ಕರ್ನಾಟಕ ಬಜೆಟ್​ ವಿದೇಶ ಪುನೀತ್​ @ 50 ಫ್ಯಾಷನ್​ ಧಾರ್ಮಿಕ ಕ್ರೈಂ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Amritsar Golden Temple: ಸ್ವರ್ಣಮಂದಿರ ಮೇಲೆ ಗ್ರೆನೇಡ್‌ ಅಟ್ಯಾಕ್‌- ಆರೋಪಿ ಎನ್‌ಕೌಂಟರ್‌ಗೆ ಬಲಿ

Amritsar Golden Temple: ಅಮೃತಸರದಲ್ಲಿ ಭಾರೀ ಸ್ಫೋಟ ಸಂಭವಿಸಿತ್ತು. ವೈರಲ್ ಆದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಇಬ್ಬರು ಶಂಕಿತರು ದೇವಾಲಯದ ಮೇಲೆ ಸ್ಫೋಟಕ ಎಸೆದು ಸ್ಥಳದಿಂದ ಪರಾರಿಯಾಗುತ್ತಿರುವುದು ಕಂಡುಬಂದಿದೆ. ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ಬೆಳಗ್ಗಿನ ಜಾವ 12 ಗಂಟೆ ಸುಮಾರಿಗೆ, ಇಬ್ಬರು ವ್ಯಕ್ತಿಗಳು ಬೈಕ್‌ನಲ್ಲಿ ಬಂದು, ಠಾಕೂರ್ ದ್ವಾರ ಮಂದಿರದ ಹೊರಗೆ ಗ್ರೆನೇಡ್ ಎಸೆದಿದ್ದರು.

ಸ್ವರ್ಣಮಂದಿರ ಮೇಲೆ ಗ್ರೆನೇಡ್‌ ಅಟ್ಯಾಕ್‌-ಶಂಕಿತ ಎನ್‌ಕೌಂಟರ್‌ಗೆ ಬಲಿ

Profile Rakshita Karkera Mar 17, 2025 12:36 PM

ಅಮೃತಸರ: ಪಂಜಾಬ್‌ನ ಅಮೃತಸರದಲ್ಲಿರುವ ಸಿಖ್‌ ಪವಿತ್ರ ಸ್ಥಳ ಸ್ವರ್ಣಮಂದಿರದಲ್ಲಿ (Amritsar Golden Temple) ಎರಡು ದಿನಗಳ ಹಿಂದೆಯಷ್ಟೇ ನಡೆದ ಗ್ರೆನೇಡ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿ ಪೊಲೀಸ್‌ ಎನ್‌ಕೌಂಟರ್‌ಗೆ ಬಲಿಯಾಗಿದ್ದಾನೆ. ಮತ್ತೊರ್ವ ಶಂಕಿತ ಎಸ್ಕೇಪ್‌ ಆಗಿದ್ದು ಪೊಲೀಸರು ಹುಡುಕಾಟ ಶುರುಮಾಡಿದ್ದಾರೆ. ಶನಿವಾರ ಬೈಕ್‌ನಲ್ಲಿ ಬಂದಿದ್ದ ಕಿಡಿಗೇಡಿಗಳು ಸ್ವರ್ಣಮಂದಿರ ಸಂಕೀರ್ಣದ ಮೇಲೆ ಸ್ಫೋಟಕ ವಸ್ತುವನ್ನೊಂದನ್ನು ಎಸೆದು ಪರಾರಿಯಾಗಿದ್ದರು. ಇದರಿಂದ ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಇದಾದ ಬಳಿಕ ತಕ್ಷಣ ಕಾರ್ಯಕಪ್ರವೃತರಾದ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ಪ್ರಾರಂಭಿಸಿದ್ದರು.

ಈ ಬಗ್ಗೆ ಮಾಹಿತಿ ನೀಡಿರುವ ಪಂಜಾಬ್‌ಪೊಲೀಸ್‌ ಡಿಜಿಪಿ ಗೌರವ್‌ ಯಾದವ್‌, ರಾಜಸಾನ್ಸಿಯಲ್ಲಿ ಕಿಡಿಗೇಡಿಗಳು ಅವಿತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರ ತಂಡ ಅವರನ್ನು ಸೆರೆ ಹಿಡಿಯಲು ಕಾರ್ಯಾಚರಣೆ ಕೈಗೆತ್ತಿಕೊಂಡಿತ್ತು. ಈ ವೇಳೆ ಆರೋಪಿಯೋರ್ವ ಪೊಲೀಸರ ಮೇಲೆಯೇ ಗುಂಡು ಹಾರಿಸಿದ್ದಾರೆ. ಇದಕ್ಕೆ ಪ್ರತಿಯಾಗಿ, ಆತ್ಮರಕ್ಷಣೆಗಾಗಿ ಪೊಲೀಸರು ಶೂಟ್‌ ಮಾಡಿದ್ದು, ಆರೋಪಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮತ್ತೊರ್ವ ಸ್ಥಳದಿಂದ ಎಸ್ಕೇಪ್‌ ಆಗಿದ್ದಾನೆ. ಆತನಿಗಾಗಿ ಪೊಲೀಸರು ಶೋಧ ಕಾರ್ಯ ಶುರುಮಾಡಿದ್ದಾರೆ.

ಎನ್‌ಕೌಂಟರ್‌ ನಡೆದ ಸ್ಥಳದ ವಿಡಿಯೊ ಇಲ್ಲಿದೆ



ದೇವಾಲಯದಲ್ಲಿ ನಡೆದಿದ್ದೇನು?

