ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಡಬ್ಲ್ಯುಎಚ್‌-1000ಎಕ್ಸ್‌ಎಂ6  ಹೆಡ್‌ಫೋನ್‌ನಲ್ಲಿ ಸದ್ದು ತಡೆಯುವ ಭವಿಷ್ಯದ ಬದಲಾವಣೆ ಪರಿಚಯಿಸಿದ ಸೋನಿ ಇಂಡಿಯಾ

ಸೋನಿಯ ಇದುವರೆಗಿನ ಅತ್ಯಾಧುನಿಕ ಸದ್ದು ನಿರ್ಬಂಧಿಸುವಿಕೆ ಸೌಲಭ್ಯ ಒಳಗೊಂಡಿರುವ - ಭವಿಷ್ಯದ ಪೀಳಿಗೆಯ ಚಿಪ್ ಮತ್ತು ಜಾಣ ಕ್ರಮಾವಳಿಗಳಿಂದ ಕಾರ್ಯನಿರ್ವಹಿಸುವ - ಡಬ್ಲ್ಯುಎಚ್‌-1000ಎಕ್ಸ್‌ಎಂ6  ಹೆಡ್‌ಫೋನ್‌  ಗೌಜು- ಗದ್ದಲದ ಸದ್ದು ನಿಮ್ಮ ಕಿವಿಗಳನ್ನು ತಲುಪುವ ಮೊದಲೇ ನಿರ್ಬಂಧಿಸಲಿದೆ

ವಿಶ್ವ ಖ್ಯಾತಿಯ ಮಾಸ್ಟರಿಂಗ್ ಎಂಜಿನಿಯರ್‌ಗಳ ಸಹಯೋಗದಲ್ಲಿ ತಯಾರಿಸಲಾಗಿರುವ ಡಬ್ಲ್ಯುಎಚ್‌-1000ಎಕ್ಸ್‌ಎಂ6 – ಹೆಡ್‌ಫೋನ್‌ ಸ್ಟುಡಿಯೊ ದರ್ಜೆಯ ಧ್ವನಿಯ ನಿಖರತೆ ನೀಡಲಿದೆ.

  • 360 ಡಿಗ್ರಿ ರಿಯಾಲಿಟಿ ಆಡಿಯೊ ಅಪ್‌ಮಿಕ್ಸ್‌ ನೆರವಿನಿಂದ ಸಿನಿಮಾ ವೀಕ್ಷಣೆಗೆ ಹೊಸ ಅನುಭವದ ಸೇರ್ಪಡೆ
  • ಯಾವುದೇ ಕರೆಗೆ - ಡಬ್ಲ್ಯುಎಚ್‌-1000 ಎಕ್ಸ್‌ಎಂ6 ಸುಸ್ಪಷ್ಟ ಕರೆ ಗುಣಮಟ್ಟದೊಂದಿಗೆ ನೀವು ಯಾವಾಗಲೂ ಕೇಳಿಸಿಕೊಳ್ಳುತ್ತೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ

ನವದೆಹಲಿ: ಭಾರತದ ಮಾರುಕಟ್ಟೆಗೆ ಸೋನಿ ಇಂಡಿಯಾ ಡಬ್ಲ್ಯುಎಚ್‌-1000ಎಕ್ಸ್‌ಎಂ6 (WH-1000XM6) ವೈರ್‌ಲೆಸ್ ಹೆಡ್‌ಫೋನ್‌ಗಳನ್ನು ಪರಿಚಯಿಸಿದೆ.

ಶ್ರೇಷ್ಠ ಮಟ್ಟದ ಧ್ವನಿ ಮತ್ತು ವೈಯಕ್ತಿಕ ಆಲಿಸುವ ಅನುಭವಗಳಿಗೆ ಹೊಸ ಮಾನದಂಡ ನಿಗದಿ ಪಡಿಸಿದ ಸೋನಿಯ ಪ್ರಶಸ್ತಿ ಪುರಸ್ಕೃತ 1000ಎಕ್ಸ್‌ ಸರಣಿಯ ಇತ್ತೀಚಿನ ಆವೃತ್ತಿಯಾಗಿದೆ. 1000 ಎಕ್ಸ್‌ ಸರಣಿಯ ಪರಂಪರೆ ಆಧರಿಸಿರುವ ಈ ಸುಧಾರಿತ ಮಾದರಿಯು ಶ್ರೇಷ್ಠ ದರ್ಜೆಯ ಧ್ವನಿ ಯನ್ನು ಅತ್ಯುತ್ತಮ ರೀತಿಯಲ್ಲಿ ಸದ್ದು ನಿರ್ಬಂಧಿಸಿ ಸಂಗೀತ ಪ್ರಿಯರು, ಫ್ಯಾಷನ್‌ಪ್ರಿಯರು, ಪ್ರವಾಸಿಗರು ಮತ್ತು ವೃತ್ತಿಪರರಿಗೆ ಪರಿಪೂರ್ಣವಾದ ಧ್ವನಿ ಆಲಿಸುವಂತೆ ಮಾಡಲಿದೆ.

