ಢಾಕಾ: ಬಾಂಗ್ಲಾದೇಶದಲ್ಲಿ ಗುಂಪೊಂದು ಹಿಂದೂ ವ್ಯಕ್ತಿಯೊಬ್ಬನನ್ನು ಹೊಡೆದು ಕೊಂದು ಹಾಕಿತ್ತು. ಇದೊಂದು ಅತ್ಯಂತ ಭಯಾನಕ, ನೀಚ ಜಿಹಾದಿ ಕೃತ್ಯ ಎಂದು ಲೇಖಕಿ ತಸ್ಲೀಮಾ ನಸ್ರೀನ್ ಹೇಳಿದ್ದಾರೆ. ಭಾರತ ವಿರೋಧಿ ಚಟುವಟಿಕೆಗಳ ಮೂಲಕ ಯುವ ನಾಯಕನಾಗಿ ಹೊರಹೊಮ್ಮಿದ್ದ ಷರೀಫ್ ಉಸ್ಮಾನ್ ಹದಿಯ ಹತ್ಯೆಯ ಬಳಿಕ ಬಾಂಗ್ಲಾದೇಶದಲ್ಲಿ ಭಾರಿ ಗಲಭೆ ಉಂಟಾಗಿದ್ದು, ಈ ನಡುವೆಯೇ ಹಿಂದೂ ವ್ಯಕ್ತಿಯೊಬ್ಬನನ್ನು ಗುಂಪೊಂದು ಮರಕ್ಕೆ ಕಟ್ಟಿ ಹಾಕಿ ಜೀವಂತವಾಗಿ ಸುಟ್ಟು ಹಾಕಿತ್ತು.
ಷರೀಫ್ ಉಸ್ಮಾನ್ ಹದಿ ಹತ್ಯೆಯ ಬಳಿಕ ದೇಶಾದ್ಯಂತ ಅಶಾಂತಿಯ ವಾತಾವರಣ ನಿರ್ಮಾಣವಾಗಿದ್ದು, ಗುಂಪೊಂದು ಹಿಂದೂ ಗಾರ್ಮೆಂಟ್ ಕಾರ್ಖಾನೆಯ ಕೆಲಸಗಾರನನ್ನು ಹೊಡೆದು ಕೊಂದು ಹಾಕಿದೆ ಎಂದು ಖ್ಯಾತ ಲೇಖಕಿ ತಸ್ಲೀಮಾ ನಸ್ರೀನ್ ತಿಳಿಸಿದ್ದು, ಇದು ಹೇಗಾಯಿತು ಎಂಬುದನ್ನು ಕೂಡ ವಿವರಿಸಿದ್ದಾರೆ.
Epstein Files: ಲೈಂಗಿಕ ಹಗರಣ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಟ್ರಂಪ್ ಫೋಟೋ ಸೇರಿ ಕನಿಷ್ಠ 16 ದಾಖಲೆಗಳು ನಾಪತ್ತೆ!
ಭಾರತದಲ್ಲಿ ವಾಸಿಸುತ್ತಿರುವ ಮೂಲತಃ ಬಾಂಗ್ಲಾದೇಶದವರಾದ ನಸ್ರೀನ್, ಬಾಂಗ್ಲಾದೇಶದ ಮೈಮೆನ್ಸಿಂಗ್‌ನ ಭಾಲುಕಾದಲ್ಲಿರುವ ಕಾರ್ಖಾನೆಯಲ್ಲಿ ವ್ಯವಸ್ಥಾಪಕನಾಗಿ ಕಾರ್ಯನಿರ್ವಹಿಸುತ್ತಿದ್ದ ದೀಪು ಚಂದ್ರ ದಾಸ್ (25) ಇಸ್ಲಾಂನ ಪ್ರವಾದಿಯ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ರಾಜೀನಾಮೆ ನೀಡುವಂತೆ ಒತ್ತಾಯಿಸಲಾಗಿದೆ. ಈ ನಡುವೆಯೇ ಕಾರ್ಖಾನೆಯೊಳಗಿನ ಮುಸ್ಲಿಂ ಕಾರ್ಮಿಕರು ಅವರನ್ನು ಶಿಕ್ಷಿಸಲು ಸಿದ್ದರಾಗಿದ್ದು, ದೀಪು ಅವರನ್ನು ಹೊರಗಿನ ಉನ್ಮಾದಿತ ಗುಂಪಿನ ಕೈಗೊಪ್ಪಿಸಿದರು ಎಂದು ತಸ್ಲಿಮಾ ನಸ್ರೀನ್ ತಿಳಿಸಿದ್ದಾರೆ.
