ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kunal Kamra: "ಇನ್ನು ಮುಂದೆ ಸ್ಟುಡಿಯೋ ಮುಚ್ಚುತ್ತೇವೆ" ; ಕುನಾಲ್‌ ವಿವಾದದ ಬಳಿಕ ಹ್ಯಾಬಿಟ್ಯಾಟ್‌ನಿಂದ ಮಹತ್ವದ ನಿರ್ಧಾರ

ಮುಂಬೈನ ಹ್ಯಾಬಿಟ್ಯಾಟ್ ಸ್ಟುಡಿಯೋ, ಸ್ಟ್ಯಾಂಡ್-ಅಪ್ ಹಾಸ್ಯ ಕಾರ್ಯಕ್ರಮಗಳಿಗೆ ಹೆಸರು ವಾಸಿಯಾಗಿದ್ದು, ಭಾನುವಾರ ನಡೆದ ದಾಂಧಲೆಯಿಂದಾಗಿ ಸ್ಟುಡಿಯೋವನ್ನು ಮುಚ್ಚುತ್ತೇವೆ ಎಂದು ಮಾಲೀಕರು ತಿಳಿಸಿದ್ದಾರೆ. ಸ್ಟ್ಯಾಂಡ್-ಅಪ್ ಕಾಮಿಡಿಯನ್‌ ಕುನಾಲ್ ಕಮ್ರಾ ಏಕನಾಥ್‌ ಶಿಂಧೆ ಅವರನ್ನು ನಂಬಿಕೆ ದ್ರೋಹಿ ಎಂದು ಕರೆದ ನಂತರ ಶಿವಸೇನೆ ಕಾರ್ಯಕರ್ತರು ಸ್ಟುಡಿಯೋಗೆ ನುಗ್ಗಿ ಗಲಾಟೆ ಮಾಡಿದ್ದರು.

ಕುನಾಲ್‌ ವಿವಾದದ ಬಳಿಕ ಸ್ಟುಡಿಯೋ ಕ್ಲೋಸ್‌ ಮಾಡಿದ ಹ್ಯಾಬಿಟ್ಯಾಟ್‌

Profile Vishakha Bhat Mar 24, 2025 11:13 AM

ಮುಂಬೈ: ಮುಂಬೈನ ಹ್ಯಾಬಿಟ್ಯಾಟ್ ಸ್ಟುಡಿಯೋ, ಸ್ಟ್ಯಾಂಡ್-ಅಪ್ ಹಾಸ್ಯ ಕಾರ್ಯಕ್ರಮಗಳಿಗೆ ಹೆಸರು ವಾಸಿಯಾಗಿದ್ದು, ಭಾನುವಾರ ನಡೆದ ಘಟನೆಯಿಂದಾಗಿ ಸ್ಟುಡಿಯೋವನ್ನು ಮುಚ್ಚಲಾಗುವುದು ಎಂದು ದಿ ಹ್ಯಾಬಿಟ್ಯಾಟ್ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದೆ. ಸ್ಟ್ಯಾಂಡ್-ಅಪ್ ಕಾಮಿಡಿಯನ್‌ ಕುನಾಲ್ ಕಮ್ರಾ ( Kunal Kamra) ಅವರು ತಮ್ಮ ಶೋನಲ್ಲಿ ಏಕನಾಥ್‌ ಶಿಂಧೆ (Eknath Shinde) ಅವರನ್ನು ನಂಬಿಕೆದ್ರೋಹಿ ಎಂದು ಕರೆದಿದ್ದು, ಶಿವಸೇನೆ ಕಾರ್ಯಕರ್ತರು ಆಕ್ರೋಶ ಹೊರ ಹಾಕಿ, ಸ್ಟುಡಿಯೋ ಒಳಗೆ ನುಗ್ಗಿ ಧ್ವಂಸ ಮಾಡಿದ್ದಾರೆ. ಕುನಾಲ್‌ ವಿರುದ್ಧ ಪ್ರಕರಣ ದಾಖಲಿಸುವಂತೆ ಶಿಂಧೆ ಬೆಂಬಲಿಗರು ಆಗ್ರಹಿಸಿದ್ದಾರೆ.

ಸ್ಟುಡಿಯೋವನ್ನು ಮುಚ್ಚುವ ಬಗ್ಗೆ ದಿ ಹ್ಯಾಬಿಟ್ಯಾಟ್ ಪೋಸ್ಟ್‌ ಮಾಡಿದ್ದು, "ನಮ್ಮನ್ನು ಮತ್ತು ನಮ್ಮ ಆಸ್ತಿಯನ್ನು ರಕ್ಷಿಸಿಕೊಳ್ಳುವಷ್ಟು ನಾವು ಸಬಲರಾಗುವ ವರೆಗೂ ನಾವು ಸ್ಟುಡಿಯೋವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ನಮ್ಮನ್ನು ಗುರಿಯಾಗಿಸಿಕೊಂಡು ಇತ್ತೀಚೆಗೆ ನಡೆದ ವಿಧ್ವಂಸಕ ಕೃತ್ಯಗಳಿಂದ ನಾವು ಆಘಾತಕ್ಕೊಳಗಾಗಿದ್ದೇವೆ, ಚಿಂತಿತರಾಗಿದ್ದೇವೆ ಎಂದು ಬರೆದು ಕೊಂಡಿದೆ.