ಶನಿವಾರ ಅಮೃತಸರದ ಸ್ವರ್ಣ ಮಂದಿರದಲ್ಲಿ ಭಾರೀ ಸ್ಫೋಟ ಸಂಭವಿಸಿತ್ತು. ವೈರಲ್ ಆದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಇಬ್ಬರು ಶಂಕಿತರು ದೇವಾಲಯದ ಮೇಲೆ ಸ್ಫೋಟಕ ಎಸೆದು ಸ್ಥಳದಿಂದ ಪರಾರಿಯಾಗುತ್ತಿರುವುದು ಕಂಡುಬಂದಿದೆ. ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ಬೆಳಗ್ಗಿನ ಜಾವ 12 ಗಂಟೆ ಸುಮಾರಿಗೆ, ಇಬ್ಬರು ವ್ಯಕ್ತಿಗಳು ಬೈಕ್‌ನಲ್ಲಿ ಬಂದು, ಠಾಕೂರ್ ದ್ವಾರ ಮಂದಿರದ ಹೊರಗೆ ಗ್ರೆನೇಡ್ ಎಸೆದಿದ್ದರು. ಅದರ ಸ್ಫೋಟ ಎಷ್ಟು ಪ್ರಬಲವಾಗಿತ್ತೆಂದರೆ ಹತ್ತಿರದ ಕಟ್ಟಡಗಳು ಹಾನಿಗೊಂಡಿದ್ದವು. ಅವುಗಳ ಕಿಟಕಿಗಳು ಮತ್ತು ಎಲ್ಲವೂ ಒಡೆದುಹೋದವು. ನಂತರ ಪೊಲೀಸರು ಸ್ಥಳಕ್ಕೆ ತಲುಪಿ ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿಕೊಂಡರು. ಘಟನೆಯ ಬಗ್ಗೆ ಬೆಳಗಿನ ಜಾವ 2 ಗಂಟೆ ಸುಮಾರಿಗೆ ದೇವಾಲಯದ ಅರ್ಚಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಿದರು. ಅಮೃತಸರದಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಇಂತಹ ದಾಳಿಗಳಲ್ಲಿ ಭಾಗಿಯಾಗಿದ್ದು, ಬಡ ಕುಟುಂಬಗಳ ಯುವಕರನ್ನು ಇಂತಹ ಕೃತ್ಯಗಳಿಗೆ ಬಳಸಿಕೊಳ್ಳುತ್ತಿದೆ ಎಂದು ಪೊಲೀಸ್‌ ಅಧಿಕಾರಿಗಳು ಹೇಳಿದರು.

ಕಿಡಿಗೇಡಿಗಳ ಕೃತ್ಯದ ವಿಡಿಯೊ ಇಲ್ಲಿದೆ



ಈ ಸುದ್ದಿಯನ್ನೂ ಓದಿ: Amritsar Temple : ಅಮೃತಸರದ ಠಾಕೂರ್ ದ್ವಾರ್ ದೇವಾಲಯದ ಬಳಿ ಸ್ಫೋಟ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಕೆಲವು ದಿನಗಳ ಹಿಂದೆಯಷ್ಟೇ ಸ್ವರ್ಣ ಮಂದಿರದಲ್ಲಿ ವ್ಯಕ್ತಿಯೊಬ್ಬ ಏಕಾಏಕಿ ಕಬ್ಬಿಣದ ರಾಡ್‌ನಿಂದ ದಾಳಿ ನಡೆಸಿದ್ದು, ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ವರದಿಯಾಗಿತ್ತು. ಕಿಡಿಗೇಡಿಯನ್ನು ತಕ್ಷಣ ಪೊಲೀಸರು ಅರೆಸ್ಟ್‌ ಮಾಡಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಭಕ್ತರು ಮತ್ತು ಸ್ಥಳೀಯರು ಸೇರಿದ್ದ ಅಡುಗೆಮನೆ ಅಥವಾ ಗುರು ರಾಮ್ ದಾಸ್ ಲಂಗರ್ ಬಳಿ ಕಿಡಿಗೇಡಿ ಏಕಾಏಕಿ ದಾಳಿ ನಡೆಸಲು ಶುರು ಮಾಡಿದ್ದಾನೆ. ಈ ಬೆನ್ನಲ್ಲೇ ಅಲ್ಲಿದ್ದ ಜನ ಭಯಭೀತಗೊಂಡಿದ್ದಾರೆ. ಇನ್ನು ಘಟನೆಯಲ್ಲಿ ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿಯ (SGPC) ಇಬ್ಬರು ಸೇವಾದಾರರು (ಸ್ವಯಂಸೇವಕರು) ಗಾಯಗೊಂಡಿದ್ದು, ಅಮೃತಸರದ ಶ್ರೀ ಗುರು ರಾಮ್ ದಾಸ್ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ದಾಖಲಿಸಲಾಗಿದೆ.

ಇನ್ನು ದಾಳಿಕೋರರ ಮತ್ತು ಆತನ ಸಹಚರನನ್ನು ಅಲ್ಲಿ ನೆರೆದಿದ್ದ ಜನ ಸೆರೆ ಹಿಡಿದಿದ್ದು, ಸರಿಯಾಗಿ ಥಳಿಸಿದ್ದಾರೆ. ಬಳಿಕ ಅವರನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.