The Balochistan Story: ಪಾಕ್-ಬಲೂಚ್ ಬಿಕ್ಕಟ್ಟಿನ ಹಿಂದಿದೆ 174 ಲಕ್ಷ ಕೋಟಿ ರೂ. ಮೌಲ್ಯದ ಚಿನ್ನದ ರಹಸ್ಯ!
ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯವು ಸದ್ಯಕ್ಕೆ ಅಕ್ಷರಶಃ ಯುದ್ಧಭೂಮಿಯಾಗಿ ಮಾರ್ಪಟ್ಟಿದೆ. ಪ್ರತ್ಯೇಕ ರಾಷ್ಟ್ರ ಸ್ಥಾಪನೆಯ ಉದ್ದೇಶದಿಂದ ಸ್ಥಾಪನೆಯಾಗಿರುವ ಬಲೂಚ್ ಲಿಬರೇಷನ್ ಆರ್ಮಿ (ಬಿಎಲ್ಎ) ತನ್ನ ಕಾರ್ಯವ್ಯಾಪ್ತಿ ಹಾಗೂ ಬಲವನ್ನು ಹೆಚ್ಚಿಕೊಳ್ಳುತ್ತಲೇ ಇದೆ. ಎರಡು ದಿನಗಳ ಹಿಂದೆ ಸಂಪೂರ್ಣ ರೈಲನ್ನೇ ಅಪಹರಿಸಿದ್ದು ಬಿಎಲ್ಎ ಶಕ್ತಿ ಏನು ಎಂಬುದನ್ನು ತೋರಿಸಿದೆ. ಇದು ಪಾಕಿಸ್ತಾನ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹಾಗಾದ್ರೆ ಈ ಸಂದಿಗ್ಧ ಪರಿಸ್ಥಿತಿ ಕಾರಣವೇನು ಗೊತ್ತಾ...?


ನವದೆಹಲಿ: ಪಾಕಿಸ್ತಾನದ ಬಲೂಚಿಸ್ತಾನ(The Balochistan Story) ಪ್ರಾಂತ್ಯವು ಸದ್ಯಕ್ಕೆ ಅಕ್ಷರಶಃ ಯುದ್ಧಭೂಮಿಯಾಗಿ ಮಾರ್ಪಟ್ಟಿದೆ. ಪ್ರತ್ಯೇಕ ರಾಷ್ಟ್ರ ಸ್ಥಾಪನೆಯ ಉದ್ದೇಶದಿಂದ ಸ್ಥಾಪನೆಯಾಗಿರುವ ಬಲೂಚ್ ಲಿಬರೇಷನ್ ಆರ್ಮಿ (ಬಿಎಲ್ಎ) ತನ್ನ ಕಾರ್ಯವ್ಯಾಪ್ತಿ ಹಾಗೂ ಬಲವನ್ನು ಹೆಚ್ಚಿಕೊಳ್ಳುತ್ತಲೇ ಇದೆ. ಎರಡು ದಿನಗಳ ಹಿಂದೆ ಸಂಪೂರ್ಣ ರೈಲನ್ನೇ ಅಪಹರಿಸಿದ್ದು ಬಿಎಲ್ಎ ಶಕ್ತಿ ಏನು ಎಂಬುದನ್ನು ತೋರಿಸಿದೆ. ಇದು ಪಾಕಿಸ್ತಾನ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪಾಕ್ ಸೇನೆ 30ಕ್ಕೂ ಹೆಚ್ಚು ಬಿಎಲ್ಎ ಹೋರಾಟಗಾರರನ್ನು ಹೊಡೆದುರುಳಿಸಿದ್ದು, ಒತ್ತೆಯಾಳುಗಳಾಗಿ ಇರಿಸಲಾಗಿದ್ದ 350ಕ್ಕೂ ಹೆಚ್ಚು ಪ್ರಯಾಣಿಕರನ್ನು ಬಿಡುಗಡೆ ಮಾಡಿದೆ. ಇಡೀ ರಾಷ್ಟ್ರವು ಈ ಘಟನೆಯಿಂದ ತೀವ್ರ ಆಘಾತಕ್ಕೊಳಗಾಗಿದ್ದು, ಇದೊಂದು ಘೋರ ಭಯೋತ್ಪಾದಕ ದಾಳಿ ಎಂದು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿಕೆ ನೀಡಿದ್ದಾರೆ.
