ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Supreme Court: ಸುಪ್ರೀಂ ಕೋರ್ಟ್‌ನಿಂದ ಮಹತ್ವದ ಆದೇಶ; "ಆಕ್ರಮಣಕಾರಿ ಬೀದಿನಾಯಿಗಳನ್ನು ಮಾತ್ರ ಸ್ಥಳಾಂತರಿಸಿ"

ಬೀದಿ ನಾಯಿಗಳ ಉಪಟಳ, ದಾಳಿ ತಪ್ಪಿಸಲು ಕೋರ್ಟ್ ನೀಡಿದ್ದ ಸ್ಥಳಾಂತರ ಆದೇಶ ದೇಶಾದ್ಯಂತ ವ್ಯಾಪಕ ವಿರೋಧಕ್ಕೆ ಕಾರಣವಾಗಿತ್ತು. ಪೆಟಾ ಸೇರಿದಂತೆ ಹಲವು ಸೆಲೆಬ್ರೆಟಿಗಳು ಈ ಆದೇಶ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು. ದೇಶಾದ್ಯಂತ ಬೀದಿನಾಯಿಗಳ ಸ್ಥಳಾಂತರ ಭಾರಿ ಚರ್ಚೆಯಾಗುತ್ತಿದೆ. ಇದರ ನಡುವೆ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶವನ್ನು ಹೊರಡಿಸಿದೆ.

ಬೀದಿನಾಯಿಗಳನ್ನು ಮಾತ್ರ ಸ್ಥಳಾಂತರಿಸಲು ಆದೇಶ

ಸಾಂಧರ್ಬಿಕ ಚಿತ್ರ

Profile Sushmitha Jain Aug 22, 2025 4:26 PM

ನವದೆಹಲಿ: ಬೀದಿ ನಾಯಿ (Stray Dogs) ಉಪಟಳದಿಂದ ಕೆಲವೆಡೆಗಳಲ್ಲಿ ನಡೆದಾಡಲು ಕೂಡ ಸಾಧ್ಯವಾಗುತ್ತಿಲ್ಲ. ಅದರಲ್ಲೂ ಆಹಾರ ಸಿಗದೆ ಹಸಿದಿರುವ ನಾಯಿಗಳು ರಾತ್ರಿ ಹೊತ್ತಿನಲ್ಲಿ ದಾಳಿ ಮಾಡುತ್ತಿವೆ. ಕೆಲವು ಪ್ರದೇಶಗಳಲ್ಲಿ ಮಕ್ಕಳು ನಿರ್ಭಯದಿಂದ ಸಂಚರಿಸಲು ಕೂಡ ಆಗುತ್ತಿಲ್ಲ. ಪೋಷಕರು ಕೂಡ ಭೀತಿಯಿಂದ ಮಕ್ಕಳನ್ನು ಕಳುಹಿಸಬೇಕಾಗುತ್ತದೆ.

