ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವಂದೇ ಮಾತರಂ ಗೀತೆಗೆ ಹೊಸ ಮಾರ್ಗಸೂಚಿ; ಎಲ್ಲಾ ಆರು ಚರಣಗಳ ಗೀತೆಗೆ ಎದ್ದು ನಿಲ್ಲಬೇಕು, ಎಲ್ಲೆಲ್ಲಿ ಕಡ್ಡಾಯ?

New guidelines for Vande Mataram: ವಂದೇ ಮಾತರಂ ಹಾಡುವ ಮೊದಲು ಎದ್ದು ನಿಂತು ಗೌರವ ಸಲ್ಲಿಸಬೇಕೆಂದು ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ರಾಷ್ಟ್ರೀಯ ಗೀತೆಗೆ ಸಂಬಂಧಿಸಿದ ಅಧಿಕೃತ ಪ್ರೋಟೋಕಾಲ್ ಮತ್ತು ಶಿಷ್ಟಾಚಾರವನ್ನು ಸ್ಪಷ್ಟಪಡಿಸುವ ಉದ್ದೇಶದಿಂದ ಈ ಸೂಚನೆಗಳನ್ನು ಜಾರಿಗೊಳಿಸಲಾಗಿದ್ದು, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಲಾಗಿದೆ.

ಸಾಂದರ್ಭಿಕ ಚಿತ್ರ

ನವದೆಹಲಿ, ಫೆ.11: ವಂದೇ ಮಾತರಂ (Vande Mataram) ಕುರಿತು ಹೊರಡಿಸಲಾದ ಇತ್ತೀಚಿನ ಮಾರ್ಗಸೂಚಿಗಳಲ್ಲಿ, ಕೇಂದ್ರ ಗೃಹ ಸಚಿವಾಲಯವು (Union Home Ministry) ರಾಷ್ಟ್ರೀಯ ಗೀತೆಯ ಅಧಿಕೃತ ಆವೃತ್ತಿಯನ್ನು ಹಾಡಿದಾಗ ಅಥವಾ ನುಡಿಸಿದಾಗಲೆಲ್ಲಾ ಪ್ರೇಕ್ಷಕರು ಎದ್ದು ನಿಲ್ಲಬೇಕು ಎಂದು ಹೇಳಿದೆ. ಆದರೆ, ಚಿತ್ರಮಂದಿರಗಳಲ್ಲಿ, ನ್ಯೂಸ್‌ರೀಲ್ ಅಥವಾ ಸಾಕ್ಷ್ಯಚಿತ್ರದ ಸಮಯದಲ್ಲಿ ಪ್ರೇಕ್ಷಕರು ಎದ್ದು ನಿಲ್ಲಬೇಕೆಂದು ಕಡ್ಡಾಯವಿಲ್ಲ.

ವರದಿ ಪ್ರಕಾರ, ಸಚಿವಾಲಯವು ರಾಷ್ಟ್ರೀಯ ಗೀತೆಯ ಅಧಿಕೃತ ಆವೃತ್ತಿ ಕುರಿತು ಮಾರ್ಗಸೂಚಿಗಳನ್ನು ಜಾರಿಗೊಳಿಸಿದ್ದು, ಗೀತೆಗೆ ಯೋಗ್ಯ ಗೌರವ ಸಲ್ಲಿಸಲು ಸರಿಯಾದ ಶಿಷ್ಟಾಚಾರವನ್ನು ಪಾಲಿಸುವ ಅಗತ್ಯವಿದೆ ಎಂದು ತಿಳಿಸಿದೆ. ಮಾರ್ಗಸೂಚಿಗಳ ಪ್ರಕಾರ, ರಾಷ್ಟ್ರೀಯ ಗೀತೆ ಮತ್ತು ರಾಷ್ಟ್ರಗೀತೆ ಎರಡನ್ನೂ ಹಾಡುವ ಸಂದರ್ಭದಲ್ಲಿ ಮೊದಲು ರಾಷ್ಟ್ರೀಯ ಗೀತೆಯನ್ನು ಹಾಡಲಾಗುತ್ತದೆ. ಜೊತೆಗೆ, ಬಂಕಿಮ ಚಂದ್ರ ಚಟರ್ಜಿ ರಚಿಸಿರುವ ರಾಷ್ಟ್ರೀಯ ಗೀತೆಯ ಎಲ್ಲಾ ಆರು ಚರಣಗಳನ್ನು, 1937ರಲ್ಲಿ ಕಾಂಗ್ರೆಸ್ ತೆಗೆದುಹಾಕಿದ್ದ ನಾಲ್ಕು ಚರಣಗಳನ್ನೂ ಸಹ ನುಡಿಸಲಾಗುತ್ತದೆ.

ಬಂಕಿಮ್ ಚಂದ್ರ ಚಟರ್ಜಿಯನ್ನು ನಿರ್ಲಕ್ಷಿಸಿದ ಬಂಗಾಳ ಸರ್ಕಾರ: ವಂದೇ ಮಾತರಂ ಚರ್ಚೆಯ ನಡುವೆ ಮರಿಮೊಮ್ಮಗ ಹೇಳಿದ್ದೇನು?

ವಂದೇ ಮಾತರಂ ಗೀತೆಯನ್ನು ಪದ್ಮ ಪ್ರಶಸ್ತಿಗಳಂತೆ ನಾಗರಿಕ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಮತ್ತು ರಾಷ್ಟ್ರಪತಿಗಳು ಭಾಗವಹಿಸುವ ಇತರ ಎಲ್ಲಾ ಕಾರ್ಯಕ್ರಮಗಳಲ್ಲಿ, ಅಂದರೆ ಅವರ ಆಗಮನ ಮತ್ತು ನಿರ್ಗಮನದ ಸಮಯದಲ್ಲಿ ನುಡಿಸಲಾಗುತ್ತದೆ.