ಸದ್ದು ತಡೆಯುವ ಭವಿಷ್ಯದ ಬದಲಾವಣೆ

ಸುಧಾರಿತ ಪ್ರೊಸೆಸರ್ ಮತ್ತು ಹೊಂದಾಣಿಕೆಯ ಮೈಕ್ರೊಫೋನ್ ವ್ಯವಸ್ಥೆಯಿಂದ ನಿರ್ವಹಿಸ ಲಾಗುವ ಈ ಸದ್ದು ತಡೆಯುವುದನ್ನು ಡಬ್ಲ್ಯುಎಚ್‌-1000ಎಕ್ಸ್‌ಎಂ6-ನಲ್ಲಿ ವಿಳಂಬ ಇಲ್ಲದೆ ಪರಿಪೂರ್ಣಗೊಳಿಸಲಾಗಿದೆ. ಆದ್ದರಿಂದ ನೀವು ಆಲಿಸುವ ಪ್ರತಿಯೊಂದು ಸದ್ದು, ಬಾಹ್ಯ ಸದ್ದಿನಿಂದ ಮುಕ್ತವಾಗಿರಲಿದ್ದು ಧ್ವನಿಯನ್ನು ಪರಿಶುದ್ಧವಾಗಿ ಕೇಳಿಸುತ್ತದೆ. ಇದರಲ್ಲಿನ ಪ್ರೊಸೆಸರ್ ಅದರ ಹಿಂದಿನ ಪ್ರೊಸೆಸರ್‌ಗಿಂತ ಏಳು ಪಟ್ಟು ಹೆಚ್ಚಿನ ವೇಗದೊಂದಿಗೆ ಕಾರ್ಯನಿರ್ವಹಿಸಲಿದೆ. ಹೈಡೆಫಿನಿಷನ್‌  ಸದ್ದು ನಿಷ್ಕ್ರಿಯಗೊಳಿಸುವ ಪ್ರೊಸೆಸರ್ ಕ್ಯುಎನ್‌3 12 ಮೈಕ್ರೊಫೋನ್‌ಗಳನ್ನು ಸೂಕ್ಷ್ಮವಾಗಿ ಸರಿಪಡಿಸಲಿದೆ.

ಇದನ್ನೂ ಓದಿ: Tata Motors: ಕೋಲ್ಕತ್ತಾದಲ್ಲಿ ಅತ್ಯಾಧುನಿಕ ವಾಹನ ಸ್ಕ್ರ್ಯಾಪಿಂಗ್ ಘಟಕ ಉದ್ಘಾಟಿಸಿದ ಟಾಟಾ ಮೋಟಾರ್ಸ್

ಇದು ಈ ಹಿಂದಿನ ಡಬ್ಲ್ಯುಎಚ್‌-1000ಎಕ್ಸ್‌ಎಂ5 ಗಿಂತ 1.5 ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ಕಿಂಚಿತ್ತೂ ವಿಳಂಬ ಇಲ್ಲದೆ ಸದ್ದು ತಡೆಯಲಿದೆ. ಧ್ವನಿ ಗುಣಮಟ್ಟದಲ್ಲಿ ಗಮನಾರ್ಹ ಹೆಚ್ಚಳ ಒದಗಿಸಲಿದೆ. ಹನ್ನೆರಡು ಅತ್ಯುತ್ತಮ ಮೈಕ್ರೊಫೋನ್‌ಗಳು ನಿಖರವಾಗಿ ಕಾರ್ಯನಿರ್ವಹಿಸುವ ಶಬ್ದ ರದ್ದತಿಯು ನಿಮಗೆ ಮತ್ತು ನಿಮ್ಮ ಪರಿಸರಕ್ಕೆ ಸಮರ್ಪಕವಾಗಿ ಸರಿಹೊಂದುವಂತೆ ಅನುವು ಮಾಡಿಕೊಡುತ್ತದೆ. ನೀವು ಪ್ರಯಾಣ ಮಾಡುತ್ತಿರುವಾಗ ಸದ್ದು ನಿರ್ಬಂಧಿಸಲು ಬಯಸುತ್ತಿರಲಿ ಅಥವಾ ಕಚೇರಿಯಲ್ಲಿ ಕೆಲಸದಲ್ಲಿ ಗಮನ ಕೇಂದ್ರೀಕರಿಸಲು ಬಯಸುತ್ತಿರಲಿ, ನಿಮ್ಮ ಧ್ವನಿ ಆಲಿಸುವ ಅನುಭವವು ಪರಿಪೂರ್ಣವಾಗಿರುವುದರ ಜೊತೆಗೆ ಶಕ್ತಿಯುತವೂ ಆಗಿರಲಿದೆ.

