Market outlook: ಕೊನೆಗೂ ಚೇತರಿಸಿದ ಸೆನ್ಸೆಕ್ಸ್, ನಿಫ್ಟಿ, ಬ್ಯಾಂಕಿಂಗ್, ಫೈನಾನ್ಸ್ ಷೇರುಗಳಿಗೆ ಲಾಭ
Market outlook: ಇವತ್ತು ಅಂದ್ರೆ ಸೋಮವಾರ ಸ್ಟಾಕ್ ಮಾರ್ಕೆಟ್‌ನಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಬೆಳಗ್ಗಿನ ವಹಿವಾಟಿನಲ್ಲಿ 500 ಅಂಕಗಳ ಏರಿಕೆಯೊಂದಿಗೆ ಶುಭಾರಂಭ ಮಾಡಿತು. ಬ್ಯಾಂಕಿಂಗ್, ಫೈನಾನ್ಷಿಯಲ್, ಆಟೊಮೊಬೈಲ್ ವಲಯದ ಷೇರುಗಳು ಲಾಭ ಗಳಿಸಿತು. ಏಷ್ಯಾದ ಮಾರುಕಟ್ಟೆಗಳಲ್ಲಿನ ವಾತಾವರಣ ಪಾಸಿಟಿವ್ ಆಗಿತ್ತು. ಮತ್ತೊಂದು ಕಡೆ ಚೀನಾ ತನ್ನ Consumption ಹೆಚ್ಚಿಸಲು ಹೊಸ ಕ್ರಮಗಳನ್ನು ಘೋಷಿಸಿದ್ದರಿಂದ ಮಾರುಕಟ್ಟೆಯಲ್ಲಿ ಸೂಚ್ಯಂಕಗಳು ಚೇತರಿಸಿತು


ಬೆಂಗಳೂರು: ಈ ವಾರ ಸ್ಟಾಕ್ ಮಾರ್ಕೆಟ್(Market outlook) ಮೇಲೆ ಪ್ರಭಾವ ಬೀರಬಹುದಾದ ಪ್ರಮುಖ ವಿಷಯಗಳ ಲಿಸ್ಟ್, ಕೊನೆಗೂ ಸೆನ್ಸೆಕ್ಸ್, ನಿಫ್ಟಿಯ ಚೇತರಿಕೆಯ ಡೆವಲಪ್‌ಮೆಂಟ್ ಮತ್ತು ಮಾರ್ಚ್ 17ರಿಂದ ಖರೀದಿಸಬಹುದಾದ ಪ್ರಮುಖ ಷೇರುಗಳು, ಡಿವಿಡೆಂಡ್ ಸುದ್ದಿಗಳನ್ನು ಈಗ ನೋಡೋಣ. ಮೊದಲನೆಯದಾಗಿ, ಇವತ್ತು ಅಂದ್ರೆ ಸೋಮವಾರ ಸ್ಟಾಕ್ ಮಾರ್ಕೆಟ್‌ನಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಬೆಳಗ್ಗಿನ ವಹಿವಾಟಿನಲ್ಲಿ 500 ಅಂಕಗಳ ಏರಿಕೆಯೊಂದಿಗೆ ಶುಭಾರಂಭ ಮಾಡಿತು. ಬ್ಯಾಂಕಿಂಗ್, ಫೈನಾನ್ಷಿಯಲ್, ಆಟೊಮೊಬೈಲ್ ವಲಯದ ಷೇರುಗಳು ಲಾಭ ಗಳಿಸಿತು. ಏಷ್ಯಾದ ಮಾರುಕಟ್ಟೆಗಳಲ್ಲಿನ ವಾತಾವರಣ ಪಾಸಿಟಿವ್ ಆಗಿತ್ತು. ಮತ್ತೊಂದು ಕಡೆ ಚೀನಾ ತನ್ನ Consumption ಹೆಚ್ಚಿಸಲು ಹೊಸ ಕ್ರಮಗಳನ್ನು ಘೋಷಿಸಿದ್ದರಿಂದ ಮಾರುಕಟ್ಟೆಯಲ್ಲಿ ಸೂಚ್ಯಂಕಗಳು ಚೇತರಿಸಿತು. ಬೆಳಗ್ಗಿನ ವಹಿವಾಟಿನಲ್ಲಿ ಸೆನ್ಸೆಕ್ಸ್ 74,328 ಕ್ಕೆ ಜಿಗಿಯಿತು. ನಿಫ್ಟಿ 152 ಅಂಕ ಏರಿಕೊಂಡು 22,549ಕ್ಕೆ ವಹಿವಾಟು ನಡೆಸಿತು.
