Rain Alert: ಭಾರೀ ಮಳೆಗೆ ತತ್ತರಿಸಿದ ತಮಿಳುನಾಡು; 8 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ
ಈಶಾನ್ಯ ಮಾನ್ಸೂನ್ ಆರಂಭದಲ್ಲೇ ತೀವ್ರಗೊಳ್ಳುತ್ತಿರುವುದರಿಂದ ತಮಿಳುನಾಡಿನಾದ್ಯಂತ (Tamilnadu) ಭಾರೀ ಮಳೆಯಾಗುತ್ತಿದೆ. ಚೆನ್ನೈನಲ್ಲಿರುವ ಪ್ರಾದೇಶಿಕ ಹವಾಮಾನ ಕೇಂದ್ರ (ಆರ್‌ಎಂಸಿ) ರಾಮನಾಥಪುರಂ, ನಾಗಪಟ್ಟಣಂ, ಕಡಲೂರು, ತಂಜಾವೂರು ಸೇರಿದಂತೆ 8 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ಅಕ್ಟೋಬರ್ 22 ರವರೆಗೆ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಆರ್‌ಎಂಸಿ ನೀಡಿದೆ.

-

ಚೆನ್ನೈ: ಈಶಾನ್ಯ ಮಾನ್ಸೂನ್ ಆರಂಭದಲ್ಲೇ ತೀವ್ರಗೊಳ್ಳುತ್ತಿರುವುದರಿಂದ ತಮಿಳುನಾಡಿನಾದ್ಯಂತ ಭಾರೀ ಮಳೆಯಾಗುತ್ತಿದೆ. ಚೆನ್ನೈನಲ್ಲಿರುವ ಪ್ರಾದೇಶಿಕ ಹವಾಮಾನ ಕೇಂದ್ರ (ಆರ್‌ಎಂಸಿ) ರಾಮನಾಥಪುರಂ, ನಾಗಪಟ್ಟಣಂ, ಕಡಲೂರು, ತಂಜಾವೂರು ಸೇರಿದಂತೆ 8 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ಅಕ್ಟೋಬರ್ 21 ರಂದು ಬೆಳಿಗ್ಗೆ 8.30 ರಿಂದ ಸಂಜೆ 5.30 ರವರೆಗೆ, ಚೆನ್ನೈನ ನುಂಗಂಬಕ್ಕಂ ನಿಲ್ದಾಣದಲ್ಲಿ ರಾಜ್ಯದಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, 61.8 ಮಿ.ಮೀ. ಮಳೆಯಾಗಿದೆ. ಇದರ ನಂತರ ರಾಮನಾಥಪುರಂನ ಪಂಬನ್ - 53 ಮಿ.ಮೀ. ಮತ್ತು ಮಧುರೈ ಜಿಲ್ಲೆ - 41 ಮಿ.ಮೀ. ಮಳೆಯಾಗಿದೆ.
ಅಕ್ಟೋಬರ್ 22 ರವರೆಗೆ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಆರ್‌ಎಂಸಿ ನೀಡಿದೆ, ನಂತರ ಅದರ ತೀವ್ರತೆ ಮಧ್ಯಮ ಮತ್ತು ಹಗುರ ಮಳೆಗೆ ಇಳಿಯಲಿದೆ. ಎರಡು ಹವಾಮಾನ ವ್ಯವಸ್ಥೆಗಳು ಅಕ್ಟೋಬರ್ 21 ಮತ್ತು 22 ರಂದು ತಮಿಳುನಾಡು ಮತ್ತು ನೆರೆಯ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ 7 ಸೆಂ.ಮೀ ನಿಂದ 20 ಸೆಂ.ಮೀ ವರೆಗೆ ಭಾರೀ ಮಳೆ ಮತ್ತು ಕೆಲವು ಭಾಗಗಳಲ್ಲಿ 21 ಸೆಂ.ಮೀ ಗಿಂತ ಹೆಚ್ಚಿನ ಮಳೆಯನ್ನು ತರುತ್ತವೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಸಿದೆ.
ಮಳೆಗಾಲದ ಸಿದ್ಧತೆಯನ್ನು ಪರಿಶೀಲಿಸಲು, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮಂಗಳವಾರ ಚೆನ್ನೈನಲ್ಲಿ ವಿಪತ್ತು ನಿರ್ವಹಣಾ ಇಲಾಖೆ ಮತ್ತು ಡೆಲ್ಟಾ ಜಿಲ್ಲೆಗಳ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು. ಜಿಲ್ಲಾ ಮೇಲ್ವಿಚಾರಣಾ ಅಧಿಕಾರಿಗಳು ನಗರದ ಪ್ರದೇಶಗಳು ಮತ್ತು ಕೆಂಪು ಮತ್ತು ಆರೆಂಜ್ ಅಲರ್ಟ್ ಳಪಟ್ಟಿರುವ ಜಿಲ್ಲೆಗಳನ್ನು ತಕ್ಷಣ ತಲುಪುವಂತೆ ಅವರು ಆದೇಶಿಸಿದರು. ಭಾರೀ ಮಳೆಯಾಗುವ ಮುನ್ಸೂಚನೆ ಇರುವ 12 ಜಿಲ್ಲೆಗಳಿಗೆ ಮುಖ್ಯಮಂತ್ರಿಗಳು ತಲಾ ಒಬ್ಬ ಹಿರಿಯ ಐಎಎಸ್ ಅಧಿಕಾರಿಯನ್ನು ನೇಮಿಸಿದರು. "ಪರಿಹಾರ ಶಿಬಿರಗಳನ್ನು ಸಿದ್ಧವಾಗಿಡಬೇಕು ಮತ್ತು ಚೆನ್ನೈನ ತಗ್ಗು ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಗಮನ ಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸುದ್ದಿಯನ್ನೂ ಓದಿ: Karnataka Weather: ಆರೆಂಜ್ ಅಲರ್ಟ್; ಇಂದು ಕರಾವಳಿ, ಮಲೆನಾಡಿನಲ್ಲಿ ಧಾರಾಕಾರ ಮಳೆ ಮುನ್ಸೂಚನೆ!
ಚೆನ್ನೈನಲ್ಲಿ ಇಂದು ಸರಾಸರಿ 60 ಮಿಮೀ ಮಳೆ ದಾಖಲಾಗಿದೆ, ಮೆಡವಕ್ಕಂನಲ್ಲಿ 100 ಮಿಮೀ ಹೆಚ್ಚಿನ ಮಳೆಯಾಗಿದೆ. ಒಟ್ಟಾರೆಯಾಗಿ, ಅಕ್ಟೋಬರ್ 1 ಮತ್ತು 21 ರ ನಡುವೆ, ತಮಿಳುನಾಡು, ಪುದುಚೇರಿ ಮತ್ತು ಕಾರಿಕಲ್‌ಗಳಲ್ಲಿ ಕನಿಷ್ಠ 160 ಮಿ.ಮೀ ಮಳೆಯಾಗಿದ್ದು, ಇದು ಈ ಅವಧಿಯ ಸಾಮಾನ್ಯ ಸರಾಸರಿ 100 ಮಿ.ಮೀ.ಗಿಂತ ಶೇ. 59 ರಷ್ಟು ಹೆಚ್ಚಾಗಿದೆ ಎಂದು ಆರ್‌ಎಂಸಿ ನಿರ್ದೇಶಕರು ತಿಳಿಸಿದ್ದಾರೆ.