ಸೋನಿಯ ಹೊಸ ಅಡಾಪ್ಟಿವ್ ಎನ್‌ಸಿ ಆಪ್ಟಿಮೈಸರ್, ಯಾವುದೇ ರೀತಿಯ ಬಾಹ್ಯ ಶಬ್ದ ಮತ್ತು ಗಾಳಿಯ ಒತ್ತಡವನ್ನು ಸೂಕ್ತ ರೀತಿಯಲ್ಲಿ ಸರಿಹೊಂದಿಸಿ ಸರಿಸಾಟಿಯಿಲ್ಲದ ನಿಖರವಾಗಿ ಸದ್ದು ತಡೆಯುವ ಅನುಭವ ನೀಡುತ್ತದೆ. ಇದಕ್ಕೆ ಪೂರಕವಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿರುವ ಡ್ರೈವರ್ ಯೂನಿಟ್ ವರ್ಧಿತ ಶಬ್ದ ರದ್ದತಿಗೆ ಅತ್ಯುತ್ತಮ ರೀತಿಯಲ್ಲಿ ಹೊಂದಿಸಲಾಗಿದೆ.

ಆಟೊ ಆ್ಯಂಬಿಯೆಂಟ್ ಸೌಂಡ್ ಮೋಡ್ - ವಿಳಂಬಕ್ಕೆ ಅವಕಾಶ ನೀಡದೆ ನಿಮ್ಮ ಸುತ್ತ ಮುತ್ತಲಿನ ಪ್ರದೇಶಗಳಿಗೆ ಹೊಂದಿಕೊಳ್ಳುವಂತಹ ಸಂಗೀತ ಮತ್ತು ಬಾಹ್ಯ ಧ್ವನಿಯನ್ನು ಸಮತೋಲನಗೊಳಿಸುವಲ್ಲಿ ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸಲಿದೆ.

ಒಂದಕ್ಕಿಂತ ಹೆಚ್ಚು ಮೈಕ್ರೊಫೋನ್‌ಗಳು ಶಬ್ದವನ್ನು ಶೋಧಿಸಿ ಮುಖ್ಯವಾಗಿರುವುದಕ್ಕೆ ಮಾತ್ರ ಅವಕಾಶ ಒದಗಿಸುತ್ತವೆ. ಪ್ರಕಟಣೆಗಳು, ಸಂಭಾಷಣೆಗಳು ಅಥವಾ ನಿಮ್ಮ ಸುತ್ತಲಿನ ಪ್ರಪಂಚಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತವೆ. ಸೆಟ್ಟಿಂಗ್‌ಗಳನ್ನು ಸ್ವಯಂಚಾಲಿತವಾಗಿ ಹೊಂದಿಸಿ ಅಥವಾ ಸೋನಿ | ಸೌಂಡ್ ಕನೆಕ್ಟ್ ಅಪ್ಲಿಕೇಷನ್‌ನಲ್ಲಿ ಅವುಗಳನ್ನು ನೀವೆ ಸ್ವತಃ ಸರಿಪಡಿಸಿಕೊಳ್ಳಬಹುದು.