ಇತ್ತೀಚೆಗೆ ಭಾರಿ ಕುಸಿತಕ್ಕೀಡಾಗಿದ್ದ ಇಂಡಸ್‌ಇಂಡ್ ಬ್ಯಾಂಕ್ ಷೇರು ಬೆಳಗ್ಗಿನ ವಹಿವಾಟಿನಲ್ಲಿ 5% ಏರಿತು. ಆರ್‌ಬಿಐ ಬ್ಯಾಂಕಿನ ಠೇವಣಿದಾರರಿಗೆ ಭರವಸೆ ನೀಡಿದ್ದರಿಂದ ಹೂಡಿಕೆದಾರರಿಗೆ ರಿಲೀಫ್ ಸಿಕ್ಕಿದಂತಾಯಿತು. ಉಳಿದಂತೆ ಬಜಾಜ್ ಫಿನ್ ಸರ್ವ್, ಮಹೀಂದ್ರಾ ಆಂಡ್ ಮಹೀಂದ್ರಾ, ಬಜಾಜ್ ಫೈನಾನ್ಸ್, ಸನ್ ಫಾರ್ಮಾ, ಅದಾನಿ ಪೋರ್ಟ್ ಷೇರುಗಳ ದರ ಏರಿತು.
ಕಳೆದ ವಾರ ಐಟಿ ಸೆಕ್ಟರ್‌ನಲ್ಲಿ ಸೆಲ್ಲಿಂಗ್ ಪ್ರೆಶರ್ ಇದ್ದುದರಿಂದ ನಿಫ್ಟಿ 0.7% ಇಳಿಕೆಯನ್ನು ದಾಖಲಿಸಿತ್ತು. ಕಳೆದ ಶುಕ್ರವಾರ ನಿಟಿಯು 73 ಅಂಕ ಕಳೆದುಕೊಂಡು 22,397ಕ್ಕೆ ಸ್ಥಿರವಾಗಿತ್ತು. ಅಮೆರಿಕದ ಫೆಡರಲ್ ಓನ್ ಮಾರ್ಕೆಟ್ ಕಮಿಟಿ ಅಥವಾ FOMC ಮೀಟಿಂಗ್ ಮಾರ್ಚ್ 18 ಮತ್ತು 19ಕ್ಕೆ ನಡೆಯಲಿದೆ. ಬಹುತೇಕ ಆರ್ಥಿಕ ತಜ್ಞರ ಪ್ರಕಾರ ಅಮೆರಿಕದ ಸೆಂಟ್ರಲ್ ಬ್ಯಾಂಕ್ ಆಗಿರುವ ಫೆಡರಲ್ ರಿಸರ್ವ್ ತನ್ನ ಬಡ್ಡಿ ದರವನ್ನು 4.25ರಿಂದ 4.50% ರ ರೇಂಜ್‌ನ ಯಥಾಸ್ಥಿತಿಯಲ್ಲಿ ಮುಂದುವರಿಸಲಿದೆ. ಮಾರ್ಚ್ 19ರಂದು ಫೆಡರಲ್ ರಿಸರ್ವ್ ಮುಖ್ಯಸ್ಥ ಜೆರೋಮ್ ಪೊವೆಲ್ ಅವರು ಬಡ್ಡಿದರ ಘೋಷಣೆ ಮಾಡಲಿದ್ದಾರೆ. ಈ ಜೆರೋಮ್ ಪೊವೆಲ್ ಅವರು ಅಮೆರಿಕದ ಆರ್ಥಿಕತೆ, ಉದ್ಯೋಗ ಸೃಷ್ಟಿ, ಹಣದುಬ್ಬರ, ಮುಂಬರುವ ಬಡ್ಡಿ ದರಗಳ ಬಗ್ಗೆ ನೀಡುವ ಅಭಿಪ್ರಾಯ ಮತ್ತು ಸುಳಿವುಗಳು ಜಾಗತಿಕ ಸ್ಟಾಕ್ ಮಾರ್ಕೆಟ್ ಮೇಲೆ ಪ್ರಭಾವ ಬೀರುತ್ತವೆ.
