ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Fertility scam: IVFಗಾಗಿ ಭಿಕ್ಷುಕರಿಂದ ವೀರ್ಯ ಸಂಗ್ರಹ! ಬಿರಿಯಾನಿ, ಮದ್ಯದ ಆಮಿಷ-7 ಆರೋಪಿಗಳು ಅರೆಸ್ಟ್‌

ಹೈದರಾಬಾದ್‌ನ ಸಿಕಂದರಾಬಾದ್‌ನಲ್ಲಿ ಭಿಕ್ಷುಕರಿಗೆ ಬಿರಿಯಾನಿ, ಸಣ್ಣಪುಟ್ಟ ಕೆಲಸಗಾರರಿಗೆ ಮದ್ಯ, ಸ್ವಲ್ಪ ಓದಿದವರಿಗೆ, ಮಹಿಳೆಯರಿಗೆ ಹಣ ನೀಡಿ ವೀರ್ಯ, ಅಂಡಾಣು ಸಂಗ್ರಹಿಸುತ್ತಿದ್ದ ಇಂಡಿಯನ್ ಸ್ಪರ್ಮ್ ಟೆಕ್ ಕ್ರಯೋಸಿಸ್ಟಮ್ ಕ್ಲಿನಿಕ್ ನಲ್ಲಿ ಕೆಲಸ ಮಾಡುವ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಲಾಗಿದ್ದು, ವಿಚಾರಣೆ ಮುಂದುವರಿಸಲಾಗಿದೆ.

IVFಗಾಗಿ ಭಿಕ್ಷುಕರಿಂದ ವೀರ್ಯ ಸಂಗ್ರಹ! ಏನಿದು ಹೊಸ ದಂಧೆ?

ಹೈದರಾಬಾದ್: ಬಿರಿಯಾನಿ, ಮದ್ಯ, ಹಣದ ಆಸೆ ತೋರಿಸಿ ಭಿಕ್ಷುಕರು, ಸಣ್ಣಪುಟ್ಟ ಕೆಲಸಗಾರರಿಂದ ವೀರ್ಯ (Fertility scam) ಸಂಗ್ರಹಿಸುತ್ತಿದ್ದ ಏಳು ಮಂದಿಯನ್ನು ಹೈದರಾಬಾದ್ (Hyderabad) ನ ಗೋಪಾಲಪುರಂ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಹೈದರಾಬಾದ್ ನ ಸಿಕಂದರಾಬಾದ್‌ನಲ್ಲಿರುವ ಐವಿಎಫ್ ಚಿಕಿತ್ಸಾಲಯವು (IVF Clinic) "ಇಂಡಿಯನ್ ಸ್ಪರ್ಮ್ ಟೆಕ್" (Indian Sperm Tech) ಹೆಸರಿನಲ್ಲಿ ವೀರ್ಯ ಮತ್ತು ಅಂಡಾಣುಗಳನ್ನು ಸಂಗ್ರಹಿಸಲು ಭಿಕ್ಷುಕರನ್ನೂ ಬಳಸಿಕೊಳ್ಳುತ್ತಿತ್ತು. ವೀರ್ಯ ಮತ್ತು ಅಂಡಾಣು ನೀಡಲು ಕೆಲವರಿಗೆ 500 ರಿಂದ 25,000 ರೂ. ವರೆಗೆ ಹಣವನ್ನು ನೀಡಲಾಗುತ್ತಿತ್ತು.

ಭಿಕ್ಷುಕರಿಗೆ ಬಿರಿಯಾನಿ, ಸಣ್ಣಪುಟ್ಟ ಕೆಲಸಗಾರರಿಗೆ ಮದ್ಯ, ಸ್ವಲ್ಪ ಓದಿದವರಿಗೆ, ಮಹಿಳೆಯರಿಗೆ ಹಣ ನೀಡಿ ವೀರ್ಯ, ಅಂಡಾಣು ದಾನಕ್ಕೆ ಮನವೊಲಿಸುತ್ತಿದ್ದ ದಂಧೆ ಹೈದರಾಬಾದ್ ನ ಸಿಕಂದರಾಬಾದ್‌ನಲ್ಲಿ ನಡೆಯುತ್ತಿತ್ತು. ಇಂಡಿಯನ್ ಸ್ಪರ್ಮ್ ಟೆಕ್ ಕ್ರಯೋಸಿಸ್ಟಮ್ ಕ್ಲಿನಿಕ್ ಹೆಸರಿನಲ್ಲಿ ಈ ದಂಧೆಯನ್ನು ನಡೆಸಲಾಗುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇಂಡಿಯನ್ ಸ್ಪರ್ಮ್ ಟೆಕ್ ಕ್ರಯೋಸಿಸ್ಟಮ್ ಕ್ಲಿನಿಕ್ ಮಾಲೀಕ ಪಂಕಜ್ ಸೋನಿ ಎಂಬಾತ ಕೆಲವು ಏಜೆಂಟ್‌ಗಳನ್ನು ನೇಮಕ ಮಾಡಿಕೊಂಡು ಭಿಕ್ಷುಕರು, ಬೀದಿ ವ್ಯಾಪಾರಿಗಳಿಂದ ವೀರ್ಯ ಮತ್ತು ಅಂಡಾಣುಗಳನ್ನು ಸಂಗ್ರಹಿಸುತ್ತಿದ್ದ ಎನ್ನಲಾಗಿದೆ.

