Viral Video: ಸುರಂಗದಲ್ಲಿ ಕೆಟ್ಟು ನಿಂತ ಚೆನ್ನೈ ಮೆಟ್ರೋ ರೈಲು; ಪ್ರಯಾಣಿಕರು ಸುಸ್ತೋ ಸುಸ್ತು... ವಿಡಿಯೋ ನೋಡಿ
Chennai metro: ಮೆಟ್ರೋ ರೈಲಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಪ್ರಯಾಣಿಕರು ಸ್ವಲ್ಪ ಹೊತ್ತು ಒಳಗೆ ಸಿಲುಕಿಕೊಂಡ ಘಟನೆ ಮಂಗಳವಾರ ಬೆಳ್ಳಂ ಬೆಳಿಗ್ಗೆ ಚೆನ್ನೈನಲ್ಲಿ ನಡೆದಿದೆ. ಎರಡು ಮೆಟ್ರೋ ನಿಲ್ದಾಣಗಳ ನಡುವಿನ ಸುರಂಗದೊಳಗೆ ರೈಲು ಸಿಲುಕಿಕೊಂಡಿದೆ ಎಂದು ವರದಿಯಾಗಿದೆ.
ಸಾಂದರ್ಭಿಕ ಚಿತ್ರ -
ಚೆನ್ನೈ: ಮೆಟ್ರೋ ರೈಲಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಪ್ರಯಾಣಿಕರು ಸ್ವಲ್ಪ ಹೊತ್ತು (Chennai metro) ಒಳಗೆ ಸಿಲುಕಿಕೊಂಡ ಘಟನೆ ಮಂಗಳವಾರ ಬೆಳ್ಳಂ ಬೆಳಿಗ್ಗೆ ಚೆನ್ನೈನಲ್ಲಿ ನಡೆದಿದೆ. ಎರಡು ಮೆಟ್ರೋ ನಿಲ್ದಾಣಗಳ ನಡುವಿನ ಸುರಂಗದೊಳಗೆ ರೈಲು ಸಿಲುಕಿಕೊಂಡಿದೆ ಎಂದು ವರದಿಯಾಗಿದೆ ಮತ್ತು ವಿದ್ಯುತ್ ವ್ಯತ್ಯಯದಿಂದಾಗಿ ಪ್ರಯಾಣಿಕರು ಒಳಗೆ ಸಿಲುಕಿಕೊಂಡಿರುವುದು ವೈರಲ್ ದೃಶ್ಯಗಳಲ್ಲಿ ಕಂಡುಬಂದಿದೆ. ವಿಮ್ಕೊ ನಗರ ಡಿಪೋ ಮತ್ತು ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ಚಲಿಸುವ ಚೆನ್ನೈ ಮೆಟ್ರೋ ರೈಲಿನ ಬ್ಲೂ ಲೈನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ.
ಚೆನ್ನೈ ಮೆಟ್ರೋದಲ್ಲಿ ಪ್ರಯಾಣಿಕರ ಪರದಾಟ
A metro train in Chennai was halted between the High Court and Puratchi Thalaivar Metro stations amid rain in the city.
— Vani Mehrotra (@vani_mehrotra) December 2, 2025
Immediate evacuation was done, and the train was promptly withdrawn from the line.
Normal operations resumed thereafter. pic.twitter.com/BGTTCiln9z
ಸೆಂಟ್ರಲ್ ಮೆಟ್ರೋ ಮತ್ತು ಹೈಕೋರ್ಟ್ ನಿಲ್ದಾಣದ ನಡುವಿನ ಸುರಂಗಮಾರ್ಗದಲ್ಲಿ ರೈಲು ಸಿಲುಕಿತ್ತು. ಸದ್ಯ ವೈರಲ್ ಆದ ವಿಡಿಯೋದಲ್ಲಿ ಪ್ರಯಾಣಿಕರು ಹ್ಯಾಂಡ್‌ರೈಲ್ ಅನ್ನು ಹಿಡಿದುಕೊಂಡು ನಿಂತಿರುವುದು ಕಂಡು ಬಂದಿದೆ. ಸುಮಾರು ನಿಮಿಷಗಳ ಬಳಿಕ ಪ್ರಯಾಣಿಕರಿಗೆ ಸುಮಾರು 500 ಮೀಟರ್ ದೂರದಲ್ಲಿರುವ ಹತ್ತಿರದ ಮೆಟ್ರೋ ನಿಲ್ದಾಣವಾದ ಹೈಕೋರ್ಟ್ ನಿಲ್ದಾಣಕ್ಕೆ ನಡೆದು ಹೋಗಲು ಅನುವು ಮಾಡಿ ಕೊಡಲಾಯಿತು. ಪ್ರಯಾಣಿಕರು ಸುರಂಗ ಮಾರ್ಗದಿಂದ ನಡೆದುಕೊಂಡೇ ಹೋದರು ಎಂದು ಹೇಳಲಾಗಿದೆ. ವಿದ್ಯುತ್ ಅಡಚಣೆ ಅಥವಾ ತಾಂತ್ರಿಕ ದೋಷದಿಂದ ಈ ಅಡಚಣೆ ಉಂಟಾಗಿರಬಹುದು.
