ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Tesla: ಮೋದಿ- ಮಸ್ಕ್‌ ಭೇಟಿಯ ಬೆನ್ನಲ್ಲೇ ಭಾರತದಲ್ಲಿ ಟೆಸ್ಲಾ ನೇಮಕಾತಿ ಆರಂಭ

ಪ್ರಧಾನಿ ನರೇಂದ್ರ ಮೋದಿ ಹಾಗೂ ಟೆಸ್ಲಾ ಮುಖ್ಯಸ್ಥ ಎಲಾನ್‌ ಮಸ್ಕ್‌ ಅವರು ಮಾತುಕತೆ ನಡೆಸಿದ ಬಳಿಕ ಟೆಸ್ಲಾಆಟೋಮೊಬೈಲ್‌ ಸಂಸ್ಥೆಯು ಭಾರತದಲ್ಲಿ ನೇಮಕಾತಿಯನ್ನು ಆರಂಭಿಸಿದೆ ಎಂದು ತಿಳಿದು ಬಂದಿದೆ. ಈ ಮೂಲಕ ಟೆಸ್ಲಾ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲು ಸಜ್ಜಾಗಿದೆ. ಟೆಸ್ಲಾ ಕಂಪನಿಯು ಗ್ರಾಹಕ ಸಂಪರ್ಕ ಮತ್ತು ಆಡಳಿತ ಸೇರಿದಂತೆ ಒಟ್ಟು 13 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ.

ಭಾರತಕ್ಕೆ ಕಾಲಿಟ್ಟ ಟೆಸ್ಲಾ;  ಉದ್ಯೋಗ ನೇಮಕಾತಿ ಆರಂಭ

ಟೆಸ್ಲಾ ಕಾರು

Profile Vishakha Bhat Feb 18, 2025 12:04 PM

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಅಮೆರಿಕ ಪ್ರವಾಸದಲ್ಲಿ ಉದ್ಯಮಿ ಎಲಾನ್‌ ಮಸ್ಕ್‌ (Elon Musk) ಭೇಟಿಯಾಗಿದ್ದು ಹಲವು ಚರ್ಚೆಗಳನ್ನು ನಡೆಸಿದ್ದರು. ಭೇಟಿ ಬಳಿಕ ಟೆಸ್ಲಾ (Tesla) ಆಟೋಮೊಬೈಲ್‌ ಸಂಸ್ಥೆಯು ಭಾರತದಲ್ಲಿ ನೇಮಕಾತಿಯನ್ನು ಆರಂಭಿಸಿದೆ ಎಂದು ತಿಳಿದು ಬಂದಿದೆ. ಈ ಮೂಲಕ ಟೆಸ್ಲಾ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲು ಸಜ್ಜಾಗಿದೆ. ಟೆಸ್ಲಾದ ಆಗಮನದ ಬಳಿಕ ಭಾರತದ ಆಟೋಮೊಬೈಲ್‌ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆ ಕಾಣುವ ಸಾಧ್ಯತೆ ಇದೆ. ಅತ್ಯಾಧುನಿಕ ಸೌಲಭ್ಯ ಹೊಂದಿರುವ ಟೆಸ್ಲಾ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದ್ದು, ಇನ್ನು ಮುಂದೆ ಭಾರತದ ಮಾರುಕಟ್ಟೆಗಳಲ್ಲಿ ಕಾಣಿಸಿಕೊಳ್ಳಲಿದೆ.

ಟೆಸ್ಲಾ ಕಂಪನಿಯು ಗ್ರಾಹಕ ಸಂಪರ್ಕ ಮತ್ತು ಆಡಳಿತ ಸೇರಿದಂತೆ ಒಟ್ಟು 13 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಮುಂಬೈ ಮತ್ತು ದೆಹಲಿಯಲ್ಲಿ ಸೇವಾ ತಂತ್ರಜ್ಞ ಮತ್ತು ಸಲಹಾ ಪಾತ್ರಗಳು ಸೇರಿದಂತೆ ಒಟ್ಟು ಐದು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಮುಂಬೈನಲ್ಲಿಯೂ ಟೆಸ್ಲಾದ ನೇಮಕಾತಿ ನಡೆಯುತ್ತದೆ ಎಂದು ತಿಳಿದು ಬಂದಿದೆ. ಹಲವು ವರ್ಷಗಳ ಹಿಂದೆಯೇ ಟೆಸ್ಲಾ ಭಾರತದ ಮಾಟುಕಟ್ಟೆಗೆ ಪ್ರವೇಶಿಸಲು ಉತ್ಸಾಹ ತೋರಿತ್ತು. ಆದರೆ ಭಾರತದ ಹೆಚ್ಚಿನ ಆಮದು ಸುಂಕದ ಕಾರಣದಿಂದ, ಟೆಸ್ಲಾ ಭಾರತದಿಂದ ಇದುವರೆಗೂ ದೂರವೇ ಉಳಿದಿತ್ತು. ಆದರೆ ಅಮೆರಿಕದಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದ ಎಲಾನ್‌ ಮಸ್ಕ್‌, ಭಾರತದಲ್ಲಿ ತಮ್ಮ ಉದ್ಯಮ ವಿಸ್ತರಣೆಗೆ ಅನುಕೂಲ ವಾತಾವರಣ ಕಲ್ಪಿಸುವಂತೆ ಮನವಿ ಮಾಡಿದ್ದರು.