ಜನಸಮೂಹವು ದೀಪು ಅವರನ್ನು ಹೊಡೆದು ನೇಣು ಹಾಕಿ ಸುಟ್ಟುಹಾಕಿತು.ದೀಪು ಚಂದ್ರ ದಾಸ್ ಅವರು ಕುಟುಂಬದ ಏಕೈಕ ಜೀವನಾಧಾರವಾಗಿದ್ದರು. ಅವರ ಆದಾಯದಿಂದಲೇ ಅಂಗವಿಕಲ ತಂದೆ, ತಾಯಿ, ಪತ್ನಿ ಮತ್ತು ಮಗುವನ್ನು ಪೋಷಿಸಿತ್ತಿದ್ದರು. ಜಿಹಾದಿಗಳ ಕೈಯಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಭಾರತಕ್ಕೆ ಪಲಾಯನ ಮಾಡಲು ಸಿದ್ದವಾಗಿರುವ ದೀಪು ಅವರ ಕುಟುಂಬಕ್ಕೆ ಹಣವಿಲ್ಲ ಎಂದು ಹೇಳಿದ್ದಾರೆ.
ದೇಶಾದ್ಯಂತ ಮುಂದುವರಿದ ಅಶಾಂತಿ ಮತ್ತು ಹೆಚ್ಚಿದ ಭದ್ರತಾ ಕಾಳಜಿಗಳ ನಡುವೆ ದೀಪು ಹತ್ಯೆಗೆ ಸಂಬಂಧಿಸಿ ಹತ್ತು ಮಂದಿಯನ್ನು ಬಂಧಿಸಲಾಗಿದೆ ಸರ್ಕಾರದ ಮಧ್ಯಂತರ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಶನಿವಾರ ತಿಳಿಸಿದ್ದಾರೆ.
ಏನಾಯಿತು?
ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹದಿ ಅವರ ಮೇಲೆ ಗುಂಡಿನ ದಾಳಿಯಾದ ಬಳಿಕ ಸಿಂಗಾಪುರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಇವರ ಸಾವಿನ ಬಳಿಕ ದೇಶಾದ್ಯಂತ ಅಶಾಂತಿಯ ವಾತಾವರಣ ನಿರ್ಮಾಣವಾಗಿದ್ದು, ಹಿಂಸಾತ್ಮಕ ಪ್ರತಿಭಟನೆಗಳಿಗೆ ಕಾರಣವಾಯಿತು.
Bangladesh Unrest: ಚುನಾವಣೆ ಹೊಸ್ತಿಲಿನಲ್ಲಿ ಬಾಂಗ್ಲಾದೇಶ ಧಗಧಗ: ಕಾರಣವೇನು?
ಈ ನಡುವೆ 25 ವರ್ಷದ ಕಾರ್ಖಾನೆ ಕೆಲಸಗಾರ ದೀಪು ಚಂದ್ರ ದಾಸ್ ಅವರನ್ನು ಗುರುವಾರ ಮೈಮೆನ್ಸಿಂಗ್‌ನ ಭಾಲುಕಾ ಪ್ರದೇಶದಲ್ಲಿ ಗುಂಪೊಂದು ಥಳಿಸಿ ಕೊಂದು ಹಾಕಿತು. ಬಳಿಕ ಮರಕ್ಕೆ ನೇತುಹಾಕಿ ಬೆಂಕಿ ಹಚ್ಚಿತ್ತು. ಈ ಕುರಿತು ದೀಪು ತಂದೆ ರವಿಲಾಲ್ ದಾಸ್ ಅವರು ಫೇಸ್ ಬುಕ್ ನಲ್ಲಿ ಮಾತನಾಡಿ, ಮಗನ ಶವವನ್ನು ಮರಕ್ಕೆ ಕಟ್ಟಿ ಬೆಂಕಿ ಹಚ್ಚಿದ್ದಾರೆ. ಹಚ್ಚಲಾಗಿದೆ ಎಂದು ಹೇಳಿದರು.
ಯಾರೋ ಅವನಿಗೆ ತುಂಬಾ ಹೊಡೆದಿದ್ದಾರೆ. ಮರಕ್ಕೆ ಕಟ್ಟಿ ಹಾಕಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದರು. ಅವನ ಸುಟ್ಟ ದೇಹವನ್ನು ಹೊರಗೆ ಬಿಡಲಾಯಿತು. ಬಾಂಗ್ಲಾದೇಶ ಸರ್ಕಾರದ ಮೇಲೆ ಯಾವುದೇ ಭರವಸೆ ಇಲ್ಲ ಎಂದು ಅವರು ತಿಳಿಸಿದರು. ಇದು ವ್ಯಾಪಕ ಚರ್ಚೆಗೆ ಕಾರಣವಾಗಿದೆ.