ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ramzan Row: ರಂಜಾನ್‌ ತಿಂಗಳಲ್ಲಿ ಮುಸ್ಲಿಂ ಉದ್ಯೋಗಿಗಳಿಗೆ ಕಾರ್ಯಾವಧಿಯಲ್ಲಿ ವಿನಾಯಿತಿ; ಭುಗಿಲೆದ್ದ ವಿವಾದ

ರಂಜಾನ್ ಉಪವಾಸದ ಸಮಯದಲ್ಲಿ ಮುಸ್ಲಿಂ ಉದ್ಯೋಗಿಗಳು ಕಚೇರಿಗಳಿಂದ‌ ಮನೆಗೆ ಬೇಗನೆ ತೆರಳಲು ತೆಲಂಗಾಣ ಸರ್ಕಾರ ಸೋಮವಾರ(ಫೆ.17) ಅನುಮತಿ ನೀಡಿದೆ.ಮಾರ್ಚ್ 1 ಅಥವಾ ಮಾರ್ಚ್ 2 ರಂದು ಪವಿತ್ರ ರಂಜಾನ್ ತಿಂಗಳು ಪ್ರಾರಂಭವಾಗಲಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಹೊರಡಿಸಿರುವ ಆದೇಶವನ್ನು ಬಿಜೆಪಿಯ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ವಿವಾದವೂ ಭುಗಿಲೆದ್ದಿದೆ.

ರಂಜಾನ್‌ ತಿಂಗಳಲ್ಲಿ ಮುಸ್ಲಿಂ ಉದ್ಯೋಗಿಗಳಿಗೆ ಕೆಲಸದಲ್ಲಿ ವಿನಾಯಿತಿ

ಸಾಂದರ್ಭಿಕ ಚಿತ್ರ.

Profile Deekshith Nair Feb 18, 2025 4:44 PM

ಹೈದರಾಬಾದ್: ರಂಜಾನ್ ಉಪವಾಸದ ಸಮಯದಲ್ಲಿ ಮುಸ್ಲಿಂ ಉದ್ಯೋಗಿಗಳು (Muslim Employes) ಕಚೇರಿಗಳಿಂದ‌ ಮನೆಗೆ ಬೇಗನೆ ತೆರಳಲು ತೆಲಂಗಾಣ (Telangana) ಸರ್ಕಾರ ಸೋಮವಾರ (ಫೆ.17) ಅನುಮತಿ ನೀಡಿದೆ. ಮಾರ್ಚ್ 1 ಅಥವಾ ಮಾರ್ಚ್ 2ರಂದು ಪವಿತ್ರ ರಂಜಾನ್ (Ramzan Row) ತಿಂಗಳು ಆರಂಭವಾಗಲಿದ್ದು, ಈ ಸಮಯದಲ್ಲಿ ಮುಸ್ಲಿಂ ಉದ್ಯೋಗಿಗಳು ಒಂದು ಗಂಟೆ ಮುಂಚಿತವಾಗಿ ಕಚೇರಿಗಳಿಂದ ಮನೆಗೆ ತೆರಳಬಹುದು ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಶಾಂತಿ ಕುಮಾರಿ ಆದೇಶ ಹೊರಡಿಸಿದ್ದಾರೆ. ಆದೇಶವನ್ನು ಬಿಜೆಪಿಯ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ಜತೆಗೆ ವಿವಾದವೂ ಭುಗಿಲೆದ್ದಿದೆ.

ತುರ್ತು ಪರಿಸ್ಥಿತಿ ಹೊರತುಪಡಿಸಿ ರಾಜ್ಯದಲ್ಲಿ ಕೆಲಸ ಮಾಡುವ ಎಲ್ಲ ಮುಸ್ಲಿಂ ಸರಕಾರಿ ನೌಕರರು, ಶಿಕ್ಷಕರು, ಗುತ್ತಿಗೆ –ಹೊರಗುತ್ತಿಗೆ ನೌಕರರು, ನಿಗಮ - ಮಂಡಳಿಗಳಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡುತ್ತಿರುವ ಮುಸ್ಲಿಂ ನೌಕರರು ಪವಿತ್ರ ರಂಜಾನ್ ತಿಂಗಳಲ್ಲಿ, ಅಂದರೆ ಮಾರ್ಚ್ 2ರಿಂದ 31ರವರೆಗೆ ಸಂಜೆ 4 ಗಂಟೆಗೆ ತಮ್ಮ ಕಚೇರಿಗಳು/ಶಾಲೆಗಳಿಂದ ಹೊರಹೋಗಲು ಸರ್ಕಾರ ಅನುಮತಿ ನೀಡಿದೆ ಎಂದು ಆದೇಶ ತಿಳಿಸಿದೆ.



ಕಾಂಗ್ರೆಸ್‌ ಮುಸ್ಲಿಮರನ್ನು ಓಲೈಕೆ ಮಾಡಲು ಈ ಆದೇಶವನ್ನು ಹೊರಡಿಸಿದೆ. ಮುಸ್ಲಿಮರ ಪರವಾಗಿಯೇ ನಿಲ್ಲುವ ಕಾಂಗ್ರೆಸ್‌ ಹಿಂದೂಗಳ ಪರವಾಗಿ ಇಂತಹ ಆದೇಶವನ್ನು ಎಂದಿಗೂ ಹೊರಡಿಸಿಲ್ಲ ಎಂದು ಬಿಜೆಪಿ ನಾಯಕರೊಬ್ಬರು ಕಿಡಿಕಾರಿದ್ದಾರೆ. ತೆಲಂಗಾಣದಲ್ಲಿ ವಿವಾದದ ಕಿಡಿ ಹೊತ್ತಿಕೊಂಡಿದೆ.

ಈ ಸುದ್ದಿಯನ್ನೂ ಓದಿ:Tesla: ಮೋದಿ- ಮಸ್ಕ್‌ ಭೇಟಿಯ ಬೆನ್ನಲ್ಲೇ ಭಾರತದಲ್ಲಿ ಟೆಸ್ಲಾ ನೇಮಕಾತಿ ಆರಂಭ

ನವರಾತ್ರಿಯ ಉಪವಾಸದ ಸಮಯದಲ್ಲಿ ಹಿಂದೂಗಳಿಗೆ ಅಂತಹ ಯಾವುದೇ ರಿಯಾಯಿತಿಗಳನ್ನು ನೀಡುವುದಿಲ್ಲ. ಕಾಂಗ್ರೆಸ್ ಮುಸ್ಲಿಂ ಸಮುದಾಯವನ್ನು ಕೇವಲ ಮತಬ್ಯಾಂಕ್‌ಗೆ ಬಳಸಿಕೊಳ್ಳುತ್ತಿದೆ ಎಂದು ಬಿಜೆಪಿ ಟೀಕಿಸಿದೆ.