ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

CEC ಜ್ಞಾನೇಶ್ ಕುಮಾರ್ ಕಾರ್ಯಕ್ಕೆ ತಡೆಯೊಡ್ಡಲು ಸುಪ್ರೀಂ ಕೋರ್ಟ್ ನಿರಾಕರಣೆ

CEC Gyanesh Kumar: ಚುನಾವಣಾ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ನೇತೃತ್ವದ ಚುನಾವಣಾ ಆಯೋಗ ಕಾರ್ಯನಿರ್ವಹಣೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಕೇವಲ ಸುದ್ದಿ, ವರದಿಗಳ ಆಧಾರದಲ್ಲಿ ಆದೇಶ ಹೊರಡಿಸಲು ಸಾಧ್ಯವಿಲ್ಲ ಎಂದ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್, ಜಾಯ್ಮಾಲ್ಯ ಬಾಗ್ಚಿ ಮತ್ತು ವಿ. ಮೋಹನ ಅವರನ್ನೊಳಗೊಂಡ ನ್ಯಾಯಪೀಠವು ಹೇಳಿದೆ.

ಸಂಗ್ರಹ ಚಿತ್ರ

ನವದೆಹಲಿ: ಚುನಾವಣಾ ಮುಖ್ಯ ಆಯುಕ್ತರಾದ ಜ್ಞಾನೇಶ್ ಕುಮಾರ್ (chief election commissioner Gyanesh Kumar) ಅವರ ನೇತೃತ್ವದಲ್ಲಿ ಚುನಾವಣಾ ಆಯೋಗವು (Election Commission of India) ಶಾಸನಬದ್ಧ ನಿಯಮಗಳಿಗೆ ವಿರುದ್ಧವಾಗಿ ಯಾವುದೇ ನಿರ್ಧಾರ ಕೈಗೊಂಡಿರುವುದು ಕಂಡುಬಂದರೆ ಮಾತ್ರ ಅವರ ಕಾರ್ಯಕ್ಕೆ ತಡೆಯೊಡ್ಡಬಹುದು. ಯಾವುದೇ ಸುದ್ದಿ, ವರದಿಯನ್ನು ಆಧರಿಸಿ ತಡೆ ನೀಡಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ (Supreme Court) ಸೋಮವಾರ ಹೇಳಿದೆ. ಚುನಾವಣಾ ಮುಖ್ಯ ಆಯುಕ್ತರ ಕಾರ್ಯವೈಖರಿ ವಿರುದ್ಧ ಆರೋಪಗಳು ಕೇಳಿ ಬಂದ ಬಳಿಕ ಸಾಮಾಜಿಕ ಕಾರ್ಯಕರ್ತ ರಾಕೇಶ್ ಕುಮಾರ್ ಸಿಂಗ್ ಸಲ್ಲಿಸಿದ ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್, ಜಾಯ್ಮಾಲ್ಯ ಬಾಗ್ಚಿ, ವಿ. ಮೋಹನ ಅವರನ್ನೊಳಗೊಂಡ ನ್ಯಾಯಪೀಠವು ರಾಕೇಶ್ ಕುಮಾರ್ ಸಿಂಗ್ ಸಲ್ಲಿಸಿದ ಅರ್ಜಿಯ ಮೇರೆಗೆ ಭಾರತೀಯ ಚುನಾವಣಾ ಆಯೋಗ, ಕೇಂದ್ರ ಸರ್ಕಾರ, ಸಿಇಸಿ ಮತ್ತು ಇಬ್ಬರು ಚುನಾವಣಾ ಆಯುಕ್ತರಿಗೆ ನೋಟಿಸ್ ಜಾರಿ ಮಾಡಿದೆ. ಅಲ್ಲದೇ ಇದರರೊಂದಿಗೆ ಚುನಾವಣಾ ಆಯುಕ್ತರ ಕಾರ್ಯನಿರ್ವಹಣೆಗೆ ತಡೆ ನೀಡುವ ಮಧ್ಯಂತರ ಆದೇಶವನ್ನು ಹೊರಡಿಸಲು ನಿರಾಕರಿಸಿದೆ.

FRP ಅಷ್ಟೇ ಅಲ್ಲ, ಕರ್ನಾಟಕದ ಕಬ್ಬು ಬೆಳೆಗಾರರಿಗೆ ಬೇಕು SAP ಬೆಂಬಲ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಹಲವು ನಿರ್ಧಾರಗಳನ್ನು ಏಕಪಕ್ಷೀಯವಾಗಿ ತೆಗೆದುಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದ ಮೇಲೆ ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಕೇವಲ ಊಹೆಗಳ ಆಧಾರದ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಚುನಾವಣಾ ಆಯೋಗದ ಕಾರ್ಯನಿರ್ವಹಣೆಗೆ ಸಂಬಂಧಿಸಿ ಶಾಸನಬದ್ಧ ನಿಯಮಗಳಿಗೆ ವಿರುದ್ಧವಾಗಿ ಯಾವುದೇ ನಿರ್ಧಾರ ಕೈಗೊಂಡಿರುವುದು ಕಂಡುಬಂದರೆ ಅಂತಹ ನಿರ್ಧಾರಕ್ಕೆ ತಡೆ ನೀಡಬಹುದು ಎಂದು ನ್ಯಾಯಪೀಠ ತಿಳಿಸಿದೆ.

