ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಐಫೋನ್‌ನಿಂದ ಕೇಕ್ ಕತ್ತರಿಸಿ ಬರ್ತ್ ಡೇ ಆಚರಿಸಿಕೊಂಡ ಮಹಾರಾಷ್ಟ್ರ DCM ಏಕನಾಥ್ ಶಿಂಧೆ!

ಶಿವಸೇನೆ ಮುಖ್ಯಸ್ಥ ಏಕನಾಥ್ ಶಿಂಧೆ ಫೆಬ್ರವರಿ 9 ರಂದು ಭಾನುವಾರ ತಮ್ಮ 60ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು ಈ ಸಂದರ್ಭದಲ್ಲಿ, ಥಾಣೆ ಯಲ್ಲಿರುವ ಅವರ ಬೆಂಬಲಿಗರು ದೊಡ್ಡ ಗಾತ್ರದ ಕೇಕ್ ತಂದಿದ್ದರು. ಈ ಸಂದರ್ಭದಲ್ಲಿ ಶಿಂಧೆ ತಮ್ಮ ಹುಟ್ಟು ಹಬ್ಬವನ್ನು ಐಫೋನ್ ಬಳಸಿ ಕತ್ತರಿಸುತ್ತಿರುವುದು ವಿಡಿಯೊದಲ್ಲಿ ನೋಡಬಹುದು.

ಹುಟ್ಟುಹಬ್ಬಕ್ಕೆ ಐಫೋನ್​ನಿಂದ ಕೇಕ್​ ಕತ್ತರಿಸಿದ ಏಕನಾಥ್ ಶಿಂಧೆ!

Eknath Shinde

Profile Pushpa Kumari Feb 12, 2025 4:54 PM

ಮುಂಬೈ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಮತ್ತು ಶಿವಸೇನೆ ಮುಖ್ಯಸ್ಥ ಏಕನಾಥ್ ಶಿಂಧೆ (Eknath Shinde)ತಮ್ಮ 60ನೇ ವರ್ಷದ ಹುಟ್ಟುಹಬ್ಬಕ್ಕೆ ಕೇಕ್ ಅನ್ನು ಐಫೋನ್ ನಿಂದ ಕತ್ತರಿಸಿದ ವಿಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದೆ. ಫೆಬ್ರವರಿ 9 ರಂದು ಏಕನಾಥ ಶಿಂಧೆ ಜನ್ಮ ದಿನ ವಾಗಿತ್ತು. ಈ ಸಂದರ್ಭದಲ್ಲಿ, ಥಾಣೆಯಲ್ಲಿರುವ ಅವರ ಕಾರ್ಯ ಕರ್ತರು ಹುಟ್ಟುಹಬ್ಬ ಆಚರಿಸಲು ಬೃಹತ್ ಗಾತ್ರದ ಕೇಕ್ ತಂದಿದ್ದು ಶಿಂಧೆಯವರು ಕೇಕ್ ಕತ್ತರಿಸಲು ಚಾಕು ಬಳಸುವ ಬದಲು ಪಕ್ಕದಲ್ಲಿದ್ದ ಐಫೋನ್ ಬಳಸಿ ಕೇಕ್ ಕಟ್ ಮಾಡಿದ್ದಾರೆ. ಇದೀಗ ಐಫೋನ್ ಬಳಸಿ ಕೇಕ್ ಕತ್ತರಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್(Viral Video) ಆಗಿದೆ.

ಶಿವಸೇನೆ ಮುಖ್ಯಸ್ಥ ಏಕನಾಥ್ ಶಿಂಧೆ ಫೆಬ್ರವರಿ 9 ರಂದು ಭಾನುವಾರ ತಮ್ಮ 60 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು ಈ ಸಂದರ್ಭದಲ್ಲಿ, ಥಾಣೆ ಯಲ್ಲಿರುವ ಅವರ ಬೆಂಬಲಿಗರು ದೊಡ್ಡ ಗಾತ್ರದ ಕೇಕ್ ತಂದಿ ದ್ದರು. ಈ ಸಂದರ್ಭದಲ್ಲಿ ಶಿಂಧೆ ತಮ್ಮ ಹುಟ್ಟು ಹಬ್ಬವನ್ನು ಐಫೋನ್ ಬಳಸಿ ಕತ್ತರಿಸುತ್ತಿರುವುದು ವಿಡಿಯೊದಲ್ಲಿ ನೋಡಬಹುದು.



ಪಕ್ಷದ ಕಾರ್ಯಕರ್ತರ ಒತ್ತಾಯದ ಮೇರೆಗೆ ಏಕನಾಥ್ ಶಿಂಧೆ ಕೇಕ್ ಕತ್ತರಿಸಿದ್ದಾರೆ ಎನ್ನಲಾಗಿದೆ. ಏಕನಾಥ್ ಶಿಂಧೆ ಕೇಕ್ ಕೆಲವು ತುಂಡು ಗಳಾಗಿ ಕತ್ತರಿಸಿ ನಂತರ ತಮ್ಮ ಪಕ್ಕದಲ್ಲಿ ನಿಂತಿದ್ದ ತಮ್ಮ ಪಕ್ಷದ ಕಾರ್ಯಕರ್ತರೊಬ್ಬರಿಗೆ ಮೊಬೈಲ್ ಫೋನ್ ನೀಡುವ ದೃಶ್ಯ ವನ್ನು ನೀವು ನೋಡಬಹುದು. ಈ ಮೊಬೈಲ್ ಪಕ್ಷದ ಕಾರ್ಯಕರ್ತನದ್ದು ಎನ್ನಲಾಗಿದ್ದು ಸದ್ಯ ಈ ವಿಡಿಯೊ ಇದೀಗ ಬಹಳಷ್ಟು ವೈರಲ್ ಆಗುತ್ತಿದೆ.

ಇದನ್ನು ಓದಿ: Viral Video: ಮಗುವನ್ನು ಛಾವಣಿಯ ಅಂಚಿನಲ್ಲಿ ಕೂರಿಸಿ ತಾಯಿಯ ರೀಲ್ಸ್‌; ಹಿಗ್ಗಾಮುಗ್ಗಾ ಜಾಡಿಸಿದ ನೆಟ್ಟಿಗರು

ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಗೆ ಹಲವು ಗಣ್ಯ ನಾಯಕರು ಶುಭ ಕೊರಿದ್ದು ಪ್ರಧಾನಿ ನರೇಂದ್ರ ಮೋದಿ ಶಿವಸೇನಾ ನಾಯಕನಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಿದ್ದರು,ಪ್ರಧಾನಿ ಮೋದಿ ತಮ್ಮ ಖಾತೆ ಯಲ್ಲಿ ಪೋಸ್ಟ್ ಹಂಚಿಕೊಂಡಿದ್ದುಶ್ರೀ ಏಕನಾಥ್ ಶಿಂಧೆ ಜಿ ಅವರಿಗೆ ಅವರ ಜನ್ಮದಿನದ ಶುಭಾಶಯಗಳು.ಮಹಾರಾಷ್ಟ್ರದ ಅಭಿವೃದ್ಧಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಕ್ರಿಯಾಶೀಲ ನಾಯಕ ಎಂದು ಬರೆದುಕೊಂಡಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಕೂಡ ಶುಭ ಹಾರೈಸಿದ್ದಾರೆ.