Operation Sindoor: ಪಾಕಿಸ್ತಾನದ 3 ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ ಭಾರತೀಯ ಸೇನೆ
ಪಾಕಿಸ್ತಾನದ ವಿರುದ್ದ ಭಾರತ ಮೇ 8ರಂದು 2ನೇ ದಿನವೂ ಆಪರೇಷನ್ ಸಿಂದೂರ್ ಕಾರ್ಯಾಚರಣೆ ಮುಂದುವರಿಸಿದೆ. ಈ ಮಧ್ಯೆ ಜಮ್ಮು ವಿಮಾನ ನಿಲ್ದಾಣ, ಕುಪ್ವಾರದಲ್ಲಿ ಗುರುವಾರ ಸಂಜೆ ಅನೇಕ ಸ್ಫೋಟದ ಸದ್ದು ಕೇಳಿ ಬಂದಿದ್ದು, ಹೈ ಅಲರ್ಟ್ ಘೋಷಿಸಲಾಗಿದೆ.


ಶ್ರೀನಗರ: ಪಾಕಿಸ್ತಾನದ ವಿರುದ್ದ ಭಾರತ ಮೇ 8ರಂದು 2ನೇ ದಿನವೂ ಆಪರೇಷನ್ ಸಿಂದೂರ್ (Operation Sindoor) ಕಾರ್ಯಾಚರಣೆ ಮುಂದುವರಿಸಿದೆ. ಈ ಮಧ್ಯೆ ಭಾರತೀಯ ಸೇನೆಯು ಪಾಕಿಸ್ತಾನದ 3 ಯುದ್ದ ವಿಮಾನಗಳನ್ನು ಹೊಡೆದುರುಳಿಸಿದೆ. 2 F 16, JF 17 ಜೆಟ್ ವಿಮಾನಗಳನ್ನು ಧ್ವಂಸ ಮಾಡಿದೆ. ಜಮ್ಮು ವಿಮಾನ ನಿಲ್ದಾಣ, ಕುಪ್ವಾರದಲ್ಲಿ ಗುರುವಾರ ಸಂಜೆ ಅನೇಕ ಸ್ಫೋಟದ ಸದ್ದು ಕೇಳಿ ಬಂದಿದ್ದು, ಹೈ ಅಲರ್ಟ್ ಘೋಷಿಸಲಾಗಿದೆ. ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ 9 ಭಯೋತ್ಪಾದಕ ಶಿಬಿರಗಳ ಮೇಲೆ ಭಾರತ ದಾಳಿ ನಡೆಸಿದ ಒಂದು ದಿನದ ನಂತರ ಈ ಸ್ಫೋಟ ಸಂಭವಿಸಿದೆ. ಸ್ಫೋಟಕ್ಕೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಸ್ಫೋಟದ ನಂತರ ಸ್ಥಳದಲ್ಲಿ ಭೀತಿಯ ವಾತಾವರಣ ಭೀತಿ ಉಂಟಾಗಿದ್ದು, ವಾಯು ದಾಳಿಯ ಸೈರನ್‌ಗಳು ಮೊಳಗಿವೆ. "ಜಮ್ಮುವಿನಲ್ಲಿ ಸಂಪೂರ್ಣ ವಿದ್ಯುತ್ ಕಡಿತಗೊಂಡಿದೆ. ದೊಡ್ಡ ಸ್ಫೋಟಗಳು—ಬಾಂಬ್ ದಾಳಿ, ಶೆಲ್ ದಾಳಿ, ಅಥವಾ ಕ್ಷಿಪಣಿ ದಾಳಿಗಳ ಬಗ್ಗೆ ಚಿಂತಿಸಬೇಡಿ. ಮಾತಾ ವೈಷ್ಣೋ ದೇವಿ ಮತ್ತು ಧೈರ್ಯಶಾಲಿ ಭಾರತೀಯ ಸಶಸ್ತ್ರ ಪಡೆಗಳ ಸಿಬ್ಬಂದಿ ನಮ್ಮೊಂದಿಗಿದ್ದಾರೆ" ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಡಿಜಿಪಿ ಶೇಶ್ ಪಾಲ್ ವೈದ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
JAMMU UNDER ATTACK
— Harmeet Kaur K (@iamharmeetK) May 8, 2025
Blackout in the entire Jammu.
Last sounding of sirens in Akhnoor. pic.twitter.com/bVLIKQZPqm
ಜಮ್ಮು ಮತ್ತು 300 ಕಿ.ಮೀ. ದೂರದ ಕುಪ್ವಾರದಲ್ಲಿ ಸೈರಲ್ ಮೊಳಗಿವೆ. ಸದ್ಯ ಈ 2 ನಗರಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಆಗಸದಲ್ಲಿ ಮಿಂಚಿನಂತೆ ಡ್ರೋನ್ ಹರಿದಾಡುತ್ತಿರುವ ವಿಡಿಯೊ ವೈರಲ್ ಆಗಿದೆ.
ಪಾಕ್‌ನಿಂದ ದುಸ್ಸಾಹಸ
ಪಾಕಿಸ್ತಾನದಿಂದ ಜಮ್ಮು, ಪಂಜಾಬ್ ಮತ್ತು ರಾಜಸ್ಥಾನಗಳ ಮೇಲೆ ದಾಳಿ ನಡೆದಿದೆ.