ಅರ್ಜಿದಾರರ ಪರವಾಗಿ ಹಿರಿಯ ವಕೀಲ ವಿಕಾಸ್ ಸಿಂಗ್ ಅವರು ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣವೇ ಅಮಾನತುಗೊಳಿಸುವಂತೆ ನ್ಯಾಯಾಲಯವನ್ನು ಕೋರಿದರು.ಅಲ್ಲದೇ ಆಯೋಗದ ನಿರ್ಧಾರಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಸರ್ವಾನುಮತದಿಂದಲೇ ತೆಗೆದುಕೊಳ್ಳಬೇಕು ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ ಕೇವಲ ಆರೋಪಗಳ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದಿಲ್ಲ. ಒಂದು ವೇಳೆ ಚುನಾವಣಾ ಆಯೋಗದ ನಿರ್ಧಾರವು ಕಾನೂನುಬಾಹಿರವೆಂದು ಕಂಡುಬಂದರೆ ಅದನ್ನು ಅನಂತರ ರದ್ದುಗೊಳಿಸಬಹುದು. ಕೇವಲ ಮಾಧ್ಯಮಗಳು ಮಾಡಿರುವ ವರದಿಗಳ ಆಧಾರದ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿತು.

ತಿದ್ದುಪಡಿ ಅಥವಾ ಸುಧಾರಣೆಯ ಅಗತ್ಯವಿದ್ದರೆ ಭವಿಷ್ಯದಲ್ಲಿ ಅಂತಹ ಆದೇಶಗಳನ್ನು ಹೊರಡಿಸಬಹುದು. ನ್ಯಾಯಾಲಯಕ್ಕೆ ಎಲ್ಲಾ ಚುನಾವಣಾ ಆಯುಕ್ತರನ್ನು ಕರೆಯುತ್ತಿದ್ದೇವೆ ಮತ್ತು ಅವರು ನಮ್ಮ ಮುಂದೆ ಎಲ್ಲಾ ಸತ್ಯಾಂಶಗಳನ್ನು ಮಂಡಿಸಲಿದ್ದಾರೆ ಎಂದ ನ್ಯಾಯಪೀಠ, ಅವರು ಕಾನೂನನ್ನು ಪಾಲಿಸಿಲ್ಲ ಎಂದು ಕಂಡುಬಂದರೆ ಮಧ್ಯಪ್ರವೇಶಿಸುವುದಾಗಿ ಎಚ್ಚರಿಕೆ ನೀಡಿತು.

ಫಾರ್ಮ್ 6 ಕುರಿತು ನ್ಯಾಯಾಲಯಕ್ಕೆ ಸಲ್ಲಿಕೆಯಾದ ಪ್ರತ್ಯೇಕ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಇದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ವಕೀಲ ಶೈಲೇಂದ್ರ ಮಣಿ ತ್ರಿಪಾಠಿ ಮೇಲೆ ನೊಟೀಸ್ ಜಾರಿಗೊಳಿಸಿದೆ. ತ್ರಿಪಾಠಿ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲೆ ಮೇನಕಾ ಗುರುಸ್ವಾಮಿ ಅವರು ಮತದಾರರ ನೋಂದಣಿ ಪ್ರಕ್ರಿಯೆಗೆ ಎರಡು ಹೊಸ ಷರತ್ತುಗಳನ್ನು ಸೇರಿಸಲಾಗಿದೆ ಎಂದು ಆರೋಪಿಸಿದರು.

ʻಬಿಗ್‌ ಬಾಸ್‌ʼ ಶೋನಿಂದ ಹೊರಬಿದ್ದ ʻಅಗ್ನಿ ಬಾಯ್‌ʼ ಲಿಖಿತ್‌ ಗೊಂದಿ ಫಸ್ಟ್‌ ರಿಯಾಕ್ಷನ್;‌ ಎಲಿಮಿನೇಷನ್‌ಗೆ ಕಾರಣವಾಗಿದ್ದೇನು?

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ ಮಾರ್ಪಡಿಸಿದ 'ಫಾರ್ಮ್ 6' ಗೆ ಅನುಮೋದನೆಯಾಗಿಲ್ಲ. ಅದನ್ನು ಯಾರು ಮಾರ್ಪಡಿಸಿದ್ದಾರೆ ಎಂಬುದನ್ನು ನಾವು ನೋಡಲು ಬಯಸುತ್ತೇವೆ ಎಂದು ಹೇಳಿತು. ಅಲ್ಲದೇ ತ್ರಿಪಾಠಿ ಅವರ ಅರ್ಜಿಯಲ್ಲಿನ ಕೋರಿಕೆಗಳು ಗೊಂದಲಮಯವಾಗಿದೆ. ಅವುಗಳನ್ನು ಪರಿಶೀಲಿಸುವಂತೆ ವಕೀಲರಿಗೆ ಸೂಚಿಸಿತು.

ವಿದ್ಯಾ ಇರ್ವತ್ತೂರು

View all posts by this author