ಶ್ರೇಷ್ಠ ದರ್ಜೆಯ ಧ್ವನಿ, ಮಾಸ್ಟರ್ಸ್‌ ನೆರವಿನಿಂದ ಸಹ ಸೃಷ್ಟಿ

ಡಬ್ಲ್ಯುಎಚ್‌-1000ಎಕ್ಸ್‌6 ಹೆಡ್‌ಫೋನ್‌ಗಳು ಸಂಗೀತವನ್ನು ಅದು ಉದ್ದೇಶಿಸಿರುವ ರೀತಿಯಲ್ಲಿಯೇ ಕೇಳಲು ನಿಮಗೆ ಅನುವು ಮಾಡಿಕೊಡಲಿವೆ. ಉದ್ಯಮದ ಮೂರು ಉನ್ನತ ರೆಕಾರ್ಡಿಂಗ್ ಸ್ಟುಡಿಯೊ ಗಳಾದ ಸ್ಟರ್ಲಿಂಗ್ ಸೌಂಡ್, ಬ್ಯಾಟರಿ ಸ್ಟುಡಿಯೋಸ್‌ ಮತ್ತು ಕೋಸ್ಟ್ ಮಾಸ್ಟರಿಂಗ್‌ಗಳಲ್ಲಿ ವಿಶ್ವಪ್ರಸಿದ್ಧ ಮಾಸ್ಟರಿಂಗ್ ಎಂಜಿನಿಯರ್‌ಗಳ ಸಹಯೋಗದೊಂದಿಗೆ ಈ ಹೆಡ್‌ಫೋನ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಡಬ್ಲ್ಯುಎಚ್‌-1000ಎಕ್ಸ್‌ಎಂ6 ಸ್ಟುಡಿಯೊ-ಮಟ್ಟದ ನಿಖರತೆಗಾಗಿ ಪ್ರತಿಯೊಂದನ್ನು ಪರಿಷ್ಕರಿಸಿ ಉತ್ತಮ ಸಂಗೀತ ಆಲಿಸುವ ಅನುಭವ ನೀಡುತ್ತದೆ.

ಡಬ್ಲ್ಯುಎಚ್‌-1000ಎಕ್ಸ್‌ಎಂ6- ಅನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾದ ಡ್ರೈವರ್ ಯೂನಿಟ್‌ ನೊಂದಿಗೆ ಪರಿಪೂರ್ಣತೆ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಇದು ಗರಿಷ್ಠ ಮಟ್ಟದ ಸ್ಪಷ್ಟತೆಯನ್ನು ನೀಡುತ್ತದೆ. ಇಲ್ಲಿಯ ಪ್ರತಿಯೊಂದು ವಿವರವು ನಿಖರತೆಯೊಂದಿಗೆ ಬರುತ್ತದೆ.

ಗರಿಷ್ಠ ಬಿಗಿತದ ಕಾರ್ಬನ್ ಫೈಬರ್ ಸಂಯೋಜಿತ ಮತ್ತು ಅನನ್ಯವಾಗಿ ಅಭಿವೃದ್ಧಿಪಡಿಸ ಲಾಗಿರುವ ಧ್ವನಿ ಸುರುಳಿ ರಚನೆಯು ಪ್ರತಿ ಆವರ್ತನದಲ್ಲಿ ಸೂಕ್ಷ್ಮತೆಗಳನ್ನು ಹೊರಡಿಸುತ್ತದೆ. ಹೀಗಾಗಿ ಗಾಯನವು ಉತ್ಕೃಷ್ಟವಾಗಿ ಧ್ವನಿಸುತ್ತದೆ. ಪ್ರತಿಯೊಂದು ಟ್ರ್ಯಾಕ್ ಹೆಚ್ಚು ಭಾವನೆಯನ್ನು ಹೊಂದಿರಲಿದೆ.

ಹೈ-ರೆಸಲ್ಯೂಷನ್ ಸದ್ದು ತಡೆಯುವ ಪ್ರೊಸೆಸರ್ ಕ್ಯುಎನ್‌3 ಸುಧಾರಿತ ಡಿ/ಎ ಪರಿವರ್ತನೆಗೆ ಸುಧಾರಿತ ಲುಕ್-ಅಹೆಡ್ ನ್ವಾಯಿಸ್‌ ಶೇಪರ್ ಒಳಗೊಂಡಿದೆ.

ಇದು ಡಬ್ಲ್ಯುಎಚ್‌-1000ಎಕ್ಸ್‌ಎಂ6- ಹಠಾತ್ ಧ್ವನಿ ಬದಲಾವಣೆಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸು ವಾಗ ಪ್ರಮಾಣೀಕರಣ ಶಬ್ದವನ್ನು ಊಹಿಸಲು ಮತ್ತು ಅತ್ಯುತ್ತಮವಾಗಿಸಲು ಅನುವು ಮಾಡಿ ಕೊಡುತ್ತದೆ. ಇದು ನಿಮಗೆ ಸ್ಪಷ್ಟವಾದ ವಿವರಗಳು, ಉತ್ಕೃಷ್ಟ ಬಾಸ್ ಮತ್ತು ಗರಿಷ್ಠ ಪ್ರಮಾಣದಲ್ಲಿ ಸಹಜವಾಗಿ ಆಲಿಸುವ ಅನುಭವವನ್ನು ನೀಡುತ್ತದೆ.

