ್ತಿಗಳು ಸಂಬಂಧ ಹೊಂದಿವೆ. ಇದು ಮಾನವೀಯತೆಗೆ ಅಗತ್ಯವಾಗಿದೆ ಎಂದು ಹೇಳಿದರು.

ಸುಮಾರು ಒಂದು ಗಂಟೆ ಕಾಲ ನಡೆದ ಈ ಸಭೆಯ ಸಂದರ್ಭದಲ್ಲಿ ಭಾರತದ ಕಡೆಯಿಂದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಕೂಡ ಹಾಜರಿದ್ದರು. ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಸಭೆಯಲ್ಲಿ ಭಾಗವಹಿಸಿದ್ದರು.



ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗಿನ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ಮೋದಿ, "ಪರಸ್ಪರ ನಂಬಿಕೆ, ಗೌರವ ಮತ್ತು ಸೂಕ್ಷ್ಮತೆಯ ಆಧಾರದ ಮೇಲೆ ನಮ್ಮ ಸಂಬಂಧವನ್ನು ಮುಂದಕ್ಕೆ ಕೊಂಡೊಯ್ಯಲು ನಾವು ದೃಢನಿಶ್ಚಯ ಹೊಂದಿದ್ದೇವೆ. SCO ಶೃಂಗಸಭೆಯ ಯಶಸ್ವಿ ಆತಿಥ್ಯಕ್ಕಾಗಿ ನಾವು ನಮ್ಮ ಶುಭಾಶಯಗಳನ್ನು ಸಲ್ಲಿಸುತ್ತೇವೆ ಮತ್ತು ಈ ಭೇಟಿ ಮತ್ತು ಈ ಸಭೆಗೆ ಆಹ್ವಾನಕ್ಕಾಗಿ ನಾನು ನಿಮಗೆ(ಜಿನ್‌ಪಿಂಗ್) ಧನ್ಯವಾದ ಸಲ್ಲಿಸುತ್ತೇನೆ ಎಂದು ಮೋದಿ ಹೇಳಿದರು.

2019ರ ಗಲ್ವಾನ್‌ ಸಂಘರ್ಷದ ಬಳಿಕ ಭಾರತ- ಚೀನಾ ಸಂಬಂಧ ಪೂರ್ಣ ಹಳಸಿತ್ತು. ಪರಿಸ್ಥಿತಿ ಯುದ್ಧದವರೆಗೂ ತಲುಪಿತ್ತು. ಬಳಿಕ ಉಭಯ ದೇಶಗಳು ನೇರ ವಿಮಾನ, ಪ್ರವಾಸಿ ವೀಸಾ ವಿತರಣೆ ಸ್ಥಗಿತಗೊಳಿಸಿದ್ದವು. ಅಗತ್ಯ ವಸ್ತು ಪೂರೈಕೆ ರದ್ದಾಗಿತ್ತು. ಇದೀಗ ಉಭಯ ರಾಷ್ಟ್ರಗಳ ನಡುವೆ ಮತ್ತೆ ಹಿಂದಿನಂತೆ ವ್ಯಾಪಾರ ಸಂಬಂಧ ಪುನರಾರಂಭಗೊಂಡಿದೆ.

ಇದನ್ನೂ ಓದಿ Narendra Modi: ಒಂದೇ ವೇದಿಕೆಯಲ್ಲಿ ಮೋದಿ-ಪುಟಿನ್-ಜಿನ್ ಪಿಂಗ್‌; ಮಹತ್ವದ ಚರ್ಚೆ ಸಾಧ್ಯತೆ