ಮುಂದಿನ ಬಡ್ಡಿ ದರ ಕಡಿತದ ನಿರ್ಧಾರಗಳು ಲಭ್ಯವಿರುವ ಅಂಕಿ ಅಂಶಗಳನ್ನು ಆಧರಿಸಿ ನಿರ್ಣಯವಾಗಲಿದೆ. ಟ್ರಂಪ್ ಸರಕಾರ ವಿದೇಶಿ ಕಂಪನಿಗಳ ಮೇಲೆ ಯಾವ ರೀತಿ ತೆರಿಗೆ ವಿಧಿಸಲಿವೆ ಹಾಗೂ ಇದರಿಂದ ಹಣದುಬ್ಬರದ ಮೇಲೆ ಯಾವ ಪ್ರಭಾವ ಬೀರಲಿದೆ ಎಂಬುದು ನೊರ್ಣಾಯಕವಾಗಲಿದೆ. ಆದರೆ ಜನವರಿಯಲ್ಲಿದ್ದ 3% ನಷ್ಟಿದ್ದ ಹಣದುಬ್ಬರ ಫೆಬ್ರವರಿಯಲ್ಲಿ 2.8% ಕ್ಕೆ ಇಳಿದಿತ್ತು.
ಈ ಸುದ್ದಿಯನ್ನೂ ಓದಿ:The Balochistan Story: ಪಾಕ್-ಬಲೂಚ್ ಬಿಕ್ಕಟ್ಟಿನ ಹಿಂದಿದೆ 174 ಲಕ್ಷ ಕೋಟಿ ರೂ. ಮೌಲ್ಯದ ಚಿನ್ನದ ರಹಸ್ಯ!
ಅಮೆರಿಕದ ಮಾರುಕಟ್ಟೆಯಲ್ಲಿ ಕಳೆದ ಶುಕ್ರವಾರ ಮಾರುಕಟ್ಟೆ ಚೇತರಿಸಿತ್ತು. ಇದಕ್ಕೊಂದು ಕಾರಣವೂ ಇದೆ. ಅಮೆರಿಕದ ವಿದೇಶಾಂಗ ಸಚಿವರು ಜಿ 7 ರಾಷ್ಟ್ರಗಳ ವಿದೇಶಾಂಗ ಸಚಿವರುಗಳ ಜತೆಗೆ ಮಾತನಾಡಿದ್ದು, ಅಮೆರಿಕದ ಮಿತ್ರ ರಾಷ್ಟ್ರಗಳಿಗೆ ತೊಂದರೆಯಾಗದು ಎಂಬ ಭರವಸೆ ಕೊಟ್ಟಿದ್ದಾರೆ. ಜಿ7 ರಾಷ್ಟ್ರಗಳಲ್ಲಿ ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಬ್ರಿಟನ್ ಮತ್ತು ಅಮೆರಿಕ ಇದೆ.