ಈ ನಡುವೆ ರಾಷ್ಟ್ರಾದ್ಯಂತ ಬೀದಿ ನಾಯಿಗಳ ಬಗ್ಗೆ ಚರ್ಚೆಗಳು ಶುರುವಾಗಿದ್ದು, ಬೀದಿ ನಾಯಿಗಳಿಂದಾಗುವ ತೊಂದರೆ, ದಾಳಿಯ ಸಮಸ್ಯೆಗೆ ಪರಿಹಾರವಾಗಿ ಸುಪ್ರೀಂ ಕೋರ್ಟ್ (Supreme Court) ಸ್ಥಳಾಂತರ ಆದೇಶ ನೀಡಿತ್ತು. ವಸತಿ ಪ್ರದೇಶಗಳಿಂದ ಎಲ್ಲಾ ಬೀದಿ ನಾಯಿಗಳನ್ನು ಅಲ್ಲಿಂದ ಹಿಡಿದು, ಬೇರೆ ಆಶ್ರಯ ತಾಣಗಳಿಗೆ ಕಳಿಸಿ ಎಂದು ಆದೇಶದಲ್ಲಿ ತಿಳಿಸಿತ್ತು. ನಾಯಿ ಕಡಿತದ ಘಟನೆಗಳು ಮತ್ತು ರೇಬೀಸ್ ಸಂಬಂಧಿತ ಸಾವುಗಳಿಗೆ ಕಾರಣವಾಗುತ್ತದೆ, ಅಲ್ಲದೇ ಇದರಿಂದ ಮಕ್ಕಳಿಗೆ ಮತ್ತು ವೃದ್ಧರಿಗೆ ಇದು ಭಯಬೀತ ವಾತಾವರಣ ನಿರ್ಮಿತವಾಗಿದೆ ಎಂದು ಉಲ್ಲೇಖಿಸಿದೆ. ಅಲ್ಲದೇ ನ್ಯಾಯಾಲಯವು ದೆಹಲಿ ಸರ್ಕಾರಕ್ಕೆ ಎಂಟು ವಾರಗಳಲ್ಲಿ ಬೀದಿ ನಾಯಿಗಳನ್ನು ಹಿಡಿದು, ಸಂತಾನಹರಣ ಮಾಡಿ ಮತ್ತು ಶಾಶ್ವತವಾಗಿ ಆಶ್ರಯ ತಾಣಗಳಿಗೆ ಸ್ಥಳಾಂತರಿಸುವಂತೆ ನಿರ್ದೇಶಿಸಿತ್ತು. ಯಾವುದೇ ನಾಯಿಯನ್ನು ಸಾರ್ವಜನಿಕ ಸ್ಥಳಗಳಿಗೆ ಮತ್ತೆ ಬಿಡಬಾರದು ಮತ್ತು ಹೊಸ ಆಶ್ರಯ ತಾಣಗಳು ಸಾಕಷ್ಟು ಸಿಬ್ಬಂದಿ ಮತ್ತು ಸಿಸಿಟಿವಿ ಕಣ್ಗಾವಲು ಹೊಂದಿರಬೇಕು ಎಂದು ಹೇಳಿತ್ತು.

ಆದರೆ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಹಲವು ಪ್ರಾಣಿ ಪ್ರಿಯರು, ಪ್ರಾಣಿದಯಾ ಸಂಸ್ಥೆಗಳು ವಿರುದ್ಧವಾಗಿ ಧ್ವನಿ ಎತ್ತಿದ್ದು, ಈ ಆದೇಶವು ತೀವ್ರ ಚರ್ಚೆಗೆ ಕಾರಣವಾಗಿತ್ತು. ಪ್ರಾಣಿ ಕಲ್ಯಾಣ ವಕೀಲರು ಇದನ್ನು ಅವೈಜ್ಞಾನಿಕ ಮತ್ತು ಪ್ರಾಣಿಗಳ ಜನನ ನಿಯಂತ್ರಣ (ABC) ನಿಯಮಗಳು 2023 ಕ್ಕೆ ವಿರುದ್ಧವಾಗಿದೆ ಎಂದು ಟೀಕಿಸಿದ್ದರು. ಇನ್ನು ಇದರ ಬೆನ್ನಲ್ಲೇ ಬೇರೆ ಬೇರೆ ದೇಶಗಳಲ್ಲಿ ಹೇಗೆ ಬೀದಿ ನಾಯಿಗಳನ್ನು ನಿಯಂತ್ರಿಸಲಾಗುತ್ತದೆ? ಅದಕ್ಕಾಗಿ ಅಲ್ಲಿನ ಸರ್ಕಾರಗಳು ಎಷ್ಟು ಖರ್ಚು ಮಾಡುತ್ತವೆ ಎಂಬ ಬಗ್ಗೆ ಚರ್ಚೆಗಳು ಶುರುವಾಗಿದೆ. ಜನರ ಒತ್ತಡಕ್ಕೆ ಮಣಿದ ನ್ಯಾಯಲಯಾ ಆದೇಶದಲ್ಲಿ ಮಾರ್ಪಾಡು ಮಾಡಿದೆ. ಕಳೆದ ವಾರ ವಿಚಾರಣೆ ನಂತರ ಇಂದು ಮಧ್ಯಂತರ ನಿರ್ದೇಶನವನ್ನು ಸುಪ್ರೀಂ ಕೋರ್ಟ್ ನೀಡಿದ್ದು, ವಿಚಾರಣೆ ಮುಂದೂಡಿದೆ.