ಕಲಾವಿದರು ತಮ್ಮ ಅಭಿಪ್ರಾಯಗಳು ಮತ್ತು ಹೇಳಿಕೆಗಳಿಗೆ ಅವರು ಜವಾಬ್ದಾರರಾಗಿರುತ್ತಾರೆ. ಕಲಾವಿದರು ಪ್ರದರ್ಶಿಸಿದ ವಿಷಯದಲ್ಲಿ ನಾವು ಎಂದಿಗೂ ಭಾಗಿಯಾಗಿಲ್ಲ. ಆದರೆ ಇತ್ತೀಚಿನ ಘಟನೆಗಳು ನಮ್ಮನ್ನು ದೋಷಿಯನ್ನಾಗಿ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ. ಈ ವಿಡಿಯೋದಿಂದ ನೊಂದಿರುವ ಎಲ್ಲರಿಗೂ ನಾವು ಪ್ರಾಮಾಣಿಕವಾಗಿ ಕ್ಷಮೆ ಕೇಳುತ್ತೇವೆ. ಆದರೆ ಅವರ ಹೇಳಿಕೆಗೂ ತಮಗೂ ಸಂಬಂಧವಿಲ್ಲ. ಸ್ಟುಡಿಯೋದಲ್ಲಿ ಕ್ಯಾಮೆರಾಗಳು, ದೀಪಗಳು ಮತ್ತು ಸ್ಪೀಕರ್‌ಗಳು ಒಡಿದಿರುವುದು ಕಂಡು ಬಂದಿದೆ.

ಕುನಾಲ್ ಕಮ್ರಾ ಹೇಳಿದ್ದೇನು?

ಸ್ಟ್ಯಾಂಡ್-ಅಪ್ ಕಾಮಿಡಿಯನ್‌ ಕುನಾಲ್ ಕಮ್ರಾ ಅವರು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್‌ ಶಿಂಧೆ ಅವರನ್ನು ನಂಬಿಕೆದ್ರೋಹಿ ಎಂದು ಕರೆದಿದ್ದಾರೆ. ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ಶಿವಸೇನೆಯನ್ನು ಟೀಕಿಸಿದ್ದಾರೆ. ಏಕನಾಥ್‌ ಶಿಂಧೆ - ಉದ್ದವ್ ಠಾಕ್ರೆ ನಡುವಿನ ರಾಜಕೀಯದ ಬಗ್ಗೆ ಮಾತನಾಡುತ್ತಾ, ಮೊದಲು ಶಿವಸೇನಾ ಬಿಜೆಪಿಯಿಂದ ಹೊರಬಂದಿತು, ನಂತರ ಶಿವಸೇನಾ ಶಿವಸೇನಾದಿಂದಲೇ ಹೊರಬಂದಿತು. ಎನ್‌ಸಿಪಿಯಿಂದ ಎನ್‌ಸಿಪಿ ಹೊರಬಂದಿತು. ಇವರೆಲ್ಲಾ ಒಂದು ಮತದಾರನಿಗೆ ಒಂಬತ್ತು ಬಟನ್‌ಗಳನ್ನು ನೀಡಿದ್ದಾರೆ ಎಂದು ಹೇಳುತ್ತಾ, ಗದ್ದಾರ್‌ ಹಾಡು ಹೇಳಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

ಈ ಸುದ್ದಿಯನ್ನೂ ಓದಿ: Viral Video: ಐಫೋನ್‌ನಿಂದ ಕೇಕ್ ಕತ್ತರಿಸಿ ಬರ್ತ್ ಡೇ ಆಚರಿಸಿಕೊಂಡ ಮಹಾರಾಷ್ಟ್ರ DCM ಏಕನಾಥ್ ಶಿಂಧೆ!

ವಿಡಿಯೋ ಹೊರ ಬಂದ ನಂತರ ಶಿಂಧೆ ಹ್ಯಾಬಿಟ್ಯಾಟ್ ಸ್ಟುಡಿಯೋ ಒಳಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಕಾಮ್ರಾ ತಮ್ಮ ಟೀಕೆಗಳನ್ನು ಮುಂದುವರಿಸಿದರೆ ಮತ್ತಷ್ಟು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದರು. ಸದ್ಯ ಕುನಾಲ್ ಕಮ್ರಾ ವಿರುದ್ಧ ಪ್ರಕರಣ ದಾಖಲಾಗಿದ್ದು, ಸ್ಟುಡಿಯೋಗೆ ಹಾನಿ ಮಾಡಿದ್ದ 40 ಶಿವ ಸೇನಾ ಕಾರ್ಯಕರ್ತರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.