ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Varanasi Movie: ‘ವಾರಣಾಸಿ’ಯ ಪ್ರಿಯಾಂಕಾ ಚೋಪ್ರಾ ಲುಕ್ ಪೋಸ್ಟರ್ ಔಟ್‌!

Varanasi Movie: ಈ ಹಿಂದೆ ಪ್ರಿಯಾಂಕಾ ಚೋಪ್ರಾ ಹಳದಿ ಬಣ್ಣದ ಸೀರೆಯುಟ್ಟು ಸಖತ್ ಸ್ಟೈಲ್ ಆಗಿ ಗನ್ ಫೈರ್ ಮಾಡುತ್ತಿರುವ ಪೋಸ್ಟರ್ (Poster) ಅನ್ನು ಬಿಡುಗಡೆ ಮಾಡಲಾಗಿತ್ತು. ಆದರೆ ಈ ಬಿಡುಗಡೆ ಮಾಡಿರುವ ಲುಕ್ ಸಖತ್ ಭಿನ್ನವಾಗಿದೆ. ಉಗ್ರ ಪಾತ್ರ’ ಎಂದು ರಾಜಮೌಳಿ (Rajamouli) ಬಣ್ಣಿಸಿದ್ದಾರೆ. ಈಗ ಬಿಡುಗಡೆ ಮಾಡಿರುವ ಪೋಸ್ಟರ್​​ನಲ್ಲಿ ಪ್ರಿಯಾಂಕಾ ಕಪ್ಪು ಬಣ್ಣದ ವಾರಿಯರ್ ರೀತಿಯ ಉಡುಗೆ ತೊಟ್ಟು, ಮೊನಚಾದ ಲುಕ್ ನೀಡುತ್ತಿದ್ದಾರೆ. ‘

‘ವಾರಣಾಸಿ’ಯ ಪ್ರಿಯಾಂಕಾ ಚೋಪ್ರಾ ಲುಕ್ ಪೋಸ್ಟರ್ ಔಟ್‌!

ವಾರಣಾಸಿ ಸಿನಿಮಾ -

Yashaswi Devadiga
Yashaswi Devadiga Jul 18, 2026 5:37 PM

ಪ್ರಿಯಾಂಕಾ ಚೋಪ್ರಾ (Priyanka Chopra) ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ , 'ವಾರಣಾಸಿ'ಯ ಸಿನಿಮಾದಿಂದ ಬಿಗ್‌ ಅಪ್‌ಡೇಟ್‌ ಹೊರಬಂದಿದೆ. ಮಂದಾಕಿನಿ ಪಾತ್ರದಲ್ಲಿ ಪ್ರಿಯಾಂಕಾ ಚೋಪ್ರಾ ಮಿಂಚಿದ್ದಾರೆ. ಈ ಹಿಂದೆ ಪ್ರಿಯಾಂಕಾ ಚೋಪ್ರಾ ಹಳದಿ ಬಣ್ಣದ ಸೀರೆಯುಟ್ಟು ಸಖತ್ ಸ್ಟೈಲ್ ಆಗಿ ಗನ್ ಫೈರ್ ಮಾಡುತ್ತಿರುವ ಪೋಸ್ಟರ್ (Poster) ಅನ್ನು ಬಿಡುಗಡೆ ಮಾಡಲಾಗಿತ್ತು. ಆದರೆ ಈ ಬಿಡುಗಡೆ ಮಾಡಿರುವ ಲುಕ್ ಸಖತ್ ಭಿನ್ನವಾಗಿದೆ. ಉಗ್ರ ಪಾತ್ರ’ ಎಂದು ರಾಜಮೌಳಿ (Rajamouli) ಬಣ್ಣಿಸಿದ್ದಾರೆ. ಈಗ ಬಿಡುಗಡೆ ಮಾಡಿರುವ ಪೋಸ್ಟರ್​​ನಲ್ಲಿ ಪ್ರಿಯಾಂಕಾ ಕಪ್ಪು ಬಣ್ಣದ ವಾರಿಯರ್ ರೀತಿಯ ಉಡುಗೆ ತೊಟ್ಟು, ಮೊನಚಾದ ಲುಕ್ ನೀಡುತ್ತಿದ್ದಾರೆ. ‘ಆಕೆ ನಕ್ಕರೆ ಬೆಡಗು, ನಗದಿದ್ದರೆ ಬೆಂಕಿ’ ಎಂದು ಬರೆದಿದ್ದಾರೆ ರಾಜಮೌಳಿ.

ಲುಕ್ ಅಷ್ಟು ಭಿನ್ನ

ಹೊಸ ಲುಕ್‌ನಲ್ಲಿ ಅವರು ಸಂಪೂರ್ಣ ಕಪ್ಪು ಬಣ್ಣದ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ, ಬಿಡುಗಡೆ ಮಾಡಿರುವ ಲುಕ್ ನೋಡಿದರೆ ಪ್ರಿಯಾಂಕಾ ಚೋಪ್ರಾ ವಿಲನ್ ಗ್ಯಾಂಗಿನ ಸದಸ್ಯೆ ಇರಬಹುದಾ ಎಂಬ ಅನುಮಾನ ಮೂಡುತ್ತಿದೆ. ಏಕೆಂದರೆ ಅವರ ಲುಕ್ ಅಷ್ಟು ಭಿನ್ನವಾಗಿ, ಸಖತ್ ಖಡಕ್ ಆಗಿಯೂ ಇದೆ. . ‘ಆಕೆ ನಕ್ಕರೆ ಬೆಡಗು, ನಗದಿದ್ದರೆ ಬೆಂಕಿ’ ಎಂದು ಬರೆದಿದ್ದಾರೆ ರಾಜಮೌಳಿ. ಪ್ರಿಯಾಂಕಾ ಚೋಪ್ರಾ ಅವರ ಎರಡು ಚಿತ್ರಗಳನ್ನು ರಾಜಮೌಳಿ ಹಂಚಿಕೊಂಡಿದ್ದಾರೆ.ಒಂದರಲ್ಲಿ ಪ್ರಿಯಾಂಕಾ ಮೊನಚಾದ ಲುಕ್ ನೀಡುತ್ತಾ ಉಗ್ರವಾಗಿ ಕಂಡರೆ ಮತ್ತೊಂದರಲ್ಲಿ ನಗುತ್ತಾ, ಕುಣಿಯುತ್ತಾ ಸುಂದರವಾಗಿ ಕಾಣುತ್ತಿದ್ದಾರೆ.