ಬ್ಯಾಂಕ್ ಆಫ್ ಇಂಗ್ಲೆಂಡ್ ಮಾರ್ಚ್ 19ರಂದು ಮತ್ತು ಬ್ಯಾಂಕ್ ಆಫ್ ಜಪಾನ್ ಮಾರ್ಚ್ 20ರಂದು ಬಡ್ಡಿದರಗಳನ್ನು ನಿರ್ಧರಿಸಲಿವೆ. ಬಹುತೇಕ ತಜ್ಞರ ಪ್ರಕಾರ ಬ್ಯಾಂಕ್ ಆಫ್ ಇಂಗ್ಲೆಂಡ್ 4.5% ಹಾಗೂ ಬ್ಯಾಂಕ್ ಆಫ್ ಜಪಾನ್ 0.5% ನಲ್ಲಿ ಬಡ್ಡಿ ದರಗಳನ್ನು ಮುಂದುವರಿಸಲಿವೆ.
ಈ ನಡುವೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಅಥವಾ ಫಾರಿನ್ ಇನ್‌ಸ್ಟಿಟ್ಯೂಶನಲ್ ಇನ್ವೆಸ್ಟರ್ಸ್ ಭಾರತೀಯ ಷೇರು ಮಾರುಕಟ್ಟೆಯಿಂದ ಷೇರುಗಳ ಮಾರಾಟವನ್ನು ಮುಂದುವರಿಸಿದ್ದಾರೆ. ಮಾರ್ಚ್ ತಿಂಗಳಿನ ಮೊದಲ 15 ದಿನಗಳಲ್ಲಿ ಎಫ್‌ಐಐಗಳು 30,015 ಕೋಟಿ ರುಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಈ ವರ್ಷ ಎಫ್‌ಐೈಗಳು ಒಟ್ಟು 1,42,616 ಕೋಟಿ ರುಪಾಯಿ ಮೌಲ್ಯದ ಷೇರುಗಳನ್ನು ಮಾರಿದ್ದಾರೆ. ಇನ್ನು ಕಳೆದ ವಾರದಲ್ಲಿ ಎಫ್‌ಐೈಗಳು 5,729 ಕೋಟಿ ರುಪಾಯಿ ಮೌಲ್ಯದ ಷೇರುಗಲನ್ನು ಮಾರಾಟ ಮಾಡಿದ್ದಾರೆ. ಇದೇ ವೇಳೆ ಡೊಮೆಸ್ಟಿಕ್ ಇನ್‌ಸ್ಟಿಟ್ಯೂಶನಲ್ ಇನ್ವೆಸ್ಟರ್ಸ್ 5,500 ಕೋಟಿ ರುಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.
ಇನ್ನು ಟೆಕ್ನಿಕಲ್ ಅಂಶಗಳನ್ನು ನೋಡೋಣ
ತಜ್ಞರ ಪ್ರಕಾರ ಡೈಲಿ ಚಾರ್ಟ್‌ನಲ್ಲಿ ನಿಫ್ಟಿಯಲ್ಲಿ ರೆಡ್ ಕ್ಯಾಂಡಲ್ ನಿರ್ಮಾಣವಾಗಿದೆ. ಅಂದರೆ ಸೆಲ್ಲಿಂಗ್ ಪ್ರೆಶರ್ ಕ್ರಿಯೇಟ್ ಆಗಿದೆ.ನಿಫ್ಟಿಯು 22,300- 23,700 ರೇಂಜಿನಲ್ಲಿ ಕನ್‌ಸೋಲಿಡೇಟ್ ಆಗುತ್ತಿದೆ. ಹೀಗಿದ್ದರೂ ಕೂಡ ಮಾರ್ಕೆಟ್ ತಜ್ಞ ಅಜಯ್ ಬಗ್ಗಾ ಅವರು ಭರವಸೆ ಹುಟ್ಟಿಸುವ ಮಾತುಗಳನ್ನಾಡಿದ್ದಾರೆ. ಅವರ ಪ್ರಕಾರ ಪ್ರಗತಿಶೀಲ ಮಾರುಕಟ್ಟೆಗಳಿಗೆ ಅಥವಾ ಎಮರ್ಜಿಂಗ್ ಮಾರ್ಕೆಟ್‌ಗಳಾದ ಭಾರತ, ಚೀನಾಕ್ಕೆ ಮತ್ತೆ ಫಂಡ್‌ಗಳು ಹರಿದು ಬರುವ ಲಕ್ಷಣಗಳು ಕಾಣಿಸುತ್ತಿವೆ. ಗ್ಲೋಬಲ್ ಬ್ರೋಕರೇಜ್ ಸಂಸ್ಥೆಗಳು ಭಾರತೀಯ ಮಾರುಕಟ್ಟೆಯನ್ನು ಬೆಂಬಲಿಸುತ್ತಿವೆ. ಆರ್‌ಬಿಐ ಬಡ್ಡಿ ದರಗಳನ್ನು ಕಡಿತಗೊಳಿಸುವ ನಿರೀಕ್ಷೆಯೂ ಇದೆ. ಇದು ಇಕಾನಮಿಯ ಬೆಳವಣಿಗೆಗೆ ಕಾರಣವಾಗಲಿದೆ ಎನ್ನುತ್ತಾರೆ ಅಜಯ್ ಬಗ್ಗಾ.
