ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Cryptocurrency Fraud Case: ಕ್ರಿಪ್ಟೊ ಕರೆನ್ಸಿ ವಂಚನೆ ಪ್ರಕರಣ; ತಮನ್ನಾ, ಕಾಜಲ್‌ಗೆ ಪೊಲೀಸರ ನೋಟಿಸ್‌

2.40 ಕೋಟಿ ರೂ. ಕ್ರಿಪ್ಟೊ ಕರೆನ್ಸಿ ವಂಚನೆ ಪ್ರಕರಣದಲ್ಲಿ ದಕ್ಷಿಣ ಭಾರತದ ಜನಪ್ರಿಯ ತಾರೆಯರಾದ ತಮನ್ನಾ ಭಾಟಿಯಾ ಮತ್ತು ಕಾಜಲ್‌ ಅಗರ್ವಾಲ್‌ ಅವರಿಗೆ ಪುದುಚೆರಿ ಪೊಲೀಸರು ನೋಟಿಸ್‌ ನೀಡಿದ್ದಾರೆ. 2022ರಲ್ಲಿ ಸ್ಥಾಪನೆಯಾದ ಕೊಯಮತ್ತೂರು ಮೂಲದ ಕ್ರಿಪ್ಟೊ ಕರೆನ್ಸಿ ಸಂಸ್ಥೆಯ ವಿರುದ್ಧ ಪುದುಚೇರಿಯ ಮೂಲಕುಲಂನ ಮಾಜಿ ಸೈನಿಕ ಅಶೋಕನ್ ದೂರು ದಾಖಲಿಸಿದ್ದಾರೆ. ಈ ಸಂಬಂಧ ಅವರು ಪದುಚೆರಿ ಪೊಲೀಸ್ ಠಾಣೆಯಲ್ಲಿ ವಂಚಕರ ಜತೆಗೆ ತಮನ್ನಾ ಹಾಗೂ ಕಾಜಲ್ ವಿರುದ್ಧವೂ ದೂರು ನೀಡಿದ್ದಾರೆ.

ಕ್ರಿಪ್ಟೊ ಕರೆನ್ಸಿ ವಂಚನೆ ಪ್ರಕರಣ; ತಮನ್ನಾ, ಕಾಜಲ್‌ಗೆ ನೋಟಿಸ್‌

ತಮನ್ನಾ ಭಾಟಿಯಾ ಮತ್ತು ಕಾಜಲ್‌ ಅಗರ್ವಾಲ್‌.

Profile Ramesh B Feb 28, 2025 4:55 PM

ಚೆನ್ನೈ: 2.40 ಕೋಟಿ ರೂ. ಕ್ರಿಪ್ಟೊ ಕರೆನ್ಸಿ ವಂಚನೆ ಪ್ರಕರಣ (Cryptocurrency Fraud Case) ಇತ್ತೀಚೆಗೆ ಭಾರಿ ಸದ್ದು ಮಾಡುತ್ತಿದೆ. ಈ ವಂಚನೆಯ ಜಾಲದಲ್ಲಿ ಹಲವರ ಹೆಸರು ಥಳುಕು ಹಾಕಿಕೊಂಡಿದೆ. ಇದೀಗ ಈ ಪಟ್ಟಿಗೆ ದಕ್ಷಿಣ ಭಾರತದ ಜನಪ್ರಿಯ ನಾಯಕಿಯರಾದ ತಮನ್ನಾ ಭಾಟಿಯಾ (Tamannaah Bhatia) ಮತ್ತು ಕಾಜಲ್‌ ಅಗರ್ವಾಲ್‌ (Kajal Aggarwal) ಸೇರಿದ್ದಾರೆ. ಪುದುಚೆರಿ ಪೊಲೀಸರು ಈ ಇಬ್ಬರು ಕಲಾವಿದೆಯರಿಗೆ ನೋಟಿಸ್‌ ನೀಡಿದ್ದು, ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಒಳಪಡಿಸಲಿದ್ದಾರೆ.

2022ರಲ್ಲಿ ಸ್ಥಾಪನೆಯಾದ ಕೊಯಮತ್ತೂರು ಮೂಲದ ಕ್ರಿಪ್ಟೊ ಕರೆನ್ಸಿ ಸಂಸ್ಥೆಯ ವಿರುದ್ಧ ಪುದುಚೇರಿಯ ಮೂಲಕುಲಂನ ಮಾಜಿ ಸೈನಿಕ ಅಶೋಕನ್ ದೂರು ದಾಖಲಿಸಿದ್ದಾರೆ. ಕ್ರಿಪ್ಟೊ ಕರೆನ್ಸಿ ಹೂಡಿಕೆ ಯೋಜನೆಯಲ್ಲಿ ಮೋಸ ಮಾಡಲಾಗಿದೆ ಎಂದು ಅವರು ದೂರಿನಲ್ಲಿ ಹೇಳಿದ್ದಾರೆ. ಅವರು 1 ಕೋಟಿ ರೂ.ಗಳನ್ನು ಹೂಡಿಕೆ ಮಾಡಿದ್ದಾಗಿ ತಿಳಿಸಿದ್ದಾರೆ. ಅಲ್ಲದೆ 2.40 ಕೋಟಿ ರೂ.ಗಳನ್ನು ಹೂಡಿಕೆ ಮಾಡಲು ತಮ್ಮ 10 ಸ್ನೇಹಿತರನ್ನು ಮನವೊಲಿಸಿದ್ದಾಗಿ ಹೇಳಿದ್ದಾರೆ ಎಂದು ವರದಿಯೊಂದು ತಿಳಿಸಿದೆ.