ಇದನ್ನೂ ಓದಿ: Amitabh Bachchan: ಹೊಸ ಥೀಮ್‌ನೊಂದಿಗೆ ಬರ್ತಿದೆ ʻKaun Banega Crorepatiʼ! ಈ ಬಾರಿ ವಿಶೇಷತೆ ಏನು?

೨೦೧೯ ರ 'ದಿ ಸ್ಕೈ ಈಸ್ ಪಿಂಕ್' ನಂತರ ಚೋಪ್ರಾ ಅವರ ಮೊದಲ ಭಾರತೀಯ ಚಿತ್ರಮಂದಿರ ಬಿಡುಗಡೆ 'ವಾರಣಾಸಿ' ಚಿತ್ರದಲ್ಲಿ ಅವರು ಮಹೇಶ್ ಬಾಬು ಜೊತೆ ರುದ್ರ ಪಾತ್ರದಲ್ಲಿ ನಟಿಸಲಿದ್ದಾರೆ. ರಾಮಾಯಣ ಯುದ್ಧವನ್ನು ಚಿತ್ರಿಸುವ ಈ ಚಿತ್ರದಲ್ಲಿ ೨೦ ನಿಮಿಷಗಳ ಒಂದು ವದಂತಿಯ ಸನ್ನಿವೇಶದಲ್ಲಿ ಅವರು ರಾಮನ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ .ಮಲಯಾಳಂ ತಾರೆ ಪೃಥ್ವಿರಾಜ್ ಸುಕುಮಾರನ್ ಈ ಚಿತ್ರದ ಪ್ರಮುಖ ಪ್ರತಿಸ್ಪರ್ಧಿ ಕುಂಭನ ಪಾತ್ರವನ್ನು ನಿರ್ವಹಿಸುತ್ತಾರೆ.



ಎಸ್.ಎಸ್. ರಾಜಮೌಳಿ ಅವರ 'ವಾರಣಾಸಿ' ಚಿತ್ರ

'RRR' ಚಿತ್ರದ ಜಾಗತಿಕ ಯಶಸ್ಸಿನ ನಂತರ ರಾಜಮೌಳಿ ಅವರ ಮೊದಲ ಮೂಲ ಚಿತ್ರ 'ವಾರಣಾಸಿ'. ಚಲನಚಿತ್ರ ನಿರ್ಮಾಪಕರ ಇತ್ತೀಚಿನ ಚಿತ್ರವನ್ನು "ಪ್ರಾಚೀನ ನಾಗರಿಕತೆಗಳಿಂದ ಇಂದಿನವರೆಗೆ ಸಾವಿರಾರು ವರ್ಷಗಳ ಕಾಲ ಬಹು ಖಂಡಗಳಲ್ಲಿ ವ್ಯಾಪಿಸಿರುವ ಒಂದು ಮಹಾಕಾವ್ಯ, ಆಕ್ಷನ್-ಸಾಹಸ" ಎಂದು ವಿವರಿಸಲಾಗಿದೆ, ಪಾತ್ರಗಳು ಅಂಟಾರ್ಕ್ಟಿಕಾ, ಆಫ್ರಿಕಾ ಮತ್ತು ಪವಿತ್ರ ನಗರವಾದ ವಾರಣಾಸಿಯನ್ನು ದಾಟಿ ಹೋಗುತ್ತವೆ."ಈ ಚಿತ್ರವು ಏಪ್ರಿಲ್ 7, 2027 ರಂದು ವಿಶ್ವಾದ್ಯಂತ ಥಿಯೇಟ್ರಿಕಲ್ ಬಿಡುಗಡೆಗೆ ಸಿದ್ಧವಾಗಿದೆ.

ಇದನ್ನೂ ಓದಿ: Amruthadhaare Serial: ಗೌತಮ್ - ಭೂಮಿಕಾಗೆ ವಿಧಿಯ ಸವಾಲು! ಮಲ್ಲಿ ಖಡಕ್ ಮಾತಿಗೆ ಶಕುಂತಲಾ ಶಾಕ್‌

ಪ್ರಿಯಾಂಕ ಇತ್ತೀಚೆಗಷ್ಟೆ ಅವರ ನಟನೆಯ ‘ದಿ ಬ್ಲಫ್’ ಹೆಸರಿನ ಹಾಲಿವುಡ್ ಆಕ್ಷನ್ ಸಿನಿಮಾ ಬಿಡುಗಡೆ ಆಗಿತ್ತು. ಇದೀಗ ಅವರು ‘ಆಮ್ರಿ’ ಹೆಸರಿನ ಮತ್ತೊಂದು ಹಾಲಿವುಡ್ ಸಿನಿಮಾನಲ್ಲಿ ನಟಿಸುತ್ತಿದ್ದಾರೆ.