ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಅಣ್ಣ-ತಂಗಿಯ ನಡುವೆ ಪ್ರೇಮ ಸಂಬಂಧವಿತ್ತಾ? ಆತ್ಮಹತ್ಯೆ ಪ್ರಕರಣದ ಬಗ್ಗೆ ಸತ್ಯ ಬಿಚ್ಚಿಟ್ಟ ಪೊಲೀಸರು

Self harming case: ಉತ್ತರ ಪ್ರದೇಶದ ಕಾನ್ಪುರದಲ್ಲಿ 20 ವರ್ಷದ ಯುವಕ ಮತ್ತು 18 ವರ್ಷದ ಸೋದರ ಸಂಬಂಧಿ ತಂಗಿ ಆತ್ಮಹತ್ಯೆ ಮಾಡಿಕೊಂಡ ಘಟನೆಯಿಂದ ಊಹಾಪೋಹಗಳು ಹರಡಿವೆ. ಯುವಕ ತನ್ನ ಮನೆಯಲ್ಲಿ ಬುಧವಾರ ರಾತ್ರಿ ನೇಣಿಗೆ ಶರಣಾದ ಕೆಲವೇ ಗಂಟೆಗಳಲ್ಲಿ, ಗುರುವಾರ ಬೆಳಗ್ಗೆ ಈ ಸುದ್ದಿ ತಿಳಿದ ಆತನ ತಂಗಿಯೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಘಟನೆಯಿಂದ ಸ್ಥಳೀಯರು, ‘ಅಣ್ಣ-ತಂಗಿಯ ನಡುವೆ ಪ್ರೇಮ ಸಂಬಂಧವಿತ್ತೇ?’ ಎಂದು ಚರ್ಚಿಸತೊಡಗಿದ್ದಾರೆ,

AI ಮೂಲಕ ರಚಿಸಿದ ಚಿತ್ರ

ಕಾನ್ಪುರ: ಉತ್ತರ ಪ್ರದೇಶದ (Uttar Pradesh) ಕಾನ್ಪುರದಲ್ಲಿ (Kanpur) 20 ವರ್ಷದ ಯುವಕ ಮತ್ತು 18 ವರ್ಷದ ಸೋದರ ಸಂಬಂಧಿ ತಂಗಿ ಆತ್ಮಹತ್ಯೆ (Self harming case) ಮಾಡಿಕೊಂಡ ಘಟನೆಯಿಂದ ಊಹಾಪೋಹಗಳು ಹರಡಿವೆ. ಯುವಕ ತನ್ನ ಮನೆಯಲ್ಲಿ ಬುಧವಾರ ರಾತ್ರಿ ನೇಣಿಗೆ ಶರಣಾದ ಕೆಲವೇ ಗಂಟೆಗಳಲ್ಲಿ, ಗುರುವಾರ ಬೆಳಗ್ಗೆ ಈ ಸುದ್ದಿ ತಿಳಿದ ಆತನ ತಂಗಿಯೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಘಟನೆಯಿಂದ ಸ್ಥಳೀಯರು, ‘ಅಣ್ಣ-ತಂಗಿಯ ನಡುವೆ ಪ್ರೇಮ ಸಂಬಂಧವಿತ್ತೇ?’ ಎಂದು ಚರ್ಚಿಸತೊಡಗಿದ್ದಾರೆ, ವಿಶೇಷವಾಗಿ ಇತ್ತೀಚಿನ ಕೆಲವು ಅಣ್ಣ ತಂಗಿ ಸಂಬಂಧದಲ್ಲಿದ್ದ ಸುದ್ದಿಗಳು ಬೆಳಕಿಗೆ ಬಂದ ಹಿನ್ನೆಲೆ ಇಂತಾ ಅನುಮಾನ ಮೂಡಿದೆ.

ದೆಹಲಿಯ ಘಾಜಿಯಾಬಾದ್‌ನ ಭೀಕರ ಕೊಲೆ

ಈ ವರ್ಷದ ಜನವರಿಯಲ್ಲಿ ದೆಹಲಿಯ ಘಾಜಿಯಾಬಾದ್‌ನಲ್ಲಿ ಸೂಟ್‌ಕೇಸ್‌ನಲ್ಲಿ ಸುಟ್ಟ ಶವವೊಂದು ಪತ್ತೆಯಾದಾಗ, ದೆಹಲಿ ಪೊಲೀಸರು 22 ವರ್ಷದ ಅಮಿತ್ ಕುಮಾರ್ ಎಂಬಾತನನ್ನು ಬಂಧಿಸಿದರು. ಅಮಿತ್, ತಾನು ತನ್ನ 22 ವರ್ಷದ ಒಡಹುಟ್ಟಿದ ತಂಗಿ ಶಿಲ್ಪಾ ಪಾಂಡೆಯನ್ನು ಕೊಂದಿರುವುದಾಗಿ ಒಪ್ಪಿಕೊಂಡ. ಶಿಲ್ಪಾಳೊಂದಿಗೆ ಒಂದು ವರ್ಷದಿಂದ ಸಂಬಂಧದಲ್ಲಿದ್ದ ಅಮಿತ್, ಆಕೆಯ ಮದುವೆಯ ಒತ್ತಡದಿಂದ ಸಂಬಂಧವನ್ನು ಕೊನೆಗೊಳಿಸಲು ಯತ್ನಿಸಿದ್ದ. ಒಂದು ರಾತ್ರಿ, ಮದ್ಯದ ಅಮಲಿನಲ್ಲಿ ಶಿಲ್ಪಾಳೊಂದಿಗೆ ಜಗಳವಾಡಿದ ಅವನು, ಕೋಪದಲ್ಲಿ ಆಕೆಯನ್ನು ಕೊಂದಿದ್ದ.