ಕ್ಷಮಿಸು ಅಮ್ಮ... ಮೆಟ್ರೋ ನಿಲ್ದಾಣದಲ್ಲಿ ಹಳಿಗೆ 10ನೇ ತರಗತಿ ವಿದ್ಯಾರ್ಥಿ ಹಾರಿ ಆತ್ಮಹತ್ಯೆ
ತಾಂತ್ರಿಕ ಸಮಸ್ಯೆಯಿಂದಾಗಿ ರೈಲು ಹೈಕೋರ್ಟ್ ನಿಲ್ದಾಣ ಮತ್ತು ಪುರಚ್ಚಿ ತಲೈವರ್ ಡಾ. ಎಂ.ಜಿ. ರಾಮಚಂದ್ರನ್ ಸೆಂಟ್ರಲ್ ಮೆಟ್ರೋ ನಿಲ್ದಾಣದ ನಡುವೆ ಸ್ಥಗಿತಗೊಂಡಿದೆ ಎಂದು ಚೆನ್ನೈ ರೈಲ್ವೆ ತಿಳಿಸಿದೆ. ರೈಲನ್ನು ತಕ್ಷಣವೇ ಮಾರ್ಗದಿಂದ ಹಿಂತೆಗೆದುಕೊಳ್ಳಲಾಯಿತು. ಬೆಳಿಗ್ಗೆ 06.20 ಕ್ಕೆ ಸಾಮಾನ್ಯ ಕಾರ್ಯಾಚರಣೆಗಳು ಪುನರಾರಂಭಗೊಂಡಿವೆ ಎಂದು ಹೇಳಿಕೆ ತಿಳಿಸಿದೆ.
ಕಳೆದ ವಾರ ಮುಂಬೈ ಮೆಟ್ರೋದ 1ನೇ ಮಾರ್ಗದ ಪ್ರಮುಖ ಕಾರಿಡಾರ್‌ನಲ್ಲಿಯೂ ಸಹ ರೈಲು ಸೇವೆಯಲ್ಲಿ ಅಡಚಣೆ ಉಂಟಾಗಿತ್ತು. ವರ್ಸೋವಾ-ಘಾಟ್ಕೋಪರ್ ಮೆಟ್ರೋ ಕಾರಿಡಾರ್‌ನಲ್ಲಿ 30 ನಿಮಿಷಗಳಿಗೂ ಹೆಚ್ಚು ಕಾಲ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಮುಂಬೈ ಮೆಟ್ರೋ ಒನ್ ಪ್ರೈವೇಟ್ ಲಿಮಿಟೆಡ್ (ಎಂಎಂಒಪಿಎಲ್) ರೈಲುಗಳಲ್ಲಿ ಒಂದರಲ್ಲಿನ ತಾಂತ್ರಿಕ ದೋಷದಿಂದಾಗಿ ಈ ಅಡಚಣೆ ಉಂಟಾಗಿದೆ ಎಂದು ತಿಳಿಸಲಾಗಿತ್ತು. ಬೆಂಗಳೂರಿನ ನಮ್ಮ ಮೆಟ್ರೋದ ಹಳದಿ ಮಾರ್ಗದಲ್ಲಿ ಕಳೆದ ವಾರ ಅಡಚಣೆ ಉಂಟಾಗಿತ್ತು.