ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sudha Murty: ಲೋಥಲ್‌ನಿಂದ ಉತ್ಖನನ ಮಾಡಲಾದ ಸಾಂಪ್ರದಾಯಿಕ ಕಲಾಕೃತಿಗಳ ಚಿತ್ರ ಹಂಚಿಕೊಂಡ ಸುಧಾಮೂರ್ತಿ

ಯಾವುದೇ ಪ್ರದೇಶಕ್ಕೆ ಹೋಗಬೇಕಾದರೂ ಲೇಖಕಿ, ಇನ್ಫೋಸಿಸ್‌ ಫೌಂಡೇಶನ್‌ನ ಸ್ಥಾಪಕ ಅಧ್ಯಕ್ಷೆ ಸುಧಾ ಮೂರ್ತಿ ಸಾಕಷ್ಟು ಅಧ್ಯಯನ ಮಾಡುತ್ತಾರೆ. ಇತ್ತೀಚೆಗೆ ಇವರು ಸಿಂಧೂ ಕಣಿವೆ ನಾಗರಿಕತೆಯ ಪ್ರಮುಖ ನಗರವಾದ ಲೋಥಲ್‌ನಿಂದ ಉತ್ಖನನ ಮಾಡಲಾದ ಸಾಂಪ್ರದಾಯಿಕ ಕಲಾಕೃತಿಗಳನ್ನು ನೋಡಲು ದೆಹಲಿಯ ಪುರಾತನ ಕಿಲಾಕ್ಕೆ ಭೇಟಿ ನೀಡಿದರು.

ನವದೆಹಲಿ: ಸಿಂಧೂ ಕಣಿವೆ ನಾಗರಿಕತೆಯ (Indus Valley Civilization) ಪ್ರಮುಖ ನಗರವಾದ ಲೋಥಲ್‌ನಿಂದ ಉತ್ಖನನ ಮಾಡಲಾದ ಸಾಂಪ್ರದಾಯಿಕ ಕಲಾಕೃತಿಗಳನ್ನು ವೀಕ್ಷಿಸಿದ ಲೇಖಕಿ, ಇನ್ಫೋಸಿಸ್‌ ಫೌಂಡೇಶನ್‌ನ ಸ್ಥಾಪಕ ಅಧ್ಯಕ್ಷೆ (Founding Chairwoman of Infosys Foundation) ಸುಧಾ ಮೂರ್ತಿ (Sudha Murty) ಹರ್ಷ ವ್ಯಕ್ತಪಡಿಸಿದರು. ನವದೆಹಲಿಯ (Delhi) ಅತ್ಯಂತ ಹಳೆಯ ಕೋಟೆಗಳಲ್ಲಿ ಒಂದಾಗಿದ್ದ ಪುರಾತನ ಕಿಲಾಕ್ಕೆ (Purana Qila) ಭೇಟಿ ನೀಡಿದ ಅವರು ಇಲ್ಲಿ ವೀಕ್ಷಿಸಿದ ಹಲವಾರು ವಸ್ತುಗಳ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದ ಖಾತೆಯಾದ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.

ಈ ಕುರಿತು ವಿವರಣೆಯನ್ನೂ ನೀಡಿರುವ ಅವರು, ಇವು ಪ್ರಾಚೀನ ಸಿಂಧೂ ಕಣಿವೆ ನಾಗರಿಕತೆಯ ಪ್ರಮುಖ ನಗರವಾದ ಲೋಥಲ್‌ನಿಂದ ಉತ್ಖನನ ಮಾಡಲಾದ ಸಾಂಪ್ರದಾಯಿಕ ಕಲಾಕೃತಿಗಳಾಗಿವೆ. ಮೊದಲನೆಯದು ಬೆರಗುಗೊಳಿಸುವ ಚಿನ್ನದ ಹಾರ. ಅದರ ಸಣ್ಣ ಸೂಕ್ಷ್ಮ ಮಣಿಗಳನ್ನು ಸಾವಿರಾರು ವರ್ಷಗಳ ಹಿಂದೆ ತಯಾರಿಸಲಾಗಿತ್ತು ಎಂದು ಸುಧಾ ಮೂರ್ತಿ ತಿಳಿಸಿದ್ದಾರೆ.

