ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಬೀದಿ ನಾಯಿಗಳ ಪರ ಹೇಳಿಕೆ: ಮೇನಕಾ ಗಾಂಧಿಯನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್

Supreme Court Slams Maneka Gandhi: ಬೀದಿ ನಾಯಿಗಳ ಕುರಿತು ಮಾಜಿ ಕೇಂದ್ರ ಸಚಿವೆಯೂ ಪ್ರಾಣಿಹಕ್ಕು ಹೋರಾಟಗಾರ್ತಿಯೂ ಆದ ಮೇನಕಾ ಗಾಂಧಿ ನೀಡಿರುವ ಹೇಳಿಕೆಗೆ ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಪಾಡ್‌ಕಾಸ್ಟ್‌ನಲ್ಲಿ ನ್ಯಾಯಾಲಯದ ಅಭಿಪ್ರಾಯಗಳ ಬಗ್ಗೆ ಅವರು ನೀಡಿರುವ ಹೇಳಿಕೆ ಹಾಗೂ ಅವರ ವರ್ತನೆ ಕುರಿತು ಪೀಠ ಅಸಮಾಧಾನ ವ್ಯಕ್ತಪಡಿಸಿದೆ.

ಮೇನಕಾ ಗಾಂಧಿಯನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್

ಮೇನಕಾ ಗಾಂಧಿ ಮತ್ತು ಸುಪ್ರೀಂ ಕೋರ್ಟ್ (ಸಂಗ್ರಹ ಚಿತ್ರ) -

Priyanka P
Priyanka P Jan 20, 2026 6:05 PM

ನವದೆಹಲಿ, ಜ. 20: ಪ್ರಾಣಿಹಕ್ಕು ಕಾರ್ಯಕರ್ತೆ ಮತ್ತು ಕೇಂದ್ರದ ಮಾಜಿ ಸಚಿವೆ ಮೇನಕಾ ಗಾಂಧಿ (Maneka Gandhi) ಅವರನ್ನು ಸುಪ್ರೀಂ ಕೋರ್ಟ್ (Supreme Court) ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಬೀದಿ ನಾಯಿಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಅಭಿಪ್ರಾಯಗಳ ಕುರಿತು ಅವರು ಪಾಡ್‌ಕಾಸ್ಟ್‌ನಲ್ಲಿ ನೀಡಿರುವ ಹೇಳಿಕೆಗಳು ಮತ್ತು ಬಾಡಿ ಲ್ಯಾಂಗ್ವೇಜ್ ಬಗ್ಗೆ ಪ್ರಶ್ನಿಸಿದೆ.

ನ್ಯಾಯಮೂರ್ತಿಗಳಾದ ವಿಕ್ರಮ್‌ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಅವರಿದ್ದ ಪೀಠವು, ನ್ಯಾಯಾಲಯವು ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳದಿರುವುದು ಅದರ ಔದಾರ್ಯ ಎಂದು ಹೇಳಿದೆ. ನ್ಯಾಯಾಲಯವು, ಬೀದಿ ನಾಯಿಗಳ ದಾಳಿಗಳಿಗೆ ನಾಯಿಗೆ ಆಹಾರ ನೀಡುವವರನ್ನು ಹೊಣೆಗಾರರನ್ನಾಗಿ ಮಾಡುವ ಬಗ್ಗೆ ಹೇಳಿಕೆ ನೀಡಿರುವುದು ವ್ಯಂಗ್ಯವಾಗಿ ಅಲ್ಲ, ಗಂಭೀರವಾದುದು ಎಂದು ಸ್ಪಷ್ಟಪಡಿಸಿದೆ.

ತಕ್ಷಣ ಬೀದಿ ನಾಯಿಗಳನ್ನು ತೆರವುಗೊಳಿಸಿ- ಸುಪ್ರೀಂ ಕೋರ್ಟ್‌ ಖಡಕ್‌ ಆದೇಶ

ಸ್ವಲ್ಪ ಸಮಯದ ಹಿಂದಷ್ಟೇ ನೀವು ನ್ಯಾಯಾಲಯಕ್ಕೆ ಎಚ್ಚರಿಕೆಯಿಂದ ವರ್ತಿಸಬೇಕು ಎಂದು ಹೇಳುತ್ತಿದ್ದಿರಿ. ನಿಮ್ಮ ಕಕ್ಷಿದಾರರು ಯಾವ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂಬುದನ್ನು ನೀವು ಗಮನಿಸಿದ್ದೀರಾ? ನಿಮ್ಮ ಕಕ್ಷಿದಾರರು ನ್ಯಾಯಾಂಗ ನಿಂದನೆ ಮಾಡಿದ್ದಾರೆ. ಆದರೆ ನಾವು ಅದನ್ನು ಪರಿಗಣಿಸುತ್ತಿಲ್ಲ. ಅದೇ ನಮ್ಮ ಔದಾರ್ಯ. ನೀವು ಅವರ ಪಾಡ್‌ಕಾಸ್ಟ್ ಕೇಳಿದ್ದೀರಾ? ಅವರ ದೇಹಭಾಷೆ ಹೇಗಿದೆ? ಅವರು ಏನು ಹೇಳುತ್ತಾರೆ ಮತ್ತು ಅದನ್ನು ಹೇಗೆ ಹೇಳುತ್ತಾರೆ ಎಂಬುದನ್ನೂ ಗಮನಿಸಿದ್ದೀರಾ? ಎಂದು ಮೇನಕಾ ಗಾಂಧಿ ಅವರ ವಕೀಲ ರಾಜು ರಾಮಚಂದ್ರನ್ ಅವರಿಗೆ ನ್ಯಾಯಾಲಯ ಹೇಳಿದೆ.