ದೇಶದ್ಯಾಂತ ಈ ಬೀದಿನಾಯಿಗಳ ಸಮಸ್ಯೆ ಹೆಚ್ಚಾಗಿದೆ ಎಂದು ಹೇಳಿರುವ ಸುಪ್ರೀಂ, ಎಲ್ಲಾ ರಾಜ್ಯಗಳ ಪಶುಸಂಗೋಪನಾ ಇಲಾಖೆಗಳಿಗೆ ಅನುಪಾಲನಾ ವರದಿ ಸಲ್ಲಿಕೆಗೆ ಮಾಡುವಂತೆ ಆದೇಶಿಸಿದೆ. ಪ್ರಕರಣದ ತೀವ್ರತೆಯನ್ನು ಅರಿಯ ನ್ಯಾಯಾಲಯ ವಿಚಾರಣೆಯನ್ನು ಮುಂದಿನ ಎಂಟು ವಾರಗಳ ಕಾಲ ಮುಂದೂಡಿದೆ.

ಈ ಸುದ್ದಿಯನ್ನು ಓದಿ: Viral Video: ಪಾತ್ರೆ ಮೇಲೆ ಮೂತ್ರ ವಿಸರ್ಜಿಸಿದ ಮನೆಗೆಲಸದ ಮಹಿಳೆ: ದುಷ್ಕೃತ್ಯದ ದೃಶ್ಯ ಕ್ಯಾಮರಾದಲ್ಲಿ ಸೆರೆ

ಅಲ್ಲದೇ ಮಧ್ಯಂತರ ನಿರ್ದೇಶನವನ್ನು ನೀಡಿರುವ ಸುಪ್ರೀಂ ಕೋರ್ಟ್, ಆರೈಕೆ ಕೇಂದ್ರಗಳಲ್ಲಿ ನಾಯಿಗಳನ್ನು ಬಂಧಿಸುವಂತಿಲ್ಲ,
ಕೇವಲ ಆಕ್ರಮಣಕಾರಿ ನಾಯಿಗಳನ್ನು ಮಾತ್ರ ಶೆಲ್ಟರ್ ಗಳಲ್ಲಿ ಕೂಡಿ ಹಾಕಬೇಕು. ಮುಖ್ಯವಾಗಿ ಸಾರ್ವಜನಿಕವಾಗಿ ಪ್ರದೇಶಗಳಲ್ಲಿ ಶ್ವಾನಗಳಿಗೆ ಆಹಾರ ನೀಡುವುದನ್ನು ನಿಷೇಧಿಸಲಾಗಿದ್ದು, ನಿಯಮ ಮೀರಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ತಿಳಿಸಿದೆ. ಜೊತೆಗೆ ನಾಯಿಯನ್ನು ಹಿಡಿದು ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡವುದರ ಜೊತೆ, ಪ್ರಾಣಿಪ್ರಿಯರು ಶ್ವಾನಗಳನ್ನು ದತ್ತುಪಡೆಯಬೇಕು ಎಂದು ತಿಳಿಸಿದ್ದು,
ಸ್ಥಳೀಯ ಆಡಳಿತ ಸಂಸ್ಥೆಗಳು ಸೂಕ್ತ ವೈದ್ಯಕೀಯ ಕ್ರಮಗಳ ನಂತರ ಬೀದಿನಾಯಿಗಳು ಎಲ್ಲಿದ್ದವೋ ಅಲ್ಲಿಗೇ ಮರಳಿ ಬಿಡುವಂತೆ ಸೂಚನೆ ನೀಡಲಾಗಿದೆ.