ರುಪೀ ವರ್ಸಸ್ ಡಾಲರ್ ನೋಡೋದಿದ್ರೆ ಕಳೆದ ಗುರುವಾರ 87 ರುಪಾಯಿಯಲ್ಲಿ ಸೆಟ್ಲ್ ಆಗಿತ್ತು. ಭಾರತದ ರಿಟೇಲ್ ಹಣದುಬ್ಬರವು ಜನವರಿಯಲ್ಲಿ 4.26% ಇದ್ದರೆ, ಫೆಬ್ರವರಿಯಲ್ಲಿ 3.61% ನಷ್ಟಿತ್ತು. ಇನ್ನು ಕಚ್ಚಾ ತೈಲ ದರದ ಬಗ್ಗೆ ನೋಡೋದಿದ್ರೆ, ಕಳೆದ ಎರಡು ವಾರಗಳಿಂದ ಪ್ರತಿ ಬ್ಯಾರಲ್ ಬ್ರೆಂಟ್ ಕ್ರೂಡ್ ಆಯಿಲ್ ದರ 70 ಡಾಲರ್ ಮಟ್ಟದಲ್ಲಿದೆ.
ಇನ್ನು ಡಿವಿಡೆಂಡ್ ನೀಡುವ ಷೇರುಗಳ ಬಗ್ಗೆ ನೋಡೋಣ
ಕ್ಯಾಸ್ಟ್ರೋಲ್ ಇಂಡಿಯಾ ಲಿಮಿಟೆಡ್ ಕಂಪನಿಯು ಪ್ರತಿ ಷೇರಿಗೆ 5 ರುಪಾಯಿಗಳ ಡಿವಿಡೆಂಡ್ ನೀಡಲಿದೆ. ಇದರ ರೆಕಾರ್ಡ್ ಡೇಟ್ ಮಾರ್ಚ್ 18 ಆಗಿದೆ. ಡಿಐಸಿ ಇಂಡಿಯಾ ಲಿಮಿಟೆಡ್ ಕಂಪನಿಯು ಪ್ರತಿ ಷೇರಿಗೆ 4 ರುಪಾಯಿ ಡಿವಿಡೆಂಡ್ ನೀಡಲಿದ್ದು ಇದರ ರೆಕಾರ್ಡ್ ಡೇಟ್ ಮಾರ್ಚ್ 18 ಆಗಿದೆ. ಏಂಜೆಲ್ ವನ್ ಲಿಮಿಟೆಡ್ ಕಂಪನಿಯು ಪ್ರತಿ ಷೇರಿಗೆ 11 ರುಪಾಯಿಗಳ ಡಿವಿಡೆಂಡ್ ನೀಡಲಿದ್ದು, ಇದರ ರೆಕಾರ್ಡ್ ಡೇಟ್ ಮಾರ್ಚ್ 20 ಆಗಿದೆ. ಪವರ್ ಫೈನಾನ್ಸ್ ಕಾರ್ಪೊರೇಷನ್ ಪ್ರತಿ ಷೇರಿಗೆ 3 ರುಪಾಯಿ ಡಿವಿಡೆಂಡ್ ನೀಡಲಿದ್ದು, ಇದರ ರೆಕಾರ್ಡ್ ಡೇಟ್ ಮಾರ್ಚ್ 19 ಆಗಿದೆ.
