Star Fashion 2025: ಲಾಂಗ್ ಲೇಯರ್ ಕೋಟ್ನಲ್ಲಿ ವಿಂಟರ್ ಫ್ಯಾಷನ್ಗೆ ಸೈ ಎಂದ ನಟಿ ಸುಶ್ಮಿತಾ ಸೇನ್
Sushmita Sen: ಐವರಿ ಶೇಡ್ನ ಲಾಂಗ್ ಕಾಲರ್ ಇರುವ ಎಥ್ನಿಕ್ ಕೋಟ್ನಲ್ಲಿ ನಟಿ ಸುಶ್ಮಿತಾ ಸೇನ್ ಕಾಣಿಸಿಕೊಂಡಿದ್ದು, ಈ ವಿಂಟರ್ ಸೀಸನ್ನಲ್ಲಿ ಎಥ್ನಿಕ್ ಲುಕ್ ಬಯಸುವ ಫ್ಯಾಷನ್ ಪ್ರಿಯರಿಗೆ ಪ್ರಿಯವಾಗಿದೆ. ಇದ್ಯಾವ ಬಗೆಯ ಔಟ್ಫಿಟ್? ವಿಶೇಷತೆಯೇನು? ಇಲ್ಲಿದೆ ಡಿಟೇಲ್ಸ್.
ಚಿತ್ರಗಳು: ಸುಶ್ಮಿತಾ ಸೇನ್, ನಟಿ., ಫೋಟೋಗ್ರಾಫಿ: ಅನಿಶ್ ಗ್ರಿಡ್ -
ಶೀಲಾ ಸಿ ಶೆಟ್ಟಿ
Nov 5, 2025 7:00 AM
ಲಾಂಗ್ ಲೇಯರ್ ಎಥ್ನಿಕ್ ಕೋಟ್ನಲ್ಲಿ ನಟಿ ಸುಶ್ಮಿತಾ ಸೇನ್ ವಿಂಟರ್ ಫ್ಯಾಷನ್ಗೆ ಸೈ ಎಂದಿದ್ದಾರೆ. ಹೌದು, ನೋಡಲು ಮನಮೋಹಕವಾಗಿರುವ ಈ ಲಾಂಗ್ ಐವರಿ ಶೇಡ್ನ ಔಟ್ಫಿಟ್ ಲೇಯರ್ ಲುಕ್ ಬಯಸುವ ಎಥ್ನಿಕ್ ಫ್ಯಾಷನ್ ಪ್ರಿಯರನ್ನು ಆಕರ್ಷಿಸಿದ್ದು, ಈ ಸೀಸನ್ನಲ್ಲಿ ಟ್ರೆಂಡ್ ಸೆಟ್ ಮಾಡಿದೆ.
ಇದ್ಯಾವ ಬಗೆಯ ಡಿಸೈನರ್ವೇರ್?
ಅಂದಹಾಗೆ, ಸುಶ್ಮಿತಾ ಸೇನ್ ಧರಿಸಿರುವ ಈ ಔಟ್ಫಿಟ್ ಸೆಲೆಬ್ರೆಟಿ ಡಿಸೈನರ್ ರೋಹಿತ್ ಬಾಲ್ ಅವರ ಕಲೆಕ್ಷನ್ದ್ದಾಗಿದೆ. ನೋಡಲು ಸಿಂಪಲ್ಲಾಗಿ ಕಂಡರೂ ದುಬಾರಿಯದ್ದಾಗಿದೆ. ರಾಯಲ್ ಲುಕ್ ನೀಡುವ ಐವರಿ ಶೇಡ್ನಲ್ಲಿ ಕಾಲರ್ ಹೊಂದಿರುವ ಮೇಲ್ಭಾಗದ ಈ ಕೋಟ್ ಪಾದಗಳವರೆಗೂ ಅಂದರೇ ಫ್ಲೋರ್ ಲೆಂಥ್ ಹೊಂದಿದೆ. ಲೇಯರ್ ಲುಕ್ಗೆ ಸಾಥ್ ನೀಡಿದೆ. ಇನ್ನು, ಒಳಗಡೆ ಬ್ಲ್ಯಾಕ್ ಶೇಡ್ನ ಲಾಂಗ್ ಫ್ರಾಕ್ನಂತಹ ಎ ಲೈನ್ ಡ್ರೆಸ್ ಇದಕ್ಕೆ ಮಿಕ್ಸ್ ಮ್ಯಾಚ್ ಮಾಡಲಾಗಿದೆ. ಹೆಚ್ಚೇನೂ ಡಿಸೈನ್ ಹೊಂದಿಲ್ಲದ ಈ ಡಿಸೈನರ್ವೇರ್ ಈ ವಿಂಟರ್ ಸೀಸನ್ನ ಎಥ್ನಿಕ್ವೇರ್ ಕೆಟಗರಿಯಲ್ಲಿ ಟ್ರೆಂಡಿಯಾಗಿದೆ.