ಇನ್ನೊಂದು ಚಿತ್ರದಲ್ಲಿ ಅವರು ಸರಳವಾದ ಮಣ್ಣಿನ ಮಡಕೆಯನ್ನು ಕೈಯಲ್ಲಿ ಹಿಡಿದುಕೊಂಡು ತೋರಿಸಿದ್ದು, ಇದು ಬಾಯಾರಿದ ಕಾಗೆಯ ಹಳೆಯ ನೀತಿಕಥೆಯೊಂದಿಗೆ ಹೋಲಿಕೆಯಾಗುತ್ತದೆ. ಲೋಥಲ್‌ನ ಈ ಕಲಾಕೃತಿಗಳು ನಮಗೆ ಅದ್ಭುತ ಕರಕುಶಲತೆ ಮತ್ತು ಕಾಲಾತೀತ ಬುದ್ಧಿವಂತಿಕೆ ಎರಡರ ಮೇಲೆ ನಿರ್ಮಿಸಲಾದ ಪರಂಪರೆಯನ್ನು ನೆನಪಿಸೈಡ್. ಆಧುನಿಕ ಭಾರತವನ್ನು ಅದರ ಭವ್ಯವಾದ ಬೇರುಗಳೊಂದಿಗೆ ಸಂಪರ್ಕಿಸುವ ಇದೊಂದು ಸುಂದರ ಕ್ಷಣವಾಗಿದೆ ಎಂದು ಅವರು ತಿಳಿಸಿದ್ದಾರೆ.



ಪುರಾತನ ಕಿಲಾ ಎಲ್ಲಿದೆ?

ಒಂದು ಕಾಲದಲ್ಲಿ ಪಾಂಡವರ ರಾಜಧಾನಿಯಾಗಿದ್ದ ಪುರಾಣ ಕಿಲಾ ಕೋಟೆಯನ್ನು ಆಗ ಇಂದ್ರಪ್ರಸ್ಥ ಎಂದು ಕರೆಯಲಾಗುತ್ತಿತ್ತು. ಇದೇ ಕೋಟೆಯಲ್ಲಿ ಹುಮಾಯೂನ್‌ ಮೆಟ್ಟಿಲುಗಳಿಂದ ಜಾರಿ ಬಿದ್ದು ಸಾವನ್ನಪ್ಪಿದ ಎನ್ನಲಾಗುತ್ತದೆ. ಇದನ್ನು ಪಾಂಡವರ ಕೋಟೆ ಎಂದೂ ಕರೆಯಲಾಗುತ್ತದೆ. ದೆಹಲಿಯಲ್ಲಿರುವ ಅತ್ಯಂತ ದೊಡ್ಡ ಹಾಗೂ ಅತ್ಯಂತ ಹಳೆಯ ಕೋಟೆ ಇದಾಗಿದೆ. ಈ ಕೋಟೆಯ ನಿಜವಾದ ಹೆಸರು ಸಿಂಹದ ಕೋಟೆ.

ಇದನ್ನೂ ಓದಿ: 400 ಮೀಟರ್‌ ಓಟದಲ್ಲಿ ರಾಷ್ಟ್ರೀಯ ದಾಖಲೆಯನ್ನು ಮುರಿದ ವಿಶಾಲ್‌ ಟಿಕೆ!

ಉತ್ಖನನ

ಪುರಾತನ ಕಿಲಾದಲ್ಲಿ ಭಾರತೀಯ ಪುರಾತತ್ತ್ವ ಇಲಾಖೆಯು ಇತ್ತೀಚಿನ ವರ್ಷಗಳಲ್ಲಿ ಉತ್ಖನನ ಕಾರ್ಯವನ್ನು ನಡೆಸುತ್ತಿದೆ. 2013-14 ಮತ್ತು 2017-18ರಲ್ಲಿ ವಸಂತ್ ಕುಮಾರ್ ಸ್ವರ್ಣಕರ್ ಇಲ್ಲಿ ಉತ್ಖನನಗಳನ್ನು ನಡೆಸಿದ್ದು, ಇದರ ಸಂಶೋಧನೆಗಳು ಮತ್ತು ಕಲಾಕೃತಿಗಳನ್ನು ಕಿಲಾದ ಪುರಾತತ್ತ್ವ ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶಿಸಲಾಗುತ್ತಿದೆ. ಇದರಲ್ಲಿ ಕ್ರಿ.ಪೂ. 1000ರ ಹಿಂದಿನ ಬಣ್ಣ ಬಳಿದ ಸಾಮಗ್ರಿಗಳು, ಮೌರ್ಯ, ಶುಂಗ, ಕುಶಾನ, ಗುಪ್ತ, ರಜಪೂತ, ದೆಹಲಿ ಸುಲ್ತಾನರು ಮತ್ತು ಮೊಘಲ್ ಅವಧಿಯ ವಿವಿಧ ವಸ್ತುಗಳು ಇವೆ.

ವಿದ್ಯಾ ಇರ್ವತ್ತೂರು

View all posts by this author