ಬಲೂಚ್ ಲಿಬರೇಷನ್ ಆರ್ಮಿ ಎಂದರೇನು?
ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಎಂಬುದು ಒಂದು ದಂಗೆಕೋರ ಮತ್ತು ಸಶಸ್ತ್ರ ಪ್ರತ್ಯೇಕತಾವಾದಿ ಸಂಘಟನೆಯಾಗಿದೆ. ಬಲೂಚಿಸ್ತಾನವನ್ನು ಸ್ವತಂತ್ರ ರಾಷ್ಟ್ರವನ್ನಾಗಿ ಮಾಡುವುದು ಇದರ ಉದ್ದೇಶ. ಬಲೂಚಿಸ್ತಾನದಲ್ಲಿ ವಿದೇಶಿ ಪ್ರಭಾವ, ವಿಶೇಷವಾಗಿ ಚೀನಾದ ಪ್ರಭಾವವನ್ನು ಬಿಎಲ್‌ಎ ವಿರೋಧಿಸುತ್ತದೆ. ಬಲೂಚಿಸ್ತಾನದ ಸಂಪನ್ಮೂಲಗಳ ಮೇಲೆ ಜನರು ಮೊದಲ ಹಕ್ಕನ್ನು ಹೊಂದಿದ್ದಾರೆ ಎಂಬುದು ಅದರ ವಾದವಾಗಿದೆ.
Viral News: ಹಣಕ್ಕಾಗಿ ತನ್ನ ಕನ್ಯತ್ವವನ್ನೇ ಮಾರಿಕೊಂಡ 22 ವರ್ಷದ ವಿದ್ಯಾರ್ಥಿನಿ; ಆಕೆ ಗಳಿಸಿದೆಷ್ಟು ಗೊತ್ತಾ?
ಬಲೂಚಿಸ್ತಾನದ ಜನರನ್ನು ಪಾಕ್ ಸರ್ಕಾರ ದ್ವಿತೀಯ ದ್ವಿತೀಯ ದರ್ಜೆಯ ಪ್ರಜೆಗಳಂತೆ ನೋಡಿಕೊಳ್ಳುತ್ತಿದೆ ಎಂದು ಬಿಎಲ್‌ಎ ಈ ಹಿಂದೆ ಆರೋಪಿಸಿತ್ತು. ಇದಕ್ಕಾಗಿ ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯ ವೇಳೆಯೂ ಹಲವು ಹಿಂಸಾತ್ಮಕ ಕೃತ್ಯಗಳನ್ನು ಬಿಎಲ್‌ಎ ನಡೆಸಿದ್ದನ್ನು ಸ್ಮರಿಸಬಹುದು.
ಬಲೂಚಿಸ್ತಾನ್-ಪಾಕಿಸ್ತಾನ್ ನಡುವಿನ ಸಂಘರ್ಷಕ್ಕೆ ನಿಜವಾದ ಕಾರಣ ಏನು?