ಹಾಗಾದರೆ ಮಾರ್ಚ್ 17ರಿಂದ ಖರೀದಿಸಬಹುದಾದ ಪ್ರಮುಖ ಷೇರುಗಳು ಯಾವುದು ಎಂಬುದನ್ನು ತಿಳಿಯೋಣ. ಇದು ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವೀಸ್ ಲಿಮಿಟೆಡ್ ಸಂಸ್ಥೆಯು ಮಾಡಿರುವ ರೆಕಮಂಡೇಶನ್ ಆಗಿದ್ದು, ಹೂಡಿಕೆದಾರರು ಅಂತಿಮ ನಿರ್ಧಾರವನ್ನು ತಮ್ಮ ವಿವೇಚನೆಯ ಪ್ರಕಾರ ಕೈಗೊಳ್ಳಬಹುದು. ಅಗತ್ಯವಿದ್ದರೆ ಹಣಕಾಸು ಸಲಹೆಗಾರರ ಸಲಹೆಗಳನ್ನು ಪಡೆಯಬಹುದು.
ಮೋತಿಲಾಲ್ ಓಸ್ವಾಲ್ ಫೈನಾನ್ಸಿಯಲ್ ಸರ್ವೀಸ್ ಪ್ರಕಾರ 2025ರ ಮಾರ್ಚ್ 17ರ ಬಳಿಕ ಖರೀದಿಸಬಹುದಾದ ಎರಡು ಷೇರುಗಳು ಯಾವುದು ಎಂದರೆ- HPCL ಮತ್ತು ವರುಣ್ ಬೇವರೇಜಸ್. ವರುಣ್ ಬೇವರೇಜಸ್ ಅನ್ನು ಸಂಕ್ಷಿಪ್ತವಾಗಿ VBL ಎನ್ನುತ್ತಾರೆ. HPCL ಷೇರಿನ ಈಗಿನ ದರ 324 ರುಪಾಯಿ. ಟಾರ್ಗೆಟ್ ಪ್ರೈಸ್ 490 ರುಪಾಯಿ. 51% ಅಪ್ ಸೈಡ್ ಇರಬಹುದು ಎಂದು ವರದಿ ತಿಳಿಸಿದೆ.
ಎರಡನೆಯ ಷೇರಾದ ವರುಣ್ ಬೇವರೇಜಸ್ ಷೇರಿನ ಈಗಿನ ದರ 488 ರುಪಾಯಿ ಆಗಿದೆ. ಇದರ ಟಾರ್ಗೆಟ್ ಪ್ರೈಸ್ 680 ರುಪಾಯಿ ಆಗಿದೆ. ಅಪ್ ಸೈಡ್ 39% ಆಗಿದೆ. HPCL ಕಳೆದ ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ಉತ್ತಮ ಆದಾಯ ಗಳಿಸಿದ್ದು. ಲಾಭ ಹೆಚ್ಚುನ ನಿರೀಕ್ಷೆ ಇದೆ. ವರುಣ್ ಬೇವರೇಜಸ್ ಆದಾಯ ಕೂಡ ಏರಿಕೆಯಾಗುತ್ತಿದೆ. ಆಫ್ರಿಕದ ಮಾರುಕಟ್ಟೆಗಳಲ್ಲಿ ಕಂಪನಿಯ ವಹಿವಾಟು ಹೆಚ್ಚಳವಾಗುತ್ತಿದೆ.