ಗುಜರಾತ್‌ನಲ್ಲಿ ಒಡಹುಟ್ಟಿದ ಸಂಬಂಧಕ್ಕಾಗಿ ಗಂಡನ ಕೊಲೆ

ಗಾಂಧಿನಗರದ ಒಬ್ಬ ಮಹಿಳೆ, ಮದುವೆಯಾದ ಕೇವಲ ನಾಲ್ಕು ದಿನಗಳಲ್ಲಿ ತನ್ನ ಗಂಡನನ್ನು ಅಪಹರಿಸಿ ಕೊಲೆ ಮಾಡಿಸಿದ್ದಳು. ಆಕೆ ತನ್ನ ಸೋದರಸಂಬಂಧಿ ಜೊತೆ ಪ್ರೇಮ ಸಂಬಂಧದಲ್ಲಿದ್ದಳು ಎಂದು ಪೊಲೀಸರಿಗೆ ತಿಳಿಸಿದ್ದಾಳೆ. ಆದರೂ, ಆಕೆಯ ಪೋಷಕರು ಆಕೆಯನ್ನು ಬೇರೊಬ್ಬನಿಗೆ ಮದುವೆ ಮಾಡಿದ್ದರಿಂದ, ಆಕೆ ಗಂಡನ ಕೊಲೆಗೆ ಒಡಹುಟ್ಟಿದವರೊಂದಿಗೆ ಸಂಚು ರೂಪಿಸಿದ್ದಳು.

ಈ ಸುದ್ದಿಯನ್ನು ಓದಿ: Crime News: ಬೆತ್ತಲೆ ವ್ಯಕ್ತಿಯಿಂದ ಮೊಬೈಲ್‌ ಅಂಗಡಿ ದರೋಡೆ, ಬೆಂಗಳೂರಿನಲ್ಲಿ ನಡೆದ ಘಟನೆ

ಕಾನ್ಪುರದಲ್ಲಿ 20 ವರ್ಷದ ಯುವಕ ಮತ್ತು 18 ವರ್ಷದ ತಂಗಿಯ ಆತ್ಮಹತ್ಯೆ ಸುದ್ದಿ ಹರಡಿದಾಗ, ಗಾಳಿ ಸುದ್ದಿಗಳು ತೀವ್ರಗೊಂಡವು. ಆಕೆ ಇಂಟರ್ಮೀಡಿಯೇಟ್ ವಿದ್ಯಾರ್ಥಿನಿಯಾಗಿದ್ದರೆ, ಯುವಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿದ್ದ. ಮಾಹಿತಿಯ ಪ್ರಕಾರ, ಬುಧವಾರ ರಾತ್ರಿ ಯುವಕ ತನ್ನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಈ ಸುದ್ದಿ ತಿಳಿದ ಕೆಲವೇ ಗಂಟೆಗಳಲ್ಲಿ, ಗುರುವಾರ ಬೆಳಿಗ್ಗೆ ಆತನ ತಂಗಿಯೂ ಆತ್ಮಹತ್ಯೆಗೆ ಶರಣಾದಳು.

ಡಿಸಿಪಿ ಈಸ್ಟ್ ಸತ್ಯಜೀತ್ ಗುಪ್ತಾ ಮತ್ತು ಎಡಿಸಿಪಿ ಮನೋಜ್ ಕುಮಾರ್ ಪಾಂಡೆ ಅವರು, ಆರಂಭಿಕ ತನಿಖೆಯ ಬಳಿಕ ಈ ಘಟನೆಯ ಕಾರಣವನ್ನು ಸ್ಪಷ್ಟಪಡಿಸಿದ್ದಾರೆ. ಕುಟುಂಬದವರ ಹೇಳಿಕೆಯಂತೆ, “ಆಕೆ ಭಾವನಾತ್ಮಕವಾಗಿ ದುರ್ಬಲವಾಗಿದ್ದಳು, ಇದು ಪ್ರೇಮ ಸಂಬಂಧದ ಪ್ರಕರಣವಲ್ಲ,” ಎಂದು ಎಡಿಸಿಪಿ ತಿಳಿಸಿದ್ದಾರೆ. “ಆಕೆ ಈ ಆಘಾತವನ್ನು ಸಹಿಸಲಾರದೆ ಆತ್ಮಹತ್ಯೆಗೆ ಶರಣಾದಳು” ಎಂದು ಅವರು ಹೇಳಿದ್ದಾರೆ. ಇಬ್ಬರ ಮೃತ ದೇಹ ಗಳನ್ನು ಶವಪರೀಕ್ಷೆಗೆ ಕಳುಹಿಸಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.