ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

India-Pak Tensions: ಪಾಕ್‌ಗೆ ಬೆಂಬಲ- ಟರ್ಕಿ, ಅಜೆರ್ಬೈಜಾನ್‌ಗೆ ಬಾಯ್ಕಾಟ್‌ ಬಿಸಿ

ಆಪರೇಷನ್ ಸಿಂದೂರ (Operation Sindoor) ಕಾರ್ಯಾಚರಣೆ ಬಗ್ಗೆ ಹೆಚ್ಚಿನ ದೇಶಗಳು ಕಾಮೆಂಟ್ ಮಾಡಲಿಲ್ಲ ಆದರೆ ಅಜೆರ್ಬೈಜಾನ್‌ನ ವಿದೇಶಾಂಗ ಸಚಿವಾಲಯವು ಪಾಕಿಸ್ತಾನಕ್ಕೆ ಬೆಂಬಲ ನೀಡುವ ಹೇಳಿಕೆಯನ್ನು ನೀಡಿತು. ನಾವು ಪಾಕಿಸ್ತಾನದ ಜನರೊಂದಿಗೆ ಒಗ್ಗಟ್ಟಿನಲ್ಲಿ ನಿಲ್ಲುತ್ತೇವೆ ಎಂದು ಬಹಿರಂಗ ಹೇಳಿಕೆ ನೀಡಿತು. ಇದರ ಬೆನ್ನಲ್ಲೇ ಟರ್ಕಿ ತನ್ನ ಯುದ್ಧ ಸಾಮಗ್ರಿಗಳನ್ನು ಪಾಕಿಸ್ತಾನಕ್ಕೆ ರವಾನಿಸುವುದರೊಂದಿಗೆ ಪಾಕ್ ಗೆ ಬೆಂಬಲ ನೀಡಿತು. ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಟರ್ಕಿ, ಅಜೆರ್ಬೈಜಾನ್ ಪ್ರವಾಸಕ್ಕೆ ಭಾರತೀಯರಿಂದ ಬಹಿಷ್ಕಾರ

ನವದೆಹಲಿ: ಕಾಶ್ಮೀರದ (Kashmir) ಪಹಲ್ಗಾಮ್ (pahalgam) ನಲ್ಲಿ ನಡೆದ ಭಯೋತ್ಪಾದಕ ದಾಳಿಯ (terror attack) ಬಳಿಕ ಭಾರತೀಯ ಸೇನೆಯು ಪಾಕಿಸ್ತಾನಿ ಉಗ್ರರ ವಿರುದ್ಧ ನಡೆಸಿದ ಆಪರೇಷನ್ ಸಿಂದೂರ್ (Operation Sindoor ) ಕಾರ್ಯಾಚರಣೆಯ ವಿರುದ್ಧ ಪಾಕಿಸ್ತಾನಕ್ಕೆ ಬೆಂಬಲ ಘೋಷಿಸಿ ಪ್ರತಿಕ್ರಿಯಿಸಿರುವ ಟರ್ಕಿ (Turkey), ಅಜೆರ್ಬೈಜಾನ್ ( Azerbaijan ) ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಟರ್ಕಿ ಮತ್ತು ಅಜೆರ್ಬೈಜಾನ್ ಅನ್ನು ಬಹಿಷ್ಕರಿಸಿ (Boycott) ಎನ್ನುವ ಹ್ಯಾಶ್ ಟ್ಯಾಗ್ ಗಳು ಹುಟ್ಟಿಕೊಂಡಿವೆ. ಈ ಕುರಿತು ಹೆಚ್ಚಿನ ದೇಶಗಳು ಪ್ರತಿಕ್ರಿಯೆ ನೀಡುವುದನ್ನು ತಪ್ಪಿಸಿದ್ದರೂ ಅಜೆರ್ಬೈಜಾನ್‌ನ ವಿದೇಶಾಂಗ ಸಚಿವಾಲಯವು ಪಾಕಿಸ್ತಾನಕ್ಕೆ ಬೆಂಬಲ ನೀಡುವ ಹೇಳಿಕೆಯನ್ನು ನೀಡಿತು.

ಟರ್ಕಿ ಮತ್ತು ಅಜೆರ್ಬೈಜಾನ್ ದೇಶಗಳು ಇತ್ತೀಚಿನ ಕೆಲವು ವರ್ಷಗಳಿಂದ ಭಾರತೀಯ ಪ್ರವಾಸಿಗರನ್ನು ಸೆಳೆಯುತ್ತಿದೆ. ಹೀಗಾಗಿ ಇದು ಭಾರತೀಯ ಪ್ರವಾಸಿಗರಿಗೆ ಪ್ರಮುಖ ಅಂತಾರಾಷ್ಟ್ರೀಯ ಪ್ರವಾಸಿ ತಾಣಗಳಾಗಿ ಗುರುತಿಸಿಕೊಂಡಿವೆ. ಇಲ್ಲಿನ ಸಂಸ್ಕೃತಿ, ಇಸ್ಲಾಮಿಕ್ ಮತ್ತು ಒಟ್ಟೋಮನ್ ಯುಗದ ವಾಸ್ತುಶಿಲ್ಪ, ಸ್ನೇಹಪರ ಸ್ಥಳೀಯರು ಮತ್ತು ಸುಲಭ ವೀಸಾ ಪ್ರಕ್ರಿಯೆಗಳಿಂದಾಗಿ ಹೆಚ್ಚಿನ ಪ್ರವಾಸಿಗರನ್ನು ಈ ದೇಶಗಳು ಸೆಳೆಯುತ್ತಿವೆ.