ಸಂಪೂರ್ಣ ಪಾಕಿಸ್ತಾನಕ್ಕೆ ಹೋಲಿಸಿದರೆ ಭೌಗೋಳಿಕವಾಗಿ ಅತಿ ಹೆಚ್ಚು ಶ್ರೀಮಂತ ಪ್ರದೇಶ ಎಂದರೆ ತಪ್ಪಾಗಲಾರದು. ಏಕೆಂದರೆ, ಇಲ್ಲಿರುವಷ್ಟು ಖನಿಜ ಸಂಪತ್ತು ಬಹುಶಃ ಸಂಪೂರ್ಣ ಪಾಕಿಸ್ತಾನದಲ್ಲಿ ಬೇರೆಲ್ಲಿಯೂ ಇಲ್ಲ. ಇಲ್ಲಿ ಚಿನ್ನ, ಯುರೇನಿಯಂ, ತಾಮ್ರ, ಕಲ್ಲಿದ್ದಲು ಸೇರಿ ಹಲವು ಬಗೆಯ ಖನಿಜಗಳು ಯಥೇಚ್ಛವಾಗಿ ಸಿಗುತ್ತದೆ. ಹೀಗಾಗಿ ಈ ಪ್ರದೇಶದ ಮೇಲೆ ಪಾಕಿಸ್ತಾನಕ್ಕೆ, ಅದರೊಂದಿಗೆ ಭಾರತ ಮತ್ತೊಂದು ಶತ್ರು ರಾಷ್ಟ್ರ ಚೀನಾಕ್ಕೆ ಹೆಚ್ಚಿನ ವ್ಯಾಮೋಹವಿದೆ.
ಪಾಕಿಸ್ತಾನದ ರೆಕೊ ದಿಕ್ ಗಣಿ ಪ್ರಪಂಚದ ಅತಿ ದೊಡ್ಡ ಚಿನ್ನ ಮತ್ತು ತಾಮ್ರದ ಗಣಿಯಾಗಿದೆ. ಅಲ್ಲಿ 590 ಕೋಟಿ ಟನ್‌ಗಳಷ್ಟು ಅದಿರು ಇದೆ ಎಂದು ಅಂದಾಜಿಸಲಾಗಿದೆ. ಪ್ರತಿ ಟನ್ ಅದಿರಿನಲ್ಲಿ 0.22 ಗ್ರಾಂಗಳಷ್ಟು ಚಿನ್ನ ಮತ್ತು 0.41 ಗ್ರಾಂಗಳಷ್ಟು ತಾಮ್ರ ದೊರೆಯುತ್ತದೆ. ಈ ಲೆಕ್ಕಾಚಾರದ ಪ್ರಕಾರ ಸುಮಾರು 40 ಕೋಟಿ ಟನ್‌ಗಳಷ್ಟು ಚಿನ್ನ ಬಲೂಚಿಸ್ತಾನದಲ್ಲಿರುವ ರೆಕೊ ದಿಕ್ ಗಣಿಯಲ್ಲಿ ಅಡಗಿದೆ. ಈ ಚಿನ್ನದ ಒಟ್ಟು ಮೊತ್ತ ಬರೋಬ್ಬರಿ 174 ಲಕ್ಷ ಕೋಟಿ ರೂಪಾಯಿ.
ಇಷ್ಟೆಲ್ಲಾ ಸಂಪತ್ತು ಇದ್ದರೂ ಇಂದಿಗೂ ಬಲೂಚಿಸ್ತಾನವನ್ನು ಪಾಕಿಸ್ತಾನ ಅತ್ಯಂತ ಹಿಂದುಳಿದ ಪ್ರದೇಶ ಎಂದು ಕರೆಯಲಾಗುತ್ತದೆ. ಪಾಕಿಸ್ತಾನವು ಈ ಚಿನ್ನವನ್ನು ಮತ್ತು ಇದರೊಂದಿಗೆ ಇತರ ಖನಿಜ ಸಂಪತ್ತನ್ನು ಚೀನಾಗೆ ಮಾರಾಟ ಮಾಡುತ್ತದೆ ಎಂಬುದು ಬಲೂಚಿಸ್ತಾನದ ಜನರ ಆರೋಪ. ಸದ್ಯಕ್ಕೆ ಅಂತರರಾಷ್ಟ್ರೀಯ ಸಾಲದ ಭಾರದಿಂದ ನರಳುತ್ತಿರುವ ಪಾಕಿಸ್ತಾನಕ್ಕೆ ಈ ಗಣಿಗಳೇ ಒಯಾಸಿಸ್‌ನಂತೆ ಕಾಣುತ್ತಿವೆ.