ಕಂಪೆನಿಯ ಆರಂಭಕ್ಕೆ ಅವರನ್ನು ಆಹ್ವಾನಿಸಲಾಗಿತ್ತು ಎಂದು ವರದಿಯಾಗಿದೆ. ಇದರಲ್ಲಿ ತಮನ್ನಾ ಭಾಟಿಯಾ ಭಾಗವಹಿಸಿದ್ದರು. ನಂತರ ಮಹಾಬಲಿಪುರಂನಲ್ಲಿ ನಡೆದ ಕಂಪೆನಿಯ ಸಮಾರಂಭದಲ್ಲಿ ಕಾಜಲ್ ಅಗರ್ವಾಲ್ ಮುಖ್ಯ ಅತಿಥಿಯಾಗಿದ್ದರು.

ಹಣವನ್ನು ದುಪ್ಪಟ್ಟು ಮಾಡಿಕೊಡುವುದಾಗಿ ಹೇಳಿ ಕಂಪೆನಿ ಸುಮಾರು 2.40 ಕೋಟಿ ರೂ. ವಂಚಿಸಿದೆ ಎಂದು ಅಶೋಕನ್ ಹೇಳಿದ್ದಾರೆ. ಈ ಸಂಬಂಧ ಅವರು ಪದುಚೆರಿ ಪೊಲೀಸ್ ಠಾಣೆಯಲ್ಲಿ ವಂಚಕರ ಜತೆಗೆ ತಮನ್ನಾ ಹಾಗೂ ಕಾಜಲ್ ವಿರುದ್ಧವೂ ದೂರು ನೀಡಿದ್ದಾರೆ. ಈಗಾಗಲೇ ಇಬ್ಬರು ಮುಖ್ಯ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ತಮನ್ನಾ ಭಾಟಿಯಾ ಮತ್ತು ಕಾಜಲ್ ಅಗರ್ವಾಲ್ ಅವರ ವಿಚಾರಣೆಗೆ ಮುಂದಾಗಿದ್ದಾರೆ.

ಕಾಜಲ್ ಮತ್ತು ತಮನ್ನಾ ಅವರು ಸಂಸ್ಥೆಯ ಪ್ರಮೋಷನ್‌, ಜಾಹೀರಾತಿನಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆಯೇ ಅಥವಾ ಹೂಡಿಕೆ ಹೊಂದಿದ್ದಾರೆಯೇ ಎನ್ನುವ ಬಗ್ಗೆ ಪೊಲೀಸ್ ಮಾಹಿತಿ ಕಲೆ ಹಾಕುತ್ತಿದ್ದಾರೆ. ತಮನ್ನಾ ಮತ್ತು ಕಾಜಲ್ ಈ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೆಲವು ದಿನಗಳ ಹಿಂದ ಮಹಾದೇವ್‌ ಬೆಟ್ಟಿಂಗ್‌ ಅಪ್ಲಿಕೇಷನ್‌ ಪ್ರಕರಣದಲ್ಲಿ ಹಲವು ತಾರೆಗಳ ಹೆಸರು ಕೇಳಿ ಬಂದಿತ್ತು. ಇದೀಗ ಇನ್ನೊಂದು ಪ್ರಕರಣದಲ್ಲಿ ಇಬ್ಬರು ಕಲಾವಿದರ ಮೇಲೆ ದೂರು ದಾಖಲಾಗಿದೆ.

ಈ ಸುದ್ದಿಯನ್ನೂ ಓದಿ: Sikandar Teaser Out: ಸಲ್ಮಾನ್‌-ರಶ್ಮಿಕಾ ನಟನೆಯ ಬಹು ನಿರೀಕ್ಷಿತ ʼಸಿಕಂದರ್‌ʼ ಚಿತ್ರದ ಟೀಸರ್‌ ಔಟ್‌

ಸದ್ಯದ ಪ್ರಾಜೆಕ್ಟ್‌

ಸದ್ಯ ತಮನ್ನಾ ಮತ್ತು ಕಾಜಲ್‌ ವಿವಿಧ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ತಮನ್ನಾ ಅವರು ನಟಿಸುತ್ತಿರುವ ʼಒಡೆಲಾ 2ʼ ತೆಲುಗು ಚಿತ್ರದ ಟೀಸರ್‌ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ರಿಲೀಸ್‌ ಆಗಿತ್ತು. ಈ ಚಿತ್ರದ ಮುಖ್ಯಪಾತ್ರದಲ್ಲಿ ಕನ್ನಡದ ವಶಿಷ್ಠ ಎನ್‌. ಸಿಂಹ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತ ಕಾಜಲ್‌ ಸಲ್ಮಾನ್ ‌ಖಾನ್‌-ರಶ್ಮಿಕಾ ನಟನೆಯ ಬಾಲಿವುಡ್‌ ಚಿತ್ರ ʼಸಿಕಂದರ್‌ʼನಲ್ಲಿ ನಟಿಸುತ್ತಿದ್ದಾರೆ. ಇದರ ಜತೆಗೆ ಟಾಲಿವುಡ್‌ನ ಬಹುನಿರೀಕ್ಷಿತ ʼಕಣ್ಣಪ್ಪʼ ಸಿನಿಮಾದಲ್ಲಿಯೂ ಕಾಜಲ್‌ ನಟಿಸುತ್ತಿದ್ದಾರೆ. ಪಾರ್ವತಿ ದೇವಿ ಪಾತ್ರದಲ್ಲಿ ಅವರು ಅಭಿನಯಿಸುತ್ತಿದ್ದಾರೆ. ಇತ್ತೀಚೆಗೆ ರಿಲೀಸ್‌ ಆದ ಅವರ ಪೋಸ್ಟರ್‌ ವೈರಲ್‌ ಆಗಿತ್ತು.