ರಾಷ್ಟ್ರೀಯ ಗೀತೆಯನ್ನು ಹಾಡುವ ಎಲ್ಲಾ ಸಂದರ್ಭಗಳಲ್ಲಿ, ಅಧಿಕೃತ ಆವೃತ್ತಿಯನ್ನು ಸಾಮೂಹಿಕ ಗಾಯನದೊಂದಿಗೆ ಹೇಳಬೇಕು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ರಾಷ್ಟ್ರೀಯ ಗೀತೆ, ರಾಷ್ಟ್ರಗೀತೆ ಹಾಡುವಿಕೆಯನ್ನು ಜನಪ್ರಿಯಗೊಳಿಸಲು ಮತ್ತು ವಿದ್ಯಾರ್ಥಿಗಳಲ್ಲಿ ರಾಷ್ಟ್ರಧ್ವಜದ ಗೌರವವನ್ನು ಉತ್ತೇಜಿಸಲು ತಮ್ಮ ಕಾರ್ಯಕ್ರಮಗಳಲ್ಲಿ ಸಾಕಷ್ಟು ಅವಕಾಶಗಳನ್ನು ಕಲ್ಪಿಸುವಂತೆ ಅದು ಶಾಲೆಗಳಿಗೆ ಸೂಚನೆ ನೀಡಲಾಗಿದೆ.

ವಂದೇ ಮಾತರಂ ಗೀತೆಯನ್ನು ಜನಪ್ರಿಯಗೊಳಿಸಲು ಕೇಂದ್ರ ಸರ್ಕಾರ ಇತ್ತೀಚೆಗೆ ಮುಂದಾಗಿರುವ ನಡುವೆಯೇ ಈ ಕ್ರಮ ಕೈಗೊಳ್ಳಲಾಗಿದೆ. ಕಳೆದ ವರ್ಷ ಸಂಸತ್ತು ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಈ ಹಾಡಿನ ಕುರಿತು ಭಾರಿ ಚರ್ಚೆಗೆ ಸಾಕ್ಷಿಯಾಯಿತು.

ವಂದೇ ಮಾತರಂ ಸಾಲು

1870ರ ದಶಕದಲ್ಲಿ ಬಂಕಿಮ್ ಚಂದ್ರ ಚಟರ್ಜಿ ಅವರು ಸಂಸ್ಕೃತ ಮಿಶ್ರಿತ ಬೆಂಗಾಲಿ ಭಾಷೆಯಲ್ಲಿ ರಚಿಸಿದ ಈ 3 ನಿಮಿಷ 10 ಸೆಕೆಂಡ್‌ಗಳ ಗೀತೆ, ಮೊದಲು ಸ್ವಾತಂತ್ರ್ಯ ಚಳವಳಿಯಲ್ಲಿ ಮಾತೃಭೂಮಿಯನ್ನು ಕೊಂಡಾಡಲು ಅಳವಡಿಸಿಕೊಳ್ಳಲಾಯಿತು. ‘ಜನ ಗಣ ಮನ’ಗೆ ಇರುವಂತೆ, ವಂದೇ ಮಾತರಂ ಹಾಡುವ ಮೊದಲು ಪಾಲಿಸಬೇಕಾದ ಯಾವುದೇ ಅಧಿಕೃತ ಪ್ರೋಟೋಕಾಲ್ ಇದುವರೆಗೆ ಇರಲಿಲ್ಲ.

Vande Mataram: ಎಲ್ಲಾ ಶಾಲಾ-ಕಾಲೇಜುಗಳಲ್ಲಿ ವಂದೇ ಮಾತರಂ ಕಡ್ಡಾಯ: ಸಿಎಂ ಯೋಗಿ ಖಡಕ್‌ ಆದೇಶ

1882ರ ಅವರ ಕಾದಂಬರಿ ಆನಂದಮಠದಲ್ಲಿ ಮೊದಲು ಪ್ರಕಟವಾದ ಆರು ಚರಣಗಳ ಸ್ತುತಿಗೀತೆ ವಂದೇ ಮಾತರಂ. ನಂತರ 1950 ರಲ್ಲಿ, ಹಾಡಿನ ಮೊದಲ ಎರಡು ಚರಣಗಳನ್ನು ಭಾರತದ ರಾಷ್ಟ್ರೀಯ ಗೀತೆಯಾಗಿ ಸ್ವೀಕರಿಸಲಾಯಿತು.

ಡಿಸೆಂಬರ್ 2025 ರಲ್ಲಿ ನಡೆದ ಸಂಸತ್ತಿನ ಚಳಿಗಾಲದ ಅಧಿವೇಶನದ ಚರ್ಚೆಯ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿ ಚರ್ಚೆಯ ನೇತೃತ್ವ ವಹಿಸಿದ್ದರು. ಹಾಡಿನ ಮೂಲ ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಅದರ ಪಾತ್ರವನ್ನು ಎತ್ತಿ ತೋರಿಸಿದರು. ನಿರ್ಣಾಯಕ ಸಾಲುಗಳನ್ನು ತೆಗೆದುಹಾಕುವ ಮೂಲಕ ಕಾಂಗ್ರೆಸ್ ಪಕ್ಷವು ಹಾಡಿಗೆ ದ್ರೋಹ ಬಗೆದಿದೆ ಎಂದು ಆರೋಪಿಸಿದ್ದರು.