ಸದ್ಯ ಭಾರತವು 40,000 ಅಮೆರಿಕನ್‌ ಡಾಲರ್‌ಗಿಂಗತ ಹೆಚ್ಚಿನ ಬೆಲೆಯ ಉನ್ನತ-ಮಟ್ಟದ ಕಾರುಗಳ ಮೇಲಿನ ಕಸ್ಟಮ್‌ ಸುಂಕವನ್ನು ಶೇ. 110ರಿಂದ ಶೇ. 70ಕ್ಕೆ ಇಳಿಸಿದೆ. ಇವಿ ವಾಹನಗಳ ಮಾರಾಟದಲ್ಲಿ ಭಾರತ ಉತ್ತಮ ಪ್ರಗತಿಯನ್ನು ಸಾಧಿಸುತ್ತಿದ್ದು, , ಟೆಸ್ಲಾ ಆಗಮನದಿಂದ ಮತ್ತಷ್ಟು ಬಲ ಸಿಗಲಿದೆ. ಚೀನಾದಲ್ಲಿ ಇವಿ ಮಾರುಕಟ್ಟೆಯು 11 ಮಿಲಿಯನ್‌ ಯುನಿಟ್‌ಗೆ ತಲುಪಿದ್ದರೆ, ಭಾರತದ ಎಲೆಕ್ಟ್ರಿಕ್ ಕಾರು ಮಾರಾಟದ ಸಂಖ್ಯೆ ಕಳೆದ ವರ್ಷ 100,000 ಯುನಿಟ್‌ಗಳನ್ನು ತಲುಪಿದೆ.

ಈ ಸುದ್ದಿಯನ್ನೂ ಓದಿ: Modi In US : ಬ್ಲೇರ್ ಹೌಸ್‌ನಲ್ಲಿ ಎಲಾನ್‌ ಮಸ್ಕ್‌ , ವಿವೇಕ್‌ ರಾಮಸ್ವಾಮಿಯನ್ನು ಭೇಟಿ ಮಾಡಿದ ಮೋದಿ

ಚೀನಾಕ್ಕೆ ಹೋಲಿಸಿದರೆ ಭಾರತದ ವಿದ್ಯುತ್ ವಾಹನ ಮಾರುಕಟ್ಟೆ ಇನ್ನೂ ಆರಂಭಿಕ ಹಂತದಲ್ಲಿದೆ. ಆದರೆ ಇದೀಗ ಟೆಸ್ಲಾ ಭಾರತದಲ್ಲಿ ಹೊಸ ಕ್ರಾಂತಿಯನ್ನು ಹುಟ್ಟುಹಾಕುವ ಸಾಧ್ಯತೆಗಳಿವೆ. ಟೆಸ್ಲಾ ಭಾರತದಲ್ಲಿ ತನ್ನ ಉತ್ಪನ್ನಗಳನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ಮಾರಾಟ ಮಾಡುವ ಅಗತ್ಯವಿದ್ದು, ಇದು ಭಾರತೀಯ ಮಾರುಕಟ್ಟೆಯಲ್ಲಿ ಯಶಸ್ಸನ್ನು ಗಳಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತಿದೆ. ಅತ್ಯಾಧುನಿಕ ಸೌಲಭ್ಯ ಹೊಂದಿರುವ ಟೆಸ್ಲಾ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದ್ದು, ತನ್ನ ವಿನ್ಯಾಸಕ್ಕಾಗಿ ಹೆಸರುವಾಸಿಯಾಗಿವೆ.