ವೀರ್ಯ, ಅಂಡಾಣು ಸಂಗ್ರಹಕ್ಕೆ ಇದೆ ನಿಯಮ

ಯಾವುದೇ ವ್ಯಕ್ತಿಯಿಂದ ವೀರ್ಯ ಅಥವಾ ಅಂಡಾಣು ಸಂಗ್ರಹ ಮಾಡಬೇಕಾದರೆ ಅದಕ್ಕೆ ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಾಲಜಿ (ART) ಹೇಳಿರುವ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ಇದರ ಪ್ರಕಾರ 21 ರಿಂದ 55 ವರ್ಷದೊಳಗಿನ ಆರೋಗ್ಯವಂತ ವ್ಯಕ್ತಿಗಳು ಮಾತ್ರ ವೀರ್ಯ ಅಥವಾ ಅಂಡಾಣು ದಾನ ಮಾಡಬಹುದು. ಇದಕ್ಕಾಗಿ ಎಲ್ಲಾ ರೀತಿಯ ವೈದ್ಯಕೀಯ ಪರೀಕ್ಷೆಗಳನ್ನು ನಡೆಸುವುದ್ ಕಡ್ಡಾಯವಾಗಿದೆ. ಯಾವುದೇ ಆನುವಂಶಿಕ ಕಾಯಿಲೆ,ಸೋಂಕುಗಳು ಇಲ್ಲದೇ ಇದ್ದರೆ ಮಾತ್ರ ವೀರ್ಯ ಅಥವಾ ಅಂಡಾಣುವನ್ನು ಸಂಗ್ರಹಿಸಬಹುದಾಗಿದೆ. ಅಲ್ಲದೇ ಒಬ್ಬ ದಾನಿಯಿಂದ ಗರಿಷ್ಠ 25 ಬಾರಿ ಮಾತ್ರ ವೀರ್ಯವನ್ನು ಸಂಗ್ರಹಿಸಬಹುದು.

ಇನ್ನು ಗರ್ಭಿಣಿಯಾಗ ಬಯಸುವ ಮಹಿಳೆಯು ದಾನಿಯಿಂದ ಪಡೆದ ವೀರ್ಯವನ್ನು ಒಮ್ಮೆ ಮಾತ್ರ ಬಳಸಬೇಕು ಎನ್ನುವ ನಿಯಮವಿದೆ. ಆದರೆ ಕೆಲವು ವೀರ್ಯ ಚಿಕಿತ್ಸಾಲಯಗಳು ಇದನ್ನು ಉಲ್ಲಂಘಿಸುತ್ತಿವೆ.

ಇದನ್ನೂ ಓದಿ: Baba Vanga Prediction: ರಷ್ಯಾದಲ್ಲಿ ಭೂಕಂಪ, ಜಪಾನಿನಲ್ಲಿ ಸುನಾಮಿ... ಮತ್ತೆ ನಿಜವಾಗಿದೆ ವಂಗಾ ಭವಿಷ್ಯವಾಣಿ!

ಹೈದರಾಬಾದ್ ನ ಇಂಡಿಯನ್ ಸ್ಪರ್ಮ್ ಟೆಕ್ ಕ್ರಯೋಸಿಸ್ಟಮ್ ಕ್ಲಿನಿಕ್ ಭಿಕ್ಷುಕರಿಗೆ ಬಿರಿಯಾನಿ, ಸಣ್ಣಪುಟ್ಟ ಕೆಲಸ ಮಾಡುವವರಿಗೆ ಮದ್ಯ, ಸ್ವಲ್ಪ ಓದಿದವರಿಗೆ 500 ರಿಂದ 1000 ರೂ. ಗಳನ್ನು ಪಾವತಿಸಿ ವೀರ್ಯ ಸಂಗ್ರಹಿಸುತ್ತಿತ್ತು. ಅಂಡಾಣು ನೀಡಲು ಮಹಿಳೆಯರಿಗೆ 20,000 ರಿಂದ 25,000 ರೂ. ವರೆಗೆ ಹಣವನ್ನು ಪಾವತಿಸುತ್ತಿದ್ದರು ಎನ್ನಲಾಗಿದೆ.ಪ್ರಕರಣಕ್ಕೆ ಸಂಬಂಧಿಸಿ ಎಲ್ಲ ಆರೋಪಿಗಳನ್ನು ಗೋಪಾಲಪುರಂ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿಸಿದ್ದಾರೆ.