ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಯುನೆಸ್ಕೋ ವಿಶ್ವ ಪರಂಪರೆ ತಾಣ ಪಟ್ಟಿಗೆ ಸಾರನಾಥ ಸೇರ್ಪಡೆ; ಇದೊಂದು ಹೆಮ್ಮೆಯ ಕ್ಷಣ ಎಂದ ಪ್ರಧಾನಿ ಮೋದಿ

ಉತ್ತರ ಪ್ರದೇಶದ ಪ್ರಾಚೀನ ಬೌದ್ಧ ತಾಣವಾದ 'ಸಾರಾನಾಥ' ವನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ಗುರುತಿಸಲಾಗಿದೆ. ಈ ಮೂಲಕ ಇದು ಭಾರತದ 45ನೇ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ. ಈ ಕುರಿತು ಸಾಮಾಜಿಕ ಮಾಧ್ಯಮದ ಎಕ್ಸ್ ಖಾತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹರ್ಷ ವ್ಯಕ್ತ ಪಡಿಸಿ ಇದೊಂದು ಹೆಮ್ಮೆಯ ಕ್ಷಣ ಎಂದು ಬಣ್ಣಿಸಿದ್ದಾರೆ.

ಸಂಗ್ರಹ ಚಿತ್ರ

ನವದೆಹಲಿ: ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ (UNESCO World Heritage List) ಉತ್ತರ ಪ್ರದೇಶದ (Uttar Pradesh) ಪ್ರಾಚೀನ ಬೌದ್ಧ ತಾಣ ಸಾರನಾಥವನ್ನು (Sarnath) ಸೇರ್ಪಡೆಗೊಳಿಸಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಹರ್ಷ ವ್ಯಕ್ತಪಡಿಸಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಮಾಧ್ಯಮದ ಖಾತೆಯಾದ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಇದೊಂದು ಹೆಮ್ಮೆಯ ಕ್ಷಣ ಎಂದು ಬಣ್ಣಿಸಿದ್ದಾರೆ. ದಕ್ಷಿಣ ಕೊರಿಯಾದ ಬುಸಾನ್‌ನಲ್ಲಿ ನಡೆದ ವಿಶ್ವ ಪರಂಪರೆಯ ಸಮಿತಿಯ 48ನೇ ಅಧಿವೇಶನದಲ್ಲಿ ಭಾರತದ 45ನೇ ವಿಶ್ವ ಪರಂಪರೆಯ ತಾಣವಾಗಿ ಸಾರನಾಥವನ್ನು ಗುರುತಿಸಲಾಯಿತು.

ಯುನೆಸ್ಕೋ ಕೂಡ ತನ್ನ ನಿರ್ಧಾರವನ್ನು ಸಾಮಾಜಿಕ ಮಾಧ್ಯಮದ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಹೊಸ ಶಾಸನ: ಭಾರತದ ಸಾರನಾಥದ ಪ್ರಾಚೀನ ಬೌದ್ಧ ತಾಣ ಎಂದು ಹೇಳಿದೆ. ಈ ಮೂಲಕ ಸಾರನಾಥವನ್ನು ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಭಾರತದ 45 ನೇ ತಾಣವನ್ನಾಗಿ ಗುರುತಿಸಿದೆ.

ಬಾಲ್ಯದಲ್ಲೇ ಆರ್‌ಎಸ್‌ಎಸ್‌ಗೆ ಎಂಟ್ರಿ, ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ರಾಷ್ಟ್ರ ಧ್ವಜ ಹಾರಿಸಿ ಕ್ರಾಂತಿ: ನೂತನ ಶಿಕ್ಷಣ ಸಚಿವ ಪ್ರಲ್ಹಾದ್‌ ಜೋಶಿಯ ಅಪರೂಪದ ಪಾಲಿಟಿಕಲ್‌ ಜರ್ನಿ ಇದು



