ಲಖನೌ, ಜ. 13: ವಿಷಸರ್ಪ ಕಚ್ಚಿದ್ದರಿಂದ (Snake bite) ಕಂಗೆಟ್ಟ ರಿಕ್ಷಾ ಚಾಲಕನೊಬ್ಬ ಹಾವು ಸಹಿತ ಆಸ್ಪತ್ರೆಗೆ ತೆರಳಿದ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ (Mathura) ನಡೆದಿದೆ. ತನ್ನ ಜೇಬಿನಲ್ಲಿ 1.5 ಅಡಿ ಉದ್ದದ ಹಾವನ್ನು ಹಿಡಿದುಕೊಂಡು ವ್ಯಕ್ತಿಯು ಜಿಲ್ಲಾಸ್ಪತ್ರೆಗೆ ತೆರಳಿದ್ದು, ಅದನ್ನು ನೋಡಿದ ಸಿಬ್ಬಂದಿ ಬೆಚ್ಚಿ ಬಿದ್ದಿದ್ದಾರೆ. ಸ್ಥಳೀಯ ನಿವಾಸಿ 39 ವರ್ಷದ ದೀಪಕ್ ಈ ಸಾಹಸ ಮೆರೆದ ವೈಕ್ತಿ.
ಸೋಮವಾರ (ಜನವರಿ 12) ದೀಪಕ್‌ಎ ಹಾವು ಕಚ್ಚಿದೆ. ಹೀಗಾಗಿ ಆತ ವಿಷ ನಿರೋಧಕ ಇಂಜೆಕ್ಷನ್ ಪಡೆಯಲು ಆಸ್ಪತ್ರೆಗೆ ಬಂದಿದ್ದ ಎಂದು ಮುಖ್ಯ ವೈದ್ಯಕೀಯ ಅಧೀಕ್ಷಕ (ಸಿಎಂಎಸ್) ನೀರಜ್ ಅಗರ್ವಾಲ್ ತಿಳಿಸಿದ್ದಾರೆ. ಇತರ ರೋಗಿಗಳ ಜೀವಕ್ಕೆ ಅಪಾಯವಾಗುವ ಸಾಧ್ಯತೆಯಿರುವುದರಿಂದ ಹಾವನ್ನು ಹೊರಗೆ ಬಿಡುವಂತೆ ಆತನಿಗೆ ಸೂಚಿಸಲಾಯಿತು ಎಂದು ಅಗರ್ವಾಲ್ ಹೇಳಿದರು. ಅದೃಷ್ಟವಶಾತ್ ದೀಪಕ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ವಿಡಿಯೊ ಇಲ್ಲಿದೆ:
ಧಾರವಾಡದಲ್ಲಿ ಮಕ್ಕಳ ಅಪಹರಣ
ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ಇಬ್ಬರು ಮಕ್ಕಳನ್ನು ಅಪಹರಿಸಿದ ಘಟನೆ ಕರ್ನಾಟಕದ ಧಾರವಡಾದಲ್ಲಿ ನಡೆದಿದೆ. ಈ ಘಟನೆ ವ್ಯಾಪಕ ಕೋಲಾಹಲಕ್ಕೆ ಕಾರಣವಾಯಿತು. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ತ್ವರಿತವಾಗಿ ಪ್ರತಿಕ್ರಿಯಿಸಿದ್ದು, ಇಬ್ಬರೂ ಮಕ್ಕಳನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.
ಧಾರವಾಡ ನಗರದ ಕಮಲಾಪುರದಲ್ಲಿರುವ ಸರ್ಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. 3ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳನ್ನು ಅಪಹರಿಸಲಾಗಿತ್ತು. ಸೋಮವಾರ (ಜನವರಿ 12) ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಬಳಿ ಅಪಹರಣಕಾರರನ್ನು ಪೊಲೀಸರು ಬಂಧಿಸಿ, ಅಮಾಯಕ ಮಕ್ಕಳನ್ನು ರಕ್ಷಿಸಿದ್ದಾರೆ.