ಡಬ್ಲ್ಯುಎಚ್‌-1000ಎಕ್ಸ್‌ಎಂ6 - ಹೈ-ರೆಸಲ್ಯೂಷನ್ ಧ್ವನಿ ಮತ್ತು ಹೈ-ರೆಸಲ್ಯೂಷನ್ ಆಡಿಯೊ ವೈರ್‌ಲೆಸ್ ಅನ್ನು ಬೆಂಬಲಿಸುತ್ತದೆ.  ಇಲ್ಲಿ ಸೋನಿಯ ಆಡಿಯೊ ಕೋಡಿಂಗ್ ತಂತ್ರಜ್ಞಾನ ಎಲ್‌ಡಿಎಸಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಇದರ ಜೊತೆಗೆ, ಆಧುನಿಕ ಸಂಪರ್ಕ ಸಾಧನಗಳಲ್ಲಿನ ಕೃತಕ ಜಾಣ್ಮೆ ಬಳಸಿಕೊಂಡು, ಡಿಎಸ್‌ಇಇ ಎಕ್ಸ್‌ಟ್ರೀಮ್™ ಕಂಪ್ರೆಷನ್‌ನಲ್ಲಿ ಕಳೆದುಹೋದ ಉನ್ನತ ಶ್ರೇಣಿಯ ಧ್ವನಿಯನ್ನು ಪುನಃಸ್ಥಾಪಿಸಲು ತಕ್ಷಣಕ್ಕೆ ಸಂಕುಚಿತ ಡಿಜಿಟಲ್ ಸಂಗೀತ ಕಡತಗಳನ್ನು ಉನ್ನತಿಕರಿಸುತ್ತದೆ.

ಸೋನಿ | ಸೌಂಡ್‌ ಕನೆಕ್ಟ್‌ ಅಪ್ಲಿಕೇಷನ್ ಡಬ್ಲ್ಯುಎಚ್‌-1000ಎಕ್ಸ್‌ಎಂ6-ನಲ್ಲಿ ನಿಮ್ಮ ಮನರಂಜನಾ ಅನುಭವವನ್ನು ಇನ್ನಷ್ಟು ಸುಲಭಗೊಳಿಸುತ್ತದೆ. ಸಂಗೀತ ಆಲಿಸುವಾಗ, ನೀವು 10-ಬ್ಯಾಂಡ್ ಇಕ್ಯು ನೊಂದಿಗೆ ಪರಿಪೂರ್ಣ ಧ್ವನಿಯನ್ನು ಡಯಲ್ ಮಾಡಬಹುದು ಅಥವಾ ಹಿನ್ನೆಲೆ ಸಂಗೀತದ ನೆರವಿನಿಂದ ಪ್ರಶಾಂತ ಮನೋಭಾವ ಹೊಂದಬಹುದು. ಎಫ್‌ಪಿಎಸ್‌ ಗೇಮಿಂಗ್‌ಗಾಗಿ ಧ್ವನಿ ಗುಣಮಟ್ಟವನ್ನು ಹೆಚ್ಚಿಸಲು ಅದರ ಇನ್‌ಝೋನ್‌ ಶ್ರೇಣಿಯಿಂದ ಸೋನಿಯ ಪರಿಣತಿಯೊಂದಿಗೆ ಅಭಿವೃದ್ಧಿಪಡಿಸಲಾದ ಗೇಮ್ ಇಕ್ಯು ಅನ್ನು ಗೇಮ್‌ ಆಡುವವರು ಆನಂದಿಸಬಹುದು. ಪ್ರಯಾಣ ದಲ್ಲಿರುವಾಗ ಚಲನಚಿತ್ರಗಳನ್ನು ವೀಕ್ಷಿಸುವವರಿಗೆ, ಡಬ್ಲ್ಯುಎಚ್‌-1000 ಎಕ್ಸ್‌ಎಂ6 ಸಿನಿಮಾಕ್ಕಾಗಿ 360 ಡಿಗ್ರಿ ರಿಯಾಲಿಟಿ ಆಡಿಯೊ ಅಪ್‌ಮಿಕ್ಸ್ ಅನ್ನು ಸಹ ಒಳಗೊಂಡಿದೆ. ಇದು ಸೋನಿಯ ವಿಶಿಷ್ಟ ಅಪ್‌ಮಿಕ್ಸ್ ಮತ್ತು 360 ಸ್ಪಾಟಿಯಲ್ ಸೌಂಡ್ ತಂತ್ರಜ್ಞಾನದಿಂದ ನೀವು 2ಸಿಎಚ್‌ ಸ್ಟೀರಿಯೊ ಧ್ವನಿಯಿಂದ ಸಿನಿಮಾ ಥೇಟರ್‌ನಲ್ಲಿರುವಂತಹ ಧ್ವನಿ ಆಲಿಸುವ ಅನುಭವ ನೀಡುತ್ತದೆ.