ನ್ಯಾಯಾಲಯವು ಎಚ್ಚರಿಕೆಯಿಂದ ವರ್ತಿಸಬೇಕು ಎಂದು ನೀವು ಹೇಳಿಕೆ ನೀಡಿದ್ದೀರಿ. ಆದರೆ ಮತ್ತೊಂದೆಡೆ, ನಿಮ್ಮ ಕಕ್ಷಿದಾರರು ತಮಗೆ ಇಷ್ಟವಾದ ಯಾರ ಮೇಲಾದರೂ ಹಾಗೂ ಯಾವುದರ ಕುರಿತಾದರೂ ಎಲ್ಲ ರೀತಿಯ ಕಮೆಂಟ್‍ಗಳನ್ನು ಮಾಡುತ್ತಿದ್ದಾರೆ ಎಂದು ಪೀಠ ಹೇಳಿದೆ.

ನ್ಯಾಯಾಲಯದ ಅವಲೋಕನಗಳ ಬಗ್ಗೆ ಪ್ರತಿಕ್ರಿಯಿಸಲು ರಾಮಚಂದ್ರನ್ ನಿರಾಕರಿಸಿದರು. ಏಕೆಂದರೆ ಇದು ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆಯಾಗಿರಲಿಲ್ಲ. ಒಂದು ಹಂತದಲ್ಲಿ, ಅವರು 26/11 ಭಯೋತ್ಪಾದಕ ಅಜ್ಮಲ್ ಕಸಬ್ ಪರವಾಗಿ ಹಾಜರಾಗಿದ್ದರು ಎಂದು ಹೇಳಿದರು. ನ್ಯಾಯಮೂರ್ತಿ ನಾಥ್, "ಕಸಬ್ ನ್ಯಾಯಾಂಗ ನಿಂದನೆ ಮಾಡಿಲ್ಲ" ಎಂದು ಉತ್ತರಿಸಿದರು.

ನ್ಯಾಯಾಲಯದ ಗಮನಾರ್ಹ ಅಭಿಪ್ರಾಯಗಳ ಕುರಿತು ಇದು ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆಯಲ್ಲದ ಕಾರಣ ರಾಮಚಂದ್ರನ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಆದರೆ ಅವರು 26/11 ಭಯೋತ್ಪಾದಕಾ ದಾಳಿಯ ಆರೋಪಿ ಅಜ್ಮಲ್ ಕಸಬ್ ಪರವಾಗಿ ತಾವು ವಾದಿಸಿದ್ದೇನೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ, ಕಸಬ್ ನ್ಯಾಯಾಂಗ ಅವಮಾನ ಮಾಡಿರಲಿಲ್ಲ ಎಂದು ಹೇಳಿದರು.

ವಕೀಲರು ರೇಬೀಸ್ ನಿಯಂತ್ರಣ ಕ್ರಮಗಳು, ಲಸಿಕೆಗಳ ಲಭ್ಯತೆ ಹಾಗೂ ಬೀದಿ ನಾಯಿಗಳ ದಾಳಿಗಳನ್ನು ಎದುರಿಸಲು ವೃತ್ತಿಪರರ ಸಾಮರ್ಥ್ಯ ವೃದ್ಧಿಯ ಕುರಿತು ಮಾತನಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, ನಿಮ್ಮ ಕಕ್ಷಿದಾರರು ಪ್ರಾಣಿಹಕ್ಕು ಹೋರಾಟಗಾರರು, ಅವರು ಕ್ಯಾಬಿನೆಟ್ ಸಚಿವೆಯೂ ಆಗಿದ್ದರು. ಹಾಗಾದರೆ ಈ ಯೋಜನೆಗಳನ್ನು ಜಾರಿಗೊಳಿಸಲು ಅಗತ್ಯವಾದ ಬಜೆಟ್ ಹಂಚಿಕೆಗಳಿಗೆ ನಿಮ್ಮ ಕಕ್ಷಿದಾರರು ನೀಡಿರುವ ಕೊಡುಗೆಗಳು ಏನು? ಎಂದು ಪ್ರಶ್ನಿಸಿದೆ.

ಅರ್ಜಿದಾರರಲ್ಲಿ ಒಬ್ಬರ ಪರವಾಗಿ ಹಾಜರಾದ ವಕೀಲ ಪ್ರಶಾಂತ್ ಭೂಷಣ್, ಬೀದಿ ನಾಯಿಗಳ ಆಕ್ರಮಣವನ್ನು ಕಡಿಮೆ ಮಾಡುತ್ತದೆ. ಆದರೆ ಹೆಚ್ಚಿನ ನಗರಗಳಲ್ಲಿ ಪರಿಣಾಮಕಾರಿ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಯನ್ನು ಜಾರಿಗೆ ತರಲಾಗುತ್ತಿಲ್ಲ ಎಂದು ಹೇಳಿದರು.