ಶಾಲಾ ಅಪಹರಣ ಪ್ರಕರಣದ ಆರೋಪಿಯನ್ನು ಅಸ್ಮಿನಗರದ ಅಬ್ದುಲ್ ಕರೀಮ್ ಮೇಸ್ತಿ (50) ಎಂದು ಗುರುತಿಸಲಾಗಿದೆ. ಅಪಹರಣಕ್ಕೊಳಗಾದ ತನ್ವೀರ್ ದೊಡ್ಡಮನಿ ಮತ್ತು ಲಕ್ಷ್ಮೀ ಕರೆಪ್ಪನವರ ಎಂಬ ಇಬ್ಬರು ಮಕ್ಕಳೂ ಆರೋಗ್ಯವಾಗಿದ್ದಾರೆ. ಶನಿವಾರ ಮಧ್ಯಾಹ್ನ ಊಟದ ಸಮಯದಲ್ಲಿ ಅಬ್ದುಲ್ ಕರೀಮ್ ಶಾಲೆಯಿಂದ ವಿದ್ಯಾರ್ಥಿಗಳನ್ನು ಅಪಹರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಕ್ಕಳ ಅಪಹರಣ ಬೆಳಕಿಗೆ ಬಂದ ನಂತರ, ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಬಳಸಿಕೊಂಡು ಯುವಕನೊಂದಿಗೆ ಬೈಕ್‌ನಲ್ಲಿ ಇಬ್ಬರು ಮಕ್ಕಳನ್ನು ಪತ್ತೆಹಚ್ಚಿದರು. ನಂತರ ಪೊಲೀಸರು ಬೈಕ್‌ನ ಚಲನವಲನಗಳನ್ನು ಪತ್ತೆಹಚ್ಚಲು ಪ್ರಾರಂಭಿಸಿದರು. ಈ ವೇಳೆ ಮಕ್ಕಳನ್ನು ಸಾಗಿಸುವಾಗ ದಾಂಡೇಲಿ ಬಳಿ ಆರೋಪಿಯ ಮೋಟಾರ್ ಸೈಕಲ್ ಸ್ಕಿಡ್ ಆಗಿರುವ ಮಾಹಿತಿ ಅವರಿಗೆ ಸಿಕ್ಕಿತು. ಆರೋಪಿಯ ತಲೆ ಮತ್ತು ತೋಳಿಗೆ ಗಾಯಗಳಾಗಿದ್ದು, ಜೋಯಿಡಾದ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸ್ ತಂಡ ಸ್ಥಳಕ್ಕಾಮಿಸಿ ಮಕ್ಕಳನ್ನು ರಕ್ಷಿಸಿದರು.
ಹಾವು , ನಾಯಿ ಕಚ್ಚಿದರೆ ಮೊದಲು ಚಿಕಿತ್ಸೆ ಕೊಡಿ, ನಂತರ ಶುಲ್ಕ ಕೇಳಿ: ಆಸ್ಪತ್ರೆಗಳಿಗೆ ಸರಕಾರ ಆದೇಶ
ಸತ್ತ ಹಾವು ಹಿಡಿದು ಪೊಲೀಸರಿಗೆ ಬೆದರಿಕೆ
ಮದ್ಯ ಕುಡಿದು ವಾಹನ ಚಲಾಯಿಸಿದ್ದಕ್ಕಾಗಿ ಆಟೋ ರಿಕ್ಷಾ ಚಾಲಕನೊಬ್ಬನನ್ನು ಸಂಚಾರ ಪೊಲೀಸ್ ಸಿಬ್ಬಂದಿ ತಡೆದಿದ್ದರು. ಇದರಿಂದ ಸಿಟ್ಟಿಗೆದ್ದ ಚಾಲಕ ಸತ್ತ ಹಾವನ್ನು ಕೈಯಲ್ಲಿ ಹಿಡಿದುಕೊಂಡು ಪೊಲೀಸ್‍ಗೆ ಬೆದರಿಕೆ ಹಾಕಿದ್ದ ವಿಡಿಯೊವೊಂದು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಹೈದರಾಬಾದ್‍ನ ಚಂದ್ರಾಯನಗುಟ್ಟ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜನವರಿ 3ರಂದು ಈ ಘಟನೆ ನಡೆದಿತ್ತು.