ಕಾಶ್ಮೀರದ ಪಹಲ್ಗಾಮ್‌ ಜಿಲ್ಲೆಯ ಬೈಸರನ್ ಕಣಿವೆಯಲ್ಲಿ ಏಪ್ರಿಲ್ 22ರಂದು ಪ್ರವಾಸಿಗರ ಮೇಲೆ ನಡೆದ ಕ್ರೂರ ಭಯೋತ್ಪಾದಕ ದಾಳಿಯಿಂದಾಗಿ 26 ನಾಗರಿಕರು ಸಾವನ್ನಪ್ಪಿದ್ದರು. ಇದರ ಬಳಿಕ ಭಾರತವು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿನ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ನಡೆಸಿದ ನಿಖರವಾದ ಮಿಲಿಟರಿ ದಾಳಿಯಾದ ಆಪರೇಷನ್ ಸಿಂದೂರವನ್ನು ಸಾಕಷ್ಟು ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ನಡುವೆ ಇದನ್ನು ವಿರೋಧಿಸಿ ಕೆಲವು ಕಾಮೆಂಟ್ ಗಳು ಬಂದವು.

ಆಪರೇಷನ್ ಸಿಂದೂರ ಕಾರ್ಯಾಚರಣೆ ಬಗ್ಗೆ ಹೆಚ್ಚಿನ ದೇಶಗಳು ಕಾಮೆಂಟ್ ಮಾಡಲಿಲ್ಲ ಆದರೆ ಅಜೆರ್ಬೈಜಾನ್‌ನ ವಿದೇಶಾಂಗ ಸಚಿವಾಲಯವು ಪಾಕಿಸ್ತಾನಕ್ಕೆ ಬೆಂಬಲ ನೀಡುವ ಹೇಳಿಕೆಯನ್ನು ನೀಡಿತು. ನಾವು ಪಾಕಿಸ್ತಾನದ ಜನರೊಂದಿಗೆ ಒಗ್ಗಟ್ಟಿನಲ್ಲಿ ನಿಲ್ಲುತ್ತೇವೆ ಎಂದು ಬಹಿರಂಗ ಹೇಳಿಕೆ ನೀಡಿತು. ಇದರ ಬೆನ್ನಲ್ಲೇ ಟರ್ಕಿ ತನ್ನ ಯುದ್ಧ ಸಾಮಗ್ರಿಗಳನ್ನು ಪಾಕಿಸ್ತಾನಕ್ಕೆ ರವಾನಿಸುವುದರೊಂದಿಗೆ ಪಾಕ್ ಗೆ ಬೆಂಬಲ ನೀಡಿತು.



ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಇದರ ಬಳಿಕ ಭಾರತೀಯ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹ್ಯಾಶ್ ಟ್ಯಾಗ್ ನೊಂದಿಗೆ ಬೈಕಾಟ್ ಟರ್ಕಿ ಮತ್ತು ಬೈಕಾಟ್ ಅಜೆರ್ಬೈಜಾನ್‌ ಹಾಗೂ ಆಪರೇಷನ್ ಸಿಂಧೂರ್ ಹುಟ್ಟಿಕೊಂಡಿದೆ. ಈ ಮೂಲಕ ಈ ಟರ್ಕಿ ಮತ್ತು ಅಜೆರ್ಬೈಜಾನ್‌ ದೇಶಗಳಿಗೆ ಪ್ರವಾಸ ಮಾಡಬೇಡಿ ಎನ್ನುವ ಘೋಷಣೆಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡತೊಡಗಿದೆ. ಇದಲ್ಲದೆ ಜನಪ್ರಿಯ ಭಾರತೀಯ ಪ್ರಯಾಣ ಬುಕಿಂಗ್ ವೇದಿಕೆಯಾದ ಈಸಿ ಮೈ ಟ್ರಿಪ್ ಕೂಡ ಟರ್ಕಿ ಮತ್ತು ಅಜೆರ್ಬೈಜಾನ್ ಈ ಎರಡು ದೇಶಗಳ ಪ್ರಯಾಣ ಬೇಡ ಎನ್ನುವ ಅಧಿಕೃತ ಸಲಹೆಯನ್ನು ಬಿಡುಗಡೆ ಮಾಡಿದೆ.



ಇದನ್ನು ಓದಿ: Ceasefire Violations: ಕುತಂತ್ರಿ ಪಾಕಿಸ್ತಾನದ ಬೆಂಬಲಕ್ಕೆ ನಿಂತ ಚೀನಾ

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಂಪೆನಿಯು ಪಹಲ್ಗಾಮ್ ದಾಳಿ ಮತ್ತು ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯಿಂದಾಗಿ ಪ್ರಯಾಣಿಕರು ಜಾಗೃತರಾಗಿರಿ. ಟರ್ಕಿ ಮತ್ತು ಅಜೆರ್ಬೈಜಾನ್ ಪಾಕಿಸ್ತಾನಕ್ಕೆ ಬೆಂಬಲವನ್ನು ತೋರಿಸಿರುವುದರಿಂದ ತೀರಾ ಅಗತ್ಯವಿದ್ದರೆ ಮಾತ್ರ ಇಲ್ಲಿಗೆ ಭೇಟಿ ನೀಡಿ ಎಂದು ಹೇಳಿದೆ. ಒಟ್ಟಿನಲ್ಲಿ ಈ ಎಲ್ಲ ಬೆಳವಣಿಗೆಗಳು . ಟರ್ಕಿ ಮತ್ತು ಅಜೆರ್ಬೈಜಾನ್ ದೇಶಗಳ ಪ್ರವಾಸೋದ್ಯಮಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.