ಲೇಯರ್ ಎಥ್ನಿಕ್ ಲುಕ್ಗೆ ಲಾಂಗ್ ಕೋಟ್
ಅಂದಹಾಗೆ, ಈ ವಿಂಟರ್ ಸೀಸನ್ನಲ್ಲಿ ಗ್ಲಾಮರಸ್ ಡ್ರೆಸ್ ಧರಿಸಲು ಬಹಳಷ್ಟು ಮಂದಿ ಹಿಂದೇಟು ಹಾಕುತ್ತಾರೆ. ಇದಕ್ಕೆ ಕಾರಣವೂ ಇದೆ. ಅತಿಯಾದ ಥಂಡಿ ಹಾಗೂ ಗಾಳಿ. ಇದಕ್ಕೆ ಪೂರಕ ಎಂಬಂತೆ ಈ ಎಥ್ನಿಕ್ವೇರ್ ಲೇಯರ್ ಲುಕ್ನಲ್ಲಿರುವ ಲಾಂಗ್ ಕೋಟ್, ಜಾಕೆಟ್ಗಳು ಟ್ರೆಂಡಿಯಾಗುತ್ತವೆ ಎನ್ನುತ್ತಾರೆ ಡಿಸೈನರ್ಸ್.
ಲಾಂಗ್ ಎಥ್ನಿಕ್ ಕೋಟ್ಗಳ ಬಳಕೆ
ಲಾಂಗ್ ಎಥ್ನಿಕ್ ಲುಕ್ ಇರುವ ಕೋಟ್ಗಳನ್ನು ದೇಸಿ ಔಟ್ಫಿಟ್ಗಳ ಜತೆ ಮಾತ್ರವಲ್ಲ, ವೆಸ್ಟರ್ನ್ ಔಟ್ಫಿಟ್ಗಳೊಂದಿಗೂ ಬಳಸಬಹುದು. ಗೌನ್ ಜತೆ, ಸೀರೆ ಜತೆ, ಲೆಹೆಂಗಾ ಜತೆಯೂ ಮಿಕ್ಸ್ ಮ್ಯಾಚ್ ಬಳಸಬಹುದು ಎನ್ನುತ್ತಾರೆ ಡಿಸೈನರ್ಸ್.
ಐವರಿ ಶೇಡ್ನ ಲಾಂಗ್ ಕಾಲರ್ ಇರುವ ಎಥ್ನಿಕ್ ಕೋಟ್ನಲ್ಲಿ ನಟಿ ಸುಶ್ಮಿತಾ ಸೇನ್ ಕಾಣಿಸಿಕೊಂಡಿದ್ದು, ಈ ವಿಂಟರ್ ಸೀಸನ್ನಲ್ಲಿ ಎಥ್ನಿಕ್ ಲುಕ್ ಬಯಸುವ ಫ್ಯಾಷನ್ ಪ್ರಿಯರಿಗೆ ಪ್ರಿಯವಾಗಿದೆ.