ಸಾರನಾಥ ತಾಣಕ್ಕೆ ಸಿಕ್ಕಿರುವ ಮನ್ನಣೆಗೆ ಹರ್ಷ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಇದೊಂದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಕ್ಷಣ ಎಂದು ಹೇಳಿದರು. ಉತ್ತರ ಪ್ರದೇಶದ ಸಾರನಾಥವನ್ನು ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಅವರು ತಮ್ಮ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

ಬುದ್ಧನೊಂದಿಗೆ ಆಳವಾದ ಸಂಪರ್ಕ ಹೊಂದಿರುವ ಸಾರನಾಥವುಬುದ್ಧನ ಬುದ್ಧಿವಂತಿಕೆ, ಕರುಣೆ ಮತ್ತು ಸಾಮರಸ್ಯದ ಕಾಲಾತೀತ ಸಂದೇಶವಾಗಿ ಜಗತ್ತಿಗೆ ಸ್ಫೂರ್ತಿ ನೀಡುತ್ತಿದೆ. ಇದಕ್ಕೆ ಯುನೆಸ್ಕೋ ಮನ್ನಣೆ ನೀಡಿರುವುದು ಭಾರತದ ನಾಗರಿಕತೆ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಗೌರವಿಸಿದಂತಾಗಿದೆ. ಇದರಿಂದ ವಿಶ್ವದ ಮೂಲೆ ಮೂಲೆಯಿಂದ ಜನರು ಇಲ್ಲಿಗೆ ಬರಲು ಭಗವಾನ್ ಬುದ್ಧನ ಆದರ್ಶಗಳೊಂದಿಗೆ ಸಂಪರ್ಕ ಸಾಧಿಸಲು ಪ್ರೇರಣೆ ನೀಡಿದಂತಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ವಾರಣಾಸಿಯಿಂದ ಸುಮಾರು 10 ಕಿಲೋ ಮೀಟರ್ ದೂರದಲ್ಲಿರುವ ಸಾರನಾಥವು ಗೌತಮ ಬುದ್ಧ ತನ್ನ ಮೊದಲ ಧರ್ಮೋಪದೇಶ ನೀಡಿದ ಸ್ಥಳವಾಗಿದೆ. ವಿಶ್ವದ ನಾಲ್ಕು ಪ್ರಮುಖ ಬೌದ್ಧ ಯಾತ್ರಾ ಸ್ಥಳಗಳಲ್ಲಿ ಇದು ಒಂದಾಗಿದೆ. ಸಾರನಾಥವು ಅಶೋಕ ಸ್ತಂಭಕ್ಕೆ ಹೆಸರುವಾಸಿಯಾಗಿದೆ. ಇದು ಭಾರತದ ಮಹಾನ್ ಚಕ್ರವರ್ತಿ ಅಶೋಕನ ಆಳ್ವಿಕೆಯ ಗುರುತಾಗಿದೆ.

ಜಪಾನ್‌ ಪ್ರವಾಸದ ಅಪೂರ್ವ ಅನುಭವಕ್ಕೆ ಅಡಿಗಾಸ್‌ ಯಾತ್ರಾ ಸಾಥ್

ಅಶೋಕನ ಕಾಲದಲ್ಲಿ ಅನೇಕ ಸ್ತೂಪಗಳನ್ನು ಕಟ್ಟಿಸಿದ್ದು, ಇದರಲ್ಲಿ ಒಂದು ಸ್ತೂಪ ಸಾರನಾಥದಲ್ಲಿದೆ. ಇದು ನಾಲ್ಕು ಸಿಂಹಗಳು ಮತ್ತು ಬೌದ್ಧ ಬೋಧನೆಗಳನ್ನು ಪ್ರತಿನಿಧಿಸುವ ಧರ್ಮ ಚಕ್ರವನ್ನು ಒಳಗೊಂಡಿದ್ದು, ಭಾರತದ ರಾಷ್ಟ್ರೀಯ ಲಾಂಛನವನ್ನು ಇದರಿಂದಲೇ ಆಯ್ಕೆ ಮಾಡಲಾಗಿದೆ.

ವಿದ್ಯಾ ಇರ್ವತ್ತೂರು

View all posts by this author