ಸುಸ್ಪಷ್ಟ ಕರೆ ಗುಣಮಟ್ಟದೊಂದಿಗೆ ಯಾವಾಗಲೂ ಕೇಳಿಸಿಕೊಳ್ಳಿ

ಡಬ್ಲ್ಯುಎಚ್‌-1000ಎಕ್ಸ್‌ಎಂ6- ಪ್ರತಿ ಕರೆಯಲ್ಲೂ ಸ್ಪಷ್ಟತೆಯನ್ನು ಆನಂದಿಸಲು ನಿಮಗೆ ನೆರವಾ ಗುತ್ತದೆ. ಬುದ್ಧಿವಂತ ಬೀಮ್‌ಫಾರ್ಮಿಂಗ್ ನಿಮ್ಮ ಧ್ವನಿಯನ್ನು ಹಿನ್ನೆಲೆ ಶಬ್ದದಿಂದ ಪ್ರತ್ಯೇಕಿಸುತ್ತದೆ. ಆದ್ದರಿಂದ ಇತರರು ಮಾತನಾಡುತ್ತಿರುವಾಗಲೂ ನೀವು ಯಾವಾಗಲೂ ಸ್ಪಷ್ಟವಾಗಿ ಕೇಳಿಸಿಕೊಳ್ಳು ತ್ತೀರಿ. ನೀವು ಧ್ವನಿ ಕೇಳಿಸದಂತೆ ಮಾಡಬೇಕಾದರೆ, ನಿಮ್ಮ ಹೆಡ್‌ಫೋನ್‌ಗಳಲ್ಲಿರುವ ಬಟನ್ ಮೂಲಕ ನೀವು ಅದನ್ನು ತಕ್ಷಣ ಮಾಡಬಹುದು.

ಸುಧಾರಿತ ಆರು-ಮೈಕ್ರೊಫೋನ್ಗಳು ಕೃತಕ ಜಾಣ್ಮೆ ಆಧಾರಿತ ಬೀಮ್‌ಫಾರ್ಮಿಂಗ್ ಸೌಲಭ್ಯದ ನೆರವಿನಿಂದ, ಡಬ್ಲ್ಯುಎಚ್‌-1000ಎಕ್ಸ್‌ಎಂ6 -ಹಿನ್ನೆಲೆ ಶಬ್ದವನ್ನು ಶೋಧಿಸುತ್ತವೆ. ಹೀಗಾಗಿ ಪ್ರತಿಯೊಂದು ಪದವು ಗದ್ದಲದ ಪರಿಸರದಲ್ಲಿಯೂ ಸಹ ಸ್ಫಟಿಕದಷ್ಟು ಸ್ಪಷ್ಟವಾಗಿ ಕೇಳಿಸುತ್ತದೆ.

ಕೃತಕ ಜಾಣ್ಮೆ ಪರಿಪೂರ್ಣಗೊಳಿಸಿರುವ ಶಬ್ದ ಕಡಿತ ಕ್ರಮಾವಳಿಯು ನಿಮ್ಮ ಧ್ವನಿಯನ್ನು ಪ್ರತ್ಯೇಕಿಸುವಾಗ ಹಿನ್ನೆಲೆ ಧ್ವನಿಯನ್ನು ನಿರ್ಬಂಧಿಸುತ್ತದೆ. ಬೀಮ್‌ಫಾರ್ಮಿಂಗ್ ಮೈಕ್ರೊಫೋನ್‌ಗಳು ಮತ್ತು